ಸ್ಟಾರ್ ಹೋಟೆಲ್‌ಗೆ ಟಿಪ್ ಟಾಪ್ ಆಗಿ ಇಂಟರ್‌ವ್ಯೂಗೆ ಬಂದಿದ್ದವರನ್ನು ನೋಡಿ ಗಾಬರಿಯಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 6ರ ಎಪಿಸೋಡ್‌ನಲ್ಲಿ ಸ್ಟಾರ್ ಹೋಟೆಲ್‌ಗೆ ಟಿಪ್ ಟಾಪ್ ಆಗಿ ಇಂಟರ್‌ವ್ಯೂಗೆ ಬಂದಿದ್ದವರನ್ನು ನೋಡಿ ಭಾಗ್ಯಾ ಗಾಬರಿ ಆಗುತ್ತಾಳೆ. ನನಗೆ ಈ ಕೆಲಸ ಸಿಗುವುದಾ ಇಲ್ಲವಾ ಎಂದು ಆತಂಕ ವ್ಯಕ್ತಪಡಿಸುತ್ತಾಳೆ.

Bhagyalakshmi Serial: ಹೇಗಾದರೂ ಮಾಡಿ ಕೆಲಸ ಪಡೆಯಬೇಕು, ಆ ದುಡ್ಡಿನಿಂದ ಶ್ರೇಷ್ಠಾ ಸಾಲ ತೀರಿಸಬೇಕು ಎಂದು ನಿರ್ಧರಿಸುವ ಭಾಗ್ಯಾ ಕೆಲಸ ಕೊಡಿಸುವಂತೆ ಬ್ರೋಕರ್ ಬಳಿ ಮನವಿ ಮಾಡುತ್ತಾಳೆ. ಆತನ ಸೂಚನೆಯಂತೆ ಭಾಗ್ಯಾ ಸ್ಟಾರ್ ಹೋಟೆಲ್‌ವೊಂದಕ್ಕೆ ಇಂಟರ್‌ವ್ಯೂ ಹೋಗುತ್ತಾಳೆ.
ಅಮ್ಮ ನಮಗೆ ಹೇಳದಂತೆ ಏನೋ ಮಾಡುತ್ತಿದ್ದಾಳೆ ಎಂದು ಅನುಮಾನ ವ್ಯಕ್ತಪಡಿಸುವ ತನ್ವಿ ಹಾಗೂ ತನ್ಮಯ್, ಅಮ್ಮನನ್ನು ಹಿಂಬಾಲಿಸಿಕೊಂಡು ಬರುತ್ತಾರೆ. ನಮ್ಮನ್ನು ಬಿಟ್ಟು ಹೋಟೆಲ್‌ಗೆ ಊಟ ಮಾಡಲು ಬಂದಿದ್ದಾಳಾ ಅಥವಾ ಏಕೆ ಬಂದಿದ್ದಾಳೆ ಅಂತ ಇಬ್ಬರೂ ಕನ್ಫ್ಯೂಸ್ ಆಗುತ್ತಾರೆ. ದುಡ್ಡು ಇಲ್ಲದಿದ್ದರೂ ಆಟೋ ಹತ್ತಿ ಬರುತ್ತಾರೆ. ದುಡ್ಡು ಕೊಡುವಂತೆ ಆಟೋ ಚಾಲಕ ಇಬ್ಬರನ್ನೂ ಹಿಂಬಾಲಿಸಿಕೊಂಡು ಬರುತ್ತಾನೆ. ನಿಮಗೆ ಕೊಡಲು ನಮ್ಮ ಬಳಿ ದುಡ್ಡು ಇಲ್ಲ, ಆದರೆ ಮತ್ತೆ ಮನೆಗೆ ವಾಪಸ್ ಬಿಟ್ಟರೆ ನಮ್ಮ ಅಜ್ಜಿ ನಿಮಗೆ ದುಡ್ಡು ಕೊಡುತ್ತಾರೆ ಎಂದು ಮಕ್ಕಳು ಮನವಿ ಮಾಡಿಕೊಳ್ಳುತ್ತಾರೆ. ಅದರಂತೆ ಆಟೋ ಚಾಲಕ ಇಬ್ಬರನ್ನೂ ಕೂರಿಸಿಕೊಂಡು ಮನೆ ಬಳಿ ವಾಪಸ್ ಬರುತ್ತಾನೆ.
ಮೊಮ್ಮಕ್ಕಳು ಬಂದ ಆಟೋದಲ್ಲೇ ಇಂಟರ್‌ವ್ಯೂಗೆ ಹೊರಟ ಕುಸುಮಾ
ತನ್ವಿ ಹಾಗೂ ತನ್ಮಯ್ ಆಟೋದಲ್ಲಿ ಬಂದು ಮನೆ ಬಳಿ ಇಳಿಯುವುದನ್ನು ನೋಡಿದ ಕುಸುಮಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಆಟೋದಲ್ಲಿ ಎಲ್ಲಿ ಹೋಗಿದ್ದೀರಿ ಎಂದು ಪ್ರಶ್ನಿಸುತ್ತಾಳೆ. ಏನು ಹೇಳಬೇಕೆಂದು ಗೊತ್ತಾಗದ ತನ್ವಿ ಹಾಗೂ ತನ್ಮಯ್ ಒಬ್ಬರ ಮೇಲೆ ಒಬ್ಬರು ಸುಳ್ಳು ಹೇಳುತ್ತಾರೆ. ಅಜ್ಜಿಯಿಂದ ತಪ್ಪಿಸಿಕೊಂಡು ಮನೆ ಒಳಗೆ ಓಡಿ ಹೋಗುತ್ತಾರೆ. ತಾನೂ ಕೂಡಾ ಇಂಟರ್‌ವ್ಯೂಗೆ ಹೋಗುವ ತರಾತುರಿಯಲ್ಲಿದ್ದ ಕಾರಣ ಕುಸುಮಾ, ಮಕ್ಕಳ ಕಡೆ ಅಷ್ಟೇನೂ ಗಮನ ಕೊಡುವುದಿಲ್ಲ. ನಾನು ಎಲ್ಲೋ ಹೋಗಬೇಕು, ಅಲ್ಲಿ ಬಿಟ್ಟರೆ ಎಲ್ಲಾ ದುಡ್ಡನ್ನು ಕೊಡುವುದಾಗಿ ಕುಸುಮಾ ಆಟೋ ಚಾಲಕನಿಗೆ ಹೇಳಿ ತಾನೂ ಆಟೋ ಹತ್ತುತ್ತಾಳೆ.
