ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 7th March 2024 Episode Bhagya Back To Husband Home Rsm

Bhagyalakshmi Serial: ಮತ್ತೆ ಗಂಡನ ಮನೆ ಸೇರಿದ ಭಾಗ್ಯಾ, ಮನೆಯವರಿಂದ ಅದ್ದೂರಿ ಮದುವೆ ವಾರ್ಷಿಕೋತ್ಸವ ಪ್ಲಾನ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 7ರ ಸಂಚಿಕೆ ಹೀಗಿದೆ. ರೆಸಾರ್ಟ್‌ನಿಂದ ಭಾಗ್ಯಾ ಮತ್ತೆ ಗಂಡನ ಮನೆಗೆ ಬರುತ್ತಾಳೆ. ಮನೆಯಲ್ಲಿ ತಾಂಡವ್‌-ಭಾಗ್ಯಾ 16ನೇ ವರ್ಷದ ಮದುವೆ ವಾರ್ಷಿಕೋತ್ಸವ ಮಾಡಲು ಮನೆಯವರು ಪ್ಲಾನ್‌ ಮಾಡುತ್ತಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 7ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 7ರ ಸಂಚಿಕೆ (PC: Colors Kannada)

Bhagyalakshmi Kannada Serial: ರೆಸಾರ್ಟ್‌ನಲ್ಲಿ ಕುಸುಮಾ, ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಉತ್ತಮ ಸಮಯ ಕಳೆದಿದ್ದಾರೆ. ಮೊದಲ ಬಾರಿ ಎಲ್ಲರೂ ಜೊತೆಗೆ ಬಂದಿದ್ದರಿಂದ ಗುಂಡಣ್ಣ ಕೂಡಾ ಖುಷಿಯಾಗಿದ್ದಾನೆ. ಅಪ್ಪ-ಅಮ್ಮ ಜೊತೆಯಾಗಿ ಡ್ಯಾನ್ಸ್‌ ಮಾಡಿದ್ದಕ್ಕೆ ತನ್ವಿ, ತನ್ಮಯ್‌ ಕುಣಿದು ಕುಪ್ಪಳಿಸುತ್ತಿದ್ಧಾರೆ. ಮಕ್ಕಳು ಖುಷಿಯಾಗಿರುವುದನ್ನು ನೋಡಿ ಭಾಗ್ಯಾ ಕೂಡಾ ಖುಷಿಯಾಗುತ್ತಾಳೆ. ‌

ಭಾಗ್ಯಾ ಡ್ಯಾನ್ಸ್‌ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿನ್ನ ಹೆಂಡತಿ ಡ್ಯಾನ್ಸ್‌ ಹೇಗಿತ್ತು ಹೇಳು, ಅವಳ ಬಗ್ಗೆ ಏನಾದರೂ ಮಾತನಾಡು ಎಂದು ಕುಸುಮಾ ಕೇಳಿದಾಗ ತಾಂಡವ್‌ ಮುಜುಗರದಿಂದಲೇ ಭಾಗ್ಯಾಳನ್ನು ಹೊಗಳುತ್ತಾನೆ. ಡ್ಯಾನ್ಸ್‌ ಚೆನ್ನಾಗಿತ್ತು ಎನ್ನುತ್ತಾನೆ. ಗಂಡನ ಹೊಗಳಿಕೆಯಿಂದ ಭಾಗ್ಯಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಆದರೆ ಶ್ರೇಷ್ಠಾ ಮಾತ್ರ ಕೋಪಗೊಳ್ಳುತ್ತಾಳೆ. ನಾನು ಮಕ್ಕಳಿಗೆ ಐಸ್‌ಕ್ರೀಮ್‌ ತರುತ್ತೇನೆ ಎಂದು ಭಾಗ್ಯಾ ಅಲ್ಲಿಂದ ಎದ್ದು ಹೋಗುತ್ತಾಳೆ. ನೀನೂ ಹೋಗು ಎಂದು ಕುಸುಮಾ ತಾಂಡವ್‌ನನ್ನು ಭಾಗ್ಯಾ ಹಿಂದೆ ಕಳಿಸುತ್ತಾಳೆ. ಅಂತೂ ಭಾಗ್ಯಾ ಮತ್ತೆ ವಾಪಸ್‌ ಬಂದಿದ್ದು ಖುಷಿ ಆಯ್ತು ಎಂದು ಕುಸುಮಾ, ಸುನಂದಾ ಸಂತೋಷ ವ್ಯಕ್ತಪಡಿಸುವಾಗ ಗುಂಡಣ್ಣ ನಮ್ಮ ಪ್ಲಾನ್‌ ಅಂದ್ರೆ ಸುಮ್ನೇನಾ ಎನ್ನುತ್ತಾನೆ.

