ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 29th March 2024 Episode Bhagya Revenge On Kannika Rsm

Bhagyalakshmi Serial: ಏಟು ಎದಿರೇಟು, ಕನ್ನಿಕಾ ಮೇಲೆ ಒಡವೆ ಕದ್ದ ಆರೋಪ ಬರುವಂತೆ ಮಾಡಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಭಾಗ್ಯಾ, ಕನ್ನಿಕಾಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ನನ್ನ, ಮಗಳ ಮೇಲೆ ಕಾಪಿ ಹೊಡೆದ ಆರೋಪ ಹೊರಿಸಿದ ಕನ್ನಿಕಾಗೆ ಮೇಲೆ ಭಾಗ್ಯಾ ಒಡವೆ ಕದ್ದ ಆರೋಪ ಹೊರಿಸಿದ್ದಾಳೆ.

 ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರದ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರದ ಸಂಚಿಕೆ (PC: Colors Kannada)

ಭಾಗ್ಯಲಕ್ಷ್ಮೀ ಧಾರಾವಾಹಿ: ಶಾಲೆಗೆ ಸೇರಿದಾಗಿನಿಂದ ಕನ್ನಿಕಾಳಿಂದ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿರುವ ಭಾಗ್ಯಾ ಈಗ ಪರೀಕ್ಷೆ ಹಾಲ್‌ನಿಂದ ಡಿಬಾರ್‌ ಆಗಿದ್ದಾಳೆ. ಭಾಗ್ಯಾ, ತನ್ವಿ ಮೇಲೆ ಕನ್ನಿಕಾ ಕಾಪಿ ಆರೋಪ ಹೊರಿಸಿದ್ದಾಳೆ. ಇತ್ತ ಭಾಗ್ಯಾ ಮನೆಯವರು ಬೇಸರದಲ್ಲಿದ್ದರೆ ಕನ್ನಿಕಾ, ಫ್ರೆಂಡ್‌ ಬರ್ತ್‌ಡೇ ಪಾರ್ಟಿಗೆ ಹೋಗಿ ಎಂಜಾಯ್‌ ಮಾಡುತ್ತಾಳೆ.

ಬರ್ತ್‌ಡೇ ಪಾರ್ಟಿ ಬಳಿ ತನ್ನನ್ನು ಹುಡುಕಿ ಬರುವ ಭಾಗ್ಯಾಳಿಗೆ ಕನ್ನಿಕಾ ಅವಮಾನ ಮಾಡುತ್ತಾಳೆ. ನೀನು ಕಾಪಿ ಹೊಡೆದು ನನ್ನನ್ನು ಹೊಣೆಯನ್ನಾಗಿ ಮಾಡುತ್ತಿದ್ದೀಯ ಎಂದು ಭಾಗ್ಯಾಳನ್ನು ಹೊರಗೆ ತಳ್ಳುತ್ತಾಳೆ. ಅಲ್ಲಿ ಜ್ಯುವೆಲರಿ ಎಕ್ಸಿಬಿಷನ್‌ ನಡೆಯುತ್ತಿದೆ ಎಂದು ತಿಳಿದ ಭಾಗ್ಯಾ ಏನೋ ಪ್ಲ್ಯಾನ್‌ ಮಾಡಿ ಪೂಜಾ ಜೊತೆ ಹಂಚಿಕೊಳ್ಳುತ್ತಾಳೆ. ಕನ್ನಿಕಾಗೆ ಸರಿಯಾದ ಪಾಠ ಕಲಿಸಲು ಮುಂದಾಗುತ್ತಾಳೆ. ಆಗ ಆಕೆಯ ಸಹಾಯಕ್ಕೆ ರಘು ಬರುತ್ತಾನೆ. ಬರ್ತ್‌ಡೇ ಪಾರ್ಟಿ ಮುಗಿಯುವ ಮುನ್ನವೇ ಕನ್ನಿಕಾ ಅಲ್ಲಿಂದ ಹೊರಡುತ್ತಾಳೆ. ಆದರೆ ಅಷ್ಟರಲ್ಲಿ ಕನ್ನಿಕಾ ಗೆಳತಿ ನಿಶಾ, ಆಭರಣಗಳು ಕಳ್ಳತನವಾಗಿರುತ್ತದೆ. ಈ ವಿಚಾರವನ್ನು ಆಕೆಯ ಪಿಎ ಬಂದು ಹೇಳುತ್ತಾಳೆ. ಎಲ್ಲರೂ ಇಲ್ಲೇ ಇರಿ ಪ್ಲೀಸ್‌, ಇಲ್ಲಿ ಒಂದು ಸೆಟ್‌ ಒಡವೆ ಮಿಸ್‌ ಆಗಿದೆ ಎಲ್ಲರನ್ನೂ ಚೆಕ್‌ ಮಾಡಬೇಕು ಎನ್ನುತ್ತಾಳೆ.

