ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 3rd April 2024 Episode Tandav Locked Children Rsm

Bhagyalakshmi Serial: ಮಕ್ಕಳನ್ನು ಬಲವಂತವಾಗಿ ಕೂಡಿ ಹಾಕಿ ಭಾಗ್ಯಾಳನ್ನು ಹೊರ ಕಳಿಸಲು ಮುಂದಾದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial April 3rd Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 3ರ ಎಪಿಸೋಡ್‌. ಮಕ್ಕಳು ನನ್ನ ಪರವಾಗಿ ಇರುವುದಿಲ್ಲ ಎಂದು ತಿಳಿದು ಕೋಪಗೊಂಡ ತಾಂಡವ್‌ ಎಲ್ಲರೆದುರಿಗೇ ಭಾಗ್ಯಾಗೆ ಡಿವೋರ್ಸ್‌ ಕೊಡುವಂತೆ ಹೇಳುತ್ತಾನೆ. ಮಕ್ಕಳನ್ನು ಕೂಡಿಹಾಕಿ ಭಾಗ್ಯಾಳನ್ನು ಮನೆಯಿಂದ ಹೊರ ಕಳಿಸಲು ಮುಂದಾಗಿದ್ದಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 4ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 4ರ ಎಪಿಸೋಡ್‌

Bhagyalakshmi Serial: ಅಪ್ಪ ಅಮ್ಮ ನಮ್ಮನ್ನು ಬಿಟ್ಟು ಹೋಗಬಾರದು, ಅವರು ಪ್ರೀತಿಯಿಂದ ಜೊತೆಯಾಗಿ ಬಾಳಬೇಕು, ನಾವೆಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ಇರಬೇಕು ಎಂಬ ಕಾರಣಕ್ಕೆ ತನ್ವಿ, ತನ್ಮಯ್‌ ಹಾಗೂ ಮನೆಯವರು ಪೂಜಾ ಪ್ಲ್ಯಾನ್‌ ಪ್ರಕಾರ ನಡೆದುಕೊಳ್ಳುತ್ತಾರೆ. ಆದರೆ ತನ್ಮಯ್‌ಗೆ ಯಾವ ಆರೋಗ್ಯ ಸಮಸ್ಯೆಯೂ ಇಲ್ಲ. ಅವನು ತಲೆ ಸುತ್ತಿ ಬಿದ್ದಂತೆ ನಾಟಕ ಮಾಡುತ್ತಿದ್ದಾನೆ ಎಂದು ತಿಳಿದು ತಾಂಡವ್‌ ಕೋಪಗೊಂಡಿದ್ದಾನೆ.

ಮನೆಯವರನ್ನೆಲ್ಲಾ ಒಟ್ಟುಗೂಡಿಸಿದ ತಾಂಡವ್‌, ತನ್ಮಯ್‌ ಮಾಡಿದ ನಾಟಕದ ಬಗ್ಗೆ ಹೇಳುತ್ತಾನೆ. ಮಕ್ಕಳಿಗೆ ಈ ರೀತಿ ಸುಳ್ಳು ಹೇಳಿಸುತ್ತಿದ್ದಾಳೆ ಎಂದು ಭಾಗ್ಯಾಗೆ ಬೈಯ್ಯುತ್ತಾನೆ. ಆದರೆ ಈ ವಿಚಾರ ಕುಸುಮಾ, ಧರ್ಮರಾಜ್‌ಗೂ ಗೊತ್ತು ಎಂದು ತಿಳಿದು ತಾಂಡವ್‌ ಇನ್ನಷ್ಟು ಆಕ್ರೋಶ ವ್ಯಕ್ತಪಡಿಸುತ್ತಾನೆ. ನನ್ನ ಮಗನಿಗೆ ಹೀಗೆಲ್ಲಾ ಆಯ್ತಲ್ಲಾ ಎಂದು ನಾನು ಗಾಬರಿ ಆಗಿದ್ದೇನೆ. ನಾನು ಎಷ್ಟು ರಿಸರ್ಚ್‌ ಮಾಡಿದ್ದೇನೆ, ಎಷ್ಟು ಡಾಕ್ಟರ್‌ ಬಳಿ ಮಾತನಾಡಿದ್ದೇನೆ ಎಂದು ನನಗೆ ಗೊತ್ತು, ಅಂತದ್ದರಲ್ಲಿ ನೀವೆಲ್ಲಾ ಸೇರಿ ಹೀಗೆ ಮಾಡಿದರೆ ನನಗೆ ಎಷ್ಟು ಬೇಸರವಾಗಬಹುದು ಯಾರಾದರೂ ಯೋಚನೆ ಮಾಡಿದ್ದೀರಾ? ಎಂದು ಪ್ರಶ್ನಿಸುತ್ತಾನೆ. ಮಗು ಸುಳ್ಳು ಹೇಳಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ, ಆದ್ದರಿಂದ ನಾವೆಲ್ಲಾ ಅವನಿಗೆ ಸಪೋರ್ಟ್‌ ಮಾಡಿದೆವು ಎಂದು ಧರ್ಮರಾಜ್‌ ಹೇಳುತ್ತಾರೆ.

