ಕನ್ನಡ ಸುದ್ದಿ  /  ಮನರಂಜನೆ  /  ಮಗ ಕೈ ಸುಟ್ಟುಕೊಂಡಿದ್ದಕ್ಕೆ ಭಾಗ್ಯಾ ಬೇಸರ, ಇತ್ತ ಶ್ರೇಷ್ಠಾಳನ್ನು ಬೆಂಬಿಡದ ಬೇತಾಳದಂತೆ ಕಾಡುತ್ತಿರುವ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಮಗ ಕೈ ಸುಟ್ಟುಕೊಂಡಿದ್ದಕ್ಕೆ ಭಾಗ್ಯಾ ಬೇಸರ, ಇತ್ತ ಶ್ರೇಷ್ಠಾಳನ್ನು ಬೆಂಬಿಡದ ಬೇತಾಳದಂತೆ ಕಾಡುತ್ತಿರುವ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Seril: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಮೇ 28ರ ಸಂಚಿಕೆ:ಭಾಗ್ಯಾ ಹೋಟೆಲ್‌ಗೆ ಬಂದಿದ್ದು ಕಾರಣ ತಿಳಿದುಕೊಳ್ಳಬೇಕೆಂದು ತಾಂಡವ್‌ ಕಾಯುತ್ತಿದ್ದಾನೆ. ಮಗ ಕೈ ಸುಟ್ಟುಕೊಂಡಿದ್ದಕ್ಕೆ ಭಾಗ್ಯಾ ಬೇಸರ ವ್ಯಕ್ತಪಡಿಸುತ್ತಾಳೆ. ಮತ್ತೊಂದೆಡೆ ಪೂಜಾ, ಶ್ರೇಷ್ಠಾಗೆ ಬುದ್ಧಿ ಕಲಿಸುವ ಪ್ರಯತ್ನದಲ್ಲಿದ್ದಾಳೆ.

ಮಗ ಕೈ ಸುಟ್ಟುಕೊಂಡಿದ್ದಕ್ಕೆ ಭಾಗ್ಯಾ ಬೇಸರ, ಇತ್ತ ಶ್ರೇಷ್ಠಾಳನ್ನು ಬೆಂಬಿಡದ ಬೇತಾಳದಂತೆ ಕಾಡುತ್ತಿರುವ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಮಗ ಕೈ ಸುಟ್ಟುಕೊಂಡಿದ್ದಕ್ಕೆ ಭಾಗ್ಯಾ ಬೇಸರ, ಇತ್ತ ಶ್ರೇಷ್ಠಾಳನ್ನು ಬೆಂಬಿಡದ ಬೇತಾಳದಂತೆ ಕಾಡುತ್ತಿರುವ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ತಾನು ಬೇರೆ ಯುವತಿಯ ಜಾಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿದ ಭಾಗ್ಯಾ ಬೇಸರ ವ್ಯಕ್ತಪಡಿಸುತ್ತಾಳೆ. ಇನ್ಮುಂದೆ ಇಲ್ಲಿಗೆ ಬರಬಾರದು, ಬಂದರೆ ನಾನೇ ಎಲ್ಲರಿಗೂ ನಿಜ ಹೇಳುತ್ತೇನೆ. ಪೊಲೀಸ್‌ ಕೇಸ್‌ ಆಗುತ್ತದೆ ಎಂದು ಹಿತಾ ಎಚ್ಚರಿಕೆ ನೀಡಿದ ನಂತರ ಭಾಗ್ಯಾ ಶಾಕ್‌ ಆಗುತ್ತಾಳೆ. ಸಿಕ್ಕ ಒಂದು ಕೆಲವೂ ಹೋಯಿತು ಎಂಬ ನೋವಿನಿಂದಲೇ ಮನೆಗೆ ಬರುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಮತ್ತೆ ಕುಸುಮಾ ವಿರುದ್ಧ ಹರಿಹಾಯ್ದ ಸುನಂದಾ

