Bhagyalakshmi Serial: ಇನ್ನೊಂದು ವಾರದಲ್ಲೇ ಶ್ರೇಷ್ಠಾ ಮದುವೆ, ತಾಳಿ ಕಟ್ಟೋಕೆ ರೆಡಿ ಆದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಇನ್ನೊಂದು ವಾರದಲ್ಲೇ ಶ್ರೇಷ್ಠಾ ಮದುವೆ, ತಾಳಿ ಕಟ್ಟೋಕೆ ರೆಡಿ ಆದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಇನ್ನೊಂದು ವಾರದಲ್ಲೇ ಶ್ರೇಷ್ಠಾ ಮದುವೆ, ತಾಳಿ ಕಟ್ಟೋಕೆ ರೆಡಿ ಆದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 3ರ ಸಂಚಿಕೆ ಹೀಗಿದೆ. ಒಂದು ವಾರದಲ್ಲೇ ಮದುವೆ ಫಿಕ್ಸ್‌ ಮಾಡುವಂತೆ ಶ್ರೇಷ್ಠಾ ಹೆತ್ತವರಿಗೆ ಕೇಳುತ್ತಾಳೆ. ನಂತರ ತಾಂಡವ್‌ನನ್ನು ಪುಸಲಾಯಿಸಿ ಮದುವೆಗೆ ಒಪ್ಪಿಸುತ್ತಾಳೆ.

ಇನ್ನೊಂದು ವಾರದಲ್ಲೇ ಶ್ರೇಷ್ಠಾ ಮದುವೆ, ತಾಳಿ ಕಟ್ಟೋಕೆ ರೆಡಿ ಆದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಇನ್ನೊಂದು ವಾರದಲ್ಲೇ ಶ್ರೇಷ್ಠಾ ಮದುವೆ, ತಾಳಿ ಕಟ್ಟೋಕೆ ರೆಡಿ ಆದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Kannada Serial: ತೀರ್ಥಯಾತ್ರೆಯಿಂದ ಮನೆಗೆ ವಾಸಪಾಗುತ್ತಲೇ ಧರ್ಮರಾಜ್‌ಗೆ ತಾಂಡವ್‌ ವಿಚಾರ ತಿಳಿಯುತ್ತದೆ. ಮಗನನ್ನು ಮನೆಗೆ ಕರೆ ತರಲು ಹೋಗಬೇಕು ಎನ್ನುವಷ್ಟರಲ್ಲಿ ಲಾಯರ್‌ ಆಫೀಸಿನಿಂದ ಬರುವ ಡಿವೋರ್ಸ್‌ ನೋಟಿಸ್‌ ನೋಡಿ ಧರ್ಮರಾಜ್‌ ಆಘಾತಕ್ಕೆ ಒಳಗಾಗುತ್ತಾರೆ. ಮಗನ ವರ್ತನೆ, ಸೊಸೆಯ ಭವಿಷ್ಯ ಎಲ್ಲವನ್ನೂ ನೆನೆದು ಧರ್ಮರಾಜ್‌ ತಲೆ ಸುತ್ತಿ ಬೀಳುತ್ತಾರೆ.

