ಹಾರ್ಟ್‌ ಅಟ್ಯಾಕ್‌ ಬಂದು ನಾನು ಇಲ್ಲೇ ಕುಸಿದು ಬೀಳಬಾರ್ದಾ,ಇಕ್ಕಟ್ಟಿಗೆ ಸಿಲುಕಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 27ರ ಸಂಚಿಕೆ
ಕನ್ನಡ ಸುದ್ದಿ  /  ಮನರಂಜನೆ  /  ಹಾರ್ಟ್‌ ಅಟ್ಯಾಕ್‌ ಬಂದು ನಾನು ಇಲ್ಲೇ ಕುಸಿದು ಬೀಳಬಾರ್ದಾ,ಇಕ್ಕಟ್ಟಿಗೆ ಸಿಲುಕಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 27ರ ಸಂಚಿಕೆ

ಹಾರ್ಟ್‌ ಅಟ್ಯಾಕ್‌ ಬಂದು ನಾನು ಇಲ್ಲೇ ಕುಸಿದು ಬೀಳಬಾರ್ದಾ,ಇಕ್ಕಟ್ಟಿಗೆ ಸಿಲುಕಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 27ರ ಸಂಚಿಕೆ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮೀ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. 28ನೇ ಅಕ್ಟೋಬರ್ 305ನೇ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ 28ನೇ ಅಕ್ಟೋಬರ್ 305ನೇ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ 28ನೇ ಅಕ್ಟೋಬರ್ 305ನೇ ಸಂಚಿಕೆ (PC: Colors Kannada)

Bhagyalakshmi Kannada Serial: ತಾಂಡವ್‌ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಆತನಿಗೆ ಬುದ್ಧಿ ಕಲಿಸಬೇಕು, ಅವನನ್ನು ಮದುವೆ ಆಗಬೇಕೆಂದು ಹಟ ಮಾಡುವ ಶ್ರೇಷ್ಠಾ ವಿಜಯದಶಮಿ ಹಬ್ಬದ ದಿನದಂದೇ ತಾಂಡವ್‌ ಮನೆಗೆ ಹೋಗಿ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗುತ್ತದೆ.

ತನ್ವಿ ಮಾತು ಕೇಳಿ ಗಾಬರಿ ಆದ ಮನೆಯವರು

ಅತ್ತೆ ಮನೆಯಲ್ಲಿ ಮಗಳ ಜೀವನ ಸರಿ ಇಲ್ಲ ಎಂದು ಭಾಗ್ಯಾ ತಂದೆ ತಾಯಿ ಗೋಳಾಡುತ್ತಾರೆ. ಆದರೆ ಕುಸುಮಾ ಹಾಗೂ ಧರ್ಮರಾಜ್‌ ಮಾತ್ರ ಮಗನಿಗೆ ಅಫೇರ್‌ ಇದೆ ಎಂಬುದನ್ನು ಮಾತ್ರ ಒಪ್ಪುವುದಿಲ್ಲ. ಶ್ರೇಷ್ಠಾ ಹಾಗೂ ತಾಂಡವ್‌ ಒಳ್ಳೆ ಸ್ನೇಹಿತರು ಎಂದೇ ಅವರೆಲ್ಲಾ ನಂಬಿದ್ದಾರೆ. ಸುನಂದಾ ಗೋಳಾಡುವುದರಿಂದ ಬೇಸತ್ತ ಕುಸುಮಾ, ನಡಿಯಿರಿ ಆಸ್ಪತ್ರೆಗೆ ಹೋಗಿ ನಿಜ ಏನೆಂದು ತಿಳಿದುಕೊಳ್ಳೋಣ ಎಂದು ಹೊರಡುತ್ತಾರೆ. ಇತ್ತ ತನ್ವಿ, ಅಪ್ಪನಿಗೆ ಶ್ರೇಷ್ಠಾ ಆಂಟಿ ಎಂದರೆ ಬಹಳ ಇಷ್ಟ. ಮನೆಯಲ್ಲಿ ಇದ್ದರೆ 10 ಸಾರಿ ಶ್ರೇಷ್ಠಾಗೆ ಕರೆ ಮಾಡಿ ಮಾತನಾಡುತ್ತಾರೆ. ಆದರೆ ಅಪ್ಪ ಆಫೀಸಿನಲ್ಲಿ ಇರುವಾಗ ಒಮ್ಮೆಯಾದರೂ ಅಮ್ಮನಿಗೆ ಕರೆ ಮಾಡಿ ವಿಚಾರಿಸಿದ್ದಾರಾ ಎಂದು ಕೋಪಗೊಳ್ಳುತ್ತಾಳೆ. ಮಕ್ಕಳ ಮಾತು ಕೇಳಿ ಭಾಗ್ಯಾ ತಂದೆ ಗಾಬರಿ ಆಗುತ್ತಾರೆ, ಆದರೆ ಧರ್ಮರಾಜ್‌ ತನ್ವಿ, ಗುಂಡಣ್ಣನನ್ನು ರೂಮ್‌ಗೆ ಹೋಗುವಂತೆ ಆದೇಶಿಸುತ್ತಾರೆ.