ಇತ್ತ ಮನೆಯಲ್ಲಿ ಸುನಂದಾ ಪದೇ ಪದೆ ಕುಸುಮಾ ವಿರುದ್ಧ ಮಾತನಾಡುತ್ತಲೇ ಇದ್ದಾಳೆ. ಅತ್ತೆ ಸೊಸೆ ಇಬ್ಬರೂ ಮನೆಯಲ್ಲಿ ಇರುವುದಿಲ್ಲ, ಎಲ್ಲಿ ಹೋಗ್ತಾರೆ ಏನು ಮಾಡ್ತಾರೆ ಯಾರಿಗೂ ತಿಳಿಯುತ್ತಿಲ್ಲ. ನನ್ನ‌ ಮಗಳಂತೂ ನನ್ನ ಮಾತು ಕೇಳುತ್ತಿಲ್ಲ. ಗಂಡ ಹೆಂಡತಿ ಯಾವಾಗ ಸರಿ ಆಗುತ್ತಾರೋ ಎಂದು ಗೋಳಾಡುತ್ತಾಳೆ. ಹಾಗೇ ಸುನಂದಾ ಧರ್ಮರಾಜ್‌ಗೆ ಏರುದನಿಯಲ್ಲಿ ಮಾತನಾಡುವುದನ್ನು ನೋಡಿದ ಕುಸುಮಾ, ಅವರು ನಿಮ್ಮ ಬೀಗರು ಸ್ವಲ್ಪ ಗೌರವ ಕೊಟ್ಟು ಮಾತನಾಡಿ. ನನ್ನ ಸೊಸೆ ಜವಾಬ್ದಾರಿ ನನ್ನದು ಎನ್ನುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ತಾಂಡವ್‌, ಇದೇ ಸಮಯಕ್ಕಾಗಿ ಕಾಯುತ್ತಿರುತ್ತಾನೆ. ಭಾಗ್ಯಾ ಇನ್ನೂ ಮನೆಗೆ ಬಂದಿಲ್ವಾ. ಮೊದಲೆಲ್ಲಾ ಮನೆಯಲ್ಲೇ ಇರುತ್ತಿದ್ದವಳು ಈಗ ಎಲ್ಲಿಗೆ ಹೋಗುತ್ತಿದ್ದಾಳೆ ಎಂದು ಪ್ರಶ್ನಿಸುತ್ತಾನೆ. ಪಕ್ಕದ ಮನೆಯವರಿಗೆ ನಮ್ಮ ಮನೆಯ ಉಸಾಬರಿ ಬೇಡ ಎಂದು ಕುಸುಮಾ ತಾಂಡವ್‌ ಹಾಗೂ ಸುನಂದಾ ಬಾಯಿ ಮುಚ್ಚಿಸುತ್ತಾಳೆ.

ಅಷ್ಟರಲ್ಲಿ ಭಾಗ್ಯಾ ಮನೆಗೆ ಬರುತ್ತಾಳೆ. ಮಗ ಗುಂಡಣ್ಣ ಕೈ ಸುಟ್ಟುಕೊಂಡಿರುವುದನ್ನು ನೋಡಿ ಮಕ್ಕಳಿಗೆ ಊಟ ಕೊಡದ ಪರಿಸ್ಥಿತಿ ಬಂತಲ್ಲಾ ಎಂದು ನೋವು ವ್ಯಕ್ತಪಡಿಸುತ್ತಾಳೆ. ಮಗನ ಕೈಗೆ ಮುಲಾಮು ಹಚ್ಚುತ್ತಾಳೆ. ಭಾಗ್ಯಾ ಹೋಟೆಲ್‌ಗೆ ಏಕೆ ಬಂದಿದ್ದು ಎಂಬುದನ್ನು ತಿಳಿದುಕೊಳ್ಳಲು ತಾಂಡವ್‌, ನೀನು ದೇವಸ್ಥಾನಕ್ಕೆ ಹೋಗಿದ್ಯಾ ಅಥವಾ ಬೇರೆ ಎಲ್ಲಾದರೂ ಹೋಗಿದ್ದಾ ಎಂದು ಕೊಂಕು ಮಾತನಾಡುತ್ತಾನೆ. ತಾಂಡವ್‌ ಮಾತಿಗೆ ಭಾಗ್ಯಾ ಗಾಬರಿ ಆಗುತ್ತಾಳೆ. ಇವರೇಕೆ ಹೀಗೆ ಕೇಳುತ್ತಿದ್ದಾರೆ, ನಾನು ಹೋಟೆಲ್‌ಗೆ ಹೋಗಿದ್ದು ಇವರೇನಾದರೂ ನೋಡಿದ್ರಾ ಎಂದುಕೊಳ್ಳುತ್ತಾಳೆ. ಸೊಸೆ ಪರ ನಿಲ್ಲುವ ಕುಸುಮಾ, ಭಾಗ್ಯಾ ನೀನು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡ ಸುಮ್ಮನಿರು ಎನ್ನುತ್ತಾಳೆ.

