ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯ ಯಾರು ಅಂತ ನಿಜ ಗೊತ್ತಾಗೇಬಿಡ್ತು, ಹೋಟೆಲ್‌ ಕೆಲಸದಿಂದ ಗೆಟ್‌ ಔಟ್‌ ಹೇಳಿದ ಸೂಪರ್‌ವೈಸರ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯ ಯಾರು ಅಂತ ನಿಜ ಗೊತ್ತಾಗೇಬಿಡ್ತು, ಹೋಟೆಲ್‌ ಕೆಲಸದಿಂದ ಗೆಟ್‌ ಔಟ್‌ ಹೇಳಿದ ಸೂಪರ್‌ವೈಸರ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 6ರ ಸಂಚಿಕೆಯಲ್ಲಿ ಭಾಗ್ಯಾ ಯಾರು ಎಂಬ ಸತ್ಯ ಹೋಟೆಲ್‌ ಸೂಪರ್‌ವೈಸರ್‌ಗೆ ಗೊತ್ತಾಗುತ್ತದೆ. ಇಲ್ಲಿಂದ ಹೋಗದಿದ್ದರೆ ಪೊಲೀಸರನ್ನು ಕರೆಯಬೇಕಾಗುತ್ತದೆ ಎಂದು ಭಾಗ್ಯಾಗೆ ಎಚ್ಚರಿಕೆ ನೀಡುತ್ತಾನೆ. ಕೆಲಸದಿಂದ ತೆಗೆಯಬೇಡಿ ಎಂದು ಭಾಗ್ಯಾ ಮನವಿ ಮಾಡುತ್ತಾಳೆ.

ಭಾಗ್ಯ ಯಾರು ಅಂತ ನಿಜ ಗೊತ್ತಾಗೇಬಿಡ್ತು, ಹೋಟೆಲ್‌ ಕೆಲಸದಿಂದ ಗೆಟ್‌ ಔಟ್‌ ಹೇಳಿದ ಸೂಪರ್‌ವೈಸರ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯ ಯಾರು ಅಂತ ನಿಜ ಗೊತ್ತಾಗೇಬಿಡ್ತು, ಹೋಟೆಲ್‌ ಕೆಲಸದಿಂದ ಗೆಟ್‌ ಔಟ್‌ ಹೇಳಿದ ಸೂಪರ್‌ವೈಸರ್‌; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಸ್ಟಾರ್‌ ಹೋಟೆಲ್‌ಗೆ ಬಂದಿರುವ ಅತಿಥಿಗೆ ತಮ್ಮ ಹೋಟೆಲ್‌ನ ಸ್ಪೆಷಲ್‌ ಫುಡ್‌ ಸರ್ವ್‌ ಮಾಡಲು ಎಲ್ಲರೂ ಕಾಯುತ್ತಿರುತ್ತಾರೆ. ಆದರೆ ಆ ಹೋಟೆಲ್‌ನಲ್ಲಿ ಆ ಫುಡ್‌ ತಯಾರಿಸಲು ಅಡುಗೆಯವರು ಇಲ್ಲದ ಕಾರಣ ಪಕ್ಕದ ಹೋಟೆಲ್‌ನಿಂದ ತರುವಂತೆ ಹೇಳಿ, ಹಿತಾ ಭಾಗ್ಯಾಳನ್ನು ಕಳಿಸುತ್ತಾಳೆ. ಆದರೆ ಆಕೆ ಬರಿ ಕೈಲಿ ವಾಪಸ್‌ ಬರುವುದನ್ನು ನೋಡಿ ಸೂಪರ್‌ವೈಸರ್‌ ಗಾಬರಿ ಆಗುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಭಾಗ್ಯಾಳನ್ನು ತರಾಟೆಗೆ ತೆಗೆದುಕೊಂಡ ಸೂಪರ್‌ವೈಸರ್

