Bhagyalakshmi Serial: ಕಳ್ಳತನದ ವಿಡಿಯೋಗೆ ಹೆದರಿ ಅಕ್ಕ ಮಹಿತಾ ಕಾಮತ್ ಎದುರು ತಪ್ಪು ಒಪ್ಪಿಕೊಂಡ ಕನ್ನಿಕಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್ 29ರ ಎಪಿಸೋಡ್. ನಾನು ತನ್ವಿ ಏನೂ ತಪ್ಪಿಲ್ಲ ಎಂದು ಸಾಬೀತು ಮಾಡಿ ಈ ವರ್ಷ ಪರೀಕ್ಷೆ ಬರೆದೇ ತೀರುತ್ತೇವೆ ಎಂದು ಪಣ ತೊಟ್ಟಿದ್ದ ಭಾಗ್ಯಾ, ಈಗ ಮಹಿತಾ ಕಾಮತ್ ಎದುರು ಕನ್ನಿಕಾ ಮಾಡಿದ ತಪ್ಪನ್ನು ತೋರಿಸಿದ್ಧಾಳೆ. ಚಾಲೆಂಜ್ ಮಾಡಿದಂತೆ ಭಾಗ್ಯಾ, ತನ್ವಿ ಪರೀಕ್ಷೆ ಬರೆಯುತ್ತಾರಾ ಅನ್ನೋದು ಶನಿವಾರದ ಎಪಿಸೋಡ್‌ನಲ್ಲಿ ತಿಳಿಯಲಿದೆ.
Bhagyalakshmi Serial: ಎಕ್ಸಾಂ ಹಾಲ್‌ನಲ್ಲಿ ರೋಲ್ ನಂಬರ್ ಬರೆಯುವನಿಗೆ ದುಡ್ಡಿನ ಆಸೆ ತೋರಿಸಿದ ಕನ್ನಿಕಾ, ಡೆಸ್ಕ್ ಮೇಲೆ ಗಣಿತಾ ಫಾರ್ಮುಲಾ ಬರೆಸಿ ಭಾಗ್ಯಾ, ತನ್ವಿ ಇಬ್ಬರೂ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದಾಳೆ. ಸ್ಕ್ವಾಡ್ ಎದುರು ಭಾಗ್ಯಾ, ತನ್ವಿ ಇಬ್ಬರೂ ತಪ್ಪಿತಸ್ಥರಾಗಿದ್ದು ಪರೀಕ್ಷೆ ಬರೆಯದೆ ಹೊರ ಹೋಗಿದ್ದಾರೆ.
ಹೇಗಾದರೂ ಮಾಡಿ ಕನ್ನಿಕಾ ತಪ್ಪು ಒಪ್ಪಿಕೊಳ್ಳುವಂತೆ ಮಾಡಬೇಕು ಎಂದು ಪಣ ತೊಟ್ಟ ಭಾಗ್ಯಾ ರಘು ಸಹಾಯದಿಂದ ನಿಶಾ ಸಹಾಯ ಪಡೆದು ಕನ್ನಿಕಾ ಮೇಲೆ ಒಡವೆ ಕದ್ದ ಆರೋಪ ಬರುವಂತೆ ಮಾಡುತ್ತಾಳೆ. ಆ ವಿಡಿಯೋವನ್ನು ರೆಕಾರ್ಡ್ ಮಾಡಿ ಕನ್ನಿಕಾಗೆ ಬ್ಲಾಕ್ ಮೇಲ್ ಮಾಡಿ ತಾನು ಇರುವ ಲೊಕೇಶನ್‌ಗೆ ಕನ್ನಿಕಾ ಬರುವಂತೆ ಹೇಳುತ್ತಾಳೆ. ಅಲ್ಲಿಗೆ ಬಂದಾಗ ತನಗೆ ಬ್ಲಾಕ್ ಮೇಲ್ ಮಾಡಿದ್ದು ಭಾಗ್ಯಾ, ಪೂಜಾ ಎಂದು ತಿಳಿದ ಕನ್ನಿಕಾ ಶಾಕ್ ಆಗುತ್ತಾಳೆ. ಇಷ್ಟು ದಿನಗಳ ಕಾಲ ತಲೆ ತಗ್ಗಿಸಿಕೊಂಡು ಶಾಲೆಗೆ ಬಂದು ಹೋಗುತ್ತಿದ್ದೆ. ಆದರೆ ಈಗ ನನ್ನನ್ನೇ ಹೆದರಿಸುವಷ್ಟು ಮುಂದುವರೆದಿದ್ದೀಯ ಎಂದು ಪ್ರಶ್ನಿಸುತ್ತಾಳೆ. ಇದಕ್ಕೆ ಉತ್ತರಿಸುವ ಭಾಗ್ಯಾ, ನೀನು ನಮ್ಮ ಜೀವನದಲ್ಲಿ ಇಷ್ಟೆಲ್ಲಾ ಆಟವಾಗಿಡುತ್ತಿದ್ದರೂ ಅದನ್ನು ನೋಡಿಕೊಂಡು ಹೇಗೆ ಸುಮ್ಮನಿರಲಿ ಎಂದು ಪ್ರಶ್ನಿಸುತ್ತಾಳೆ.
ಅಕ್ಕನ ಮುಂದೆ ತಪ್ಪು ಒಪ್ಪಿಕೊಂಡ ಕನ್ನಿಕಾ
ಹೀಗೆಲ್ಲಾ ಬ್ಲಾಕ್‌ಮೇಲ್ ಮಾಡಿ ನಿಜ ಹೇಳುವಂತೆ ಮಾಡಲು ಸಾಧ್ಯವೇ ಇಲ್ಲ ಎಂದು ಕನ್ನಿಕಾ ಅಹಂನಿಂದ ಮಾತನಾಡುತ್ತಾಳೆ. ನೀನು ಒಡವೆ ಕದ್ದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತೇನೆ. ಆಗ ನಿನ್ನದು ಮಾತ್ರವಲ್ಲ ನಿನ್ನ ತಂದೆಯ ಮರ್ಯಾದೆಯೂ ಹೋಗುತ್ತದೆ. ನಿನ್ನ ಸ್ಕೂಲ್ ಹೆಸರು ಕೂಡಾ ಹಾಳಾಗುತ್ತದೆ. ಮುಂದಿನ ವರ್ಷದಿಂದ ನಿನ್ನ ಸ್ಕೂಲ್‌ಗೆ ಯಾವ ಪೋಷಕರೂ ಮಕ್ಕಳನ್ನು ಸೇರಿಸುವುದಿಲ್ಲ ಎಂದು ಪೂಜಾ ಹೇಳುತ್ತಾಳೆ. ಪೂಜಾ ಮಾತನ್ನು ಕೇಳಿ ಕನ್ನಿಕಾಗೆ ಗಾಬರಿ ಆಗುತ್ತದೆ. ಬೇಡ ಈ ಸ್ಕೂಲ್ ಕಟ್ಟಲು, ಒಳ್ಳೆ ಹೆಸರು ಬರಲು ನನ್ನ ತಾತ, ತಂದೆ ಬಹಳ ಕಷ್ಟಪಟ್ಟಿದ್ಧಾರೆ ಎನ್ನುತ್ತಾಳೆ. ಅದೇ ರೀತಿ ನಾನೂ , ನನ್ನ ಮಗಳು ಶಾಲೆಗೆ ಸೇರಲು ಓದಲು, ಪರೀಕ್ಷೆ ಬರೆಯುವುದರ ಹಿಂದೆ ನನ್ನ ಅತ್ತೆ, ಮಾವ ಇಬ್ಬರ ಶ್ರಮ ಅಡಗಿದೆ ಎನ್ನುತ್ತಾಳೆ.
