ಕೊನೆಗೂ ಅಮ್ಮನ ಕೈಲಿ ಸಿಕ್ಕಿಬಿದ್ದ ತಾಂಡವ್‌, ಮಗನಿಗೆ ತಕ್ಕ ಶಾಸ್ತಿ ಮಾಡ್ತಾಳಾ ಕುಸುಮಾಂಬೆ? ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಕೊನೆಗೂ ಅಮ್ಮನ ಕೈಲಿ ಸಿಕ್ಕಿಬಿದ್ದ ತಾಂಡವ್‌, ಮಗನಿಗೆ ತಕ್ಕ ಶಾಸ್ತಿ ಮಾಡ್ತಾಳಾ ಕುಸುಮಾಂಬೆ? ; ಭಾಗ್ಯಲಕ್ಷ್ಮೀ ಧಾರಾವಾಹಿ

ಕೊನೆಗೂ ಅಮ್ಮನ ಕೈಲಿ ಸಿಕ್ಕಿಬಿದ್ದ ತಾಂಡವ್‌, ಮಗನಿಗೆ ತಕ್ಕ ಶಾಸ್ತಿ ಮಾಡ್ತಾಳಾ ಕುಸುಮಾಂಬೆ? ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 3ರ ಎಪಿಸೋಡ್‌. ಮದುವೆ ಮನೆಗೆ ಬರುವ ತಾಂಡವ್‌ ಅಲ್ಲಿ ಕುಸುಮಾ ಇರುವುದನ್ನು ನೋಡಿ ತಪ್ಪಿಸಿಕೊಂಡು ಓಡುತ್ತಾನೆ. ಅವನ ಹಿಂದೆಯೇ ಓಡುವ ಕುಸುಮಾ ತಾಂಡವ್‌ ಬಟ್ಟೆ ಹಿಡಿದುಕೊಳ್ಳುತ್ತಾಳೆ. ತಾಂಡವ್‌ ಅಮ್ಮನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

ಕೊನೆಗೂ ಅಮ್ಮನ ಕೈಲಿ ಸಿಕ್ಕಿಬಿದ್ದ ತಾಂಡವ್‌, ಮಗನಿಗೆ ತಕ್ಕ ಶಾಸ್ತಿ ಮಾಡ್ತಾಳಾ ಕುಸುಮಾಂಬೆ? ; ಭಾಗ್ಯಲಕ್ಷ್ಮೀ ಧಾರಾವಾಹಿ
ಕೊನೆಗೂ ಅಮ್ಮನ ಕೈಲಿ ಸಿಕ್ಕಿಬಿದ್ದ ತಾಂಡವ್‌, ಮಗನಿಗೆ ತಕ್ಕ ಶಾಸ್ತಿ ಮಾಡ್ತಾಳಾ ಕುಸುಮಾಂಬೆ? ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಹೇಗಾದರೂ ಮಾಡಿ ಶ್ರೇಷ್ಠಾ ಮದುವೆ ನಿಲ್ಲಿಸಬೇಕು ಎಂದು ಕುಸುಮಾ, ಭಾಗ್ಯಾ ಪಣ ತೊಟ್ಟಿದ್ದಾರೆ. ಮದುವೆ ನಡೆಯುವ ಜಾಗಕ್ಕೆ ಬಂದು ನಿನ್ನ ಮದುವೆ ನಿಲ್ಲಿಸಲು ಬಂದಿದ್ದೇನೆ ಎಂದು ಭಾಗ್ಯಾ ನೇರವಾಗಿ ಶ್ರೇಷ್ಠಾಗೆ ಹೇಳುತ್ತಾಳೆ. ಎಷ್ಟು ಪ್ಲ್ಯಾನ್‌ ಮಾಡಿದರೂ ಇವರೆಲ್ಲಾ ನನ್ನ ಮದುವೆಗೆ ಅಡ್ಡಿಯಾಗುತ್ತಿದ್ದಾರಲ್ಲ ಎಂದು ಶ್ರೇಷ್ಠಾ ಕೋಪಗೊಳ್ಳುತ್ತಾಳೆ.

