ಕುಸುಮಾ,ಭಾಗ್ಯಾ ಇಬ್ಬರನ್ನೂ ಇಲ್ಲಿಂದ ಕಳಿಸದಿದ್ರೆ ಸಾಯುತ್ತೇನೆ, ಅಪ್ಪ ಅಮ್ಮನಿಗೆ ಬ್ಲಾಕ್‌ ಮೇಲ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಕುಸುಮಾ,ಭಾಗ್ಯಾ ಇಬ್ಬರನ್ನೂ ಇಲ್ಲಿಂದ ಕಳಿಸದಿದ್ರೆ ಸಾಯುತ್ತೇನೆ, ಅಪ್ಪ ಅಮ್ಮನಿಗೆ ಬ್ಲಾಕ್‌ ಮೇಲ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಕುಸುಮಾ,ಭಾಗ್ಯಾ ಇಬ್ಬರನ್ನೂ ಇಲ್ಲಿಂದ ಕಳಿಸದಿದ್ರೆ ಸಾಯುತ್ತೇನೆ, ಅಪ್ಪ ಅಮ್ಮನಿಗೆ ಬ್ಲಾಕ್‌ ಮೇಲ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 4ರ ಎಪಿಸೋಡ್‌. ಅಪ್ಪ ಅಮ್ಮನ ಬಳಿ ನಾಟಕೀಯವಾಗಿ ಮಾತನಾಡುವ ಶ್ರೇಷ್ಠಾ, ಭಾಗ್ಯಾ, ಕುಸುಮಾ ಇಬ್ಬರನ್ನೂ ಮದುವೆ ಮನೆಯಿಂದ ಕಳಿಸುವಂತೆ ಬ್ಲಾಕ್‌ ಮೇಲ್‌ ಮಾಡುತ್ತಾಳೆ.

ಕುಸುಮಾ,ಭಾಗ್ಯಾ ಇಬ್ಬರನ್ನೂ ಇಲ್ಲಿಂದ ಕಳಿಸದಿದ್ರೆ ಸಾಯುತ್ತೇನೆ, ಅಪ್ಪ ಅಮ್ಮನಿಗೆ ಬ್ಲಾಕ್‌ ಮೇಲ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕುಸುಮಾ,ಭಾಗ್ಯಾ ಇಬ್ಬರನ್ನೂ ಇಲ್ಲಿಂದ ಕಳಿಸದಿದ್ರೆ ಸಾಯುತ್ತೇನೆ, ಅಪ್ಪ ಅಮ್ಮನಿಗೆ ಬ್ಲಾಕ್‌ ಮೇಲ್‌ ಮಾಡಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ರೂಮ್‌ನಲ್ಲಿ ಕೂಡಿಹಾಕಿದ್ದರೂ ಕಿಟಕಿ ಸರಳುಗಳನ್ನು ತೆಗೆದು ತಾಂಡವ್‌ ಮನೆಯಿಂದ ತಪ್ಪಿಸಿಕೊಂಡು ಮದುವೆ ಹಾಲ್‌ಗೆ ಬಂದಿದ್ದಾನೆ. ಅಲ್ಲಿ ಇವೆಂಟ್‌ ಮ್ಯಾನೇಜರ್‌, ತಾಂಡವ್‌ಗೆ ಪೇಟ ಕೊಟ್ಟು ರೂಮ್‌ನಲ್ಲಿ ಕೂರುವಂತೆ ಹೇಳುತ್ತಾನೆ. ಅಷ್ಟರಲ್ಲಿ ಕುಸುಮಾ, ಭಾಗ್ಯಾ ಇಬ್ಬರನ್ನೂ ನೋಡಿ ತಾಂಡವ್‌ ಗಾಬರಿ ಆಗಿ ಅಲ್ಲಿಂದ ಓಡಿ ಹೋಗುತ್ತಾನೆ.