ಕೊನೆಗೂ ಕನ್ನಿಕಾ, ತಪ್ಪು ಒಪ್ಪಿಕೊಳ್ಳುತ್ತೇನೆ ಎನ್ನುತ್ತಾಳೆ. ಕನ್ನಿಕಾಳನ್ನು ಎಳೆದೊಯ್ಯುವ ಭಾಗ್ಯಾ ಅಕ್ಕ ಮಹಿತಾ ಕಾಮತ್ ಮುಂದೆ ತಂದು ನಿಲ್ಲಿಸುತ್ತಾಳೆ. ನಿಜ ಹೇಳು ಬೆಳಗ್ಗಿನಿಂದ ನಡೆದ ವಿಚಾರದಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ತಪ್ಪು ಒಪ್ಪಿಕೊಳ್ಳುವುದಾಗಿ ಗದರುತ್ತಾಳೆ. ಕಳ್ಳತನದ ವಿಡಿಯೋಗೆ ಹೆದರಿ ಕನ್ನಿಕಾ , ಅಕ್ಕನ ಮುಂದೆ ನಿಜ ಒಪ್ಪಿಕೊಳ್ಳುತ್ತಾಳೆ.
ತಂಗಿಗೆ ಮಹಿತಾ ಕಾಮತ್ ಕಪಾಳಮೋಕ್ಷ
ಇದೆಲ್ಲಾ ಕನ್ನಿಕಾಳೇ ಮಾಡಿದ್ದು ಎಂದು ತಿಳಿದು ಮಹಿತಾ ಕೂಡಾ ಗಾಬರಿ ಆಗುತ್ತಾಳೆ. ಕೆಲವು ದಿನಗಳ ಹಿಂದಷ್ಟೇ ಮಹಿಳಾ ದಿನದಂದು ಭಾಗ್ಯಾಳನ್ನು ಕೆಣಕಿ ಮರ್ಯಾದೆ ಹಾಳು ಮಾಡಿಕೊಂಡಿದ್ದೀಯ, ಈಗ ಮತ್ತೆ ಇದೆಲ್ಲಾ ಬೇಕಾ ಎಂದು ಕೆನ್ನೆಗೆ ಬಾರಿಸುತ್ತಾಳೆ. ಭಾಗ್ಯಾ ಪರೀಕ್ಷೆ ಬರೆಯುವುದು ನನಗೆ ಇಷ್ಟವಿರಲಿಲ್ಲ ಆದ್ದರಿಂದ ಹೀಗೆಲ್ಲಾ ಮಾಡಿದೆ ಎಂದು ಕನ್ನಿಕಾ ಹೇಳುತ್ತಾಳೆ. ನೀನು ಹೇಳಿದಂತೆ ನನ್ನದೇ ತಪ್ಪು ಎಂದು ಒಪ್ಪಿಕೊಂಡಿದ್ದೇನೆ ಆ ವಿಡಿಯೋ ಡಿಲೀಟ್ ಮಾಡು, ನಾನು ನಿಜವಾಗಲೂ ಒಡವೆ ಕದ್ದಿಲ್ಲ ಎನ್ನುತ್ತಾಳೆ. ನೀನು ಒಡವೆ ಕದ್ದಿಲ್ಲ ಎಂದು ನಮಗೆ ಚೆನ್ನಾಗಿ ಗೊತ್ತು. ನೀನು ತಪ್ಪು ಒಪ್ಪಿಕೊಳ್ಳಲಿ ಎಂದು ಇದೆಲ್ಲಾ ನಾವು ಮಾಡಿದ ನಾಟಕ ಎಂದು ನಿಜ ಹೇಳುತ್ತಾಳೆ.
ಕನ್ನಿಕಾ ಮತ್ತೆ ಉಲ್ಟಾ ಹೊಡೆಯುತ್ತಾಳಾ? ಅಥವಾ ಭಾಗ್ಯಾ, ತನ್ವಿ ಇಬ್ಬರಿಗೂ ಪರೀಕ್ಷೆ ಬರೆಯಲು ಮಹಿತಾ ಕಾಮತ್ ಅವಕಾಶ ಮಾಡಿಕೊಡುತ್ತಾಳಾ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ವಿಭಾಗ