ಇತ್ತ ಹೋಟೆಲ್ ಒಳಗೆ ಬರುವ ಭಾಗ್ಯಾಗೆ ಎತ್ತ ಹೋಗಬೇಕೆಂದು ತಿಳಿಯುವುದಿಲ್ಲ. ರಿಸಪ್ಷನ್ ಬಳಿ ಹೋಗಿ ಕೇಳಿದಾಗ ಆಕೆ ಮಾತನಾಡುವ ಇಂಗ್ಲೀಷ್‌ಗೆ ಉತ್ತರ ಹೇಳಲಾಗದೆ ತಡಬಡಾಯಿಸುತ್ತಾಳೆ. ತನಗೆ ಬರುವ ಇಂಗ್ಲೀಷ್‌ನಲ್ಲೇ ತಾನು ಕೆಲಸದ ಇಂಟರ್‌ವ್ಯೂಗೆ ಬಂದಿರುವುದಾಗಿ ಹೇಳುತ್ತಾಳೆ. ಅಲ್ಲಿ ಟಿಪ್ ಟಾಪ್ ಆಗಿ ಇಂಟರ್‌ವ್ಯೂಗೆ ಬಂದಿದ್ದವರನ್ನು ನೋಡಿ ಗಾಬರಿ ಆಗುತ್ತಾಳೆ. ಅಲ್ಲಿದ್ದವರಲ್ಲಿ ಒಬ್ಬಾಕೆ ಭಾಗ್ಯಾಗೆ ಪರಿಚಯವಾಗುತ್ತಾಳೆ. ಕನ್ನಡದಲ್ಲಿ ಮಾತನಾಡುವ ಭಾಗ್ಯಾಳನ್ನು ನೋಡಿ, ಇಲ್ಲಿದ್ದವರಲ್ಲಿ ಯಾರಿಗೂ ಕನ್ನಡ ಬರುವುದಿಲ್ಲ ಎಂದುಕೊಂಡಿದ್ದೆ ಆದರೆ ನಿಮಗಾದರೂ ಕನ್ನಡ ಬರುತ್ತೆ ಅದನ್ನು ಕೇಳಿ ಬಹಳ ಖುಷಿ ಆಯ್ತು ಎಂದು ಆ ಯುವತಿ ಹೇಳುತ್ತಾಳೆ.
ಇಂಟರ್‌ವ್ಯೂಗೆ ಬಂದಿದ್ದವರನ್ನು ನೋಡಿ ಗಾಬರಿಯಾದ ಭಾಗ್ಯಾ
ಯಾವುದಕ್ಕೂ ಗೋಪಾಲಣ್ಣನಿಗೆ ಕರೆ ಮಾಡೋಣ ಎಂದುಕೊಂಡ ಭಾಗ್ಯಾ ಬ್ರೋಕರ್‌ಗೆ ಕರೆ ಮಾಡಿ ಇಲ್ಲಿ ಬಹಳ ಜನ ಇಂಟರ್‌ವ್ಯೂಗೆ ಬಂದಿದ್ದಾರೆ, ನನಗೆ ಕೆಲಸ ಸಿಗುವುದು ಗ್ಯಾರಂಟಿನಾ ಎಂದು ಕೇಳುತ್ತಾಳೆ. ನಾನು ಕೆಲಸ ಕೊಡಿಸುವುದು ಕನ್ಫರ್ಮ್ ಆದರೆ ಮಾತ್ರ ಹೇಳೋದು ಇಲ್ಲದಿದ್ದರೆ ಹೇಳುವುದಿಲ್ಲ, ನೀನು ಅಲ್ಲೇ ಇರು ನಾನು ಇನ್ನು 10 ನಿಮಿಷದಲ್ಲಿ ಅಲ್ಲಿಗೆ ಬರುವೆ ಎನ್ನುತ್ತಾನೆ. ಭಾಗ್ಯಾ ಕೂಡಾ ಗೊಂದಲದಿಂದಲೇ ತಲೆ ಆಡಿಸುತ್ತಾಳೆ. ಆದರೆ ಗೋಪಾಲ ಹೇಳಿದ್ದೇ ಬೇರೆ, ಭಾಗ್ಯಾ ಬಂದಿರುವುದೇ ಬೇರೆ ಹೋಟೆಲ್‌ಗೆ ಎಂಬ ಸತ್ಯ ಇನ್ನೂ ಇಬ್ಬರಿಗೂ ಗೊತ್ತಿಲ್ಲ.
ಭಾಗ್ಯಾ, ಸ್ಟಾರ್ ಹೋಟೆಲ್‌ನಲ್ಲಿ ಇಂಟರ್‌ವ್ಯೂ ಎದುರಿಸುತ್ತಾಳಾ? ಆಕೆ ಕೆಲಸ ಹುಡುಕಿ ಹೋಗಿರುವುದು ಕುಸುಮಾಗೆ ತಿಳಿಯುವುದಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