ಮನೆಯವರು ಮಾಡ್ತಿರೋ ಪ್ಲಾನ್‌ ಬಗ್ಗೆ ಶ್ರೇಷ್ಠಾಗೆ ಅನುಮಾನ

ಗುಂಡಣ್ಣ ತಾವು ಮಾಡಿದ ಪ್ಲಾನ್‌ ಬಗ್ಗೆ ಮಾತನಾಡಿ ನಂತರ ಗಾಬರಿ ಆಗುತ್ತಾನೆ. ಇವರೆಲ್ಲಾ ಏನು ಮಾತನಾಡುತ್ತಿದ್ದಾರೆ ಎಂದು ಶ್ರೇಷ್ಠಾಗೆ ಗೊಂದಲ ಆಗುತ್ತದೆ. ಅಷ್ಟರಲ್ಲಿ ಪೂಜಾ ಪರಿಸ್ಥಿತಿಯನ್ನು ಮ್ಯಾನೇಜ್‌ ಮಾಡುತ್ತಾಳೆ. ಇತ್ತ ಭಾಗ್ಯಾ ಹಿಂದೆ ಬರುವ ತಾಂಡವ್‌ ಮತ್ತೆ ಅವಳನ್ನು ಹೊಗಳುತ್ತಾನೆ. ನಿನಗೆ ಇದೆಲ್ಲಾ ಹೇಗೆ ಗೊತ್ತು? ಬಹಳ ಚೆನ್ನಾಗಿ ಡ್ಯಾನ್ಸ್‌ ಮಾಡಿದೆ ಎನ್ನುತ್ತಾನೆ. ನನಗೆ ಭರತನಾಟ್ಯ ಮಾತ್ರ ಬರೋದು, ಈ ರೀತಿಯ ಡ್ಯಾನ್ಸ್‌ ಎಂದಿಗೂ ಮಾಡಿಲ್ಲ. ಇಂದು ಮಕ್ಕಳಿಗಾಗಿ ಮಾಡಿದ್ದು ಅಷ್ಟೇ ಎನ್ನುತ್ತಾಳೆ. ನಾನು ಹೊಗಳಿದೆ ಎಂದ ಮಾತ್ರಕ್ಕೆ ನೀನು ಖುಷಿಪಡುವ ಅಗತ್ಯವಿಲ್ಲ. ನಾನು ಮಕ್ಕಳಿಗಾಗಿ ಮಾತ್ರ ಎಲ್ಲವನ್ನೂ ಮಾಡುತ್ತಿರುವುದು ಎಂದು ತಾಂಡವ್‌ ಭಾಗ್ಯಾಗೆ ಹೇಳುತ್ತಾನೆ. ಭಾಗ್ಯಾ ಕೂಡಾ ನಾನೂ ಮಕ್ಕಳಿಗಾಗಿ ಮಾಡುತ್ತಿರುವುದು, 16 ವರ್ಷಗಳಿಂದ ಬಯಸಲಿಲ್ಲ, ಇನ್ನು ಮುಂದೆಯೂ ನಿಮ್ಮ ಪ್ರೀತಿ ಬಯಸುವುದಿಲ್ಲ ಎನ್ನುತ್ತಾಳೆ.