ಮಾವನನ್ನು ಆಸ್ಪತ್ರೆಗೆ ಸೇರಿಸುವ ಭಾಗ್ಯಾ

ಮಾವನನ್ನು ಹುಡುಕುತ್ತಾ ಬರುವ ಭಾಗ್ಯಾ, ಜನರ ನಡುವೆ ಮಾವ ಬಿದ್ದಿರುವುದನ್ನು ನೋಡಿ ಓಡೋಡಿ ಬರುತ್ತಾಳೆ. ಮಾವನ ಸ್ಥಿತಿ ನೋಡಿ ಗಾಬರಿಯಾಗುತ್ತಾಳೆ. ಯಾರಾದರೂ ಆಂಬುಲೆನ್ಸ್‌ಗೆ ಕರೆ ಮಾಡುವಂತೆ ಮನವಿ ಮಾಡುತ್ತಾಳೆ. ಅಕ್ಕ ಪಕ್ಕದವರ ಸಹಾಯದಿಂದ ಭಾಗ್ಯಾ, ಮಾವನನ್ನು ಆಸ್ಪತ್ರೆಗೆ ಸೇರಿಸಿ ಮನೆಗೆ ವಿಷಯ ಮುಟ್ಟಿಸುತ್ತಾಳೆ. ವಿಚಾರ ತಿಳಿದ ಕೂಡಲೇ ಕುಸುಮಾ ಹಾಗೂ ಸುನಂದಾ ಓಡೋಡಿ ಬರುತ್ತಾರೆ. ಅಷ್ಟರಲ್ಲಿ ಭಾಗ್ಯಾ ತಂದೆ ಕೂಡಾ ಆಸ್ಪತ್ರೆಗೆ ಬಂದಿರುತ್ತಾರೆ. ಬಿಪಿ ಹೆಚ್ಚಾಗಿ ಟೆನ್ಷನ್‌ನಿಂದ ಈ ರೀತಿ ಆಗಿದೆ ಎಂಬ ವಿಚಾರ ಕುಸುಮಾಗೆ ತಿಳಿಯುತ್ತದೆ. ಆದರೆ ಧರ್ಮರಾಜ್‌ ಅಷ್ಟು ಬೇಸರ ಮಾಡಿಕೊಳ್ಳುವ ವಿಚಾರ ಏನು ನಡೆಯಿತು ಎಂದು ಕುಸುಮಾಗೆ ಗೊತ್ತಿರುವುದಿಲ್ಲ.

ಅಷ್ಟರಲ್ಲಿ ಡಾಕ್ಟರ್‌ ಬಂದು ಧರ್ಮರಾಜ್‌ ಆರೋಗ್ಯದ ಬಗ್ಗೆ ಮನೆಯವರಿಗೆ ಮಾಹಿತಿ ನೀಡುತ್ತಾರೆ. ಸಮಯಕ್ಕೆ ಸರಿಯಾಗಿ ಅವರನ್ನು ಕರೆ ತಂದಿದ್ದರಿಂದ ಏನೂ ಅಪಾಯ ಸಂಭವಿಸಿಲ್ಲ. ಇಲ್ಲದಿದ್ದರೆ ಬಹಳ ಸಮಸ್ಯೆ ಆಗುತ್ತಿತ್ತು. ಅವರನ್ನು ಮಾತನಾಡಿಸಬಹುದು ಆದರೆ ಗಾಬರಿ ಆಗುವಂತೆ ಮಾಡಬೇಡಿ ಎನ್ನುತ್ತಾರೆ. ಒಳ ಬಂದವರೇ ಕುಸುಮಾ, ಪತಿಯನ್ನು ಮಾತನಾಡಿಸಿ ನಿಮಗೆ ಏನಾಯ್ತು ಎಂದು ಕೇಳುತ್ತಾಳೆ. ಭಾಗ್ಯಾ ಕೂಡಾ ಮಾವನ ಯೋಗಕ್ಷೇಮ ವಿಚಾರಿಸುತ್ತಾಳೆ. ಧರ್ಮರಾಜ್‌ಗೆ ಸೊಸೆ ಭವಿಷ್ಯದ್ದೇ ಚಿಂತೆ. ನಮ್ಮನ್ನು ಕ್ಷಮಿಸಿಬಿಡು ಮಗಳೇ ನಿನಗೆ ಮೋಸ ಮಾಡಿದೆವು, ಇಲ್ಲದಿದ್ರೆ ನೀನು ಎಲ್ಲೋ ಒಂದು ಕಡೆ ಸುಖವಾಗಿರುತ್ತಿದ್ದೆ ಎಂದು ಗೋಳಾಡುತ್ತಾನೆ.