ಶ್ರೇಷ್ಠಾಗೆ ಪೂಜಾ ಕಾಟ

ಇತ್ತ ಶ್ರೇಷ್ಠಾ ಮನೆ ಸೇರಿಕೊಂಡಿರುವ ಪೂಜಾ, ಆಕೆಗೆ ಬೆಂಬಿಡದ ಬೇತಾಳದಂತೆ ಕಾಡುತ್ತಿದ್ದಾಳೆ. ಪೂಜಾ, ಸುಂದರಿ ಕಣ್ಣಿಗೆ ಮಣ್ಣೆರಚಿ ಹಿಂಬಾಗಿಲಿನಿಂದ ಹೊರ ಹೋಗಿ ತಾಂಡವ್‌ನನ್ನು ಭೇಟಿ ಮಾಡುವ ಶ್ರೇಷ್ಠಾಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ಪೂಜಾ ನಿರ್ಧರಿಸುತ್ತಾಳೆ. ಅದಕ್ಕಾಗಿ ಆಕೆ ರೂಮ್‌ಗೆಲ್ಲಾ ನೀರು ಚೆಲ್ಲುತ್ತಾಳೆ. ಶ್ರೇಷ್ಠಾ ರೂಮ್‌ ಒಳಗೆ ಮಲಗದಂತೆ ಮಾಡುತ್ತಾಳೆ. ಶ್ರೇಷ್ಠಾ ವಿಧಿ ಇಲ್ಲದೆ ಹೊರಗೆ ಸೋಫಾ ಮೇಲೆ ಮಲಗುತ್ತಾಳೆ. ಮರುದಿನ ಬೆಳಗ್ಗೆ ಪೂಜಾ, ತಲೆ ದಿಂಬಿನಿಂದ ಶ್ರೇಷ್ಠಾಳ ಮುಖವನ್ನು ಒತ್ತುವಂತೆ ನಾಟಕ ಮಾಡುತ್ತಾಳೆ. ಅದೇ ಸಮಯಕ್ಕೆ ಕಣ್ಣು ತೆರೆಯುವ ಶ್ರೇಷ್ಠಾ, ಪೂಜಾ ನನ್ನನ್ನು ಸಾಯಿಸಲು ಯತ್ನಿಸುತ್ತಿದ್ದಾಳೆ ಎಂದು ಗಾಬರಿಯಾಗಿ ಅರಚುತ್ತಾಳೆ. ನೀನು ಇದೇ ರೀತಿ ನನ್ನ ಅಕ್ಕನ ಬಾಳಲ್ಲಿ ಇದ್ದರೆ ಹೀಗೇ ಕಾಡುತ್ತಿರುತ್ತೇನೆ ಎಂದು ಎಚ್ಚರಿಸುತ್ತಾಳೆ.

ಭಾಗ್ಯಾ ಬಾಯಿ ಬಿಡಿಸಲು ತಾಂಡವ್‌ ಏನು ಪ್ಲ್ಯಾನ್‌ ಮಾಡುತ್ತಾನೆ? ಶ್ರೇಷ್ಠಾ-ತಾಂಡವ್‌ ಮದುವೆ ಆಹ್ವಾನ ಪತ್ರಿಕೆಯನ್ನು ಕುಸುಮಾ ನೋಡುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ವರ್ಗ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಟಿ20 ವರ್ಲ್ಡ್‌ಕಪ್ 2024