ಪಕ್ಕದ ಹೋಟೆಲ್‌ನಿಂದ ತರಬೇಕಿದ್ದ ಫುಡ್‌ ಎಲ್ಲಿ ಎಂದು ಸೂಪರ್‌ವೈಸರ್‌ ಭಾಗ್ಯಾಳನ್ನು ಕೇಳುತ್ತಾನೆ. ಭಾಗ್ಯಾ, ಅಲ್ಲಿ ನಡೆದ ವಿಚಾರ ತಿಳಿಸುತ್ತಾಳೆ. ಆಕೆ ಉತ್ತರಕ್ಕೆ ಸಮಾಧಾನಗೊಳ್ಳದ ಸೂಪರ್‌ವೈಸರ್‌ ಕೋಪಗೊಳ್ಳುತ್ತಾನೆ. ನಮ್ಮ ಹೋಟೆಲ್‌ಗೆ ಬಂದಿರುವವರು ಖ್ಯಾತ ಪತ್ರಕರ್ತರು. ಅವರು ಇಲ್ಲಿನ ಸ್ಪೆಷಲ್‌ ಫುಡ್‌ ತಿಂದು ರಿವ್ಯೂ ಬರೆದರೆ ನಮ್ಮ ಹೋಟೆಲ್‌ಗೆ ಇನ್ನೂ ಅನೇಕ ಕಸ್ಟಮರ್‌ಗಳು ಬರುತ್ತಾರೆ. ಆದರೆ ಇಲ್ಲಿ ಅವರು ಕೇಳಿದ ಫುಡ್‌ ಕೊಡಲಿಲ್ಲ ಎಂದರೆ ಅವರು ನಮ್ಮ ಹೋಟೆಲ್‌ ಬಗ್ಗೆ ನೆಗೆಟಿವ್‌ ಬರೆದರೆ ಏನು ಮಾಡುವುದು? ಆ ಚಿಕ್ಕ ಹೋಟೆಲ್‌ನವರು ಕೊಡುವುದಿಲ್ಲ ಎಂದರೆ ನೀವು ಹೇಗೆ ಸುಮ್ಮನೆ ಬರಬೇಕಿತ್ತು? ನಾವು ಅವರಿಗೆ ದುಡ್ಡು ಕೊಡುತ್ತೇವೆ, ಕೊಡುವರೆಗೂ ಬಿಡುವುದಿಲ್ಲ ಎಂದು ಹಟ ಮಾಡಿ ಕೂರಬೇಕಿತ್ತು, ನಿಮ್ಮಿಂದ ಹೋಟೆಲ್‌ಗೆ ಸಮಸ್ಯೆ ಆದರೆ ನಾನು ಬಿಡುವುದಿಲ್ಲ ಎಂದು ಸೂಪರ್‌ವೈಸರ್‌ ಭಾಗ್ಯಾಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಾನೆ.

ಸೂಪರ್‌ವೈಸರ್‌ ಗಾಬರಿ ಆಗಿರುವುದನ್ನು ಗಮನಿಸಿದ ಭಾಗ್ಯಾ, ಸರ್‌ ಅದು ಯಾವ ಐಟಮ್‌? ಏಕೆ ಇಷ್ಟು ಗಾಬರಿ ಆಗಿದ್ದೀರ ಎಂದು ಕೇಳುತ್ತಾಳೆ. ಸೂಪರ್‌ವೈಸರ್‌ ಮೆನು ಟ್ಯಾಬ್‌ನಲ್ಲಿ ಆ ತಿಂಡಿ ಫೋಟೋ ತೋರಿಸುತ್ತಾನೆ. ಅಯ್ಯೋ ಸರ್‌ ಇದಾ? ನೀವು ಇಷ್ಟಕ್ಕೆ ಹೀಗೆಲ್ಲಾ ಟೆನ್ಷನ್‌ ಆಗಿದ್ದೀರ. ಇದು ನಾನು ಮನೆಯಲ್ಲಿ ಆಗ್ಗಾಗ್ಗೆ ಮಾಡುತ್ತಿರುತ್ತೇನೆ, ನನ್ನ ಮಗನಿಗಂತೂ ಇದು ಬಹಳ ಇಷ್ಟ, ಇದಕ್ಕೆ ನೀವು ಬೇರೆ ಹೆಸರಿಟ್ಟಿದ್ದೀರ, ನಾನೇ ಇಲ್ಲಿ ಮಾಡುತ್ತೇನೆ ಎನ್ನುತ್ತಾಳೆ. ಭಾಗ್ಯಾ ಮಾತುಗಳನ್ನು ಕೇಳಿ ಸೂಪರ್‌ವೈಸರ್‌ ಕೋಪಗೊಳ್ಳುತ್ತಾನೆ. ಅಡುಗೆ ಕೆಲಸ ಸುಲಭ ಎಂದುಕೊಳ್ಳಬೇಡಿ, ನಿಮ್ಮ ಕೆಲಸ ಆರ್ಡರ್‌ ತೆಗೆದುಕೊಳ್ಳುವುದು, ಅಡುಗೆ ಉಸಾಬರಿ ನಿಮಗೆ ಏಕೆ? ಹೇಳಿದಷ್ಟು ಮಾಡಿ, ನಿಮ್ಮ ಮಾತು ಕೇಳುತ್ತಿದ್ದರೆ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಮಾಡಿ ಇಂಟರ್ರ್‌ಶಿಪ್‌ ಮುಗಿಸಿಬಂದವರಂತೆ ಕಾಣುತ್ತಿಲ್ಲ ಎನ್ನುತ್ತಾನೆ.‌

