ಮದುವೆಯ ಮೊದಲ ಶಾಸ್ತ್ರ ಮುಗಿಸಿ, ಅಪ್ಪ ಅಮ್ಮ, ಭಾಗ್ಯಾಗೆ ವಿಡಿಯೋ ಕಳಿಸಿ ಖುಷಿ ಪಟ್ಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮದುವೆಯ ಮೊದಲ ಶಾಸ್ತ್ರ ಮುಗಿಸಿ, ಅಪ್ಪ ಅಮ್ಮ, ಭಾಗ್ಯಾಗೆ ವಿಡಿಯೋ ಕಳಿಸಿ ಖುಷಿ ಪಟ್ಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಮದುವೆಯ ಮೊದಲ ಶಾಸ್ತ್ರ ಮುಗಿಸಿ, ಅಪ್ಪ ಅಮ್ಮ, ಭಾಗ್ಯಾಗೆ ವಿಡಿಯೋ ಕಳಿಸಿ ಖುಷಿ ಪಟ್ಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಆಗಸ್ಟ್‌ 29ರ ಎಪಿಸೋಡ್‌ನಲ್ಲಿ ಶ್ರೇಷ್ಠಾ ಮದುವೆ ಶಾಸ್ತ್ರ ಆರಂಭವಾಗುತ್ತದೆ. ಇದೇ ಖುಷಿಯಲ್ಲಿ ಆಕೆ ಮದುವೆ ಮನೆಯಲ್ಲಿ ವಿಡಿಯೋ ಮಾಡಿ ಅದನ್ನು ಭಾಗ್ಯಾ ಹಾಗೂ ತನ್ನ ತಂದೆ ತಾಯಿಗೆ ಕಳಿಸುತ್ತಾಳೆ.

ಮದುವೆಯ ಮೊದಲ ಶಾಸ್ತ್ರ ಮುಗಿಸಿ, ಅಪ್ಪ ಅಮ್ಮ, ಭಾಗ್ಯಾಗೆ ವಿಡಿಯೋ ಕಳಿಸಿ ಖುಷಿ ಪಟ್ಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಮದುವೆಯ ಮೊದಲ ಶಾಸ್ತ್ರ ಮುಗಿಸಿ, ಅಪ್ಪ ಅಮ್ಮ, ಭಾಗ್ಯಾಗೆ ವಿಡಿಯೋ ಕಳಿಸಿ ಖುಷಿ ಪಟ್ಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ತಂದೆ ತಾಯಿ ಆಸ್ಪತ್ರೆಯಲ್ಲಿದ್ದರೂ ಅವರ ಕಡೆ ತಿರುಗಿ ಕೂಡಾ ನೋಡದ ಶ್ರೇಷ್ಠಾಗೆ ತನ್ನ ಸ್ವಾರ್ಥವೇ ಮುಖ್ಯವಾಗಿದೆ. ಹೆತ್ತವರು ಈ ಮದುವೆ ಬೇಡ ಎಂದಿದ್ದಕ್ಕೆ ಶ್ರೇಷ್ಠಾ ತಾನೇ ಮದುವೆ ಅರೇಂಜ್‌ ಮಾಡಿ ತಾಂಡವ್‌ನನ್ನು ಮದುವೆ ಆಗಲು ಹೊರಟಿದ್ದಾಳೆ. ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಗೆ ಕರೆ ಮಾಡಿ ರಾತ್ರೋ ರಾತ್ರಿ ಎಲ್ಲವನ್ನೂ ಅರೇಂಜ್‌ ಮಾಡಿಸಿದ್ದಾಳೆ.

ಶ್ರೇಷ್ಠಾ ಮದುವೆ ಶಾಸ್ತ್ರ ಆರಂಭ

ಒಂದೆಡೆ ಶ್ರೇಷ್ಠಾ ತಂದೆ ಶ್ರೀವರಗೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರೆ ಶ್ರೇಷ್ಠಾ, ಇದ್ಯಾವುದನ್ನೂ ಕೇರ್‌ ಮಾಡದೆ ಮದುವೆ ಆಗಲು ಮುಂದಾಗಿದ್ದಾಳೆ. ಪೂಜಾಳನ್ನು ಎಲ್ಲೋ ಕೂಡಿಹಾಕಿ, ಸುಂದ್ರಿಯನ್ನು ಮನೆಯಿಂದ ಹೊರ ಕಳಿಸಿ ಲಗ್ಗೇಜ್‌ ಸಹಿತ ಮದುವೆ ಮನೆಗೆ ಹೊರಡುತ್ತಾಳೆ. ಅಲ್ಲಿನ ಸಿದ್ಧತೆಯನ್ನು ನೋಡಿ ಶ್ರೇಷ್ಠಾ ಬಹಳ ಖುಷಿಯಾಗುತ್ತಾಳೆ. ಈ ದಿನಕ್ಕಾಗಿ ನಾನು ಎಷ್ಟು ವರ್ಷಗಳಿಂದ ಕಾಯುತ್ತಿದ್ದೆ, ಕೊನೆಗೂ ನನ್ನ ಕನಸು ಈಡೇರುತ್ತಿದೆ. ಅಂತೂ ಭಾಗ್ಯಾ ಸ್ಥಾನಕ್ಕೆ ಬಂದು ಅವಳ ಖುಷಿಯನ್ನು ಕಿತ್ತುಕೊಳ್ಳುತ್ತೇನೆ, ಕುಸುಮಾಗೆ ಬುದ್ಧಿ ಕಲಿಸುತ್ತೇನೆ ಎಂದು ಶ್ರೇಷ್ಠಾ ಕನಸು ಕಾಣುತ್ತಾಳೆ. ಮದುವೆ ಮನೆಯಲ್ಲಿ ಶ್ರೇಷ್ಠಾಗೆ ಅದ್ಧೂರಿ ಸ್ವಾಗತ ದೊರೆಯುತ್ತದೆ.

