ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 2nd April 2024 Episode Tandav Knows Truth Rsm

Bhagyalakshmi Serial: ತಿಳಿದೇಹೋಯ್ತು ಗುಂಡಣ್ಣನ ನಾಟಕ, ಶ್ರೇಷ್ಠಾ ಮನೆಗೆ ಗಂಟುಮೂಟೆ ಕಟ್ಟಲಿದ್ದಾನಾ ತಾಂಡವ್‌?; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 3ರ ಎಪಿಸೋಡ್‌. ಗುಂಡಣ್ಣ ಮಾಡಿದ್ದು ನಾಟಕ ಎಂದು ತಿಳಿದ ನಂತರ ತಾಂಡವ್‌ ಭಾಗ್ಯಾ ಮೇಲೆ ಕೋಪಗೊಳ್ಳುತ್ತಾನೆ. ಮಗನಿಗೆ ಸುಳ್ಳು ಹೇಳುವುದನ್ನು ಕಲಿಸಿದ್ದೀಯ ಎಂದು ರೇಗುತ್ತಾನೆ. ಆದರೆ ಎಲ್ಲಾ ವಿಚಾರ ಮನೆಯವರಿಗೆ ಗೊತ್ತಿದ್ದು ತಿಳಿದ ನಂತರ ಸುಮ್ಮನಾಗುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 3ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 3ರ ಎಪಿಸೋಡ್‌ (PC: Colors Kannada)

ಭಾಗ್ಯಲಕ್ಷ್ಮೀ ಧಾರಾವಾಹಿ: ಗುಂಡಣ್ಣನನ್ನು ಹೆದರಿಸಿ ಬಾಯಿ ಬಿಡಿಸುವ ಉದ್ದೇಶದಿಂದ ಶ್ರೇಷ್ಠಾ ಹಾಗೂ ಮಹೇಶ ನಾಟಕ ಮಾಡುತ್ತಾರೆ. ಮಗುವಿಗೆ ಹೆದರಿಸಿದರೆ ನಿಜ ಹೇಳಬಹುದು ಎಂಬ ಕಾರಣಕ್ಕೆ ಮಹೇಶ ಮಾರು ವೇಷದಲ್ಲಿ ಗುಂಡಣ್ಣನ ಬ್ರೈನ್‌ ವಾಶ್‌ ಮಾಡುತ್ತಾನೆ. ಇವರಿಬ್ಬರ ಪ್ಲ್ಯಾನ್‌ ತಿಳಿಯುವ ಸುಂದ್ರಿ ಎಲ್ಲಾ ವಿಚಾರವನ್ನು ಪೂಜಾಗೆ ಹೇಳುತ್ತಾಳೆ. ಗುಂಡಣ್ಣ ನಿಜ ಹೇಳದಂತೆ ತಡೆಯಲು ಪೂಜಾ ಆತುರಾತುರವಾಗಿ ಗುಂಡಣ್ಣನ ಬಳಿ ಬರುತ್ತಾಳೆ.