ಕುಸುಮಾ ಮದುವೆಯಾಗುತ್ತಿರುವ ಗಂಡನ್ನು ಹುಡುಕಿ ಹೊರಟ ಕುಸುಮಾ

ಶ್ರೇಷ್ಠಾಗೆ ಮಾತ್ರ ಬುದ್ಧಿ ಹೇಳಿದರೆ ಪ್ರಯೋಜವಿಲ್ಲ, ಹೆಂಡತಿ ಮಕ್ಕಳಿಗೆ ಮೋಸ ಮಾಡಿ ಎರಡನೇ ಮದುವೆ ಆಗುತ್ತಿರುವ ಆ ಹುಡುಗನಿಗೂ ಬುದ್ಧಿ ಹೇಳಬೇಕು ಎಂದುಕೊಳ್ಳುವ ಕುಸುಮಾ, ವರನನ್ನು ಹುಡುಕಿ ಹೋಗುತ್ತಾಳೆ. ಅಲ್ಲಿ ಸುಂದ್ರಿಯನ್ನು ನೋಡುತ್ತಾಳೆ. ಕುಸುಮಾ, ಭಾಗ್ಯಾ ಎದುರಿಗೆ ಬಂದರೆ ಸಮಸ್ಯೆ ಆಗುತ್ತೆ ಎಂದುಕೊಂಡು ಅವಿತು ನಿಲ್ಲುವ ಸುಂದ್ರಿ, ಕುಸುಮಾಳನ್ನು ನೋಡಿ ಗಾಬರಿ ಆಗುತ್ತಾಳೆ. ಮದುವೆ ದಿನವೂ ಸುಂದ್ರಿ ಸರಳವಾಗಿರುವುದನ್ನು ನೋಡಿ ಕುಸುಮಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ‌

ನಿನ್ನ ಮಗ ಎಲ್ಲಿ? ಅವನನ್ನು ತೋರಿಸು ಎಂದು ಕುಸುಮಾ ಕೇಳುತ್ತಾಳೆ. ಆದ್ರೆ ಸುಂದ್ರಿ ತಡಬಡಾಯಿಸುತ್ತಾಳೆ. ಆದರೆ ಕುಸುಮಾ ಅವಳನ್ನು ಬಿಡದೆ ಕೈ ಹಿಡಿದು ಎಳೆದೊಯ್ಯುತ್ತಾಳೆ. ಎದುರಿಗೆ ಭಾಗ್ಯಾ ಬರುವುದನ್ನು ನೋಡಿ ಸುಂದ್ರಿ ಗಾಬರಿ ಆಗುತ್ತಾಳೆ. ಇವರಿಬ್ಬರ ಕೈಗೆ ಸಿಕ್ಕರೆ ನನಗೆ ಉಳಿಗಾಲವಿಲ್ಲ ಎಂದುಕೊಂಡು ಕುಸುಮಾ ಕೈಯಿಂದ ಬಿಡಿಸಿಕೊಂಡು ಅಲ್ಲಿಂದ ಓಡಿ ಹೋಗುತ್ತಾಳೆ.

