ಭಾಗ್ಯಾ, ಕುಸುಮಾರನ್ನು ಹೊರ ಕಳಿಸಿದ ಶ್ರೇಷ್ಠಾ ಹೆತ್ತವರು, ಮದುವೆ ಆಗೇಬಿಡ್ತು ಅಂತ ಖುಷಿಪಟ್ಟ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್ 5ರ ಎಪಿಸೋಡ್. ಭಾಗ್ಯಾ-ಕುಸುಮಾರನ್ನು ಮದುವೆ ಮನೆಯಿಂದ ಹೊರ ಕಳಿಸಲು ಶ್ರೇಷ್ಠಾ, ತನ್ನ ತಂದೆ ತಾಯಿಯನ್ನು ದಾಳವನ್ನಾಗಿ ಬಳಸಿಕೊಳ್ಳುತ್ತಾಳೆ. ಕೊನೆಗೂ ಅದರಲ್ಲಿ ಯಶಸ್ವಿಯಾಗುತ್ತಾಳೆ. ಇದನ್ನು ಕಂಡು ತಾಂಡವ್ ಬಹಳ ಖುಷಿಯಾಗುತ್ತಾನೆ.
Bhagyalakshmi Serial: ಭಾಗ್ಯಾ ಹಾಗೂ ಅಮ್ಮ ಇಲ್ಲಿ ಇರುವರೆಗೂ ನಾನು ನಿನ್ನನ್ನು ಮದುವೆ ಆಗಲು ಸಾಧ್ಯವೇ ಇಲ್ಲ. ಆದಷ್ಟು ಬೇಗ ಅವರನ್ನು ಹೊರ ಕಳಿಸು ಎಂದು ತಾಂಡವ್, ಶ್ರೇಷ್ಠಾಗೆ ಕಂಡಿಷನ್ ಮಾಡುತ್ತಾನೆ. ಅಮ್ಮ ಹಾಗೂ ಹೆಂಡತಿ ಮುಂದೆ ತಾಂಡವ್ ನನ್ನನ್ನು ಮದುವೆ ಆಗುವುದಿಲ್ಲ ಎಂದು ಅರ್ಥ ಮಾಡಿಕೊಂಡ ಶ್ರೇಷ್ಠಾ, ಇಬ್ಬರನ್ನೂ ಹೊರಗೆ ಕಳಿಸಲು ಪ್ಲ್ಯಾನ್ ಮಾಡುತ್ತಾಳೆ. ಅದಕ್ಕಾಗಿ ತನ್ನ ಅಪ್ಪ ಅಮ್ಮನನ್ನು ದಾಳವನ್ನಾಗಿ ಬಳಸಿಕೊಳ್ಳುತ್ತಾಳೆ.
ಕುತ್ತಿಗೆ ಬಳಿ ಚಾಕು ಹಿಡಿದುಕೊಂಡು ಸಾಯುತ್ತೇನೆ ಎಂದು ಹೆದರಿಸಿದ ಶ್ರೇಷ್ಠಾ
ಹೆತ್ತವರ ಮೇಲೆ ಪ್ರೀತಿ ಬಂದಂತೆ ಶ್ರೇಷ್ಠಾ ನಟಿಸುತ್ತಾಳೆ. ಅವರನ್ನು ಒಂದು ರೂಮ್‌ಗೆ ಕರೆದೊಯ್ದು ಬಾಲ್ಯವನ್ನು ನೆನಪಿಸಿಕೊಳ್ಳುತ್ತಾಳೆ. ನೀವು ನನಗೆ ಎಷ್ಟು ಪ್ರೀತಿ ಕೊಟ್ಟಿದ್ದೀರಿ, ಎಷ್ಟು ಕಾಳಜಿ ಮಾಡಿದ್ದೀರಿ, ಆದರೆ ನಾನು ಮಾತ್ರ ನಿಮಗೆ ಬಹಳ ನೋವು ಕೊಟ್ಟೆ ಎಂದು ಮೊಸಳೆ ಕಣ್ಣೀರು ಹರಿಸುತ್ತಾ, ತನಗೆ ತಾನೇ ಕೆನ್ನೆಗೆ ಹೊಡೆದುಕೊಳ್ಳುತ್ತಾಳೆ. ಮಗಳು ನಿಜಕ್ಕೂ ಬದಲಾಗಿದ್ದಾಳೆ. ಈ ಮದುವೆ ಬಿಟ್ಟು ನಮ್ಮ ಜೊತೆಗೆ ವಾಪಸ್ ಬರುತ್ತಾಳೆ ಎಂದು ಶ್ರೀವರ-ಯಶೋಧಾ ಖುಷಿಯಾಗುತ್ತಾರೆ. ಆದರೆ ಶ್ರೇಷ್ಠಾ ಮತ್ತೆ ವರಸೆ ಬದಲಿಸುತ್ತಾಳೆ. ನಿಮ್ಮ ಮಗಳು ಸುಖವಾಗಿರಬೇಕು ಎಂದರೆ ಈ ಮದುವೆ ನಡೆಯಬೇಕು, ಮದುವೆ ನಡೆಯಬೇಕು ಎಂದರೆ ಆ ಕುಸುಮಾ, ಭಾಗ್ಯಾ ಇಬ್ಬರೂ ಮನೆಯಿಂದ ಹೊರ ಹೋಗಬೇಕು ಎನ್ನುತ್ತಾಳೆ.
ಶ್ರೇಷ್ಠಾ, ಬದಲಾಗಿಲ್ಲ ಇಷ್ಟು ಹೊತ್ತು ಅವಳು ಮಾಡಿದ್ದೆಲ್ಲಾ ನಾಟಕ ಎಂದು ಹೆತ್ತವರಿಗೆ ಬೇಸರವಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಅವರಿಬ್ಬರನ್ನೂ ಇಲ್ಲಿಂದ ಹೋಗಿ ಎಂದು ಹೇಳುವುದಿಲ್ಲ. ಅವರು ನಿನ್ನ ಮದುವೆ ನಿಲ್ಲಿಸೋಕೆ ಇಲ್ಲಿ ಬಂದಿರುವುದು ಎಂದು ಯಶೋಧಾ ಹೇಳುತ್ತಾಳೆ. ಆದರೆ ಪಟ್ಟು ಬಿಡದ ಶ್ರೇಷ್ಠಾ, ಚಾಕುವನ್ನು ತನ್ನ ಕುತ್ತಿಗೆ ಬಳಿ ಹಿಡಿದು, ನೀವು ಅವರಿಬ್ಬರನ್ನು ಕಳಿಸದಿದ್ದರೆ ನಾನೇ ಚುಚ್ಚಿಕೊಂಡು ಸಾಯುತ್ತೇನೆ. ನಿಮ್ಮ ಮಗಳು ಮದುವೆ ಆಗಬೇಕಾ ಅಥವಾ ಸಾಯಬೇಕಾ ನೀವೇ ನಿರ್ಧರಿಸಿ ಎಂದು ಬ್ಲಾಕ್ ಮೇಲ್ ಮಾಡುತ್ತಾಳೆ. ಮಗಳು ಹಟಮಾರಿ ಎಂದು ಗೊತ್ತಿರುವ ಯಶೋಧಾ-ಶ್ರೀವರ ವಿಧಿ ಇಲ್ಲದೆ ಕುಸುಮಾ-ಭಾಗ್ಯಾ ಬಳಿ ಬರುತ್ತಾರೆ.
ಮದುವೆ ಮನೆಯಿಂದ ಹೊರ ನಡೆದ ಭಾಗ್ಯಾ-ಕುಸುಮಾ
ನಿಮ್ಮ ಮಗಳು ಒಳಗೆ ಕರೆದುಕೊಂಡು ಹೋಗಿ ನಿಮ್ಮ ಬಳಿ ಏನು ಹೇಳಿದಳು? ಏನೇ ಆದರೂ ಈ ಮದುವೆ ನಿಲ್ಲಿಸುತ್ತೇನೆ, ನೀವು ಭಯ ಪಡಬೇಡಿ ಎಂದು ಕುಸುಮಾ ಧೈರ್ಯ ಹೇಳುತ್ತಾಳೆ. ಮದುವೆ ನಿಲ್ಲಿಸುವುದೇನೂ ಬೇಡ, ನೀವಿಬ್ಬರೂ ಇಲ್ಲಿಂದ ಹೋದರೆ ಸಾಕು ಎಂದು ಶ್ರೇಷ್ಠಾ ಅಪ್ಪ ಅಮ್ಮ ಹೇಳಿದ ಮಾತು ಕೇಳಿ ಕುಸುಮಾ ಗಾಬರಿ ಆಗುತ್ತಾಳೆ. ಅವಳು ಹೇಳಿದಂತೆ ಕೇಳಬೇಕು ಅಂತ ನೀವು ಭಯ ಪಡಬೇಡಿ, ನಾನೇ ಹೋಗಿ ಅವಳ ಬಳಿ ಮಾತನಾಡುತ್ತೇನೆ ಎಂದು ಭಾಗ್ಯಾ ಶ್ರೇಷ್ಠಾ ಬಳಿ ಹೋಗಲು ಮುಂದಾಗುತ್ತಾಳೆ. ಅವಳನ್ನು ತಡೆಯುವ ಶ್ರೀವರ, ನನ್ನನ್ನು ಅಪ್ಪ ಎಂದು ಕರೆಯುತ್ತಿದ್ದೀಯ, ತಂದೆ ಸ್ಥಾನದಲ್ಲಿರುವ ನಾನು ನಿನಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ, ದಯವಿಟ್ಟು ಇಲ್ಲಿಂದ ಹೊರಡಿ ಎಂದು ಮನವಿ ಮಾಡುತ್ತಾನೆ.
