ಕನ್ನಡ ಸುದ್ದಿ  /  ಮನರಂಜನೆ  /  ಪ್ರಜ್ಞೆ ತಪ್ಪಿರೋದು ನನ್ನ ಅತ್ತೆ ಅಂತ ಗೊತ್ತಿಲ್ಲದೆ ಆಕೆಗಾಗಿ ಪ್ರಾರ್ಥಿಸಿದ ಭಾಗ್ಯಾ, ಸುಧಾರಿಸಿಕೊಂಡ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಪ್ರಜ್ಞೆ ತಪ್ಪಿರೋದು ನನ್ನ ಅತ್ತೆ ಅಂತ ಗೊತ್ತಿಲ್ಲದೆ ಆಕೆಗಾಗಿ ಪ್ರಾರ್ಥಿಸಿದ ಭಾಗ್ಯಾ, ಸುಧಾರಿಸಿಕೊಂಡ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 5ರ ಎಪಿಸೋಡ್‌. ಭಾಗ್ಯಾ ಶ್ಯಾವಿಗೆ, ರಸಾಯನ ತರಲು ಪಕ್ಕದ ಹೋಟೆಲ್‌ಗೆ ಬರುತ್ತಾಳೆ. ಅಲ್ಲಿ ಅಡುಗೆ ಮಾಡುವ ಕುಸುಮಾ ತಲೆ ಸುತ್ತಿ ಬೀಳುತ್ತಾಳೆ. ಅದು ಅತ್ತೆ ಎಂದು ತಿಳಿಯದ ಭಾಗ್ಯಾ, ಆಕೆ ಎಚ್ಚರವಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio cinema)

Bhagyalakshmi Serial: ಅಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವುದು ತಾಂಡವ್‌ಗೆ ಗೊತ್ತಾಗಿದೆ. ನೀನು ಇಲ್ಲಿ ಕೆಲಸ ಮಾಡುವುದು ನನಗೆ ಇಷ್ಟ ಇಲ್ಲ ಎಂದು ಮಗ ಹೇಳಿದಾಗ, ನನ್ನ ಕಷ್ಟ ನೋಡಲಾಗದೆ ತಾಂಡವ್‌ ಹೀಗೆ ಹೇಳುತ್ತಿದ್ದಾನೆ ಎಂದೇ ಕುಸುಮಾ ಅಂದುಕೊಳ್ಳುತ್ತಾಳೆ. ಆದರೆ ಆತನ ಪ್ರೆಸ್ಟೀಜ್‌ ವಿಚಾರ ತಿಳಿಯುತ್ತಿದ್ದಂತೆ ಕುಸುಮಾ ಬೇಸರವಾಗುತ್ತಾಳೆ. ನಾನು ಇಲ್ಲಿ ಕೆಲಸ ಮಾಡುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ ಎಂದು ಕುಸುಮಾ ಅಲ್ಲಿಂದ ಮತ್ತೆ ಹೋಟೆಲ್‌ಗೆ ಹೋಗುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ತಲೆ ಸುತ್ತಿ ಬಿದ್ದ ಕುಸುಮಾ

ಪಕ್ಕದ ಸ್ಟಾರ್‌ ಹೋಟೆಲ್‌ನಿಂದ ಕುಸುಮಾ ಕೆಲಸ ಮಾಡುತ್ತಿರುವ ಹೋಟೆಲ್‌ಗೆ ಭಾಗ್ಯಾ, ಶ್ಯಾವಿಗೆ ಹಾಗೂ ಮಾವಿನ ಸೀಕರಣೆ ತರಲು ಹೋಗುತ್ತಾಳೆ. ಇತ್ತ ಕುಸುಮಾ, ಮಗನ ಮಾತುಗಳನ್ನು ನೆನಪಿಸಿಕೊಂಡು ದುಃಖ ಪಡುತ್ತಾಳೆ. ನೀನು ಎಷ್ಟೇ ಹೇಳಿದರೂ ನಾನು ಭಾಗ್ಯಾಗೆ ಡಿವೋರ್ಸ್‌ ಕೊಡದೆ ಬಿಡುವುದಿಲ್ಲ, ನೀನು ಇಲ್ಲಿ ಕೆಲಸ ಮಾಡುತ್ತಿರುವುದು ಯಾರಿಗಾದರೂ ಗೊತ್ತಾದರೆ ನನ್ನ ಮರ್ಯಾದೆ ಹೋಗುತ್ತದೆ ಎಂದು ತಾಂಡವ್‌ ಆಡಿದ ಮಾತುಗಳನ್ನೇ ಪದೇ ಪದೆ ನೆನಪಿಸಿಕೊಳ್ಳುವ ಕುಸುಮಾಗೆ ತಲೆ ಸುತ್ತಿದಂತೆ ಆಗುತ್ತದೆ. ಎಷ್ಟು ಸಾವರಿಸಿಕೊಂಡರೂ ಆಕೆಗೆ ದುಃಖ ತಡೆದುಕೊಳ್ಳಲು ಆಗುವುದಿಲ್ಲ. ಶ್ಯಾವಿಗೆ ಮಾಡುತ್ತಿದ್ದಂತೆ ಕುಸುಮಾ ತಲೆ ಸುತ್ತಿ ಕೆಳಗೆ ಬೀಳುತ್ತಾಳೆ. ಕೈ ಜಾರಿದ್ದರಿಂದ ಆಕೆ ಮಾಡಿದ ಶ್ಯಾವಿಗೆಯೂ ನೆಲಕ್ಕೆ ಬಿದ್ದು ಹಾಳಾಗುತ್ತದೆ.

ಕುಸುಮಾ ಕೆಳಗೆ ಬೀಳುತ್ತಿದ್ದಂತೆ ಸಹೋದ್ಯೋಗಿಗಳು ಗಾಬರಿ ಆಗಿ ಓನರ್‌ಗೆ ಸುದ್ದಿ ಮುಟ್ಟಿಸುತ್ತಾರೆ. ಹೋಟೆಲ್‌ಗೆ ಬಂದ ಕಸ್ಟಮರ್‌ಗಳು ಅಡುಗೆ ಮನೆ ಸುತ್ತಲೂ ಸುತ್ತುವರೆಯುತ್ತಾರೆ. ಶ್ಯಾವಿಗೆ ತರಲು ಹೋಟೆಲ್‌ಗೆ ಬರುವ ಭಾಗ್ಯಾಗೆ 5‌ ನಿಮಿಷ ಕಾಯುವಂತೆಯೂ ಅಲ್ಲಿವರೆಗೂ ತಮ್ಮ ಹೋಟೆಲ್‌ ಕಾಫಿ ಕುಡಿಯುವಂತೆ ಓನರ್ ಮನವಿ ಮಾಡುತ್ತಾರೆ. ಕಾಫಿ ಕುಡಿಯುತ್ತಿದ್ದ ಭಾಗ್ಯಾಗೆ ಅಡುಗೆ ಮನೆಯಲ್ಲಿ ಏನೋ ಆಗಿದೆ ಎಂದು ತಿಳಿದು ಅತ್ತ ಹೋಗುತ್ತಾಳೆ. ಆದರೆ ಆಕೆಗೆ ಒಳ ಹೋಗಲು ಸಾಧ್ಯವಾಗುವುದಿಲ್ಲ. ಪ್ರಜ್ಞೆ ತಪ್ಪಿ ಬಿದ್ದಿರುವುದು ಯಾರು ಎಂದೂ ಗೊತ್ತಾಗುವುದಿಲ್ಲ. ಇಂದು ಶ್ಯಾವಿಗೆ ಕೊಡಲು ಆಗುತ್ತಿಲ್ಲ. ಅದನ್ನು ಮಾಡುವವರಿಗೆ ವಯಸ್ಸಾಗಿದೆ. ಮನೆಯಲ್ಲಿ ಏನೋ ಸಮಸ್ಯೆಯಂತೆ, ಅದನ್ನು ನೆನಪಿಸಿಕೊಂಡು ತಲೆ ಸುತ್ತಿ ಬಿದ್ದಿದ್ದಾರೆ ಎಂದು ಹೋಟೆಲ್‌ ಓನರ್‌, ಭಾಗ್ಯಾ ಬಳಿ ಮನವಿ ಮಾಡುತ್ತಾರೆ.