ಅಮ್ಮನ ಕೈಗೆ ಸಿಕ್ಕಿಬಿದ್ದ ತಾಂಡವ್

ಇತ್ತ ತಾಂಡವ್‌, ಮದುವೆ ಹಾಲ್‌ ಬಳಿ ಬಂದರೂ ಆತನನ್ನು ಸ್ವಾಗತಿಸಲು ಯಾರೂ ಇರುವುದಿಲ್ಲ. ಸ್ವಲ್ಪ ಸಮಯದ ನಂತರ ಇವೆಂಟ್‌ ಮ್ಯಾನೇಜರ್‌, ತಾಂಡವ್‌ ಬಳಿ ಬಂದು ಆತನನ್ನು ವೆಲ್‌ಕಮ್‌ ಮಾಡಿ ಪೇಟ ತೊಡಿಸುತ್ತಾನೆ. ಗಂಡಿನ ರೂಮ್‌ಗೆ ಕಾಫಿ, ಟೀ ಸಪ್ಲೈ ಮಾಡುವಂತೆ ಸಹೋದ್ಯೋಗಿಗೆ ಸೂಚಿಸುತ್ತಾನೆ. ತಾಂಡವ್‌ ರೂಮ್‌ ಬಳಿ ಹೋಗುತ್ತಿದ್ದಂತೆ ಶ್ರೀವರ ಹಾಗೂ ಯಶೋಧಾ ತಾಂಡವ್‌ಗೆ ಎದುರಾಗುತ್ತಾರೆ. ನೀನು ಹೆಂಡತಿ ಮಕ್ಕಳು ಇದ್ದುಕೊಂಡೇ ನನ್ನ ಮಗಳನ್ನು ಮದುವೆ ಆಗುತ್ತಿದ್ದೀಯ, ಅವರಿಗೆ ಮೋಸ ಮಾಡುತ್ತಿರುವ ನೀನು, ನನ್ನ ಮಗಳಿಗೆ ಮೋಸ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ? ಬಹಳ ದಿನಗಳಿಂದ ಒಬ್ಬರು ನಿನ್ನನ್ನು ಭೇಟಿ ಮಾಡಬೇಕು ಎಂದುಕೊಂಡಿದ್ದರು. ಇಲ್ಲೇ ಇರು ಅವರನ್ನು ಕರೆಯುತ್ತೇನೆ ಎಂದು ಯಶೋಧಾ, ಕುಸುಮಾಗೆ ಕರೆ ಮಾಡುತ್ತಾಳೆ.

ಮದುಮಗನ ಅಮ್ಮ ಸಿಗದಿದ್ದರೆ ಏನಂತೆ, ಅವನೇ ಸಿಕ್ಕಿದ್ದಾನೆ ನಡಿ ಹೋಗೋಣ ಎಂದು ಕುಸುಮಾ ಭಾಗ್ಯಾ ಜೊತೆಗೆ ಯಶೋಧಾ ಹೇಳಿದ ಸ್ಥಳಕ್ಕೆ ಬರುತ್ತಾಳೆ. ಅವರಿಬ್ಬರನ್ನೂ ನೋಡಿ ತಾಂಡವ್‌ ಓಡಿ ಹೋಗುತ್ತಾನೆ. ಮದು ಮಗ ಓಡಿಹೋಗುತ್ತಿದ್ದಾನೆ ಎಂದು ಕುಸುಮಾ , ಅವನ ಬೆನ್ನಟ್ಟುತ್ತಾಳೆ. ಆದರೆ ತಾಂಡವ್‌ ಒಂದು ರೂಮಿನೊಳಗೆ ಹೋಗಿ ಅಡಗುತ್ತಾನೆ. ಹಿಂದೆಯೇ ಓಡಿ ಬರುವ ಕುಸುಮಾ, ತಾಂಡವ್‌ ಬಟ್ಟೆ ಹಿಡಿದು ಎಳೆಯುತ್ತಾಳೆ. ಆದರೆ ಅಮ್ಮನಿಗೆ ಮುಖ ತೋರಿಸಿದರೆ ಇಂದು ನನಗೆ ಉಳಿಗಾಲವಿಲ್ಲ ಎಂದು ತಿಳಿದು ತಾಂಡವ್‌ ಕುಸುಮಾಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

ಮಗನ ಮುಖವನ್ನು ಕುಸುಮಾ ನೋಡುತ್ತಾಳಾ? ಅಮ್ಮನಿಂದ ತಾಂಡವ್‌ ತಪ್ಪಿಸಿಕೊಳ್ಳುತ್ತಾನಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner