ನನ್ನ ಮದುವೆಯಲ್ಲಿ ನಿಮ್ಮದೇ ಜವಾಬ್ದಾರಿ, ನೀವೇ ಎಲ್ಲಾ ಶಾಸ್ತ್ರ ಮಾಡಬೇಕು, ಕುಸುಮಾ ಎದುರು ನಿಂತ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 5ರ ಎಪಿಸೋಡ್. ನೀನು ಮದುವೆ ಆಗುತ್ತಿರುವ ಹುಡುಗನನ್ನು ತೋರಿಸು ಎಂದು ಭಾಗ್ಯಾ ದನಿ ಏರಿಸಿದ್ದಕ್ಕೆ ಶ್ರೇಷ್ಠಾ, ಅವಳನ್ನು ಕಾರಿನಲ್ಲಿ ಕೂರಿಸಿಕೊಂಡು ಅವಳ ಮನೆಗೇ ಬರುತ್ತಾಳೆ. ಕುಸುಮಾ ಮುಂದೆ ನಿಂತು ನನ್ನ ಮದುವೆ ನಿಮ್ಮ ಜವಾಬ್ದಾರಿ ಎನ್ನುತ್ತಾಳೆ.
Bhagyalakshmi Serial: ಹಿತಾ, ಸುಂದ್ರಿ, ಪೂಜಾ ಮಾಡಿದ ಪ್ಲ್ಯಾನ್ ಇನ್ನೇನು ವರ್ಕೌಟ್ ಆಯ್ತು ಎಂದುಕೊಳ್ಳುವಷ್ಟರಲ್ಲಿ ಎಲ್ಲಾ ಉಲ್ಟಾ ಹೊಡೆಯುತ್ತಿದೆ. ಹೇಗಾದರೂ ಮಾಡಿ ಭಾಗ್ಯಾಗೆ ಪರೋಕ್ಷವಾಗಿ ವಿಚಾರ ತಿಳಿಸಬೇಕೆಂದುಕೊಂಡಿದ್ದ ಮೂವರ ಪ್ಲ್ಯಾನ್ ಸಕ್ಸಸ್ ಆಗಿದೆ. ಆದರೆ ಭಾಗ್ಯಾ ಕೈಯ್ಯಲ್ಲಿ ಒದೆ ತಿಂದೂ ತಿಂದೂ ಶ್ರೇಷ್ಠಾ ಮೊಂಡುತನ ತೋರುತ್ತಿದ್ದಾಳೆ.
ಈ ಹುಡುಗಿ ಈಗಾಗಲೇ ಮದುವೆ ಆಗಿ ಮಕ್ಕಳು ಇರುವ ವ್ಯಕ್ತಿಯನ್ನು ಮದುವೆ ಆಗುತ್ತಿದ್ದಾಳೆ ಎಂದು ಚೀನೀ ಗುರುಗಳು ಹೇಳಿದ್ದನ್ನು ಕೇಳಿ ಭಾಗ್ಯಾ ಶಾಕ್ ಆಗುತ್ತಾಳೆ. ಆ ಹುಡುಗ ಯಾರು? ಎಲ್ಲಿದ್ದಾನೆ ನನಗೆ ತೋರಿಸು ಎಂಬು ಭಾಗ್ಯಾ, ಶ್ರೇಷ್ಠಾಳ ಬಳಿ ಪಟ್ಟು ಹಿಡಿಯುತ್ತಾಳೆ. ನಾನು ಯಾರನ್ನಾದರೂ ಮದುವೆ ಆಗುತ್ತೇನೆ. ಅದು ನನ್ನ ವೈಯಕ್ತಿಕ ವಿಚಾರ, ನನಗೂ ನಿನಗೂ ಏನು ಸಂಬಂಧ ಎಂದು ಶ್ರೇಷ್ಠಾ ಭಾಗ್ಯಾಳನ್ನು ಕೇಳುತ್ತಾಳೆ. ನಾನು ಮದುವೆ ಆಗಿ, ಮಕ್ಕಳು ಇರುವ ಒಂದು ಹೆಣ್ಣಾಗಿ ಮತ್ತೊಂದು ಹೆಣ್ಣಿನ ಸಂಸಾರ ಹಾಳು ಮಾಡಲು ಬಿಡುವುದಿಲ್ಲ, ಅದಕ್ಕಾಗಿ ಕೇಳುತ್ತಿದ್ದೇನೆ, ಅದು ಯಾರು ಹೇಳು ಎಂದು ಭಾಗ್ಯಾ ಶ್ರೇಷ್ಠಾ ಬಳಿ ಕೇಳುತ್ತಾಳೆ.