ಅಂತೂ ಇಂತೂ ತಾಂಡವ್‌ನನ್ನು ಮದುವೆಗೆ ಒಪ್ಪಿಸುವ ಶ್ರೇಷ್ಠಾ

ಇತ್ತ, ಶ್ರೇಷ್ಠಾಗೆ ಸುಂದರಿ ಹೇಳಿದ್ದೇ ನೆನಪಾಗುತ್ತಿದೆ. ತಾಂಡವ್‌ಗೆ ನಿನ್ನನ್ನು ಮದುವೆಯಾಗುವುದು ಇಷ್ಟವಿಲ್ಲ. ನಿನ್ನನ್ನು ಪತ್ನಿಯಾಗಿ ಒಪ್ಪಿಕೊಳ್ಳಲು ಇಷ್ಟವಿಲ್ಲ ಎಂಬ ಸುಂದರಿ ಮಾತುಗಳನ್ನು ನೆನಪಿಸಿಕೊಳ್ಳುವ ಶ್ರೇಷ್ಠಾ ನಾನು ತಾಂಡವ್‌ ಹೆಂಡತಿ ಎನಿಸಿಕೊಳ್ಳಬೇಕು. 3 ವರ್ಷ ಕಾಯಲು ಆಗುವುದಿಲ್ಲ, ಆದಷ್ಟು ಬೇಗ ಮದುವೆ ಆಗಬೇಕೆಂದು ಅಪ್ಪ ಅಮ್ಮನಿಗೆ ಕರೆ ಮಾಡಿ ಆದಷ್ಟು ಬೇಗ ಮದುವೆ ಫಿಕ್ಸ್‌ ಮಾಡುವಂತೆ ಹೇಳುತ್ತಾಳೆ. ಮಗಳ ಮಾತಿಗೆ ಬೇಸರ ವ್ಯಕ್ತಪಡಿಸಿದರೂ ಶ್ರೀವರ ಹಾಗೂ ಯಶೋಧಾ ಒಂದು ವಾರದಲ್ಲೇ ಮದುವೆ ಫಿಕ್ಸ್‌ ಮಾಡುತ್ತಾರೆ. ಆಫೀಸಿಗೆ ಬರುವ ಶ್ರೇಷ್ಠಾ ತಾಂಡವ್‌ ಬಳಿ ಬಂದು ಮುಂದಿನ ವಾರವೇ ಮದುವೆ ಎನ್ನುತ್ತಾಳೆ. ಅವಳ ಮಾತು ಕೇಳಿ ತಾಂಡವ್‌ ಮತ್ತೆ ಕೋಪಗೊಳ್ಳುತ್ತಾನೆ.

ಇದು ನನ್ನ ತಂದೆ ತಾಯಿಯನ್ನು ಸಮಾಧಾನ ಮಾಡಲು, ಹಾಗೂ ಮಹೇಶ ಸುಂದರಿಯನ್ನು ಮನೆಯಿಂದ ಹೊರ ಕಳಿಸಲು ಮಾತ್ರ, ಕುಟುಂಬದವರ ಮುಂದೆ ನೀನು ತಾಳಿ ಕಟ್ಟು ಸಾಕು ಎನ್ನುತ್ತಾಳೆ. ಊರಿನಲ್ಲಿ ಮದುವೆ ಆದರೆ ಮಾತ್ರ ಒಪ್ಪುವುದಾಗಿ ತಾಂಡವ್‌ ಕಂಡಿಷನ್‌ ಮಾಡಿ ಕೊನೆಗೂ ಶ್ರೇಷ್ಠಾಳನ್ನು ಮದುವೆ ಆಗಲು ಗ್ರೀನ್‌ ಸಿಗ್ನಲ್‌ ಕೊಡುತ್ತಾನೆ.

ತಾಂಡವ್‌ ಶ್ರೇಷ್ಠಾಗೆ ತಾಳಿ ಕಟ್ಟೇ ಬಿಡುತ್ತಾನಾ? ಧರ್ಮರಾಜ್‌, ಡಿವೋರ್ಸ್‌ ನೋಟಿಸ್‌ ವಿಚಾರವನ್ನು ಮನೆಯವರ ಬಳಿ ಹೇಳುತ್ತಾರಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

Whats_app_banner