ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 4th March 2024 Episode Kusuma Knows Truth Rsm

Bhagyalakshmi Serial: ಕುಸುಮಾಗೆ ತಿಳಿದೇಹೋಯ್ತು ಪೂಜಾ ಮುಚ್ಚಿಟ್ಟಿದ್ದ ಸತ್ಯ, ಮುಂದೆ ಭಾಗ್ಯಾ ಜೀವನ ಹೇಗೆ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 4ರ ಸಂಚಿಕೆ ಹೀಗಿದೆ. ಮಕ್ಕಳನ್ನು ಸಂಬಾಳಿಸಲಾಗದೆ ಭಾಗ್ಯಾಳಿಗೆ ಕರೆ ಮಾಡಿ ಕರೆಸುವ ತಾಂಡವ್‌, ಭಾಗ್ಯಾ ಅಲ್ಲಿಗೆ ಬಂದಾಗ ಅವಮಾನ ಮಾಡುತ್ತಾನೆ. ಮತ್ತೆ ತನಗೆ ನೋವುಂಟು ಮಾಡುತ್ತಿರುವ ತಾಂಡವ್‌ಗೆ ಭಾಗ್ಯಾ ತಕ್ಕ ಉತ್ತರವನ್ನೇ ನೀಡಿದ್ದಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 4 ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 4 ರ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಕೊನೆಗೂ ಮಕ್ಕಳ ಕಾರಣದಿಂದ ಭಾಗ್ಯಾ ಗಂಡನ ಮನೆಯವರ ಬಳಿ ಬಂದಿದ್ದಾಳೆ. ಗುಂಡಣ್ಣನಿಗಾಗಿ ರೆಸಾರ್ಟ್‌ಗೆ ಬಂದ ಭಾಗ್ಯಾಗೆ ಅಲ್ಲಿಂದ ಮತ್ತೆ ತವರು ಮನೆಗೆ ವಾಪಸ್‌ ಹೋಗುವುದೋ, ಗಂಡನ ಮನೆಗೆ ಹೋಗುವುದೋ ಒಂದೂ ತಿಳಿಯುತ್ತಿಲ್ಲ. ಮಕ್ಕಳು ಬಲವಂತ ಮಾಡಿ ಅಮ್ಮನನ್ನು ತಾಂಡವ್‌ ಇರುವ ರೂಮ್‌ಗೆ ಕರೆದೊಯ್ಯುತ್ತಾರೆ.

ಭಾಗ್ಯಾ ಅಲ್ಲಿಗೆ ಬರುವುದು ಇಷ್ಟವಿಲ್ಲದಿದ್ದರೂ ತಾಂಡವ್‌ ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾನೆ. ಸರಿ, ರಾತ್ರಿ ಕಾರ್ಯಕ್ರಮಕ್ಕೆ ನೀವೆಲ್ಲಾ ರೆಡಿ ಆಗಿ ನನಗೆ ಒಂದು ಫೋನ್‌ ಕಾಲ್‌ ಇದೆ, ಬರುತ್ತೇನೆ ಎಂದು ತಾಂಡವ್‌ ಶ್ರೇಷ್ಠಾಗೆ ಕರೆ ಮಾಡಲು ಬರುತ್ತಾನೆ. ಶ್ರೇಷ್ಠಾ ತಾಂಡವ್‌ಗಾಗಿ ಹೊರಗೆ ಕಾಯುತ್ತಿರುತ್ತಾಳೆ. ತಾಂಡವ್‌ ಬಂದ ಕೂಡಲೇ ಅವನ ಮೇಲೆ ಕೋಪ ಹೊರ ಹಾಕುತ್ತಾಳೆ. ನಾನು ಮಾಡಿದ್ದು ನನ್ನ ಮಕ್ಕಳಿಗಾಗಿ. ನನಗೂ ಭಾಗ್ಯಾ ಜೊತೆ ಇರುವುದು ಇಷ್ಟವಿಲ್ಲ. ದಯವಿಟ್ಟು ಪರಿಸ್ಥಿತಿ ಅರ್ಥ ಮಾಡಿಕೋ. ಎಲ್ಲರೂ ಇಲ್ಲಿ ಇರುವಾಗ ನಾನು ನಿನ್ನ ಜೊತೆ ಹೇಗೆ ಮಾತನಾಡಲಿ? ನನಗೆ ಸದ್ಯಕ್ಕೆ ನನ್ನ ಮಕ್ಕಳ ಆರೋಗ್ಯ ಮುಖ್ಯ, ಅವರನ್ನು ಕಡೆಗಣಿಸಿ ನಿನ್ನೊಂದಿಗೆ ಹೇಗೆ ಬರುವುದು? ಎಂದು ತಾಂಡವ್‌ ಪ್ರಶ್ನಿಸುತ್ತಾನೆ. ವಿಧಿ ಇಲ್ಲದ ಶ್ರೇಷ್ಠಾ, ಮರು ಮಾತನಾಡದ ಸುಮ್ಮನಾಗುತ್ತಾಳೆ.

ತಾನೇ ಕರೆ ಮಾಡಿ ಮತ್ತೆ ಭಾಗ್ಯಾಳನ್ನು ಅವಮಾನಿಸುವ ತಾಂಡವ್‌

ಶ್ರೇಷ್ಠಾಳನ್ನು ಮಾತನಾಡಿಸಿ ರೂಮ್‌ಗೆ ಬರುವ ತಾಂಡವ್‌, ಭಾಗ್ಯಾಳನ್ನು ನೋಡಿ ಕೋಪಗೊಳ್ಳುತ್ತಾನೆ. ಕರೆದ ಕೂಡಲೇ ಓಡಿ ಬರಲು ನಿನಗೆ ನಾಚಿಕೆ ಆಗಲಿಲ್ವಾ? 7 ದಿನಗಳ ಕಾಲ ದೂರ ಇರುತ್ತೇನೆ ನಂತರ ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕುತ್ತೇನೆ ಎಂದು ಹೇಳಿದ್ದು ಮರೆತಿದ್ಯಾ? ಎಂದು ಪ್ರಶ್ನಿಸುತ್ತಾನೆ. ತಾಂಡವ್‌ ಚುಚ್ಚು ಮಾತುಗಳಿಂದ ಕೋಪಗೊಳ್ಳುವ ಭಾಗ್ಯಾ, ಸ್ವಲ್ಪ ಹೊತ್ತಿನ ಮುಂಚೆ ನೀವೇ ನನಗೆ ಕರೆ ಮಾಡಿ ಇಲ್ಲಿಗೆ ಬರಲು ಹೇಳಿದ್ದು ಮರೆತುಹೋಯ್ತಾ ಎಂದು ಪ್ರಶ್ನಿಸುತ್ತಾಳೆ. ನಾನು ಕರೆದದ್ದು ಮಕ್ಕಳಿಗಾಗಿ ಎಂದು ತಾಂಡವ್‌ ಹೇಳುತ್ತಾನೆ. ನಾನು ಬಂದಿದ್ದು ಕೂಡಾ ಮಕ್ಕಳಿಗಾಗಿ ಎಂದು ಭಾಗ್ಯಾ ಉತ್ತರಿಸುತ್ತಾಳೆ. ಎರಡೇ ದಿನಕ್ಕೆ ನೀವು ನನ್ನನ್ನು ಬರ ಹೇಳಿದ್ದು ನಿಮಗೆ ಮಕ್ಕಳನ್ನು ನಿಭಾಯಿಸಲು ಆಗುತ್ತಿಲ್ಲ ಎಂದು ಅರ್ಥ. ಮಕ್ಕಳು ಅಪ್ಪ ಅಮ್ಮ ಇಬ್ಬರೂ ಜೊತೆಯಲ್ಲಿ ಇರಬೇಕೆಂದು ಬಯಸುತ್ತಿದ್ದಾರೆ ಎಂದು ಅರ್ಥ. ಇನ್ಮುಂದೆ ಸವಾಲಿನ ಮಾತೂ ಇಲ್ಲ ಡಿವೋರ್ಸ್‌ ಮಾತು ಕೂಡಾ ಇಲ್ಲ ಎಂದು ಹೇಳುತ್ತಾಳೆ. ವಿಧಿ ಇಲ್ಲದ ತಾಂಡವ್‌, ಸರಿ ಇದೆಲ್ಲಾ ಮಕ್ಕಳಿಗಾಗಿ ಮಾತ್ರ ಎಂದು ಸುಮ್ಮನಾಗುತ್ತಾನೆ.