ಭಾಗ್ಯಾಳನ್ನು ಕಾರಿನಲ್ಲಿ ಕೂರಿಸಿಕೊಂಡು ಅವಳ ಮನೆಗೇ ಬಂದ ಶ್ರೇಷ್ಠಾ
ನಿನಗೆ ನನ್ನ ವಿಚಾರದಲ್ಲಿ ಏಕೆ ಇಷ್ಟು ಆಸಕ್ತಿ, ಯಾರದ್ದೋ ಹೆಣ್ಣಿನ ಜೀನವ ಹಾಳಾದರೆ ನಿನಗೇನು? ನಾನು ನಿನ್ನ ಗಂಡನನ್ನೇ ಮದುವೆ ಆಗುತ್ತಿರುವಂತೆ ಏಕೆ ವರ್ತಿಸುತ್ತಿದ್ದೀಯ ಎಂದು ಪ್ರಶ್ನಿಸುತ್ತಾಳೆ. ಈ ಮಾತಿಗೆ ಕೋಪಗೊಳ್ಳುವ ಭಾಗ್ಯಾ, ಅದನ್ನೆಲ್ಲಾ ನಾನು ಊಹೆ ಕೂಡಾ ಮಾಡಿಕೊಳ್ಳುವುದಿಲ್ಲ, ಹಾಗೇನಾದರೂ ಆದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾಳೆ. ಭಾಗ್ಯಾ ಹಿಂಸೆ ತಾಳಲಾರದೆ ಸರಿ ಆಯ್ತು ನಡಿ, ನಾನು ಮದುವೆ ಆಗುತ್ತಿರುವ ಹುಡುಗನನ್ನು ತೋರಿಸುತ್ತೇನೆ ಎನ್ನುತ್ತಾಳೆ. ಇಬ್ಬರ ಮಾತುಕತೆಯನ್ನು ದೂರದಲ್ಲಿ ನಿಂತು ಕೇಳಿಸಿಕೊಳ್ಳುವ ಪೂಜಾ ಗಾಬರಿ ಆಗುತ್ತಾಳೆ. ನೀನು ಏನು ಮಾಡಲು ಹೊರಟಿದ್ದೀಯ ಎಂದು ಶ್ರೇಷ್ಠಾಳನ್ನು ಕೇಳುತ್ತಾಳೆ. ಅಕ್ಕ ಇದೆಲ್ಲಾ ನಮಗೆ ಸಂಬಂಧಿಸಿದ್ದಲ್ಲ, ಬೇರೆ ಯಾರದ್ದೋ ಮನೆ ವಿಚಾರ ನಮಗೆ ಏಕೆ? ನಡಿ ಹೋಗೋಣ ಎಂದರೂ ಭಾಗ್ಯಾ ಕೇಳಲು ತಯಾರಿಲ್ಲ. ಕೊನೆಗೆ ಭಾಗ್ಯಾ, ಪೂಜಾ ಇಬ್ಬರೂ ಶ್ರೇಷ್ಠಾ ಕಾರು ಹತ್ತಿ ಕೂರುತ್ತಾರೆ.
