ರೂಮ್‌ನಿಂದ ಹೊರ ಬರಲು ಮಗನಿಗೆ ತಿಂಡಿ ಆಸೆ ತೋರಿಸಿದ ತಾಂಡವ್‌, ಅತ್ತ ಹಳದಿ ಶಾಸ್ತ್ರಕ್ಕೆ ರೆಡಿಯಾದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ರೂಮ್‌ನಿಂದ ಹೊರ ಬರಲು ಮಗನಿಗೆ ತಿಂಡಿ ಆಸೆ ತೋರಿಸಿದ ತಾಂಡವ್‌, ಅತ್ತ ಹಳದಿ ಶಾಸ್ತ್ರಕ್ಕೆ ರೆಡಿಯಾದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ರೂಮ್‌ನಿಂದ ಹೊರ ಬರಲು ಮಗನಿಗೆ ತಿಂಡಿ ಆಸೆ ತೋರಿಸಿದ ತಾಂಡವ್‌, ಅತ್ತ ಹಳದಿ ಶಾಸ್ತ್ರಕ್ಕೆ ರೆಡಿಯಾದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಆಗಸ್ಟ್‌ 30ರ ಎಪಿಸೋಡ್‌. ರೂಮ್‌ನಲ್ಲಿ ಲಾಕ್‌ ಆಗಿರುವ ತಾಂಡವ್‌, ಹೇಗಾದರೂ ಮಾಡಿ ರೂಮ್‌ನಿಂದ ಹೊರ ಬರಲು ಪ್ಲ್ಯಾನ್‌ ಮಾಡುತ್ತಾನೆ. ಮಗನಿಗೆ ತಿಂಡಿ ಆಸೆ ತೋರಿಸಿ ಅವನಿಂದ ಬಾಗಿಲು ತೆಗೆಸಲು ಯೋಚಿಸುತ್ತಾನೆ.

ರೂಮ್‌ನಿಂದ ಹೊರ ಬರಲು ಮಗನಿಗೆ ತಿಂಡಿ ಆಸೆ ತೋರಿಸಿದ ತಾಂಡವ್‌, ಅತ್ತ ಹಳದಿ ಶಾಸ್ತ್ರಕ್ಕೆ ರೆಡಿಯಾದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ರೂಮ್‌ನಿಂದ ಹೊರ ಬರಲು ಮಗನಿಗೆ ತಿಂಡಿ ಆಸೆ ತೋರಿಸಿದ ತಾಂಡವ್‌, ಅತ್ತ ಹಳದಿ ಶಾಸ್ತ್ರಕ್ಕೆ ರೆಡಿಯಾದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಅಪ್ಪ ಅಮ್ಮನೊಂದಿಗೆ ಸಂಬಂಧ ಕಡಿದುಕೊಂಡು ಸ್ವಾರ್ಥಿ ಶ್ರೇಷ್ಠಾ ಮದುವೆ ಆಗಲು ಹೊರಟಿದ್ದಾಳೆ. ಇವೆಂಟ್‌ ಮ್ಯಾನೇಜರ್‌ಗೆ ಹಣ ಕೊಟ್ಟು ಮದುವೆಗೆ ಎಲ್ಲಾ ತಯಾರಿ ಮಾಡಿದ್ದಾಳೆ. ಆದರೆ ಇತ್ತ ಮದುವೆ ಗಂಡು ತಾಂಡವ್‌ ರೂಮ್‌ನಲ್ಲಿ ಲಾಕ್‌ ಆಗಿದ್ದಾನೆ. ಶ್ರೇಷ್ಠಾ ಮದುವೆಗೆ ಹೋಗಬಾರದು ಎಂದು ಕಂಡಿಷನ್‌ ಮಾಡಿ ಕುಸುಮಾ, ಮಗನನ್ನು ರೂಮ್‌ನಲ್ಲಿ ಕೂಡಿ ಹಾಕಿದ್ದಾಳೆ.

