ಕನ್ನಡ ಸುದ್ದಿ  /  ಮನರಂಜನೆ  /  ಹೋಟೆಲ್‌ನಲ್ಲಿ ಕೆಲಸ ಮಾಡೋದು ಬೇಡ ಎಂದ ತಾಂಡವ್‌, ಅಮ್ಮನಿಗೆ ಮನೆ ನಡೆಸೋ ಚಿಂತೆ, ಮಗನಿಗೆ ಪ್ರೆಸ್ಟೀಜ್‌ ಚಿಂತೆ; ಭಾಗ್ಯಲಕ್ಷ್ಮೀ ಧಾರಾವಾಹಿ

ಹೋಟೆಲ್‌ನಲ್ಲಿ ಕೆಲಸ ಮಾಡೋದು ಬೇಡ ಎಂದ ತಾಂಡವ್‌, ಅಮ್ಮನಿಗೆ ಮನೆ ನಡೆಸೋ ಚಿಂತೆ, ಮಗನಿಗೆ ಪ್ರೆಸ್ಟೀಜ್‌ ಚಿಂತೆ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 4ರ ಎಪಿಸೋಡ್‌: ಕುಸುಮಾ ಹೋಟೆಲ್‌ನಲ್ಲಿ ಕೆಲಸ ಮಾಡುವುದನ್ನು ನೋಡಿದ ತಾಂಡವ್‌ ಇಲ್ಲಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲವೆಂದು ಜೋರು ಮಾಡುತ್ತಾನೆ. ಇತ್ತ ಭಾಗ್ಯಾ ಸ್ಟಾರ್‌ ಹೋಟೆಲ್‌ನಲ್ಲಿ ಮತ್ತೆ ಕೆಲಸ ಮುಂದುವರೆಸುತ್ತಾಳೆ.

ಹೋಟೆಲ್‌ನಲ್ಲಿ ಕೆಲಸ ಮಾಡೋದು ಬೇಡ ಎಂದ ತಾಂಡವ್‌, ಅಮ್ಮನಿಗೆ ಮನೆ ನಡೆಸೋ ಚಿಂತೆ, ಮಗನಿಗೆ ಪ್ರೆಸ್ಟೀಜ್‌ ಚಿಂತೆ; ಭಾಗ್ಯಲಕ್ಷ್ಮೀ ಧಾರಾವಾಹಿ
ಹೋಟೆಲ್‌ನಲ್ಲಿ ಕೆಲಸ ಮಾಡೋದು ಬೇಡ ಎಂದ ತಾಂಡವ್‌, ಅಮ್ಮನಿಗೆ ಮನೆ ನಡೆಸೋ ಚಿಂತೆ, ಮಗನಿಗೆ ಪ್ರೆಸ್ಟೀಜ್‌ ಚಿಂತೆ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಮನೆಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಭಾಗ್ಯಾ ಹಾಗೂ ಕುಸುಮಾ ಕೆಲಸಕ್ಕೆ ಹೋಗುತ್ತಿದ್ದಾರೆ. ಕುಸುಮಾ ವರ್ತನೆ ಕಂಡು ತಾಂಡವ್‌ಗೆ ಅನುಮಾನ ಉಂಟಾಗುತ್ತದೆ. ಅಮ್ಮ ಪ್ರತಿದಿನ ಎಲ್ಲಿಗೆ ಹೋಗುತ್ತಿದ್ದಾಳೆ ಅನ್ನೋದನ್ನು ಕಂಡುಹಿಡಿಯಲೇಬೇಕು ಎಂದು ಕುಸುಮಾಳನ್ನು ಹಿಂಬಾಲಿಸುತ್ತಾನೆ. ಇತ್ತ ಭಾಗ್ಯಾ ಕೂಡಾ ಅದೇ ಹೋಟೆಲ್‌ಗೆ ಹೋಗಿ ಸೂಪರ್‌ವೈಸರ್‌ ಮುಂದೆ ನಿಜ ಒಪ್ಪಿಕೊಂಡು ಬೇರೆ ಕೆಲಸ ಕೇಳಲು ಹೋಗುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಹೋಟೆಲ್‌ಗೆ ಹೋಗುವ ಅಮ್ಮನನ್ನು ಕಂಡು ತಾಂಡವ್‌, ಅಮ್ಮ ಈ ಹೋಟೆಲ್‌ಗೆ ಏಕೆ ಬಂದಿದ್ದಾಳೆ ಎಂದುಕೊಳ್ಳುತ್ತಾನೆ. ಕುಸುಮಾ ಹೋಟೆಲ್‌ ಒಳಗೆ ಹೋದಾಗ ಆಕೆಯನ್ನೇ ಹಿಂಬಾಲಿಸಿಕೊಂಡು ಬರುತ್ತಾನೆ. ಆಕೆ ಹೆಡ್‌ ಕ್ಯಾಪ್‌ ಹಾಕಿಕೊಂಡು ಕಾಫಿ ಬೆರೆಸಿ, ಒತ್ತು ಶ್ಯಾವಿಗೆ ಮಾಡುವುದನ್ನು ನೋಡಿ ತಾಂಡವ್‌ ಶಾಕ್‌ ಆಗುತ್ತಾನೆ. ಅಮ್ಮ ಈ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಳೆ, ಎಂದು ಕೋಪದಿಂದ ಅವಳ ಮುಂದೆ ಬಂದು ನಿಲ್ಲುತ್ತಾನೆ. ಮಗನನ್ನು ನೋಡುತ್ತಿದ್ದಂತೆ ಕುಸುಮಾ ಗಾಬರಿ ಆಗುತ್ತಾಳೆ. ಈ ಹೋಟೆಲ್‌ಗೆ ನೀನು ಕೆಲಸಕ್ಕೆ ಬರುತ್ತಿದ್ದೀಯ? ಎಂದು ಪ್ರಶ್ನಿಸುತ್ತಾನೆ ಹೋಟೆಲ್‌ ಮಾಲೀಕ ಹಾಗೂ ಕೆಲಸದವರು ತಾಂಡವ್‌ಗೆ ಯಾರು ನೀವು ಎಂದು ಪ್ರಶ್ನಿಸಿದರೂ ಉತ್ತರ ಕೊಡದೆ ದರ್ಪ ತೋರುತ್ತಾನೆ. ನೀನು ಹೀಗೆ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ ಎಂದು ಆಕೆಯ ಕೈ ಹಿಡಿದು ಹೊರಗೆ ಎಳೆದು ತರುತ್ತಾನೆ.

ಕುಸುಮಾ ಹೋಟೆಲ್‌ನಲ್ಲಿ ಕೆಲಸ ಮಾಡುವುದನ್ನು ನಿರಾಕರಿಸಿದ ತಾಂಡವ್‌

ನೋಡಿದ್ಯಾ, ಸೊಸೆಯನ್ನು ನಂಬಿದಕ್ಕೆ ನಿಮಗೆ ಎಂಥಾ ಗತಿ ಬಂತು, ಈಗಲೂ ಸೊಸೆ ಪರ ನಿಲ್ಲುತ್ತೀಯಾ ಎಂದು ಕೇಳುತ್ತಾನೆ. ಸೊಸೆಯನ್ನು ನಂಬಿ ಅಲ್ಲಪ್ಪಾ ಮಗನನ್ನು ನಂಬಿ ನನಗೆ ಈ ಗತಿ ಬಂದಿದ್ದು, ಮಗ ನಮಗೆ ಬೆಲೆ ಕೊಡುತ್ತಾನೆ, ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಎಂದು ನಾವು ನಿನ್ನನ್ನು ನಂಬಿ ಈ ಪರಿಸ್ಥಿತಿಗೆ ಬಂದೆವು ಎನ್ನುತ್ತಾಳೆ. ನನಗೆ ನೀವು ಇಲ್ಲಿ ಕೆಲಸ ಮಾಡುವುದು ಇಷ್ಟವಿಲ್ಲ, ಮನೆಗೆ ಬನ್ನಿ ಎನ್ನುತ್ತಾನೆ. ಆದರೆ ಕುಸುಮಾ ಅದಕ್ಕೆ ಒಪ್ಪುವುದಿಲ್ಲ. ಕುಸುಮಾ ಹೀಗೆ ಹೋಟೆಲ್‌ನಿಂದ ಹೊರ ಬಂದು ಮಾತನಾಡುವುದನ್ನು ನೋಡಿದ ಹೋಟೆಲ್‌ ಓನರ್‌, ಮೊದಲೇ ಕೆಲಸಕ್ಕೆ ತಡವಾಗಿ ಬಂದಿದ್ದೀಯ ಅಂತದರಲ್ಲಿ ಹೀಗೆ ಮಾತನಾಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದೀಯ, ಒಳಗೆ ಬಹಳ ಕೆಲಸ ಇದೆ ಎಂದು ರೇಗುತ್ತಾನೆ.