ಅಮ್ಮ, ಭಾಗ್ಯಾ ಇಲ್ಲಿ ಇರೋವರೆಗೂ ಮದುವೆ ಸಾಧ್ಯವಿಲ್ಲ ಎಂದ ತಾಂಡವ್‌

ಮದು ಮಗ ಓಡಿ ಹೋಗುವುದನ್ನು ನೋಡಿದ ಕುಸುಮಾ ಅವನನ್ನು ಬೆನ್ನಟ್ಟುತ್ತಾಳೆ. ಸಮೀಪದಲ್ಲೇ ಇದ್ದ ಒಂದು ರೂಮ್‌ಗೆ ತಾಂಡವ್‌ ಓಡುತ್ತಾನೆ. ಆದರೆ ಅವನನ್ನು ಬಿಡದ ಕುಸುಮಾ ಹಿಂದೆಯಿಂದ ಬಂದು ಬಟ್ಟೆ ಹಿಡಿದು ಎಳೆಯುತ್ತಾಳೆ. ಇವತ್ತು ನನ್ನಿಂದ ನೀನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನಿನ್ನ ಮುಖ ತೋರಿಸು ಎನ್ನುತ್ತಾಳೆ. ಅಮ್ಮ ನನ್ನನ್ನು ನೋಡಿದರೆ ನನಗೆ ಉಳಿಗಾಲವಿಲ್ಲ. ಜೊತೆಗೆ ಈ ಮದುವೆಯೂ ನಡೆಯುವುದಿಲ್ಲ ಎಂದುಕೊಳ್ಳುವ ತಾಂಡವ್‌ ಬಟ್ಟೆ ಬಿಡಿಸಿಕೊಂಡು ಅಲ್ಲಿಂದ ಓಡಿ ಹೋಗುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಭಾಗ್ಯಾ, ನಿನಗೆ ಮನುಷ್ಯತ್ವ ಇಲ್ಲವಾ ಎಂದು ಬೈಯ್ಯುತ್ತಾಳೆ. ಆದರೆ ಕುಸುಮಾಗಾಗಲೀ, ಭಾಗ್ಯಾಗೆ ಆಗಲೀ ಅದು ತಾಂಡವ್‌ ಎಂದು ಗೊತ್ತಾಗುವುದಿಲ್ಲ.

ಇಬ್ಬರಿಂದ ತಲೆ ಮರೆಸಿಕೊಂಡು ಹೊರಗೆ ಬರುವ ತಾಂಡವ್‌ ಶ್ರೇಷ್ಠಾಗೆ ಕರೆ ಮಾಡುತ್ತಾನೆ. ನೀನು ಇನ್ನೂ ಎಲ್ಲಿ ಇದ್ದೀಯ, ಬೇಗ ಬಾ ಎಂದು ಶ್ರೇಷ್ಠಾ ಹೇಳುತ್ತಾಳೆ. ಅಮ್ಮ ಹಾಗೂ ಭಾಗ್ಯಾ ಇಬ್ಬರೂ ಇಲ್ಲೇ ಇದ್ದಾರೆ. ಇಷ್ಟೆಲ್ಲಾ ಅವಾಂತರಕ್ಕೆ ನೀನೇ ಕಾರಣ, ಎಲ್ಲಾ ಗಲಾಟೆ ಮುಗಿದ ನಂತರ ನಿನ್ನ ಊರಿನಲ್ಲೇ ಮದುವೆ ಆಗೋಣ ಎಂದರೆ ನೀನು ಕೇಳಲಿಲ್ಲ. ಇವತ್ತು ಅವರಿಬ್ಬರಿಂದ ತಪ್ಪಿಸಿಕೊಂಡು ಬರಲು ಸಾಕಾಯಿತು. ಭಾಗ್ಯಾ, ಅಮ್ಮ ಇಬ್ಬರೂ ಇಲ್ಲಿ ಇರುವರೆಗೂ ನಾನು ನಿನ್ನ ಮುಂದೆ ಬರಲು ಸಾಧ್ಯವಾಗುವುದಿಲ್ಲ. ಅವರು ಇಲ್ಲಿಂದ ಹೋದರೇನೇ ನಮ್ಮಿಬ್ಬರ ಮದುವೆ, ನೀನು ಏನಾದರೂ ಮಾಡಿಕೋ ಎಂದು ತಾಂಡವ್‌ ಹೇಳುತ್ತಾನೆ. ಸರಿ ಅವರಿಬ್ಬರನ್ನೂ ಇಲ್ಲಿಂದ ಕಳಿಸುತ್ತೇನೆ ನನಗೆ ಸ್ವಲ್ಪ ಸಮಯ ಕೊಡು ಎಂದು ಶ್ರೇಷ್ಠಾ ಏನೋ ಪ್ಲಾನ್‌ ಮಾಡುತ್ತಾ ಅಪ್ಪ-ಅಮ್ಮನ ಬಳಿ ಬರುತ್ತಾಳೆ.