ಪೂಜಾಗೆ ತನ್ವಿ ಎದುರಾಗುತ್ತಾಳೆ. ಗುಂಡಣ್ಣ ನಾವು ಮಾಡಿದ ನಾಟಕದ ಬಗ್ಗೆ ನಿಮ್ಮ ಅಮ್ಮನಿಗೆ ಹೇಳಲು ಹೊರಟಿದ್ದಾನೆ ಎನ್ನುತ್ತಾಳೆ. ಆದರೆ ತನ್ವಿಗೆ ತಕ್ಷಣಕ್ಕೆ ನೆನಪಿಗೆ ಬರುವುದಿಲ್ಲ. ಯಾವ ನಾಟಕ ಎಂದು ಕೇಳುತ್ತಾಳೆ. ಗುಂಡಣ್ಣ ತಲೆ ಸುತ್ತಿ ಬಿದ್ದಂತೆ ರೆಸಾರ್ಟ್‌ನಲ್ಲಿ ನಾಟಕ ಮಾಡಿದ್ದು ನಾಟಕ ತಾನೇ ಅದನ್ನು ತಡೆಯಬೇಕು ಬಾ ಎಂದು ಕರೆದುಕೊಂಡು ಹೋಗುತ್ತಾಳೆ. ಪೂಜಾ ತನ್ವಿ ಮಾತನಾಡುವುದನ್ನು ತಾಂಡವ್‌ ಕೇಳಿಸಿಕೊಳ್ಳುತ್ತಾನೆ. ಆದರೆ ಅಷ್ಟರಲ್ಲೇ ತನ್ಮಯ್‌ ಎಲ್ಲಾ ವಿಚಾರವನ್ನು ಭಾಗ್ಯಾಗೆ ಹೇಳುತ್ತಾನೆ. ಇದನ್ನು ಕೇಳಿ ಭಾಗ್ಯಾಗೆ ಶಾಕ್‌ ಆಗುತ್ತದೆ. ಅಷ್ಟರಲ್ಲಿ ಪೂಜಾ ಬಂದು ಅಕ್ಕ ನೀನು ಹೊರಗೆ ಹೋಗು ನಾನು ಗುಂಡಣ್ಣನ ಬಳಿ ಏನೋ ಮಾತನಾಡಬೇಕು ಎನ್ನುತ್ತಾಳೆ.

ಇದನ್ನೂ ಓದಿ: 

ಮಗನ ಸುಳ್ಳಿಗೂ ಭಾಗ್ಯಾಳನ್ನು ದೂರಿದ ತಾಂಡವ್‌

ವಿಚಾರವನ್ನು ಶ್ರೇಷ್ಠಾಗೆ ಮೆಸೇಜ್‌ ಮಾಡುವ ತಾಂಡವ್‌ ಗುಂಡಣ್ಣನನ್ನು ಕರೆಯುತ್ತಾನೆ. ತಾಂಡವ್‌, ಮಗನನ್ನು ಹೀಗೆ ಜೋರಾಗಿ ಕರೆಯುತ್ತಿರುವುದು ಏಕೆ ಎಂದು ಭಾಗ್ಯಾಗೆ ಗೊಂದಲವಾಗುತ್ತದೆ. ಎಲ್ಲರೂ ಹಾಲ್‌ಗೆ ಬರುತ್ತಾರೆ. ಮನೆಯಲ್ಲಿ ಏನೆಲ್ಲಾ ನಾಟಕ ನಡೆಯುತ್ತಿದೆ ಎಂದು ಬಯಲು ಮಾಡಬೇಕಿದೆ ಅದಕ್ಕೆ ಎಲ್ಲರನ್ನೂ ಕರೆದದದ್ದು ಎಂದು ತಾಂಡವ್‌ ಹೇಳುತ್ತಾನೆ. ತಾಯಿ ಮಗನಿಗೆ ಕದಿಯಲು ಹೇಳಿಕೊಟ್ಟ ಕಥೆಯನ್ನು ಉದಾಹರಣೆಯನ್ನಾಗಿ ಹೇಳುವ ಮೂಲಕ ಗುಂಡಣ್ಣ ಸುಳ್ಳು ಹೇಳಿದ್ದನ್ನು ಮನೆಯವರ ಮುಂದೆ ಬಾಯಿ ಬಿಡುತ್ತಾನೆ. ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ಸುಳ್ಳು ಹೇಳುತ್ತೀಯ ಎಂದು ಕೆನ್ನೆಗೆ ಹೊಡೆಯುತ್ತಾನೆ. ಮತ್ತೊಮ್ಮೆ ಗುಂಡಣ್ಣನಿಗೆ ಹೊಡೆಯಲು ಕೈ ಎತ್ತಿದಾಗ ಭಾಗ್ಯಾ ತಾಂಡವ್‌ನನ್ನು ತಡೆಯುತ್ತಾಳೆ.

ಇದೆಲ್ಲವೂ ನಿನ್ನಿಂದಲೇ ಈಗಲೇ ಮಕ್ಕಳಿಗೆ ಸುಳ್ಳು ಹೇಳುವುದು, ನಾಟಕ ಮಾಡುವುದನ್ನು ಹೇಳಿಕೊಡುತ್ತಿದ್ದೀಯ. ನಾಚಿಕೆ ಆಗುತ್ತಿಲ್ಲವೇ? ನಿನ್ನದು ಒಂದು ಜನ್ಮಾನಾ? ನೀನೊಬ್ಬಳು ದರಿದ್ರ ತಾಯಿ ಎಂದು ಭಾಗ್ಯಾಗೆ ಬೈಯುತ್ತಾನೆ. ಅಷ್ಟರಲ್ಲಿ ಮಧ್ಯೆ ಬರುವ ಕುಸುಮಾ, ಹಾಗಿದ್ದರೆ ನನಗೂ ನೀನು ಬಯ್ಯಬೇಕು ಎನ್ನುತ್ತಾಳೆ. ಧರ್ಮರಾಜ್‌ ಕೂಡಾ ನನಗೂ ಛೀಮಾರಿ ಹಾಕು ಎನ್ನುತ್ತಾರೆ. ಅಪ್ಪ ಅಮ್ಮನನ್ನು ಒಂದು ಮಾಡುವ ಉದ್ಧೇಶದಿಂದ ಗುಂಡಣ್ಣ ಹಾಗೆ ನಾಟಕ ಮಾಡಿದ ವಿಚಾರ ನಮ್ಮೆಲ್ಲರಿಗೂ ಗೊತ್ತಿತ್ತು. ಆದರೂ ನಾವು ಸುಮ್ಮನಿದ್ದೆವು ಎಂದು ಎಲ್ಲರೂ ಹೇಳುತ್ತಾರೆ. ಆಗ ತಾಂಡವ್‌ಗೆ ಏನು ಹೇಳಬೇಕು ತಿಳಿಯುವುದಿಲ್ಲ.

ಇದನ್ನೂ ಓದಿ:

ಶ್ರೇಷ್ಠಾಗೆ ಕಪಾಳಮೋಕ್ಷ ಮಾಡಿದ ಸುಂದ್ರಿ

ಇತ್ತ ತಾಂಡವ್‌ ಮೆಸೇಜ್‌ ನೋಡಿದ ಶ್ರೇಷ್ಠಾ ಖುಷಿ ಆಗುತ್ತಾಳೆ. ತಾಂಡವ್‌ ಎಂಥವನು ಎಂದು ಮಕ್ಕಳಿಗೆ ತಿಳಿಯಿತು, ಇನ್ನು ಅವನೇ ಆ ದರಿದ್ರ ಮಕ್ಕಳಿಗೆ ಪಾಠ ಕಲಿಸುತ್ತಾನೆ, ಇಬ್ಬರನ್ನೂ ಮನೆಯಿಂದ ಹೊರ ಹಾಕುತ್ತಾನೆ ಎಂದು ಬೀಗುತ್ತಾಳೆ. ಶ್ರೇಷ್ಠಾ ಮಾತುಗಳನ್ನು ಕೇಳಿ ಸುಂದ್ರಿಗೆ ಕೋಪ ಬರುತ್ತದೆ. ಮಕ್ಕಳ ಮೇಲೆ ಇಷ್ಟೆಲ್ಲಾ ದ್ವೇಷ ಕಾರುತ್ತಿದ್ದಾಳೆ, ಒಂದು ಸಂಸಾರವನ್ನು ಹಾಳು ಮಾಡುತ್ತಿದ್ದಾಳೆ ಎಂಬ ಕೋಪದಿಂದಲೋ ಏನೋ ಸುಂದ್ರಿ, ಶ್ರೇಷ್ಠಾ ಕೆನ್ನೆಗೆ ಬಾರಿಸುತ್ತಾಳೆ. ಎಲ್ಲಾ ನಿಜ ತಿಳಿದ ನಂತರವೂ ತಾಂಡವ್‌ ಮತ್ತೆ ವಾದ ಶುರು ಮಾಡುತ್ತಾನಾ? ಮನೆ ಬಿಟ್ಟು ಶ್ರೇಷ್ಠಾ ಬಳಿ ಬರುತ್ತಾನಾ ಅನ್ನೋದನ್ನು ಕಾದು ನೋಡಬೇಕು.

ಇದನ್ನೂ ಓದಿ:

 

IPL_Entry_Point