ಇತ್ತ ಪೂಜಾ, ತನ್ವಿ ಹಾಗೂ ತನ್ಮಯ್‌ ತಾವು ಮಾಡಿದ ಪ್ಲಾನ್‌ ಸಕ್ಸಸ್‌ ಆಗಿದ್ದರ ಬಗ್ಗೆ ಮಾತನಾಡುತ್ತಾರೆ. ಒಮ್ಮೆ ಮನೆಯಲ್ಲಿ ಗುಂಡಣ್ಣ ಅಳುತ್ತಾ ಕೂತಿದ್ದಾಗ ತನ್ವಿ , ತಮ್ಮನಿಗೆ ಸಮಾಧಾನ ಮಾಡುತ್ತಾಳೆ. ಅಪ್ಪ, ಅಮ್ಮನ ಬಳಿ ಹೀಗೇಕೆ ನಡೆದುಕೊಳ್ಳುತ್ತಿದ್ದಾರೆ? ನಿಜಕ್ಕೂ ಅಮ್ಮನಿಗೆ ಆರೋಗ್ಯ ಸರಿ ಇಲ್ಲವಾ ಎಂದು ಚರ್ಚಿಸುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಬರುವ ಪೂಜಾ, ನಿಮ್ಮ ಮಾತು ನಿಜ. ಅಮ್ಮ ಆರೋಗ್ಯವಾಗಿದ್ದಾರೆ, ಡಿವೋರ್ಸ್‌ ಕೊಡಬೇಕೆಂಬ ಕಾರಣಕ್ಕೆ ನಿನ್ನ ಅಪ್ಪ, ಅಮ್ಮನನ್ನು ಅಜ್ಜಿ ಮನೆಗೆ ಕಳಿಸಿದ್ದು ಎನ್ನುತ್ತಾಳೆ. ಅಷ್ಟೇ ಅಲ್ಲ ಇಬ್ಬರನ್ನೂ ಒಂದು ಮಾಡಲು ಏನೆಲ್ಲಾ ಪ್ಲಾನ್‌ ಮಾಡಬಹುದು ಎಂದು ಹೇಳಿಕೊಡುತ್ತಾಳೆ. ಪ್ಲಾನ್‌ ಮಾಡಿದಂತೆ ಗುಂಡಣ್ಣ, ತಾಂಡವ್‌ ಹೊಡೆಯಲು ಬಂದಾಗ ತಲೆ ಸುತ್ತಿ ಬೀಳುತ್ತಾನೆ.

ಕುಸುಮಾಗೆ ತಿಳಿದುಹೋಯ್ತು ಗುಂಡಣ್ಣ ಮಾಡಿದ ನಾಟಕ

ತಾವು ಮಾಡಿದ ಪ್ಲಾನ್‌ ನೆನಪಿಸಿಕೊಳ್ಳುವ ಗುಂಡಣ್ಣ ಇನ್ನೊಮ್ಮೆ ಅದೇ ರೀತಿ ತಲೆ ಸುತ್ತಿ ಬೀಳಲಾ ಎಂದು ಕೇಳುತ್ತಾನೆ. ಮೂವರೂ ಹೀಗೆ ಮಾತನಾಡುವಾಗ ಕುಸುಮಾ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾಳೆ. ಹಾಗಾದರೆ ನೀವು ಮಾಡಿದ್ದೆಲ್ಲಾ ನಾಟಕಾನಾ ಎಂದು ಕೋಪಗೊಳ್ಳುತ್ತಾಳೆ. ಹೌದು ಅತ್ತೆ, ಇಲ್ಲವಾದರೆ ಅಮ್ಮನ ಮನೆಗೆ ಹೋಗಿದ್ದ ಅಕ್ಕನನ್ನು ಭಾವ ಕರೆಯುತ್ತಿರಲಿಲ್ಲ ಎಂದು ಪೂಜಾ ಹೇಳಿದಾಗ ಕುಸುಮಾ ಸಂತೋಷ ವ್ಯಕ್ತಪಡಿಸುತ್ತಾಳೆ. ಒಳ್ಳೆ ಪ್ಲಾನ್‌ ಮಾಡಿದ್ದೀಯ ಎಂದು ಪೂಜಾಳನ್ನು ಹೊಗಳುತ್ತಾಳೆ. ಇಷ್ಟಕ್ಕೇ ನಿಲ್ಲಲಿಲ್ಲ, ಇಬ್ಬರನ್ನೂ ಹತ್ತಿರ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ.

ಇನ್ನೊಂದು ವಾರಕ್ಕೆ ಮದುವೆ ಫಿಕ್ಸ್‌ ಮಾಡಿದ್ದ ಶ್ರೇಷ್ಠಾ ಮದುವೆ ಕ್ಯಾನ್ಸಲ್‌ ಮಾಡುತ್ತಾಳಾ? ಅಪ್ಪ ಅಮ್ಮನನ್ನು ಒಂದು ಮಾಡಬೇಕೆನ್ನುವ ಮಕ್ಕಳ ಪ್ಲಾನ್‌ ವರ್ಕೌಟ್‌ ಆಗುವುದಾ ಕಾದು ನೋಡಬೇಕು.