ಕಾರು ತಮ್ಮ ಮನೆ ಕಡೆಗೆ ಬರುತ್ತಿದ್ದಂತೆ ಭಾಗ್ಯಾಗೆ ಗೊಂದಲ ಆಗುತ್ತದೆ. ನಮ್ಮ ಮನೆ ಬಳಿ ಏಕೆ ಬರುತ್ತಿದ್ದೀಯ ಎನ್ನುತ್ತಾಳೆ. ಇಂದು ನಿನ್ನ ಸ್ಥಾನ ಏನೆಂದು ನಾನು ತೋರಿಸಬೇಕು ಅದಕ್ಕೆ ಎಂದು ಮನೆ ಒಳಗೆ ಹೋಗುತ್ತಾಳೆ. ಅವಳನ್ನು ನೋಡಿ ಎಲ್ಲರೂ ಹಾಲ್‌ಗೆ ಬಂದು ನಿಲ್ಲುತ್ತಾರೆ. ನಾನೂ ಕೂಡಾ ಈ ಮನೆಗೆ ಸೇರಿದವಳು, ಕುಸುಮಾ ಆಂಟಿ, ನೀವೇ ಮುಂದೆ ನಿಂತು ನನ್ನ ಮದುವೆ ಶಾಸ್ತ್ರ ಮಾಡಬೇಕು, ನೀವೇ ನನ್ನ ಮದುವೆ ನಡೆಸಿಕೊಡಬೇಕು ಎನ್ನುತ್ತಾಳೆ. ನನಗೂ ನಿನಗೂ ಏನು ಸಂಬಂಧ ನಾನೇಕೆ ನಿನ್ನ ಮದುವೆ ನಡೆಸಿಕೊಡಬೇಕು ಎಂದು ಕೇಳುತ್ತಾಳೆ.
ನನ್ನ ಮದುವೆ ವಿಚಾರದಲ್ಲಿ ಮೂಗು ತೂರಿಸಬೇಡಿ
ತಾಂಡವ್ ಬಳಿ ಬರುವ ಶ್ರೇಷ್ಠಾ, ನಾನು ಈ ಮನೆಗೆ ಸೇರಬೇಕು ಅಂತ ನಿಮಗೂ ಅನ್ನಿಸುತ್ತಿಲ್ಲವಾ ಎನ್ನುತ್ತಾಳೆ. ಎಲ್ಲರೂ ಮೌನವಾಗಿ ನಿಲ್ಲುತ್ತಾರೆ. ಅಲ್ಲ ಎಂದಾದಲ್ಲಿ ನನಗೂ ನಿಮಗೂ ಏನು ಸಂಬಂಧ? ನನ್ನ ಮದುವೆಗೂ ನಿಮಗೂ ಏನು ಸಂಬಂಧ? ನಾನು ಎರಡನೇ ಮದುವೆ ಆದರೂ ಆಗುತ್ತೇನೆ, ಹತ್ತು ಮದುವೆ ಆದರೂ ಆಗುತ್ತೇನೆ ಅದನ್ನು ಕೇಳಲು ನೀವೆಲ್ಲಾ ಯಾರು? ಎಂದು ಶ್ರೇಷ್ಠಾ ಅರಚುತ್ತಾಳೆ. ಶ್ರೇಷ್ಠಾ ಮಾಡುವ ಅವಾಂತರವನ್ನು ನೆನೆದು ತಾಂಡವ್ ಸಿಟ್ಟಾಗುತ್ತಾನೆ. ಅದರೂ ಅದನ್ನು ತೋರಿಸದೆ ಇವಳು ಇಲ್ಲಿಗೆ ಏಕಾದರೂ ಬಂದಳೋ ಎಂದುಕೊಂಡು ಸುಮ್ಮನೆ ನಿಲ್ಲುತ್ತಾನೆ.
ಶ್ರೇಷ್ಠಾ ಹೇಳಿದಂತೆ ಭಾಗ್ಯಾ, ಈ ವಿಚಾರದಿಂದ ಹಿಂದೆ ಸರಿಯುತ್ತಾಳಾ? ಅವಳಿಗೆ ಬುದ್ಧಿ ಕಲಿಸೋಕೆ ಪೂಜಾ, ಹಿತಾ ಬೇರೆ ಏನು ಪ್ಲ್ಯಾನ್ ಮಾಡುತ್ತಾರೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