ಮದುವೆ ಶಾಸ್ತ್ರಗಳು ಆರಂಭವಾಗುತ್ತದೆ. ಪುರೋಹಿತರು ಹುಡುಗಿಯ ತಾಯಿ ಮದು ಮಗಳಿಗೆ ನಾಂದಿ ಕಟ್ಟುವಂತೆ ಕರೆಯುತ್ತಾರೆ. ಆದರೆ ಯಾರೂ ಬರದಿದ್ದನ್ನು ನೋಡಿ ಶ್ರೇಷ್ಠಾಳತ್ತ ನೋಡುತ್ತಾರೆ. ಈ ಮದುವೆಗೆ ನನ್ನ ಅಪ್ಪ ಅಮ್ಮ ಬರುವುದಿಲ್ಲ, ಈ ಮದುವೆ ಅವರಿಗೆ ಇಷ್ಟವಿಲ್ಲ ಇಲ್ಲೇ ಯಾರಾದರೂ ಇದ್ದರೆ ಅವರನ್ನು ಕರೆಯಿರಿ ಎನ್ನುತ್ತಾಳೆ. ಶ್ರೇಷ್ಠಾ ಮಾತನ್ನು ಕೇಳಿ ಪುರೋಹಿತರು ಕನ್ಫ್ಯೂಸ್‌ ಆಗುತ್ತಾರೆ. ಜನರ ಗುಂಪಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬಳನ್ನು ಕರೆಯುವ ಶ್ರೇಷ್ಠಾ ತನಗೆ ನಾಂದಿ ಕಟ್ಟುವಂತೆ ಹೇಳುತ್ತಾಳೆ. ಮದುವೆಯ ಮೊದಲ ಶಾಸ್ತ್ರ ಮುಗಿಯಿತು, ಎರಡನೇ ಶಾಸ್ತ್ರಕ್ಕೆ ಬೇಗ ರೆಡಿ ಆಗಿ ಬನ್ನಿ ಎನ್ನುತ್ತಾರೆ. ಇದೇ ಖುಷಿಗೆ ಶ್ರೇಷ್ಠಾ ವಿಡಿಯೋ ಮಾಡಿ ಭಾಗ್ಯಾಗೆ ಕಳಿಸುತ್ತಾಳೆ.

ತಂದೆ ತಾಯಿ , ಭಾಗ್ಯಾಗೆ ವಿಡಿಯೋ ಕಳಿಸಿದ ಶ್ರೇಷ್ಠಾ

ಇತ್ತ ಭಾಗ್ಯಾ, ಕುಸುಮಾ ಆಸ್ಪತ್ರೆಯಲ್ಲಿರುವ ಶ್ರೀವರ ಯಶೋಧಾಗೆ ತಿಂಡಿ ತೆಗೆದುಕೊಂಡು ಹೊರಡುತ್ತಾರೆ. ಅಷ್ಟರಲ್ಲಿ ಶ್ರೇಷ್ಠಾ ಕಳಿಸಿರುವ ವಿಡಿಯೋ ನೋಡಿ ಬೇಸರ ವ್ಯಕ್ತಪಡಿಸುತ್ತಾರೆ. ಆಸ್ಪತ್ರಯಲ್ಲಿ ಕೂಡಾ ಶ್ರೇಷ್ಠಾ ಶ್ರೀವರ-ಯಶೋಧಾಗೂ ವಿಡಿಯೋ ಕಳಿಸಿರುವುದನ್ನು ನೋಡಿ ಕುಸುಮಾ ಕೋಪಗೊಳ್ಳುತ್ತಾಳೆ. ಇವಳಿಗೆ ಕನಿಕರ ಎನ್ನುವುದೇ ಇಲ್ಲ. ತಂದೆ ತಾಯಿಗೆ ಇಷ್ಟು ನೋವು ಕೊಡುತ್ತಿದ್ದಾಳೆ. ಹೇಗಾದರೂ ಮಾಡಿ ಇವಳ ಕೊಬ್ಬು ಇಳಿಸಬೇಕು ಎಂದುಕೊಳ್ಳುತ್ತಾಳೆ. ಮತ್ತೊಂದೆಡೆ ರೂಮ್‌ನಲ್ಲಿ ಲಾಕ್‌ ಆಗಿರುವ ತಾಂಡವ್‌ ಭಾಗ್ಯಾ ಜೊತೆ ಸಂಸಾರ ಮಾಡಲಾಗುತ್ತಿಲ್ಲ, ಶ್ರೇಷ್ಠಾಳನ್ನು ಬಿಡಲು ಆಗುತ್ತಿಲ್ಲ ಎಂದುಕೊಂಡು ಹೊರಗೆ ಬರಲು ಪ್ಲ್ಯಾನ್‌ ಮಾಡುತ್ತಿದ್ದಾನೆ.

ತಾಂಡವ್‌ ರೂಮ್‌ನಿಂದ ಹೊರಗೆ ಬರುತ್ತಾನಾ? ಶ್ರೇಷ್ಠಾ ತಾನು ಅಂದುಕೊಂಡತೆ ತಾಂಡವ್‌ನನ್ನು ಮದುವೆ ಆಗುತ್ತಾಳಾ? ಅಥವಾ ಭಾಗ್ಯಾ ಈ ಮದುವೆ ನಿಲ್ಲಿಸುತ್ತಾಳಾ ಕಾದು ನೋಡಬೇಕು.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner