ಮನೆಯಿಂದ ತಪ್ಪಿಸಿಕೊಂಡು ಮದುವೆ ಹಾಲ್‌ ಸೇರಿದ ತಾಂಡವ್‌, ಸುಂದ್ರಿಯನ್ನು ನೋಡೇಬಿಟ್ಲು ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 2nd september episode tandav escaped from home rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮನೆಯಿಂದ ತಪ್ಪಿಸಿಕೊಂಡು ಮದುವೆ ಹಾಲ್‌ ಸೇರಿದ ತಾಂಡವ್‌, ಸುಂದ್ರಿಯನ್ನು ನೋಡೇಬಿಟ್ಲು ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಮನೆಯಿಂದ ತಪ್ಪಿಸಿಕೊಂಡು ಮದುವೆ ಹಾಲ್‌ ಸೇರಿದ ತಾಂಡವ್‌, ಸುಂದ್ರಿಯನ್ನು ನೋಡೇಬಿಟ್ಲು ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 2ರ ಎಪಿಸೋಡ್‌. ಮನೆಯಲ್ಲಿ ಬಂಧಿಯಾಗಿದ್ದ ತಾಂಡವ್‌ ತಪ್ಪಿಸಿಕೊಂಡು ಮದುವೆ ಹಾಲ್‌ಗೆ ಬರುತ್ತಾನೆ. ಇತ್ತ ಶ್ರೇಷ್ಠಾ ತಂದೆ ತಾಯಿಯೊಂದಿಗೆ ಭಾಗ್ಯಾ, ಕುಸುಮಾ ಕೂಡಾ ಮದುವೆ ಮನೆಗೆ ಬರುತ್ತಾರೆ.

ಮನೆಯಿಂದ ತಪ್ಪಿಸಿಕೊಂಡು ಮದುವೆ ಹಾಲ್‌ ಸೇರಿದ ತಾಂಡವ್‌, ಸುಂದ್ರಿಯನ್ನು ನೋಡೇಬಿಟ್ಲು ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಮನೆಯಿಂದ ತಪ್ಪಿಸಿಕೊಂಡು ಮದುವೆ ಹಾಲ್‌ ಸೇರಿದ ತಾಂಡವ್‌, ಸುಂದ್ರಿಯನ್ನು ನೋಡೇಬಿಟ್ಲು ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ನಾಂದಿ ಶಾಸ್ತ್ರ ಮುಗಿಸಿದ ಶ್ರೇಷ್ಠಾ ಹಳದಿ ಶಾಸ್ತ್ರಕ್ಕೆ ರೆಡಿ ಆಗುತ್ತಿದ್ದಾಳೆ. ಮಗಳು ತಾವಿಲ್ಲದೆ ಮದುವೆ ಆಗುತ್ತಿರುವುದನ್ನು ನೋಡಿದ ಯಶೋಧಾ ಶ್ರೀವರ ಹೇಗಾದರೂ ಮಾಡಿ ಈ ಮದುವೆಯನ್ನು ನಿಲ್ಲಿಸಲೇಬೇಕು ಎಂದು ನಿರ್ಧರಿಸುತ್ತಾರೆ. ಭಾಗ್ಯಾ, ಕುಸುಮಾ ಕೂಡಾ ಅವರಿಬ್ಬರಿಗೆ ಸಾಥ್‌ ನೀಡುತ್ತಾರೆ. ಎಲ್ಲರೂ ಜೊತೆಯಾಗಿ ಮದುವೆ ಮನೆಗೆ ಬರುತ್ತಾರೆ.

ಅಪ್ಪ ಅಮ್ಮನೊಂದಿಗೆ ಭಾಗ್ಯಾ, ಕುಸುಮಾಳನ್ನು ನೋಡಿ ಕೋಪಗೊಂಡ ಶ್ರೇಷ್ಠಾ

ಅಪ್ಪ-ಅಮ್ಮ ಮದುವೆ ಮನೆಗೆ ಬಂದಿದ್ದನ್ನು ನೋಡಿ ಶ್ರೇಷ್ಠಾ ಗಾಬರಿ ಆಗುತ್ತಾಳೆ. ನೀವು ಇಲ್ಲಿಗೆ ಏಕೆ ಬಂದಿರಿ? ನನಗೂ ನಿಮಗೂ ಸಂಬಂಧ ಮುಗಿಯಿತು ಎಂದು ಹೇಳಿದ ನಂತರ ಎಲ್ಲವೂ ಮುಗಿಯಿತು. ನೀವು ಇಲ್ಲಿ ಬರುವ ಅವಶ್ಯಕತೆ ಇರಲಿಲ್ಲ ಎನ್ನುತ್ತಾಳೆ. ತಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದರೂ ಅದನ್ನು ಲೆಕ್ಕಿಸದೆ, ಇಷ್ಟು ಅದ್ದೂರಿ ಅಲಂಕಾರ ಮಾಡಿಕೊಂಡು ಕುಣಿದು ಕುಪ್ಪಳಿಸುತ್ತಾ ಮದುವೆ ಆಗುತ್ತಿರುವ ಶ್ರೇಷ್ಠಾಳನ್ನು ನೋಡಿ ಕುಸುಮಾ ಗರಂ ಆಗುತ್ತಾಳೆ. ಈ ಮದುವೆಗೆ ನೀವು ಖರ್ಚು ಮಾಡಿಲ್ಲ. ಎಲ್ಲಾ ದುಡ್ಡನ್ನು ನಾನು ಕೊಟ್ಟಿದ್ದೇನೆ, ಇದು ನನ್ನ ಮದುವೆ, ನನ್ನಿಷ್ಟ ಬಂದಂತೆ ಇರುತ್ತೇನೆ ನಿಮಗೇನು ಎಂದು ಶ್ರೇಷ್ಠಾ ಪ್ರಶ್ನಿಸುತ್ತಾಳೆ.

ನಿನ್ನೆಯಷ್ಟೇ ನನಗೆ ಅರಿಸಿನ, ಕುಂಕುಮ, ಹೂವು ಏನೂ ಬೇಡ ಎಂದು ಹೇಳಿದ್ದೆ, ಈಗೇಕೆ ನಿನಗೆ ಅರಿಶಿನ ಶಾಸ್ತ್ರ ಬೇಕಿತ್ತು ಎಂದು ಭಾಗ್ಯಾ ಶ್ರೇಷ್ಠಾಳನ್ನು ಕೇಳುತ್ತಾಳೆ. ನಾನು ಇದನ್ನೆಲ್ಲಾ ಇಷ್ಟ ಪಟ್ಟು ಮಾಡುತ್ತಿಲ್ಲ, ಫೋಟೋ, ವಿಡಿಯೋ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಈ ಶಾಸ್ತ್ರಗಳನ್ನೆಲ್ಲಾ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ಶ್ರೇಷ್ಠಾ ಉತ್ತರಿಸುತ್ತಾಳೆ. ಹೌದಾ ಹಾಗಿದ್ದರೆ ನಾನೇ ನಿನಗೆ ಅರಿಶಿನ ಹಚ್ಚುತ್ತೇನೆ ಬಾ ಎಂದು ಭಾಗ್ಯಾ, ಶ್ರೇಷ್ಠಾಳನ್ನು ಕರೆದುಕೊಂಡು ಹೋಗುತ್ತಾಳೆ. ವಧುವಿಗೆ ಅರಿಶಿನ ಹಚ್ಚಿ ಆಶೀರ್ವಾದ ಮಾಡಿ ಎಂದು ಪುರೋಹಿತರು ಹೇಳುತ್ತಾರೆ. ಆಗ ಭಾಗ್ಯಾ ಶ್ರೇಷ್ಠಾ ಕಿವಿ ಬಳಿ ಬಂದು, ಈ ಮದುವೆ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ, ನಿನ್ನ ಮದುವೆ ನಿಲ್ಲಿಸೋಕೆ ನಾವೆಲ್ಲಾ ಬಂದಿರುವುದು ಎನ್ನುತ್ತಾಳೆ. ಆಕೆ ಮಾತನ್ನು ಕೇಳಿದ ಶ್ರೇಷ್ಠಾ, ಕೋಪದಿಂದ ಅರಚುತ್ತಾಳೆ.

