Bhagyalakshmi Serial: ಭಾಗ್ಯಾ ಸೌಂದರ್ಯ ನೋಡುತ್ತಾ ಕಳೆದು ಹೋದ ತಾಂಡವ್ ಬದಲಾಗುವ ಸಮಯ ಬಂತಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್ 5ರ ಸಂಚಿಕೆ ಹೀಗಿದೆ. ಕೆಂಪು ಸೀರೆ ಉಟ್ಟು, ಮೇಕಪ್ ಮಾಡಿಕೊಂಡು ಪಾರ್ಟಿಗೆ ಬಂದ ಭಾಗ್ಯಾಳನ್ನು ನೋಡಿ ತಾಂಡವ್ ಕಳೆದುಹೋಗುತ್ತಾನೆ. ಒಂದು ಕ್ಷಣ ಶಾಕ್ ಆಗಿ, ಹೆಂಡತಿಯನ್ನೇ ನೋಡುತ್ತಾ ನಿಂತುಬಿಡುತ್ತಾನೆ.

Bhagyalakshmi Kannada Serial: ತಾಂಡವ್ ಹಾಗೂ ಭಾಗ್ಯಾ ಇಬ್ಬರನ್ನೂ ಒಂದು ಮಾಡಲು ಪೂಜಾ ಹಾಗೂ ಕುಸುಮಾ ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. ಗುಂಡಣ್ಣ, ತನ್ವಿ, ಸುನಂದಾ ಕೂಡಾ ಸಾಥ್ ನೀಡುತ್ತಿದ್ದಾರೆ. ಅಮ್ಮನನ್ನು ಕರೆಸಲು ಗುಂಡಣ್ಣ ತಲೆ ಸುತ್ತಿ ಬಿದ್ದ ನಾಟಕ ಕುಸುಮಾಗೆ ಗೊತ್ತಾದರೂ ಇದೆಲ್ಲಾ ಮಾಡಿದ್ದು ಇಬ್ಬರನ್ನೂ ಒಂದು ಮಾಡಲು ತಾನೇ ಎಂದುಕೊಂಡು ಸುಮ್ಮನಾಗುತ್ತಾಳೆ.
ನೈಟ್ ಪಾರ್ಟಿಗೆ ಭಾಗ್ಯಾಗೆ ಮೇಕಪ್ ಮಾಡಿ ಸುಂದರವಾಗಿ ಕಾಣುವಂತೆ ಮಾಡೆಂದು ಕುಸುಮಾ ಶ್ರೇಷ್ಠಾಗೆ ಹೇಳುತ್ತಾಳೆ. ಶ್ರೇಷ್ಠಾ, ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಳ್ಳುತ್ತಾಳೆ. ಪಾರ್ಟಿ ಹಾಳು ಮಾಡಲು ಶ್ರೇಷ್ಠಾ ಮನಸ್ಸಿನಲ್ಲೇ ಪ್ಲಾನ್ ಮಾಡುತ್ತಾಳೆ. ಪೂಜಾ ಹಾಗೂ ಶ್ರೇಷ್ಠಾ, ಭಾಗ್ಯಾ ರೂಮ್‌ಗೆ ಬರುವಷ್ಟರಲ್ಲಿ ಭಾಗ್ಯಾ ಸೀರೆ ಉಟ್ಟು ರೆಡಿ ಆಗಿರುತ್ತಾಳೆ. ಆದರೆ ಪೂಜಾ ಇದಕ್ಕೆ ಒಪ್ಪುವುದಿಲ್ಲ. ಪ್ರತಿದಿನವೂ ನೀನು ಇದೇ ರೀತಿ ತಯಾರಾಗುತ್ತಿದ್ದೀಯ. ಆದರೆ ಇವತ್ತು ಪಾರ್ಟಿ ಇದೆ, ವಿಭಿನ್ನವಾಗಿ ರೆಡಿ ಆಗಬೇಕು ಎಂದು ಅಕ್ಕನ ಬಳಿ ಮನಸ್ಸಿನ ಆಸೆ ವ್ಯಕ್ತಪಡಿಸುತ್ತಾಳೆ. ಸಮಯ ಸಿಕ್ಕಾಗಲೆಲ್ಲಾ ಶ್ರೇಷ್ಠಾಳ ಕಾಲು ಎಳೆಯುವ ಪೂಜಾ, ಅಕ್ಕ ಈ ದಿನ ಚೆನ್ನಾಗಿ ಕಾಣಬೇಕು. ಅಕ್ಕನನ್ನು ನೋಡುತ್ತಿದ್ದಂತೆ ಭಾವ ಕಳೆದುಹೋಗಬೇಕು ಎನ್ನುತ್ತಾಳೆ. ಪೂಜಾ ಪ್ರತಿ ಮಾತಿಗೂ ಶ್ರೇಷ್ಠಾ ಮನಸಿನಲ್ಲೇ ಬೆಂದು ಹೋಗುತ್ತಿದ್ದಾಳೆ.