ಕುಸುಮಾಗೆ ರೇಗುವುದನ್ನು ನೋಡಿದ ತಾಂಡವ್‌ ಹೋಟೆಲ್‌ ಓನರ್‌ ಕುತ್ತಿಗೆ ಹಿಡಿದು ನನ್ನ ಅಮ್ಮನಿಗೆ ನನ್ನ ಮುಂದೆ ಹೀಗೆ ಬೈಯಲು ನಿನಗೆ ಎಷ್ಟು ಧೈರ್ಯ ಎಂದು ಕೇಳುತ್ತಾನೆ. ತಾಂಡವ್‌ ಕೈಯಿಂದ ಓನರ್‌ ಕುತ್ತಿಗೆ ಪಟ್ಟಿ ಬಿಡಿಸುವ ಕುಸುಮಾ, ನಿನ್ನ ವರ್ತನೆ ಸರಿ ಇಲ್ಲ. ಕಷ್ಟದ ಸಮಯದಲ್ಲಿ ನನಗೆ ಕೆಲಸ ಕೊಟ್ಟ ಓನರ್‌ ಅವರು ನಾನು ಇದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತೇನೆ, ಯಾರಿಗೂ ಕೇಳುವ ಹಕ್ಕು ಇಲ್ಲ ಎನ್ನುತ್ತಾಳೆ. ನಾನು ದೊಡ್ಡ ಕಂಪನಿ ಓನರ್‌, ನೀನು ಇಲ್ಲಿ ಕೆಲಸ ಮಾಡುವುದನ್ನು ಯಾರಾದರೂ ನೋಡಿದರೆ ನನ್ನ ಪ್ರೆಸ್ಟೀಜ್‌ ಏನಾಗಬೇಡ ಎಂದು ತಾಂಡವ್‌ ಕೇಳುತ್ತಾನೆ? ಹೋ ಹಾಗಾದರೆ ಇಷ್ಟೊತ್ತು ಅಮ್ಮನಿಗಾಗಿ ನೀನು ಬೇಸರ ಮಾಡಿಕೊಳ್ಳಲಿಲ್ಲ. ನಿನ್ನ ಘನತೆ ಏನಾಗುವುದೋ ಎಂಬ ಕಾರಣಕ್ಕೆ ನಾನು ಇಲ್ಲಿ ಕೆಲಸ ಮಾಡುವುದು ಬೇಡ ಎಂದು ಹೇಳುತ್ತಿದ್ದೀಯ ಎಂದು ಕುಸುಮಾ ಬೇಸರಗೊಳ್ಳುತ್ತಾಳೆ.

ಸ್ಟಾರ್‌ ಹೋಟೆಲ್‌ನಲ್ಲಿ ಕೆಲಸ ಮುಂದುವರೆಸುವ ಭಾಗ್ಯಾ

ಇತ್ತ ಭಾಗ್ಯಾ, ಹೋಟೆಲ್‌ ಸೂಪರ್‌ವೈಸರ್‌ ಬಳಿ ಎಲ್ಲವನ್ನೂ ಹೇಳಿ ಕ್ಷಮೆ ಕೇಳಲು ಬರುತ್ತಾಳೆ. ಅಷ್ಟರಲ್ಲಿ ಹಿತಾ, ಭಾಗ್ಯಾ ಫೋಟೋ ಪೇಪರ್‌ನಲ್ಲಿ ಬಂದಿರುವುದನ್ನು ನೋಡಿ ಅವಳ ಕಷ್ಟ ಅರ್ಥ ಮಾಡಿಕೊಳ್ಳುತ್ತಾಳೆ. ಸೂಪರ್‌ವೈಸರ್‌ ಬಳಿ ಏನೂ ಹೇಳದಂತೆ ತಡೆಯುತ್ತಾಳೆ. ನೀವು ಕೆಲಸ ಕಲಿಯುವಲ್ಲಿ ನಾನು ನಿಮಗೆ ಸಹಾಯ ಮಾಡುತ್ತೇನೆ. ನೀವು ಮಕ್ಕಳಿಗಾಗಿ ಕಷ್ಟಪಡುತ್ತಿದ್ದೀರ. ಸುಳ್ಳು ಹೇಳಿದರೆ ಏನೂ ತಪ್ಪಾಗುವುದಿಲ್ಲ, ಸದ್ಯಕ್ಕೆ ಹೋಗಿ ಪಕ್ಕದ ಹೋಟೆಲ್‌ನಿಂದ ಒತ್ತು ಶ್ಯಾವಿಗೆ ತನ್ನಿ ಎನ್ನುತ್ತಾಳೆ. ಭಾಗ್ಯಾ ದರ್ಶಿನಿ ಹೋಟೆಲ್‌ ಬಳಿ ಬರುತ್ತಾಳೆ.

ಹೋಟೆಲ್‌ ಮುಂದೆ ಮಾತನಾಡುತ್ತಿರುವ ಕುಸುಮಾ-ತಾಂಡವ್‌ನನ್ನು ಭಾಗ್ಯಾ ನೋಡುತ್ತಾಳಾ? ಭಾಗ್ಯಾ ಕೂಡಾ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವುದು ಕುಸುಮಾಗೆ ಗೊತ್ತಾಗುತ್ತದಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಟಿ20 ವರ್ಲ್ಡ್‌ಕಪ್ 2024