ಅಪ್ಪ ಅಮ್ಮನಿಗೆ ಬ್ಲಾಕ್‌ ಮೇಲ್‌ ಮಾಡಿದ ಶ್ರೇಷ್ಠಾ

ಭಾಗ್ಯಾ, ಕುಸುಮಾ ಬಳಿ ಇದ್ದ ಯಶೋಧಾ ಶ್ರೀವರನ ಬಳಿ ಬರುವ ಶ್ರೇಷ್ಠಾ, ನಾನು ಅವರಿಗೂ ಏನೂ ನೋವು ಕೊಟ್ಟೇ ಇಲ್ಲ, ಇದುವರೆಗೂ ಅವರ ನನ್ನ ಮಧ್ಯೆ ಏನೂ ನಡೆದಿಲ್ಲ ಎಂಬಂತೆ ಪ್ರೀತಿಯಿಂದ ಮಾತನಾಡಿಸುತ್ತಾಳೆ. ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕು ಎನ್ನುತ್ತಾಳೆ. ಮಗಳು ನಾಟಕವಾಡುತ್ತಿದ್ದಾಳೆ ಎಂದು ಗೊತ್ತಿದ್ದರೂ ಇಬ್ಬರೂ ಅವಳ ಜೊತೆ ರೂಮ್‌ಗೆ ಬರುತ್ತಾರೆ. ಯಶೋಧಾ ಶಾಕು ಎಂದು ಕರೆಯುತ್ತಲೇ, ಮೊಸಳೆ ಕಣ್ಣೀರು ಸುರಿಸುವ ಶ್ರೇಷ್ಠಾ, ಅಮ್ಮ ನೀನು ಹಾಗೆ ಕರೆದಾಗಲೆಲ್ಲಾ ನನಗೆ ಬಾಲ್ಯ ನೆನಪಾಗುತ್ತದೆ. ನೀವಿಬ್ಬರೂ ನನ್ನನ್ನು ಎಷ್ಟು ಪ್ರೀತಿಯಿಂದ ನೋಡಿಕೊಂಡಿದ್ದೀರಿ, ಕಾಳಜಿ ಮಾಡಿದ್ದೀರಿ, ಅದರೆ ನಾನು ಮಾತ್ರ ನಿಮಗೆ ನೋವು ಕೊಟ್ಟೆ ಎಂದು ಅಳುತ್ತಾಳೆ.

ಮಗಳು ಬದಲಾದಳು, ಇನ್ನಾದರೂ ಅವಳು ಈ ಮದುವೆ ಬಿಟ್ಟು ನಮ್ಮ ಜೊತೆ ಬರುತ್ತಾಳೆ ಎಂದು ಶ್ರೇಷ್ಠಾ ಅಪ್ಪ ಅಮ್ಮ ಖುಷಿಪಡುವಷ್ಟರಲ್ಲಿ, ನಾನು ಖುಷಿಯಿಂದ ಇರಬೇಕೆಂದರೆ ಆ ಕುಸುಮಾ, ಭಾಗ್ಯಾ ಇಬ್ಬರನ್ನೂ ಇಲ್ಲಿಂದ ಕಳಿಸಿ, ಯಾವ ಕಾರಣಕ್ಕೂ ನಾನು ಈ ಮದುವೆ ನಿಲ್ಲಿಸುವುದಿಲ್ಲ ಎನ್ನುತ್ತಾಳೆ. ಮಗಳ ವರ್ತನೆ ನೋಡಿ ಯಶೋಧಾ ಶ್ರೀವರ ಇಬ್ಬರೂ ಮತ್ತೆ ಗಾಬರಿಯಾಗುತ್ತಾರೆ.

ಶ್ರೇಷ್ಠಾ ಬ್ಲಾಕ್‌ಮೇಲ್‌ಗೆ ಮಣಿದು ಯಶೋಧಾ-ಶ್ರೀವರ ಇಬ್ಬರೂ ಕುಸುಮಾ, ಭಾಗ್ಯಾಳನ್ನು ಅಲ್ಲಿಂದ ಕಳಿಸುತ್ತಾರಾ? ಶ್ರೇಷ್ಠಾ-ತಾಂಡವ್‌ ಮದುವೆ ನಡೆದೇ ಹೋಗುವುದಾ? ಮುಂದಿನ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner