ಅಮ್ಮನ ಕಷ್ಟ ಕಂಡು ಸ್ಕೂಲ್ ಫೀಸ್ ವಿಚಾರ ಮುಚ್ಚಿಟ್ಟ ತನ್ಮಯ್, ಮಗನಿಗೆ ಧೈರ್ಯ ಹೇಳಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್ 1ರ ಎಪಿಸೋಡ್. ಭಾಗ್ಯಾ ಕಷ್ಟ ಕಂಡು ತಾಂಡವ್ ಹಾಗೂ ಶ್ರೇಷ್ಠಾ ಖುಷಿಯಾಗುತ್ತಾರೆ. ಅಮ್ಮನ ಪರಿಸ್ಥಿತಿಯನ್ನು ಕಣ್ಣಾರೆ ನೋಡುವ ತನ್ಮಯ್ ಸ್ಕೂಲ್ ಫೀಸ್ ವಿಚಾರವನ್ನು ಭಾಗ್ಯಾಳಿಂದ ಮುಚ್ಚಿಡುತ್ತಾನೆ.
Bhagyalakshmi Serial: ಡಿವೋರ್ಸ್ ಕೊಡಲು ಭಾಗ್ಯಾ ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ತಾಂಡವ್, ಲಾಯರ್‌ಗೆ ಹೇಳಿ ಮತ್ತೊಂದು ನೋಟೀಸ್ ಕಳಿಸುತ್ತಾನೆ. ಕೋರ್ಟಿನಿಂದ ಬಂದ ನೋಟಿಸ್ ನೋಡಿ ಮನೆಯಲ್ಲಿ ಎಲ್ಲರೂ ಗಾಬರಿ ಆಗುತ್ತಾರೆ. ಭಾಗ್ಯಾ ಕೂಡಾ ಗಂಡನ ಬಳಿ ಮನವಿ ಮಾಡಿಕೊಳ್ಳುತ್ತಾರೆ. ಕುಸುಮಾ ಮಗನ ಮುಂದೆ ನಿಂತು ಮನೆಯನನು ಒಡೆಯಬೇಡ ಎಂದು ಸೆರಗು ಒಡ್ಡಿ ಬೇಡಿಕೊಳ್ಳುತ್ತಾಳೆ.
ಶ್ರೇಷ್ಠಾ ಜೊತೆ ಖುಷಿ ಹಂಚಿಕೊಳ್ಳುವ ತಾಂಡವ್
ಆದರೆ ಸ್ವಾರ್ಥಿ ತಾಂಡವ್, ಯಾರು ಏನೇ ಮನವಿ ಮಾಡಿದರೂ ಕರಗುವುದಿಲ್ಲ. ಎಲ್ಲರೂ ನಿಮ್ಮ ನಾಟಕ ಸಾಕುಮಾಡಿ, ನನಗೆ ಭಾಗ್ಯಾ ಜೊತೆ ಬದುಕಲು ಆಗುತ್ತಿಲ್ಲ, ಡಿವೋರ್ಸ್ ಬೇಕೇ ಬೇಕು. ಎನ್ನುತ್ತಾನೆ. ಇಷ್ಟು ಬೇಡಿಕೊಂಡರೂ ಮಗ ನಮ್ಮ ಮಾತು ಕೇಳುತ್ತಿಲ್ಲ ಎಂದು ಕುಸುಮಾ ನೋವಿನಿಂದ ಅಳುತ್ತಾಳೆ. ಅತ್ತೆಯ ದುಃಖ ನೋಡಲಾಗದೆ ಭಾಗ್ಯಾ ಆಕೆಗೆ ಸಮಾಧಾನ ಮಾಡುತ್ತಾಳೆ. ಅವರು ಡಿವೋರ್ಸ್ ಕೇಳಿದ್ದಾರೆ, ಆದರೆ ನಾನು ಕೊಡುವುದಿಲ್ಲ. ಕೋರ್ಟ್ ವಿಚಾರಣೆಗೂ ಹೋಗುವುದಿಲ್ಲ ನೀವೆಲ್ಲರೂ ಧೈರ್ಯದಿಂದ ಇರಿ ಎನ್ನುತ್ತಾಳೆ. ತಾಂಡವ್ ಪರ ನಿಂತಿದ್ದ ಸುನಂದಾ ಮತ್ತೆ ಮಗಳ ಕಡೆ ಬರುತ್ತಾಳೆ. ನನ್ನ ಮಗಳಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ನಾನು ಅವನ ಕಡೆ ಹೋಗಿದ್ದು ಎನ್ನುತ್ತಾಳೆ.
ಎಲ್ಲರೂ ದುಃಖದಲ್ಲಿರುವಾಗ ತಾಂಡವ್, ಶ್ರೇಷ್ಠಾಗೆ ಕರೆ ಮಾಡಿ ಮನೆಯ ಪರಿಸ್ಥಿತಿ ವಿವರಿಸುತ್ತಾನೆ. ಎಲ್ಲರೂ ಬೇಸರದಿಂದ ಇದ್ದರೆ ತಾಂಡವ್ ಹಾಗೂ ಶ್ರೇಷ್ಠಾ ಮಾತ್ರ ಖುಷಿಯಾಗುತ್ತಾರೆ. ಉರಿಯುವ ಗಾಯಕ್ಕೆ ಉಪ್ಪು ಸುರಿದಂತೆ ಭಾಗ್ಯಾಗೆ ಇನ್ನಷ್ಟು ಹಿಂಸೆ ಕೊಡುವ ಉದ್ದೇಶದಿಂದ ಶ್ರೇಷ್ಠಾ ಕರೆ ಮಾಡಿ ನಾಳೆ ಸಂಜೆ ಒಳಗೆ 2 ಲಕ್ಷ ರೂ. ಹಣ ಒದಗಿಸುವಂತೆ ಕೇಳುತ್ತಾಳೆ. ಅದೇ ಸಮಯಕ್ಕೆ ತಾಂಡವ್ ಬಂದು, ನಾಳೆ ಇಎಂಐ ಕಟ್ಟುವ ದಿನ. ಭಾಗ್ಯಾ ಮೇಡಂ ದೊಡ್ಡದಾಗಿ ಚಾಲೆಂಜ್ ಹಾಕಿದ್ದಾರೆ. ನಾನು ಇಎಂಐ ಕಟ್ಟುತ್ತೇನೆ ಅಂತ, ಒಂದು ವೇಳೆ ಹಣ ಕೊಡದಿದ್ದರೆ ಮನೆ ಬಿಟ್ಟು ಹೋಗುತ್ತಿರು ಎನ್ನುತ್ತಾನೆ. ಮಗನ ವರ್ತನೆ ಕಂಡು ಕುಸುಮಾ ಬೇಸರ ವ್ಯಕ್ತಪಡಿಸುತ್ತಾಳೆ.
ಅಮ್ಮನಿಂದ ಸ್ಕೂಲ್ ಫೀಸ್ ವಿಚಾರ ಮುಚ್ಚಿಟ್ಟ ಗುಂಡಣ್ಣ
ಇವೆಲ್ಲಾ ಕಷ್ಟಗಳನ್ನು ಕಂಡ ತನ್ಮಯ್, ಅಮ್ಮನಿಂದ ಸ್ಕೂಲ್ ವಿಚಾರವನ್ನು ಮುಚ್ಚಿಡುತ್ತಾನೆ. ಸ್ಕೂಲ್‌ನವರು ಕಳಿಸಿದ ಪತ್ರವನ್ನು ತನ್ಮಯ್ ಯಾರಿಗೂ ಕಾಣದಂತೆ ಮುಚ್ಚಿಡುತ್ತಾನೆ. ಅದನ್ನು ನೋಡುವ ತನ್ವಿ, ನಾಳೆಯೇ ಫೀಸ್ ಕಟ್ಟಲು ಕೊನೆಯ ದಿನ, ಇದನ್ನು ಏಕೆ ಮುಚ್ಚಿಟ್ಟಿದ್ದೀಯ ಎಂದು ಕೇಳುತ್ತಾಳೆ. ಅಮ್ಮ ಎಷ್ಟು ಕಷ್ಟ ಪಡುತ್ತಿದ್ದಾರೆ, ಅವರ ಕಷ್ಟ ನೋಡಲಾಗುತ್ತಿಲ್ಲ, ಈ ಪರಿಸ್ಥಿತಿಯಲ್ಲಿ ಸ್ಕೂಲ್ ಫೀಸ್ ಕಟ್ಟುವಂತೆ ಅಮ್ಮನಿಗೆ ಹೇಗೆ ಕೇಳುವುದು ಎಂದು ಮುಚ್ಚಿಟ್ಟೆ ಎಂದು ಅಕ್ಕನ ಬಳಿ ಹೇಳುತ್ತಾನೆ. ಮಕ್ಕಳ ಮುಗ್ಧತೆ ಕಂಡು ಭಾಗ್ಯಾ ಖುಷಿಯಾಗುತ್ತಾಳೆ. ನಿನ್ನ ಅಮ್ಮನಿಗೆ ಏನೂ ಆಗುವುದಿಲ್ಲ ಎಂದುಕೊಂಡಿದ್ದೀಯ? ಹೇಗಾದರೂ ಮಾಡಿ ನಿನ್ನ ಸ್ಕೂಲ್ ಹಣ ಹೊಂದಿಸುತ್ತೇನೆ ಎನ್ನುತ್ತಾಳೆ. ತನ್ವಿ ಕೂಡಾ ಅಮ್ಮ ಖಂಡಿತ ಏನಾದರೂ ಮಾಡೇ ಮಾಡುತ್ತಾಳೆ ಎಂದು ನಂಬಿಕೆ ವ್ಯಕ್ತಪಡಿಸುತ್ತಾಳೆ.
ಮರು ದಿನ ಕುಸುಮಾ ಕೆಲಸಕ್ಕೆ ತಡವಾಗಿ ಹೋಗುತ್ತಾಳೆ. ಮನೆಯಿಂದ ಕೆಲಸಕ್ಕೆ ತಡವಾಗಿ ಹೊರಡುವಾಗ ಧರ್ಮರಾಜ್ ಎದುರಾಗುತ್ತಾನೆ. ಇಂದು ನೀನು ಎಲ್ಲಿಗೂ ಹೋಗಬೇಡ, ಮನೆಯಲ್ಲೇ ಇರು ಎನ್ನುತ್ತಾನೆ. ಆದರೆ ಕುಸುಮಾ ಅದಕ್ಕೆ ಒಪ್ಪುವುದಿಲ್ಲ, ನಾನು ಭಜನೆಗೆ ಹೋಗಲೇಬೇಕು ಎನ್ನುತ್ತಾಳೆ. ಕುಸುಮಾ ವರ್ತನೆ ಕಂಡು ತಾಂಡವ್‌ಗೆ ಅನುಮಾನ ಉಂಟಾಗುತ್ತದೆ. ಅಮ್ಮ ಎಲ್ಲರಿಂದ ಏನೋ ಮುಚ್ಚಿಡುತ್ತಿದ್ದಾಳೆ ಎಂದುಕೊಳ್ಳುತ್ತಾನೆ. ಇವತ್ತು ಹೇಗಾದರೂ ಮಾಡಿ ಅಮ್ಮ ಎಲ್ಲಿಗೆ ಹೋಗುತ್ತಾಳೆ ಅನ್ನೋದನ್ನು ಕಂಡುಹಿಡಿಯಬೇಕು ಎಂದುಕೊಳ್ಳುತ್ತಾನೆ. ಇತ್ತ ಭಾಗ್ಯಾ ಕೂಡಾ ಸ್ಟಾರ್ ಹೋಟೆಲ್‌ಗೆ ಹೋಗುತ್ತಾಳೆ. ಅಲ್ಲಿ ಪಾತ್ರೆ ತೊಳೆಯುವ ಕೆಲಸವಾದರೂ ಮಾಡಬೇಕು ಎಂದುಕೊಳ್ಳುತ್ತಾಳೆ. ಆದರೆ ಅವಳನ್ನು ನೋಡುತ್ತಿದ್ದಂತೆ ಸಹೋದ್ಯೋಗಿ ಹಿತಾ ಕೋಪಗೊಳ್ಳುತ್ತಾಳೆ.
ಕುಸುಮಾ ಹೋಟೆಲ್ ಕೆಲಸಕ್ಕೆ ಹೋಗೋದನ್ನು ತಾಂಡವ್ ನೋಡುತ್ತಾನಾ? ಭಾಗ್ಯಾಗೆ ಮತ್ತೆ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ ದೊರೆಯುವುದಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ವಿಭಾಗ