ಸ್ವಾರ್ಥಕ್ಕಾಗಿ ಮಕ್ಕಳ ಸಂತೋಷಕ್ಕೆ ಕಲ್ಲು ಹಾಕಿದ ತಾಂಡವ್‌

ತಂದೆ ಕೂಡಾ ಸೊಸೆ ಪರವಾಗಿ ನಿಂತಿದ್ದಾರೆ ಎಂದು ತಿಳಿದ ತಾಂಡವ್‌, ಸರಿ ಎಲ್ಲರೂ ಒಂದು ಕಡೆ ಇದ್ದೀರ ನಾನೊಬ್ಬನೇ ಒಂಟಿಯಾಗಿದ್ದೇನೆ. ಇದರಿಂದ ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನಾನು ಭಾಗ್ಯಾಗೆ ಡಿವೋರ್ಸ್‌ ನೋಟೀಸ್‌ ಕೊಟ್ಟಿದ್ದ ವಿಚಾರ ನಿಮಗೆಲ್ಲಾ ನೆನಪಿರಬಹುದು. ಇಷ್ಟು ದಿನಗಳು ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೆ, ಅದರೆ ಇನ್ಮುಂದೆ ನಾನು ಏನನ್ನೂ ಸಹಿಸಿಕೊಳ್ಳುವುದಿಲ್ಲ. ನಾನು ಭಾಗ್ಯಾಗೆ ಡಿವೋರ್ಸ್‌ ಕೊಡುತ್ತಿದ್ದೇನೆ. ಭಾಗ್ಯಾ ಈಗಲೇ ಮನೆ ಬಿಟ್ಟು ಹೋಗಬೇಕು. ಮಕ್ಕಳು ಹಾಗೂ ನೀವು ನನ್ನ ಜೊತೆ ಇರಬೇಕು ಎಂದು ತಾಂಡವ್‌ ಕುಸುಮಾಗೆ ಹೇಳುತ್ತಾನೆ. ಮಗನ ವರ್ತನೆ ಕಂಡು ಧರ್ಮರಾಜ್‌ ಕುಸುಮಾಗೆ ಬೇಸರವಾಗುತ್ತದೆ.