ಯಾವುದಾದರೂ ಕೆಲಸ ಕೊಡಿ ಎಂದು ಮನವಿ ಮಾಡುವ ಭಾಗ್ಯಾ

ಅಷ್ಟರಲ್ಲಿ ಅಲ್ಲಿಗೆ ಬರುವ ಮತ್ತೊಬ್ಬ ಹೋಟೆಲ್‌ ಉದ್ಯೋಗಿ, ಸರ್‌ ಇವಳು ಭಗಾಯ ಅಲ್ಲವೇ ಅಲ್ಲ ಎನ್ನುತ್ತಾನೆ. ಹಾಗಾದರೆ ನೀನು ಯಾರು ಹೇಳು ಎಂದು ಸೂಪರ್‌ವೈಸರ್‌ ಗದರಿದಾಗ ಭಾಗ್ಯಾ, ನಾನು ಭಗಾಯ ಅಲ್ಲ ಎನ್ನುತ್ತಾಳೆ. ಮತ್ತೊಬ್ಬರ ಹೆಸರಿನಲ್ಲಿ ಕೆಲಸ ಮಾಡಲು ಎಷ್ಟು ಧೈರ್ಯ? ಆಗಲೇ ಏಕೆ ನಿಜ ಹೇಳಲಿಲ್ಲ ಎಂದು ಪ್ರಶ್ನಿಸುತ್ತಾನೆ. ಸರ್‌ ನಾನು ಬೇರೆಯವರ ಜಾಗದಲ್ಲಿದ್ದೇನೆ ಎಂದು ನನಗೆ ಗೊತ್ತಾಗಿದ್ದು ನಿನ್ನೆಯಷ್ಟೇ. ಆದರೆ ದಯವಿಟ್ಟು ನನ್ನನ್ನು ಕೆಲಸದಿಂದ ತೆಗೆಯಬೇಡಿ, ಈ ಕೆಲಸ ನನಗೆ ಬಹಳ ಮುಖ್ಯ, ನನಗೆ ಬಹಳ ಕಷ್ಟ ಇದೆ ಎಂದು ಕೈ ಮುಗಿದು ಕೇಳಿಕೊಳ್ಳುತ್ತಾಳೆ. ಆದರೆ ಸೂಪರ್‌ವೈಸರ್‌ ಭಾಗ್ಯಾ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ.

ಭಾಗ್ಯಾ ಪರ ಮಾತನಾಡಲು ಬರುವ ಹಿತಾಗೆ ಕೂಡಾ ಸೂಪರ್‌ವೈಸರ್‌ ಎಚ್ಚರಿಕೆ ನೀಡುತ್ತಾನೆ. ಆಕೆ ಪರ ನಿಂತರೆ ನಿಮ್ಮನ್ನೂ ಕೆಲಸದಿಂದ ತೆಗೆಯುತ್ತೇನೆ ಎಂದು ಎಚ್ಚರಿಸುತ್ತಾನೆ. ಇನ್ನೊಂದು ಕ್ಷಣ ಇಲ್ಲಿ ಇದ್ದರೂ ಪೊಲೀಸ್‌ಗೆ ಕರೆ ಮಾಡಬೇಕಾಗುತ್ತದೆ. ಗೆಟ್‌ ಔಟ್‌ ಎಂದು ಸೂಪರ್‌ವೈಸರ್‌ ಭಾಗ್ಯಾಗೆ ರೇಗುತ್ತಾನೆ. ಭಾಗ್ಯಾ ಕಣ್ಣೀರು ಹಾಕುತ್ತಲೇ ಅಲ್ಲಿಂದ ಹೊರಡುತ್ತಾಳೆ. ಭಾಗ್ಯಾ ಕೆಲಸ ಕಳೆದುಕೊಳ್ಳುತ್ತಾಳಾ ಅಥವಾ ಶ್ಯಾವಿಗೆ , ಮಾವಿನ ಹಣ್ಣಿನ ರಸಾಯನ ಮಾಡಿಕೊಟ್ಟು ಮತ್ತೆ ಹೋಟೆಲ್‌ನಲ್ಲಿ ಕೆಲಸ ವಾಪಸ್‌ ಪಡೆಯುತ್ತಾಳಾ ಕಾದು ನೋಡಬೇಕು.

ಟಿ20 ವರ್ಲ್ಡ್‌ಕಪ್ 2024