ಎಚ್ಚರಗೊಂಡ ಶ್ರೇಷ್ಠಾ

ಇತ್ತ ಆಸ್ಪತ್ರೆಯಲ್ಲಿ ಪೊಲೀಸರು ತಾಂಡವ್‌ನನ್ನು ವಿಚಾರಣೆ ಮಾಡುತ್ತಾರೆ. ಆ ಹುಡುಗಿಗೆ ಯಾವುದೋ ಹುಡುಗನಿಂದ ಮೋಸ ಆಗಿದೆ ಎಂದಾದರೆ ಆಕೆ ಅವನ ಮನೆಗೆ ಹೋಗಿ ಆತ್ಮಹತ್ಯೆಗೆ ಪ್ರಯತ್ನಿಸಬೇಕಿತ್ತು. ಆದರೆ ನಿಮ್ಮ ಮನೆಗೆ ಬರಲು ಕಾರಣ ಯಾರು ಎಂದು ಕೇಳುತ್ತಾರೆ. ತಾಂಡವ್‌ ಮಾತ್ರ ಮನಸ್ಸಿನಲ್ಲಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾನೆ. ಶ್ರೇಷ್ಠಾ ಎಲ್ಲವನ್ನೂ ಹೇಳಿಬಿಡುತ್ತಾಳಾ? ಯಾರ್ಯಾರಿಗೋ ಹಾರ್ಟ್‌ ಅಟ್ಯಾಕ್‌ ಆಗಿಬಿಡುತ್ತದೆ ನಾನು ಇಲ್ಲೇ ಕುಸಿದುಬಿದ್ದು ಸಾಯಬಾರದಾ? ಪರಿಸ್ಥಿತಿ ಇಲ್ಲಿವರೆಗೂ ಬಂದು ಮುಟ್ಟುತ್ತದೆ ಎಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ತಾಂಡವ್‌ ತನ್ನ ಪರಿಸ್ಥಿತಿಯನ್ನು ನೆನೆದು ಗೋಳಾಡುತ್ತಾನೆ. ಅಷ್ಟರಲಿ ಶ್ರೇಷ್ಠಾಗೆ ಎಚ್ಚರ ಆಗಿರುವುದನ್ನು ತಿಳಿದು ತಾಂಡವ್‌ ಇನ್ನಷ್ಟು ಗಾಬರಿ ಆಗುತ್ತಾನೆ.

ತಾಂಡವ್‌ ಮನೆಯವರ ಮುಂದೆ ಏನೋ ಹೇಳಲು ಪ್ರಯತ್ನಿಸುವ ಶ್ರೇಷ್ಠಾ

ಶ್ರೇಷ್ಠಾಳನ್ನು ಮಾತನಾಡಿಸಲು ಐಸಿಯು ಒಳಗೆ ಹೋಗುತ್ತಿರುವ ಭಾಗ್ಯಾ, ತಾಂಡವ್‌ನನ್ನು ತಡೆಯುವ ಪೊಲೀಸರು ನಾವು ಹೋಗಿ ಮೊದಲು ಮಾತನಾಡಿ ಬರುತ್ತೇವೆ ಎಂದು ಒಳಗೆ ಹೋಗುತ್ತಾರೆ. ಶ್ರೇಷ್ಠಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಏಕೆ ಎಂದು ಪ್ರಶ್ನೆ ಕೇಳುತ್ತಾರೆ. ನಾನು ಎಲ್ಲವನ್ನೂ ಹೇಳುತ್ತೇನೆ. ಹೊರಗೆ ಇರುವ ತಾಂಡವ್‌ ಕುಟುಂಬದವರನ್ನು ಕರೆಯಿರಿ ಎಂದು ಹೇಳುತ್ತಾಳೆ. ಪೊಲೀಸರು ಒಳಗೆ ಕರೆಯುತ್ತಿದ್ದಾರೆ ಎಂದಾಗ ತಾಂಡವ್‌ಗೆ ಗಾಬರಿ ಆಗುತ್ತದೆ. ಅಷ್ಟರಲ್ಲಿ ಕುಸುಮಾ ಹಾಗೂ ಸುನಂದಾ ಕೂಡಾ ಆಸ್ಪತ್ರೆಗೆ ಬರುತ್ತಾರೆ. ಅವರೆಲ್ಲಾ ಬಂದಾಗ ತಾಂಡವ್‌ಗೆ ಇನ್ನೂ ಭಯ ಶುರುವಾಗುತ್ತದೆ. ಇನ್ನು ನನ್ನ ಕಥೆ ಮುಗಿಯಿತು ಎಂದುಕೊಳ್ಳುತ್ತಲೇ ಎಲ್ಲರೂ ಒಳಗೆ ಹೋಗುತ್ತಾರೆ.

ಹಾಗಿದ್ರೆ ತಾಂಡವ್‌ ಆಟ ಮುಗೀತಾ? ಶ್ರೇಷ್ಠಾ ತಾಂಡವ್‌ ಮನೆಯವರ ಮುಂದೆ ಎಲ್ಲವನ್ನೂ ಹೇಳಿಬಿಡುತ್ತಾಳಾ? ಅಥವಾ ಸುಳ್ಳು ಹೇಳಿ ಮತ್ತೆ ತಾಂಡವ್‌ನನ್ನು ಬ್ಲಾಕ್‌ಮೇಲ್‌ ಮಾಡುತ್ತಾಳಾ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.

Whats_app_banner