ನನಗೆ ನೀನೆಂದರೆ ಇಷ್ಟವಿಲ್ಲ, ನಿನ್ನ ಜೊತೆ ಬದುಕಲು ಇಷ್ಟವಿಲ್ಲ ಎಂಬ ಕಾರಣಕ್ಕೆ ಡಿವೋರ್ಸ್‌ ನೀಡುತ್ತಿದ್ದೇನೆ. ನೀನು ಈಗಲೇ ಮನೆ ಬಿಟ್ಟು ಹೋಗು ಎಂದು ತಾಂಡವ್‌ ಭಾಗ್ಯಾಳನ್ನು ತಳ್ಳುತ್ತಾನೆ. ಅಷ್ಟರಲ್ಲಿ ತನ್ಮಯ್‌, ತನ್ವಿ ಅಮ್ಮನನ್ನು ಹಿಡಿದುಕೊಳ್ಳುತ್ತಾರೆ. ಅಪ್ಪ ದಯವಿಟ್ಟು ಅಮ್ಮನನ್ನು ಎಲ್ಲೂ ಕಳಿಸಬೇಡ ಎಂದು ಬೇಡಿಕೊಳ್ಳುತ್ತಾರೆ. ಆದರೆ ಕ್ರೂರಿ ತಾಂಡವ್‌ ಮಕ್ಕಳ ಮಾತಿನ ಕಡೆಗೆ ಗಮನ ಕೊಡುವುದಿಲ್ಲ. ಮಕ್ಕಳನ್ನು ಎಳೆದುತಂದು ರೂಮ್‌ನಲ್ಲಿ ಕೂಡಿಹಾಕುತ್ತಾನೆ. ಇದನ್ನು ವಿರೋಧಿಸಿದ ಕುಸುಮಾಗೆ ತಾಂಡವ್‌ ರೇಗುತ್ತಾನೆ. ಇನ್ಮುಂದೆ ನೀವು ಹೇಳಿದಂತೆಲ್ಲಾ ನಡೆಯುವುದಿಲ್ಲ. ಈ ಮನೆಯ ಯಜಮಾನ ನಾನು, ನಾನು ದುಡಿದು ತಂದು ಹಾಕಿದ್ದನ್ನು ನೀವು ತಿಂದುಕೊಂಡು ಬಿದ್ದಿರಬೇಕು ಎನ್ನುತ್ತಾನೆ. ಮಗ ಇಷ್ಟೆಲ್ಲಾ ಬದಲಾಗಿರುವುದನ್ನು ನೋಡಿ ಕುಸುಮಾ, ಧರ್ಮರಾಜ್‌ ಶಾಕ್‌ ಆಗುತ್ತಾರೆ.

ಸುಂದ್ರಿಯನ್ನು ಮನೆಯಿಂದ ಹೊರ ಕಳಿಸಿದ ಶ್ರೇಷ್ಠಾ

ಇತ್ತ ಸುಂದರಿ ಶ್ರೇಷ್ಠಾಗೆ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಪುಟ್ಟ ಮಕ್ಕಳನನ್ನು ಈ ರೀತಿ ಬೈಯ್ಯುತ್ತಿದ್ದೀಯ ನಿನಗೆ ಒಳ್ಳೆಯದಾಗುವುದಿಲ್ಲ ಎನ್ನುತ್ತಾಳೆ. ಇದರಿಂದ ಕೋಪಗೊಂಡ ಶ್ರೇಷ್ಠಾ ಸುಂದರಿಯ ಬ್ಯಾಗನ್ನು ಅವಳ ಮುಂದೆ ಎಸೆದು ಮನೆ ಬಿಟ್ಟು ಹೋಗುವಂತೆ ಆವಾಜ್‌ ಹಾಕುತ್ತಾಳೆ. ನೀನು ಮನೆ ಓನರ್‌ಗಾದ್ರೂ ಹೇಳು, ಕುಸುಮಾಗಾದರೂ ನಿಜ ಹೇಳು, ನಾನು ಕೇರ್‌ ಮಾಡುವುದಿಲ್ಲ. ನೀನು ಹೇಳಿದಷ್ಟು ಬೇಗ ನನ್ನ ಬದುಕು ಕ್ಲಿಯರ್‌ ಆಗುತ್ತದೆ ಎನ್ನುತ್ತಾಳೆ.

ಭಾಗ್ಯಾ ಮನೆ ಬಿಟ್ಟು ಹೋಗುವುದನ್ನು ಕುಸುಮಾ ತಡೆಯುತ್ತಾಳಾ? ಸುಂದ್ರಿ ಕುಸುಮಾ ಬಳಿ ನಿಜ ಹೇಳುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

IPL_Entry_Point