ಅತ್ತೆಗಾಗಿ ಪ್ರಾರ್ಥಿಸುವ ಭಾಗ್ಯಾ

ಹೋಟೆಲ್‌ನಲ್ಲಿ ದೇವರ ಮುಂದಿರುವ ಕರ್ಪೂರವನ್ನು ಓನರ್‌ ಕೈಗೆ ಕೊಡುವ ಭಾಗ್ಯಾ, ಇದನ್ನು ಅವರ ಮೂಗಿಗೆ ಹಿಡಿದರೆ ಎಚ್ಚರವಾಗುತ್ತಾರೆ, ನನ್ನ ಅತ್ತೆ ಇದನ್ನು ನನಗೆ ಹೇಳಿಕೊಟ್ಟದ್ದು ಎಂದು ಸಲಹೆ ನೀಡುತ್ತಾಳೆ. ಪ್ರಜ್ಞೆ ತಪ್ಪಿ ಬಿದ್ದಿರುವುದು ತನ್ನ ಅತ್ತೆ ಭಾಗ್ಯಾ ಎಂದು ಗೊತ್ತಿಲ್ಲದೆ ಭಾಗ್ಯಾ, ಆಕೆಗಾಗಿ ಪ್ರಾರ್ಥಿಸಿ ಅಲ್ಲಿಂದ ಹೊರಡುತ್ತಾಳೆ. ಕರ್ಪೂರವನ್ನು ಮೂಗಿನ ಬಳಿ ಹಿಡಿಯುತ್ತಿದ್ದಂತೆ ಕುಸುಮಾ ಎಚ್ಚರಕೊಳ್ಳುತ್ತಾಳೆ. ತಾನು ಮಾಡಿದ ಶ್ಯಾವಿಗೆ ನೆಲದ ಪಾಲಾಗಿದ್ದನ್ನು ನೋಡಿ ಕುಸುಮಾ ಬೇಸರವಾಗುತ್ತಾಳೆ. ಇತ್ತ ಸ್ಟಾರ್‌ ಹೋಟೆಲ್‌ಗೆ ಅತಿಥಿಯೊಬ್ಬರು ಬರುತ್ತಿದ್ದು ಅವರನ್ನು ಟ್ರೀಟ್‌ ಮಾಡಲು ಸೂಪರ್‌ವೈಸರ್‌ ಕಾಯುತ್ತಿರುತ್ತಾರೆ. ಆದರೆ ಅತಿಥಿಗಾಗಿ ಪಕ್ಕದ ಹೋಟೆಲ್‌ನಿಂದ ಆರ್ಡರ್‌ ಮಾಡಿದ್ದ ಒತ್ತು ಶ್ಯಾವಿಗೆ ಮಾವಿನ ಸೀಕರಣೆ ತರದೆ ಭಾಗ್ಯಾ ಬರಿ ಕೈಯಲ್ಲಿ ಬರುತ್ತಿದ್ದನ್ನು ನೋಡುವ ಸೂಪರ್‌ವೈಸರ್‌ ಗಾಬರಿ ಆಗುತ್ತಾರೆ. ಆಕೆ ಮೇಲೆ ಕೋಪಗೊಳ್ಳುತ್ತಾರೆ.

ಕೆಲಸಕ್ಕೆ ಕುಸುಮಾಳಿಂದ ತೊಂದರೆ ಆಗುತ್ತಿರುವುದಕ್ಕೆ ಹೋಟೆಲ್‌ ಓನರ್‌ ಆಕೆಯನ್ನು ಕೆಲಸದಿಂದ ತೆಗೆಯುತ್ತಾರಾ? ಪಕ್ಕದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವುದು ತನ್ನ ಅತ್ತೆಯೇ ಎಂದು ಭಾಗ್ಯಾಗೆ ಗೊತ್ತಾಗುವುದಾ? ತಾನು ತರಲು ಹೋಗಿದ್ದು ಒತ್ತು ಶ್ಯಾವಿಗೆ, ಮಾವಿನ ಸೀಕರಣೆ ಎಂದು ಭಾಗ್ಯಾಗೆ ಗೊತ್ತಾಗಿ ಅದನ್ನು ತಾನೇ ತಯಾರಿಸಿಕೊಡುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಟಿ20 ವರ್ಲ್ಡ್‌ಕಪ್ 2024