ಮಗ ತನ್ಮಯ್‌ ಹೇಳಿದ ಎಲ್ಲಾ ತಿಂಡಿ ಆರ್ಡರ್‌ ಮಾಡಿದ ತಾಂಡವ್‌

ರೂಮ್‌ನಿಂದ ಹೊರ ಬರಲು ತಾಂಡವ್‌ ಹರ ಸಾಹಸ ಮಾಡುತ್ತಿದ್ದಾನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೊರಗೆ ಕಾಯುತ್ತಾ ಕುಳಿತಿರುವ ಮಕ್ಕಳನ್ನು ಹೇಗಾದರೂ ಮನ ಒಳಿಸಿ ರೂಮ್‌ ಬಾಗಿಲು ತೆಗೆಯುವಂತೆ ಮಾಡಬೇಕೆಂದು ತನ್ವಿಯನ್ನು ಮಾತನಾಡಿಸುತ್ತಾನೆ. ಅದರೆ ತನ್ವಿ ಅಪ್ಪನ ಮಾತಿಗೆ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ತನ್ವಿ ಈಗ ಭಾಗ್ಯಾನ ಕಡೆ ಸೇರಿಕೊಂಡಿದ್ದಾಳೆ. ಅವಳನ್ನು ಹಿಡಿದರೆ ಏನೂ ಪ್ರಯೋಜನವಾಗುವುದಿಲ್ಲ, ಗುಂಡಣ್ಣನನ್ನು ಮಾತನಾಡಿಸಿದರೆ, ಅವನನ್ನು ಹೇಗಾದರೂ ಮಾಡಿ ಪುಸಲಾಯಿಸಿ ಬಾಗಿಲು ತೆಗೆಯುವಂತೆ ಮಾಡಬಹುದು ಎಂದು ತಾಂಡವ್‌ ಪ್ಲ್ಯಾನ್‌ ಮಾಡುತ್ತಾರೆ. ಅಪ್ಪ ಹೊರ ಬರಲು ಏನೋ ಸ್ಕೆಚ್‌ ಹಾಕುತ್ತಿದ್ದಾರೆ ಆದರೆ ಯಾವುದೇ ಕಾರಣಕ್ಕೂ ಬಾಗಿಲು ತೆಗೆಯಬಾರದು ಎಂದು ತನ್ವಿ, ತಮ್ಮನಿಗೆ ಎಚ್ಚರಿಸುತ್ತಾಳೆ.

ಆದರೆ ಮಗ ತನ್ಮಯ್‌ನನ್ನು ಪ್ರೀತಿಯಿಂದ ಮಾತನಾಡಿಸುವ ತಾಂಡವ್‌, ನಿನಗೆ ನಾನು ತಿಂಡಿ ಕೊಡಿಸಿ ಬಹಳ ದಿನ ಅಯ್ತಲ್ವಾ. ಇಂದು ನಿಮಗೆ ತಿಂಡಿ ಕೊಡಿಸುತ್ತಾನೆ. ಆದರೆ ಅದಕ್ಕೆ ಒಂದು ಕಂಡಿಷನ್‌, ನೀನು ರೂಮ್‌ ಬಾಗಿಲು ತೆಗೆಯಬೇಕು ಎನ್ನುತ್ತಾನೆ. ತಿಂಡಿಯ ಆಸೆಗೆ ಅಪ್ಪನ ಆಫರ್‌ ಸ್ವೀಕರಿಸುವ ತನ್ಮಯ್‌, ಅಯ್ತು ನೀವು ಎಲ್ಲವನ್ನೂ ಆರ್ಡರ್‌ ಮಾಡಿ ಅದು ಬಂದ ನಂತರ ರೂಮ್‌ ಬಾಗಿಲು ತೆಗೆಯುತ್ತೇನೆ ಎನ್ನುತ್ತಾನೆ. ಮನೆಯಿಂದ ಹೊರ ಹೋಗಲು ಇವನಿಗೆ ಇಷ್ಟೆಲ್ಲಾ ಖರ್ಚು ಮಾಡಬೇಕೆಲ್ಲಾ ಎಂದು ಗೊಣಗುವ ತಾಂಡವ್‌, ಮಗ ಹೇಳಿದ್ದನ್ನೆಲ್ಲಾ ಆರ್ಡರ್‌ ಮಾಡುತ್ತಾನೆ. ಎಲ್ಲಾ ತಿಂದು ಮುಗಿಸಿ ಇನ್ನೇನು ಬಾಗಿಲು ತೆಗೆಯಬೇಕು ಎಂದುಕೊಳ್ಳುವಷ್ಟರಲ್ಲಿ, ಇನ್ನೊಂದು ಐಟಮ್‌ ಮಿಸ್‌ ಆಯ್ತು, ಅದನ್ನೂ ಆರ್ಡರ್‌ ಮಾಡಿ ನಂತರ ಬಾಗಿಲು ತೆಗೆಯುತ್ತೇನೆ ಎಂದು ತನ್ಮಯ್‌ ಹಿಂದೆ ಬರುತ್ತಾನೆ.

ಮಗಳ ಮದುವೆ ನಿಲ್ಲಿಸಲು ನಿರ್ಧರಿಸಿದ ಶ್ರೀವರ-ಯಶೋಧಾ

ಇತ್ತ ಆಸ್ಪತ್ರೆಯಲ್ಲಿ ಭಾಗ್ಯಾ, ಕುಸುಮಾ, ಶ್ರೀವರ , ಯಶೋಧಾ ಎಲ್ಲರೂ ಶ್ರೇಷ್ಠಾ ಬಗ್ಗೆ ಯೋಚಿಸುತ್ತಾರೆ. ಮಗಳು ಈ ರೀತಿ ನಮ್ಮ ಬಗ್ಗೆ ಕನಿಕರ ಇಲ್ಲದೆ ನಡೆದುಕೊಳ್ಳುತ್ತಿದ್ದಾಳೆ ಎಂದು ತಿಳಿದು ಬೇಸರಗೊಳ್ಳುತ್ತಾರೆ. ಹೇಗಾದರೂ ಮಾಡಿ ಈ ಮದುವೆ ನಿಲ್ಲಿಸಬೇಕು. ನಾನು ಮಾಡಿದ್ದೇ ಸರಿ ಎಂದು ಮೆರೆಯುತ್ತಿರುವ ಶ್ರೇಷ್ಠಾಗೆ ಬುದ್ಧಿ ಕಲಿಸಬೇಕು. ಅ ರೀತಿ ಮಾಡಿದರೆ ಆಕೆಯ ಜೀವನವೂ ಸರಿ ಆಗುತ್ತದೆ, ಅವಳನ್ನು ಮದುವೆ ಆಗುತ್ತಿರುವ ವ್ಯಕ್ತಿಯ ಹೆಂಡತಿ ಮಕ್ಕಳು ಕೂಡಾ ನೆಮ್ಮದಿಯಾಗಿರುತ್ತಾರೆ ಎಂದು ನಿರ್ಧರಿಸಿ ಎಲ್ಲರೂ ಮದುವೆ ಮನೆಗೆ ಹೋಗಲು ನಿರ್ಧರಿಸುತ್ತಾರೆ.

ಇತ್ತ ಶ್ರೇಷ್ಠಾ ಹಳದಿ ಶಾಸ್ತ್ರಕ್ಕೆ ಸಿದ್ದಳಾಗುತ್ತಾಳೆ. ಆಕೆಯ ಖುಷಿ ನೋಡಿದ ಸುಂದ್ರಿ, ನಡೆಯದ ಮದುವೆಗೆ ಇವಳು ಇಷ್ಟೆಲ್ಲಾ ಸಂಭ್ರಮ ಪಡುತ್ತಿದ್ದಾಳೆ ಎಂದುಕೊಳ್ಳುತ್ತಾಳೆ. ಮದುವೆ ನಿಲ್ಲಿಸಲು ನನ್ನೊಬ್ಬಳಿಂದ ಆಗುವುದಿಲ್ಲ, ಪೂಜಾ ಕೂಡಾ ಇರಲೇಬೇಕು ಎಂದುಕೊಂಡು ಪೂಜಾಳನ್ನು ಹುಡುಕುತ್ತಾಳೆ.

ತನ್ನ ಜೊತೆಗೆ ಕರೆದುತಂದ ಪೂಜಾಳನ್ನು ಶ್ರೇಷ್ಠಾ ಏನು ಮಾಡಿದಳು? ಮಗನ ಸಹಾಯದಿಂದ ತಾಂಡವ್‌ ರೂಮ್‌ನಿಂದ ಹೊರ ಬರುತ್ತಾನಾ? ಎಲ್ಲದಕ್ಕೂ ಮುಂದಿನ ಎಪಿಸೋಡ್‌ನಲ್ಲಿ ಉತ್ತರ ದೊರೆಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner