ಶ್ರೇಷ್ಠಾ ಮದುವೆ ಆಗುತ್ತಿರುವ ಹುಡುಗನ ಕೆನ್ನೆಗೆ ಬಾರಿಸಬೇಕು, ಭಾಗ್ಯಾ ಮಾತಿಗೆ ತಾಂಡವ್ ಮನಸ್ಸಿನಲ್ಲಿ ನಡುಕ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆ.7ರ ಎಪಿಸೋಡ್‌ನಲ್ಲಿ ನನ್ನ ಮದುವೆ ವಿಚಾರಕ್ಕೆ ತಲೆ ಹಾಕದಂತೆ ಭಾಗ್ಯಾಗೆ ಶ್ರೇಷ್ಠಾ ವಾರ್ನಿಂಗ್ ಮಾಡುತ್ತಾಳೆ. ಶ್ರೇಷ್ಠಾ ಮದುವೆ ಆಗುತ್ತಿರುವುದು ತಾಂಡವ್ ಎಂದು ತಿಳಿಯದೆ ಕುಸುಮಾ, ಭಾಗ್ಯಾ ತನ್ನನ್ನೇ ಬೈಯ್ಯುವುದು ತಾಂಡವ್‌ಗೆ ಮುಜುಗರವಾಗುತ್ತದೆ.
Bhagyalakshmi Serial: ಶ್ರೇಷ್ಠಾ, ಎರಡನೇ ಮದುವೆ ಆಗುತ್ತಿದ್ದಾಳೆ. ಅವಳು ಮದುವೆ ಆಗುತ್ತಿರುವ ಹುಡುಗನಿಗೆ ಆಗಲೇ ಮದುವೆ ಆಗಿದೆ. ಹೆಂಡತಿ ಮಕ್ಕಳು ಜೊತೆಯಲ್ಲೇ ಇದ್ದಾರೆ ಎಂದು ತಿಳಿದ ಭಾಗ್ಯಾಗೆ ಕೋಪ ಬರುತ್ತದೆ. ಹೆಂಡತಿ ಬದುಕಿರುವಾಗಲೇ ಮತ್ತೊಂದು ಮದುವೆ ಆಗಲು ಹೊರಟಿರುವ ಆ ವ್ಯಕ್ತಿಯ ಬಗ್ಗೆ ಹಾಗೂ ಮತ್ತೊಬ್ಬರ ಮನೆ ಹಾಳು ಮಾಡುತ್ತಿರುವ ಶ್ರೇಷ್ಠಾಗೆ ಭಾಗ್ಯಾ ಬುದ್ಧಿ ಹೇಳಲು ಪ್ರಯತ್ನಿಸುತ್ತಾಳೆ.
ಭಾಗ್ಯಾಗೆ ಎಚ್ಚರಿಕೆ ನೀಡಿದ ಶ್ರೇಷ್ಠಾ
ನೀನು ಮದುವೆ ಆಗುತ್ತಿರುವ ಹುಡುಗನನ್ನು ಪರಿಚಯಿಸು ಎಂದು ಭಾಗ್ಯಾ ಶ್ರೇಷ್ಠಾಳನ್ನು ಕೇಳುತ್ತಾಳೆ. ಆದರೆ ಶ್ರೇಷ್ಠಾ ಭಾಗ್ಯಾ ಜೊತೆಗೆ ಅವಳ ಮನೆಗೇ ಬರುತ್ತಾಳೆ. ನನಗೂ ಈ ಮನೆಗೂ ಸಂಬಂಧ ಇದೆ. ನಾನೂ ಕೂಡಾ ಈ ಮನೆಗೇ ಸೇರಿದವಳು ಎನ್ನುತ್ತಾಳೆ. ಶ್ರೇಷ್ಠಾ ಮಾತನ್ನು ಕೇಳಿ ಭಾಗ್ಯಾ ಹಾಗೂ ಮನೆಯವರು ಕೋಪಗೊಳ್ಳುತ್ತಾರೆ. ಇಲ್ಲ ಈ ಮನೆಗೂ ನಿನಗೂ ಸಂಬಂಧವಿಲ್ಲ. ನೀನು ಯಾವಾಗ ಲಕ್ಷ್ಮೀ ಮದುವೆಗೆಂದು ಕೂಡಿಟ್ಟ ಹಣ ಕದ್ದೆಯೋ ಅಂದಿನಿಂದ ನಿನಗೂ ಈ ಮನೆಗೂ ಇರುವ ಋಣ ಮುಗಿದುಹೋಯಿತು ಎಂದು ಕುಸುಮಾ ಹೇಳುತ್ತಾಳೆ. ನನಗೂ ಈ ಮನೆಗೂ ಸಂಬಂಧ ಇಲ್ಲ ಎಂದಾದರೆ ನನಗೂ ನಿಮಗೂ ಏನು ಸಂಬಂಧ? ನನ್ನ ಮದುವೆಗೂ ನಿಮಗೂ ಏನು ಸಂಬಂಧ ಎಂದು ಶ್ರೇಷ್ಠಾ ಪ್ರಶ್ನಿಸುತ್ತಾಳೆ.
ನಾನು ಒಂದಲ್ಲಾ, ಹತ್ತು ಮದುವೆ ಆಗುತ್ತೇನೆ. ನನ್ನ ಮದುವೆ ವಿಚಾರದಲ್ಲಿ ನೀವೇಲ್ಲಾ ಏಕೆ ಇಷ್ಟು ತಲೆ ಕೆಡಿಸಿಕೊಂಡಿದ್ದೀರಿ. ನನ್ನ ಮದುವೆ ನನ್ನಿಷ್ಟ ಎಂದು ಶ್ರೇಷ್ಠಾ ಭಾಗ್ಯಾ ಮುಂದೆ ದನಿ ಏರಿಸುತ್ತಾಳೆ. ನಿನ್ನ ಮದುವೆ ನಿನ್ನಿಷ್ಟ ಆದರೂ ಒಂದು ಹೆಣ್ಣಿನ ಜೀವನ ಹಾಳು ಮಾಡಿ ಮತ್ತೊಂದು ಮದುವೆ ಆಗುತ್ತಿರುವುದು ಸರಿಯಲ್ಲ ಎಂದು ಭಾಗ್ಯಾ ಹೇಳುತ್ತಾಳೆ. ಆದರೆ ಶ್ರೇಷ್ಠಾ, ಮಾತ್ರ ತಾನು ಮಾಡಿದ್ದೇ ಸರಿ ಎಂಬ ಹಟದಲ್ಲಿದ್ದಾಳೆ. ಯಾರೂ ನನ್ನ ವೈಯಕ್ತಿಕ ವಿಚಾರಕ್ಕೆ ತಲೆ ಹಾಕಬಾರದು ಎಂದು ಶ್ರೇಷ್ಠಾ ಭಾಗ್ಯಾಗೆ ವಾರ್ನಿಂಗ್ ಮಾಡಿ ಅಲ್ಲಿಂದ ಹೋಗುತ್ತಾಳೆ.
ತಾಂಡವ್‌ನನ್ನು ತರಾಟೆಗೆ ತೆಗೆದುಕೊಂಡ ಭಾಗ್ಯಾ, ಕುಸುಮಾ
ಇವಳಿಗೆ ಹೇಳಿ ಪ್ರಯೋಜನ ಇಲ್ಲ, ಶ್ರೇಷ್ಠಾಳನ್ನು ಮದುವೆ ಆಗಲು ಹೊರಟಿದ್ದಾನಲ್ಲ ಆ ಹುಡುಗನಿಗೆ ಹೇಳಬೇಕು ಎಂದು ಕುಸುಮಾ ಹೇಳುತ್ತಾಳೆ. ಅತ್ತೆ ಮಾತಿಗೆ ದನಿಗೂಡಿಸುವ ಭಾಗ್ಯಾ, ಹೌದು ಹೆಂಡತಿ ಮಕ್ಕಳಿದ್ದರೂ ಆ ವ್ಯಕ್ತಿಗೆ ಎರಡನೇ ಮದುವೆ ಏಕೆ, ಅವನು ನನ್ನ ಮುಂದೆ ಬಂದರೆ ಕಪಾಳಮೋಕ್ಷ ಮಾಡುತ್ತೇನೆ ಎನ್ನುತ್ತಾಳೆ. ಭಾಗ್ಯಾ ಮಾತಿಗೆ ತಾಂಡವ್‌ಗೆ ಮನಸ್ಸಿನ ಒಳಗೆ ನಡುಕ ಉಂಟಾಗುತ್ತದೆ. ಅವರಿಗೆ ಏಕೆ ಈ ರೀತಿ ಬೈಯ್ಯುತ್ತಿದ್ದೀಯ ಸುಮ್ಮನಿರು ಎಂದು ತಾಂಡವ್ ಹೇಳುತ್ತಾನೆ. ನಾನು ಆ ವ್ಯಕ್ತಿಗೆ ಬೈದರೆ ನೀವು ಏಕೆ ತಲೆ ಕೆಡಿಸಿಕೊಳ್ಳುತ್ತೀರಿ ಎಂದು ಭಾಗ್ಯಾ ಪ್ರಶ್ನಿಸುತ್ತಾಳೆ. ಸರಿ ನಿನ್ನಿಷ್ಟ ಬಂದಂತೆ ಮಾಡಿಕೋ ಎಂದು ತಾಂಡವ್ ಅಲ್ಲಿಂದ ಹೋಗುತ್ತಾನೆ.
ಶ್ರೇಷ್ಠಾ ಮದುವೆ ಆಗಲು ಹೊರಟಿರುವುದು ನನ್ನ ಗಂಡನನ್ನೇ ಎಂಬ ಸತ್ಯ ಭಾಗ್ಯಾಗೆ ಯಾವಾಗ ಗೊತ್ತಾಗುತ್ತೆ? ಮದುವೆ ನಿಲ್ಲಿಸಲು ಯಾರು ಏನು ಪ್ಲ್ಯಾನ್ ಮಾಡುತ್ತಾರೆ, ಮುಂದಿನ ಎಪಿಸೋಡ್‌ಗಳಲ್ಲಿ ಕಾದು ನೋಡಬೇಕು.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್