ಕನ್ನಿಕಾ ಮೇಲೆ ಒಡವೆ ಕದ್ದ ಆರೋಪ

ಆಕೆಯ ಮಾತನ್ನು ಕೇಳಿದ ಕನ್ನಿಕಾ, ನಾನು ನಿನ್ನ ಗೆಳತಿ ನನ್ನ ಬಗ್ಗೆ ನಿನಗೆ ಗೊತ್ತಿಲ್ಲವಾ? ನನ್ನ ಪರ್ಸ್‌ ಕೂಡಾ ಚೆಕ್‌ ಮಾಡಬೇಕಾ ಎಂದು ಕೇಳುತ್ತಾಳೆ. ಇಲ್ಲ ನೀನು ಹೊರಡು ಎಂದು ನಿಶಾ ಹೇಳುತ್ತಾಳೆ. ಆಕೆ ಮೆಟಲ್ ಡಿಟೆಕ್ಟರ್ ಡೋರ್‌ನಿಂದ ಹೊರ ಬರುವಾಗ ಸೈರನ್‌ ಆಗುತ್ತದೆ. ಇದನ್ನು ನೋಡಿ ಎಲ್ಲರೂ ಗಾಬರಿ ಆಗುತ್ತಾರೆ. ನಿಶಾ ಪಿಎ ಕನ್ನಿಕಾ ಪರ್ಸ್‌ ಚೆಕ್‌ ಮಾಡಿದಾಗ ಅಲ್ಲಿ ಒಡವೆ ದೊರೆಯುತ್ತದೆ. ಇದು ಇಲ್ಲಿಗೆ ಹೇಗೆ ಬಂತು ನನಗೆ ಗೊತ್ತಿಲ್ಲ ಎಂದು ಕನ್ನಿಕಾ ಹೇಳುತ್ತಾಳೆ. ನೀನು ಕದಿಯದೆ ಇಲ್ಲಿಗೆ ಏಕೆ ಬಂತು ಎಂದು ನಿಶಾ ಪ್ರಶ್ನಿಸುತ್ತಾಳೆ. ಅದೇ ಸಮಯಕ್ಕೆ ಅಲ್ಲಿಗೆ ಬರುವ ರಘು, ಇಷ್ಟು ಶ್ರೀಮಂತರಾಗಿ ಒಡವೆ ಕದಿಯುತ್ತೀರಾ? ಇದು ನನಗೆ ತುಂಬಾ ಇಷ್ಟ ಆಯ್ತು ಎಂದು ನೀವೇ ತಾನೇ ಹೇಳಿದ್ದು, ಹಾಗಾದ್ರೆ ನೀವೇ ಇದನ್ನು ಕದ್ದಿದ್ದು ಎನ್ನುತ್ತಾನೆ.

