ಕನ್ನಡ ಸುದ್ದಿ  /  ಮನರಂಜನೆ  /  ಮಹಿಳಾ ಸಂಘದವರು ಮನೆಯಲ್ಲಿದ್ದಾಗ್ಲೇ ಭಾಗ್ಯಾಗೆ ಬಂತು ಡಿವೋರ್ಸ್‌ ನೋಟಿಸ್‌, ತಾಂಡವ್‌ಗೆ ಖುಷಿಯೋ ಖುಷಿ; ಭಾಗ್ಯಲಕ್ಷ್ಮೀ ಧಾರಾವಾಹಿ

ಮಹಿಳಾ ಸಂಘದವರು ಮನೆಯಲ್ಲಿದ್ದಾಗ್ಲೇ ಭಾಗ್ಯಾಗೆ ಬಂತು ಡಿವೋರ್ಸ್‌ ನೋಟಿಸ್‌, ತಾಂಡವ್‌ಗೆ ಖುಷಿಯೋ ಖುಷಿ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 29ರ ಸಂಚಿಕೆ: ಭಾಗ್ಯಾ ಫೋಟೋ ಪೇಪರ್‌ನಲ್ಲಿ ಬಂದಿರುವುದಕ್ಕೆ ಮಹಿಳಾ ಸಂಘದವರು ಮನೆಗೆ ಬಂದು ಅಭಿನಂದಿಸುತ್ತಾರೆ. ಮಹಿಳಾ ಸಂಘದವರು ಮನೆಯಲ್ಲಿದ್ದಾಗ್ಲೇ ಭಾಗ್ಯಾಗೆ ಮತ್ತೊಮ್ಮೆ ಡಿವೋರ್ಸ್‌ ನೋಟೀಸ್‌ ಬಂದಿದೆ. ಭಾಗ್ಯಾ ಆತಂಕ ನೋಡಿ ತಾಂಡವ್‌ ಖುಷಿಯಾಗುತ್ತಾನೆ.

ಮಹಿಳಾ ಸಂಘದವರು ಮನೆಯಲ್ಲಿದ್ದಾಗ್ಲೇ ಭಾಗ್ಯಾಗೆ ಬಂತು ಡಿವೋರ್ಸ್‌ ನೋಟಿಸ್‌, ತಾಂಡವ್‌ಗೆ ಖುಷಿಯೋ ಖುಷಿ; ಭಾಗ್ಯಲಕ್ಷ್ಮೀ ಧಾರಾವಾಹಿ
ಮಹಿಳಾ ಸಂಘದವರು ಮನೆಯಲ್ಲಿದ್ದಾಗ್ಲೇ ಭಾಗ್ಯಾಗೆ ಬಂತು ಡಿವೋರ್ಸ್‌ ನೋಟಿಸ್‌, ತಾಂಡವ್‌ಗೆ ಖುಷಿಯೋ ಖುಷಿ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಭಾಗ್ಯಾ ಕೆಲಸ ಕಳೆದುಕೊಳ್ಳುವ ಭೀತಿಯಲ್ಲೇ ಹೋಟೆಲ್‌ನಿಂದ ಮನೆಗೆ ವಾಪಸ್‌ ಬರುತ್ತಾಳೆ. ಬೆಳಗ್ಗಿನಿಂದ ಸಂಜೆವರೆಗೂ ಎಲ್ಲಿಗೆ ಹೋಗಿದ್ದೆ ಎಂದು ತಾಂಡವ್‌ ಹಾಗೂ ಸುನಂದಾ ಭಾಗ್ಯಾಳನ್ನು ಪ್ರಶ್ನಿಸಿದರೂ, ಅವರ ಮಾತುಗಳಿಗೆ ನೀನು ಗಮನ ಕೊಡಬೇಡ ಎಂದು ಕುಸುಮಾ, ಭಾಗ್ಯಾ ಪರ ನಿಲ್ಲುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಪೇಪರ್‌ನಲ್ಲಿ ಭಾಗ್ಯಾ ಫೋಟೋ

ಮರು ದಿನ ಭಾಗ್ಯಾ ರೂಮ್‌ನಲ್ಲಿ ಮಕ್ಕಳೊಂದಿಗೆ ಮಾತನಾಡುವಾಗ ನಿಮ್ಮನ್ನು ಫಾಲೋ ಮಾಡಿದ್ದು, ಹೋಟೆಲ್‌ಗೆ ಹೋಗಿದ್ದನ್ನು ನೋಡಿದ್ದಾಗಿ ಮಕ್ಕಳು ಭಾಗ್ಯಾಗೆ ಹೇಳುತ್ತಾರೆ. ನಾನು ಏನೇ ಮಾಡಿದರೂ ನಿಮ್ಮ ಹಾಗೂ ಮನೆಯ ಒಳಿತಿಗೆ ಮಾಡುವುದು. ನಾನು ಹೋಟೆಲ್‌ಗೆ ಹೋದ ವಿಚಾರವನ್ನು ಯಾರಿಗೂ ಹೇಳಬೇಡಿ, ಹೇಳಿದರೆ ಎಲ್ಲರೂ ಬೇಜಾರು ಮಾಡಿಕೊಳ್ಳುತ್ತಾರೆ ಎಂದು ಭಾಗ್ಯಾ, ಮಕ್ಕಳ ಬಳಿ ಮನವಿ ಮಾಡುತ್ತಾಳೆ. ಅಮ್ಮನ ಮೇಲೆ ನಂಬಿಕೆ ಇಟ್ಟ ಮಕ್ಕಳು, ಖಂಡಿತ ಯಾರಿಗೂ ಹೇಳುವುದಿಲ್ಲ ಎಂದು ಭರವಸೆ ನೀಡುತ್ತಾರೆ. ಮರುದಿನ ಧರ್ಮರಾಜ್‌ ಹಾಲ್‌ನಲ್ಲಿ ಪೇಪರ್‌ ನೋಡಿ ಎಲ್ಲರೂ ಬನ್ನಿ ಎಂದು ಖುಷಿಯಿಂದ ಕರೆಯುತ್ತಾರೆ. ಧರ್ಮರಾಜ್‌ ಒಂದೇ ಸಮ ಎಲ್ಲರನ್ನೂ ಕರೆಯುವುದನ್ನು ಕೇಳಿ ತಾಂಡವ್‌, ಸುನಂದಾ ಕೂಡಾ ಹಾಲ್‌ಗೆ ಬರುತ್ತಾರೆ.

ಭಾಗ್ಯಾ ಫೋಟೋ ಪೇಪರ್‌ನಲ್ಲಿ ಬಂದಿದೆ. 35ನೇ ವಯಸ್ಸಿನಲ್ಲೂ ಭಾಗ್ಯಾ ವಿದ್ಯಾಭ್ಯಾಸ ಮಾಡಿ, ಪರೀಕ್ಷೆಯಲ್ಲಿ ಫಸ್ಟ್‌ಕ್ಲಾಸ್‌ನಲ್ಲಿ ಪಾಸ್‌ ಆಗಿರುವುದನ್ನು ಪೇಪರ್‌ನಲ್ಲಿ ಬರೆಯಲಾಗಿದೆ ಎಂದು ಧರ್ಮರಾಜ್‌ ಹೇಳುತ್ತಾರೆ. ಭಾಗ್ಯಾ ಫೋಟೋ ಪೇಪರ್‌ನಲ್ಲಿ ಬಂದಿರುವುದನ್ನು ನೋಡಿ ಎಲ್ಲರೂ ಖುಷಿಯಾಗುತ್ತಾರೆ. ಜೊತೆಗೆ ಭಾಗ್ಯಾಳನ್ನು ಪ್ರೋತ್ಸಾಹಿಸುತ್ತಿರುವ ಕುಸುಮಾ ಬಗ್ಗೆಯೂ ಬರೆಯಲಾಗಿದೆ ಎಂದು ತಿಳಿದಾಗ ಎಲ್ಲರ ಖುಷಿ ದುಪ್ಪಟ್ಟಾಗುತ್ತದೆ. ಆದರೆ ತಾಂಡವ್‌ ಮಾತ್ರ ಇವರ ಸಂಭ್ರಮ ನೋಡಿ ಕೋಪಗೊಳ್ಳುತ್ತಾನೆ. ಸುನಂದಾ ಕೂಡಾ ಮಗಳ ಸಾಧನೆ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾಳೆ. ಎಲ್ಲರೂ ಹೀಗೆ ಖುಷಿಯಲ್ಲಿರುವಾಗ ಮಹಿಳಾ ಸಂಘದವರು ಮನೆಗೆ ಬರುತ್ತಾರೆ.

ಮಹಿಳಾ ಸಂಘದವರ ಎದುರಿಗೆ ಭಾಗ್ಯಾಗೆ ಬಂತು ಕೋರ್ಟ್‌ ನೋಟಿಸ್‌

ಭಾಗ್ಯಾಳ ಸಾಧನೆಯನ್ನು ಅಭಿನಂದಿಸುವ ಮಹಿಳಾ ಸಂಘದವರು ಆಕೆಗೆ ಸನ್ಮಾನ ಮಾಡುತ್ತಾರೆ. ಕುಸುಮಾಗೆ ಕೂಡಾ ಶಾಲು ಹೊದಿಸಿ, ಪೇಟ ತೊಡಿಸಿ, ಹಾರ ಹಾಕಿ ಸನ್ಮಾನಿಸುತ್ತಾರೆ. ಇವರ ಸಂಭ್ರಮ ನೋಡಲಾಗದೆ ತಾಂಡವ್‌ ರೂಮ್‌ ಒಳಗೆ ಹೋಗುತ್ತಾನೆ. ಅದೇ ಸಮಯಕ್ಕೆ ಶ್ರೇಷ್ಠಾ , ತಾಂಡವ್‌ಗೆ ಕರೆ ಮಾಡಿ ಪೂಜಾ ತನಗೆ ಹಿಂಸೆ ಕೊಡುತ್ತಿದ್ದಾಳೆ, ಏನಾದರೂ ಮಾಡು ಎನ್ನುತ್ತಾಳೆ. ನನಗೆ ಇಲ್ಲಿ ಹಿಂಸೆ ಆಗುತ್ತಿದೆ. ಭಾಗ್ಯಾ ಏನೋ ಸಾಧನೆ ಮಾಡಿದ್ಧಾಳೆ ಎಂದು ಮಹಿಳಾ ಸಮಾಜದವರು ಬಂದು ಆಕೆಯನ್ನು ಸನ್ಮಾನಿಸುತ್ತಿದ್ದಾರೆ. ನನಗೆ ಅವರ ಖುಷಿ ನೋಡಲಾಗುತ್ತಿಲ್ಲ. ಮತ್ತೊಂದು ಡಿವೋರ್ಸ್‌ ನೋಟಿಸ್‌ ಕಳಿಸುವಂತೆ ಲಾಯರ್‌ಗೆ ಹೇಳಿದ್ದೇನೆ. ಅದು ಬರಲಿ ಅವಳ ಕೊಬ್ಬು ಇಳಿಸುತ್ತೇನೆ ಎಂದು ಹೊರಗೆ ಬರುತ್ತಾನೆ.

ಸನ್ಮಾನ ಮಾಡುವಾಗ ತಾಂಡವ್‌ ಇಲ್ಲದನ್ನು ನೋಡಿ, ನಿಮ್ಮ ಪತಿಗೆ ಇದೆಲ್ಲಾ ಇಷ್ಟವಿಲ್ಲವೇ ಎಂದು ಮಹಿಳಾ ಸಂಘದವರು ಕೇಳುತ್ತಾರೆ. ಇದನ್ನು ಕೇಳಿಸಿಕೊಳ್ಳುವ ತಾಂಡವ್‌, ಹಾಗೇನಿಲ್ಲ ನೀವು ಭಾಗ್ಯಾಗೆ ಸನ್ಮಾನ ಮಾಡುವುದನ್ನು ಫೊಟೋ ತೆಗೆಯಬೇಕಲ್ಲವೇ , ಮೊಬೈಲ್‌ ತರಲು ಒಳಗೆ ಹೋಗಿದ್ದೆ ಎನ್ನುತ್ತಾನೆ.

ಒಲ್ಲದ ಮನಸ್ಸಿನಿಂದಲೇ ತಾಂಡವ್‌ ಎಲ್ಲರ ಫೋಟೋ ತೆಗೆಯುತ್ತಾನೆ. ಅಷ್ಟರಲ್ಲಿ ಪೋಸ್ಟ್‌ ಮ್ಯಾನ್‌ ಬಂದು ಭಾಗ್ಯಾಗೆ ಕೋರ್ಟಿನಿಂದ ಬಂದ ನೋಟಿಸ್‌ ಕೊಡುತ್ತಾನೆ. ಮಹಿಳಾ ಸಂಘದವರಿಗೆ ಈ ವಿಚಾರ ಗೊತ್ತಾದರೆ ಸಮಸ್ಯೆ ಎಂದು ತಾಂಡವ್‌ ಗಾಬರಿ ಆಗುತ್ತಾನೆ. ಅಷ್ಟರಲ್ಲಿ ಎಲ್ಲರೂ ಮನೆಯಿಂದ ಹೊರಡುತ್ತಾರೆ. ತನಗೆ ಬಂದಿರುವುದು ಡಿವೋರ್ಸ್‌ ನೋಟಿಸ್‌ ಎಂದು ತಿಳಿದು ಭಾಗ್ಯಾ ಗಾಬರಿ ಆಗುತ್ತಾಳೆ. ಧರ್ಮರಾಜ್‌, ಕುಸುಮಾ, ಸುನಂದಾ, ಮಕ್ಳಳು ಕೂಡಾ ಶಾಕ್‌ ಆಗುತ್ತಾರೆ. ಆದರೆ ಭಾಗ್ಯಾ ಆತಂಕ ನೋಡಿ ತಾಂಡವ್‌ ತಾನು ಏನೋ ಸಾಧನೆ ಮಾಡಿದವನಂತೆ ಖುಷಿಯಾಗುತ್ತಾನೆ.

ಭಾಗ್ಯಾ ಕೋರ್ಟ್‌ಗೆ ಹೋಗಿ ತಾಂಡವ್‌ ವಿರುದ್ಧ ನಿಲ್ಲುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ವರ್ಗ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಟಿ20 ವರ್ಲ್ಡ್‌ಕಪ್ 2024