ಯಶೋಧಾ-ಶ್ರೀವರ ಇಬ್ಬರೂ ಈ ರೀತಿ ಬದಲಾಗಿದ್ದನ್ನು ನೋಡಿ ದಿಕ್ಕು ತೋಚದೆ ಕುಸುಮಾ-ಭಾಗ್ಯಾ ಇಬ್ಬರೂ ಮದುವೆ ಮನೆಯಿಂದ ಹೊರ ಬರಲು ಸಿದ್ಧರಾಗುತ್ತಾರೆ. ನೀವೂ ಬದಲಾಗಿಬಿಟ್ರಿ, ನಿಮ್ಮ ಮಗಳ ಖುಷಿಗೆ ಮತ್ತೊಂದು ಹೆಣ್ಣಿನ ಸಂಸಾರ ಹಾಳು ಮಾಡಿದ ಶಾಪ ನಿಮ್ಮಿಬ್ಬರನ್ನೂ ಎಂದಿಗೂ ಬಿಡುವುದಿಲ್ಲ ಎಂದು ಕುಸುಮಾ ಅವರಿಬ್ಬರ ಮೇಲೆ ಕೋಪಗೊಳ್ಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ಶ್ರೇಷ್ಠಾಳನ್ನು ನೋಡಿ, ನಿನಗಂತೂ ಖಂಡಿತ ಒಳ್ಳೆಯದಾಗುವುದಿಲ್ಲ ಎಂದು ಶಾಪ ಹಾಕುತ್ತಾಳೆ. ಆದರೆ ಇದ್ಯಾವುದನ್ನೂ ಲೆಕ್ಕಿಸದ ಶ್ರೇಷ್ಠಾ, ಹೋಟೆಲ್ ಸಿಬ್ಬಂದಿಯನ್ನು ಕರೆದು ಇಬ್ಬರನ್ನೂ ಇಲ್ಲಿಂದ ಕಳಿಸಿ, ಮತ್ತೆ ಒಳಗೆ ಬರದಂತೆ ನೋಡಿಕೊಳ್ಳಿ ಎನ್ನುತ್ತಾಳೆ. ಕುಸುಮಾ-ಭಾಗ್ಯಾ ಅಲ್ಲಿಂದ ಹೊರ ಹೋಗುವುದನ್ನು ನೋಡಿದ ತಾಂಡವ್ ಬಹಳ ಖುಷಿಯಾಗುತ್ತಾನೆ. ಇನ್ನು ಈ ಮದುವೆಗೆ ಯಾವುದೇ ಅಡ್ಡಿಯಿಲ್ಲ ಎಂದು ಸಂಭ್ರಮಿಸುತ್ತಾನೆ.
ತಾಂಡವ್, ಶ್ರೇಷ್ಠಾಗೆ ತಾಳಿ ಕಟ್ಟೇ ಬಿಡ್ತಾನಾ? ಕಣ್ಮರೆಯಾಗಿರುವ ಪೂಜಾ ಎಲ್ಲಿ ಹೋದಳು? ಕುಸುಮಾ ಭಾಗ್ಯಾಗೆ ತಾಂಡವ್ ಸತ್ಯ ಗೊತ್ತಾಗಲಿದೆಯಾ? ಎಲ್ಲದಕ್ಕೂ ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ಸಿಗಲಿದೆ.
ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