ರಘು ಮಾತಿನಿಂದ ಕನ್ನಿಕಾಗೆ ಕೋಪ ಬರುತ್ತದೆ. ನೀನು ಕೇವಲ ಸೇಲ್ಸ್‌ ಮ್ಯಾನ್‌, ನೀನು ನನ್ನ ಮೇಲೆ ಆರೋಪ ಹೊರಿಸುತ್ತೀಯ ಎಂದು ಕೇಳುತ್ತಾಳೆ. ರಘು ಸೇಲ್ಸ್‌ ಮ್ಯಾನ್‌ ಮಾತ್ರವಲ್ಲ, ನನ್ನ ಬಾಲ್ಯದ ಗೆಳೆಯ, ನಾವಿಬ್ಬರೂ ಒಂದೇ ಊರಿನವರು ಅವನಿಗೆ ಅವಮಾನ ಮಾಡಿದರೆ ನಾನು ಸುಮ್ಮನಿರುವುದಿಲ್ಲ ಎಂದು ನಿಶಾ, ರಘು ಪರ ನಿಲ್ಲುತ್ತಾಳೆ. ಅಂತೂ ಕನ್ನಿಕಾ ಮೇಲೆ ಒಡವೆ ಕದ್ದ ಆರೋಪ ಬಂದಿದೆ. ಅವಮಾನವಾದ ಬಳಿಕ ಅಲ್ಲಿಂದ ಹೊರ ಬರುವ ಕನ್ನಿಕಾ ಮೊಬೈಲ್‌ಗೆ ಒಂದು ಮೆಸೇಜ್‌ ಬರುತ್ತದೆ. ಕನ್ನಿಕಾ ಪರ್ಸ್‌ನಲ್ಲಿ ಒಡವೆ ಚೆಕ್‌ ಮಾಡುತ್ತಿದ್ದನ್ನು ಪೂಜಾ, ರೆಕಾರ್ಡ್‌ ಮಾಡಿ ಅದನ್ನು ಕನ್ನಿಕಾಗೆ ಕಳಿಸುತ್ತಾಳೆ. ಇದನ್ನು ನೋಡಿ ಕನ್ನಿಕಾ ಗಾಬರಿ ಆಗುತ್ತಾಳೆ. ಅಷ್ಟರಲ್ಲಿ ಆಕೆಗೆ ಕರೆ ಬರುತ್ತದೆ.

ಒಂದು ದೊಡ್ಡ ಶಿಕ್ಷಣ ಸಂಸ್ಥೆ ನಡೆಸುತ್ತಿರು ಕನ್ನಿಕಾ ಕಾಮತ್‌ ಒಡವೆ ಕದಿಯುತ್ತಾಳೆ ಎಂಬ ನ್ಯೂಸ್‌ ಮೀಡಿಯಾದಲ್ಲಿ ಬರುತ್ತದೆ. ಹಾಗೆ ಆಗಬಾರದು ಎಂದರೆ ನಾನು ಕಳಿಸುವ ಲೊಕೇಶನ್‌ಗೆ ಬಾ ಎಂದು ಅತ್ತ ಕಡೆಯಿಂದ ಬರುವ ಧ್ವನಿ ಹೇಳುತ್ತದೆ. ಅದು ಯಾರು ಎಂದು ಗೊಂದಲಕ್ಕೆ ಒಳಗಾಗುವ ಕನ್ನಿಕಾ ಲೊಕೇಶನ್‌ಗೆ ಬರುತ್ತಾಳೆ. ಅಲ್ಲಿ ಭಾಗ್ಯಾಳನ್ನು ನೋಡಿ ಗಾಬರಿ ಆಗುತ್ತಾಳೆ. ಒಡವೆ ಕದ್ದ ಆರೋಪದಿಂದ ಮುಕ್ತಳಾಗಳು ಕನ್ನಿಕಾ ಏನು ಮಾಡುತ್ತಾಳೆ? ಇತ್ತ ಗುಂಡಣ್ಣ ಮನೆಯವರ ಎದುರು ತಾನು ಸುಳ್ಳು ಹೇಳಿದ್ದಾಗಿ ನಿಜ ಒಪ್ಪಿಕೊಳ್ಳುತ್ತಾನಾ? ಕಾದು ನೋಡಬೇಕು.

IPL_Entry_Point