ಮದು ಮಗನನ್ನು ಹುಡುಕಿ ಹೊರಟ ಕುಸುಮಾ

ನಿನಗಾದರೂ ಬುದ್ಧಿ ಇಲ್ಲ, ನಿನ್ನನ್ನು ಮದುವೆ ಆಗುತ್ತಿರುವ ಹುಡುಗನಿಗಾದರೂ ಬುದ್ಧಿ ಬೇಡವೇ? ಎಲ್ಲಿ ಆ ಹುಡುಗ ? ಎಂದು ಕುಸುಮಾ, ಯಶೋಧಾಳನ್ನು ಪ್ರಶ್ನಿಸುತ್ತಾಳೆ. ಸರಿ ನೀವೆಲ್ಲಾ ಇಲ್ಲೇ ಇರಿ, ನಾನು ಹೋಗಿ ಹುಡುಗನ್ನು ಹುಡುಕಿ ತರುತ್ತೇನೆ ಎಂದು ಕುಸುಮಾ ವರನನ್ನು ಭೇಟಿ ಆಗಲು ಹೊರಡುತ್ತಾಳೆ. ಆದರೆ ಅಲ್ಲಿ ಮರೆಯಲ್ಲಿ ಅವಿತು ನಿಂತು ಎಲ್ಲವನ್ನೂ ನೋಡುತ್ತಿರುವ ಸುಂದ್ರಿಯನ್ನು ಕುಸುಮಾ ನೋಡುತ್ತಾಳೆ. ಮಗ ಸಿಗದಿದ್ದರೇನಂತೆ, ಅಮ್ಮ ಇಲ್ಲೇ ಇದ್ದಾಳಲ್ಲ. ಅವಳನ್ನು ವಿಚಾರಿಸಿಕೊಳ್ಳುತ್ತೇನೆ ಎಂದು ಕುಸುಮಾ, ಸುಂದ್ರಿ ಬಳಿ ಹೋಗುತ್ತಾಳೆ.

ಇತ್ತ ತಾಂಡವ್‌, ಕಿಟಕಿ ಸರಳುಗಳನ್ನು ತೆಗೆದು ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಅಪ್ಪನನ್ನು ನೋಡಿದ ತನ್ಮಯ್‌ ಜೋರಾಗಿ ಅರಚುತ್ತಾನೆ. ಅವನ ಅರಚಾಟ ಕಂಡು ಧರ್ಮರಾಜ ಅಲ್ಲಿಗೆ ಬರುತ್ತಾನೆ, ಆದರೆ ಅಷ್ಟರಲ್ಲಿ ತಾಂಡವ್‌ ಅಲ್ಲಿಂದ ಎಸ್ಕೇಪ್‌ ಆಗಿರುತ್ತಾನೆ. ವಿಚಾರ ತಿಳಿದ ಧರ್ಮರಾಜ್‌ ಮಕ್ಕಳನ್ನು ಸಮಾಧಾನ ಮಾಡುತ್ತಾನೆ. ಮನೆಯಿಂದ ತಪ್ಪಿಸಿಕೊಂಡು ಶ್ರೇಷ್ಠಾ ಮದುವೆಗೆ ಹೋಗುವ ಅವಶ್ಯಕತೆ ಇತ್ತಾ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾನೆ.

ಧರ್ಮರಾಜ್‌ಗೆ ಮಗನ ಬಗ್ಗೆ ಅನುಮಾನ ಉಂಟಾಗುವುದಾ? ಕುಸುಮಾ ಕೈಗೆ ಸಿಕ್ಕಿ ಬಿದ್ದ ಸುಂದ್ರಿ ಆಕೆಗೆ ಏನು ಸಮಜಾಯಿಷಿ ನೀಡುತ್ತಾಳೆ? ಮನೆಯವರನ್ನು ನೋಡಿ ತಾಂಡವ್‌ ಮದುವೆ ಮನೆಯಲ್ಲೂ ತಲೆ ಮರೆಸಿಕೊಳ್ಳುತ್ತಾನಾ ಎನ್ನುವುದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