ಭಾಗ್ಯಾ ಸೌಂದರ್ಯ ನೋಡಿ ಕಳೆದುಹೋದ ತಾಂಡವ್
ಮತ್ತೊಂದೆಡೆ ಪಾರ್ಟಿ ಶುರುವಾಗಿದೆ. ಬಹಳ ದಿನಗಳ ನಂತರ ಎಲ್ಲರೂ ಒಟ್ಟಿಗೆ ಸಮಯ ಕಳೆಯುತ್ತಿರುವುದಕ್ಕೆ ಗುಂಡಣ್ಣ ಬಹಳ ಖುಷಿ ಪಡುತ್ತಾನೆ. ಗುಂಡಣ್ಣನ ಖುಷಿ ನೋಡಿ ತಾಂಡವ್, ಕುಸುಮಾ, ಧರ್ಮರಾಜ್ ಕೂಡಾ ಸಂತೋಷಗೊಳ್ಳುತ್ತಾರೆ. ಪಾರ್ಟಿ ಶುರು ಆದರೂ ಇನ್ನೂ ಭಾಗ್ಯಾ ಬಂದಿಲ್ಲವಲ್ಲ ಎಂದು ಕುಸುಮಾ ಹೇಳುತ್ತಿದ್ದಂತೆ ಪೂಜಾ, ಭಾಗ್ಯಾಳನ್ನು ಕರೆತರುತ್ತಾಳೆ. ಭಾಗ್ಯಾಳನ್ನು ನೋಡುತ್ತಿದ್ದಂತೆ ಎಲ್ಲರೂ ಕಳೆದುಹೋಗುತ್ತಾರೆ. ಆಕೆಯನ್ನು ಕಂಡರೆ ಆಗದ, ಸದಾ ಬೈಯ್ಯುತ್ತಿದ್ದ ತಾಂಡವ್ ಕೂಡಾ ಭಾಗ್ಯಾ ಸೌಂದರ್ಯ ನೋಡಿ ಒಂದು ಕ್ಷಣ ಅವಾಕ್ಕಾಗಿ ನಿಂತುಬಿಡುತ್ತಾನೆ. ಮಗ ಭಾಗ್ಯಾಳನ್ನು ನೋಡುತ್ತಿರುವುದನ್ನು ಗಮನಿಸುವ ಕುಸುಮಾ ಹಾಗೂ ಸುನಂದಾ ಕೂಡಾ ಖುಷಿಯಾಗುತ್ತಾರೆ.
ಅಮ್ಮ ಬಹಳ ಚೆನ್ನಾಗಿ ಕಾಣುತ್ತಿದ್ದಾಳೆ ಅಲ್ವಾಪ್ಪಾ ಎಂದು ತನ್ಮಯ್ ಕೇಳಿದಾಗ ತಾಂಡವ್ ಹೌದು ಎನ್ನುತ್ತಾನೆ. ಇದು ಎಲ್ಲರಿಗೂ ಖುಷಿ ಆದರೂ ಶ್ರೇಷ್ಠಾಗೆ ಮಾತ್ರ ಬೇಸರವಾಗುತ್ತದೆ. ಎಚ್ಚೆತ್ತುಕೊಂಡ ತಾಂಡವ್ ಮಕ್ಕಳಿಗೆ ಐಸ್‌ಕ್ರೀಮ್ ಕೊಡಿಸಲು ಹೋಗುತ್ತಾನೆ. ಪಾರ್ಟಿಯಲಿ ಜೋಡಿಗಳು, ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡುವಂತೆ ಅನೌನ್ಸ್ ಮಾಡುತ್ತಿದ್ದಂತೆ ಅಮ್ಮನ ಕೈ ಹಿಡಿದು ಡ್ಯಾನ್ಸ್ ಮಾಡುವಂತೆ ಗುಂಡಣ್ಣ ತಾಂಡವ್‌ಗೆ ಒತ್ತಾಯಿಸುತ್ತಾನೆ. ಇಷ್ಟವಿಲ್ಲದಿದ್ದರೂ ಮಗನ ಮಾತಿಗೆ ಇಲ್ಲ ಎನ್ನಲಾಗದೆ ಭಾಗ್ಯಾ ಬಳಿ ಬರುವ ತಾಂಡವ್, ಕೈ ಚಾಚುತ್ತಾನೆ. ಏನು ಮಾಡುವುದು ತಿಳಿಯದೆ ಶಾಕ್‌ನಲ್ಲಿ ನಿಂತಿದ್ದ ಭಾಗ್ಯಾಳನ್ನು ನೋಡಿ ಸುನಂದಾ, ನಿನ್ನ ಗಂಡ ಡ್ಯಾನ್ಸ್ ಮಾಡಲು ಕರೆಯುತ್ತಿದ್ದಾನೆ ಹೋಗು ಎಂದು ತಾಂಡವ್ ಕೈಗೆ ಭಾಗ್ಯಾ ಕೈ ಇಡುತ್ತಾಳೆ. ಭಾಗ್ಯಾ ಕೂಡಾ ನಾಚುತ್ತಲೇ ಗಂಡನ ಜೊತೆ ವೇದಿಕೆಗೆ ಹೋಗಿ ನಿಲ್ಲುತ್ತಾಳೆ.
ಭಾಗ್ಯಾ ಸೌಂದರ್ಯ ಮೆಚ್ಚುವ ತಾಂಡವ್ ಇನ್ನಾದರೂ ಬದಲಾಗುತ್ತಾನಾ? ಪಾರ್ಟಿ ಹಾಳು ಮಾಡಲು ಶ್ರೇಷ್ಠಾ ಏನು ಪ್ಲಾನ್ ಮಾಡುತ್ತಾಳೆ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.