ಅಂತೂ ಭಾಗ್ಯಾ ಮತ್ತೆ ಗಂಡನ ಮನೆ ಸೇರುತ್ತಾಳೆ. ಎಂದಿನಂತೆ ಭಾಗ್ಯಾ ಮುಂಜಾನೆ ಬೇಗ ಎದ್ದು ಮನೆ ಕೆಲಸಗಳ ಕಡೆ ಗಮನ ಕೊಡುತ್ತಾಳೆ. ರಾತ್ರಿ ತಡವಾದ್ದರಿಂದ ಶ್ರೇಷ್ಠಾ ಕೂಡಾ ತಾಂಡವ್‌ ಮನೆಗೆ ಬಂದು ಉಳಿದುಕೊಳ್ಳುತ್ತಾಳೆ. ನನ್ನ ಅಕ್ಕನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಈ ಮನೆಯಲ್ಲಿ ಅತ್ತೆ , ನಮ್ಮ ಅಕ್ಕ ಇರೋದ್ರಿಂದಲೂ ಎಲ್ಲರೂ ಚೆನ್ನಾಗಿರುವುದು ಎನ್ನುತ್ತಾಳೆ. ಇನ್ನು ನಾನು ಹೊರಡುತ್ತೇನೆ ಎಂದು ಶ್ರೇಷ್ಠಾ ಹೇಳಿದಾಗ, ರಾತ್ರಿ ತಡವಾಯ್ತು ಅಂತ ನಿಮಗೆ ಮನೆಗೆ ಬರಲು ಹೇಳಿದ್ದು, ಇಲ್ಲೇ ನಿಮ್ಮನ್ನು ಶಾಶ್ವತವಾಗಿ ಉಳಿಸಿಕೊಳ್ಳೋಕೆ ಆಗುತ್ತಾ ಎಂದು ಕೊಂಕು ಮಾತನಾಡುತ್ತಾಳೆ. ಕೋಪದಿಂದಲೇ ಶ್ರೇಷ್ಠಾ ಅಲ್ಲಿಂದ ಎದ್ದು ಹೋಗುತ್ತಾಳೆ.

ವೆಡ್ಡಿಂಗ್‌ ಆನಿವರ್ಸರಿ ಪ್ಲಾನ್‌

ತಾಂಡವ್‌ ಕೂಡಾ ಆಫೀಸಿಗೆ ಹೊರಡಲು ಕೆಳಗಿಳಿದು ಬರುತ್ತಾನೆ. ಆದರೆ ಧರ್ಮರಾಜ್‌ ಹಾಗೂ ಕುಸುಮಾ ತಾಂಡವ್‌ನನ್ನು ತಡೆಯುತ್ತಾರೆ. ನಿನ್ನ ಮದುವೆ ವಾರ್ಷಿಕೋತ್ಸವ ಮಾಡಬೇಕೆಂದು ಪ್ಲಾನ್‌ ಮಾಡುತ್ತಿದ್ದೇವೆ. ಸ್ವಲ್ಪ ಸಮಯ ನಿನ್ನೊಂದಿಗೆ ಮಾತನಾಡಬೇಕು ಎನ್ನುತ್ತಾರೆ. ಆದರೆ ತಾಂಡವ್‌ಗೆ ಇದೆಲ್ಲಾ ಇಷ್ಟವಿರುವುದಿಲ್ಲ. ಮಕ್ಕಳು ಕೂಡಾ ವೆಡ್ಡಿಂಗ್‌ ಆನಿವರ್ಸರಿ ಕಾರ್ಯಕ್ರಮಕ್ಕೆ ಮನವಿ ಮಾಡುತ್ತಾರೆ. ಅಂತೂ ಸರಳವಾಗಿ, ತಾಂಡವ್‌ ಭಾಗ್ಯಾ ಮದುವೆ ರೀ ಕ್ರಿಯೇಟ್‌ ಮಾಡಲು ನಿರ್ಧಾರವಾಗುತ್ತದೆ.

ಮನೆಯವರ ಸಂತೋಷ ಹಾಳು ಮಾಡಲು ಶ್ರೇಷ್ಠಾ ಏನು ಹೊಸ ಪ್ಲಾನ್‌ ಮಾಡುತ್ತಾಳೆ. ಅಂದುಕೊಂಡಂತೆ ಭಾಗ್ಯಾ ತಾಂಡವ್‌ ಮದುವೆ ಆನಿವರ್ಸರಿ ನಡೆಯುವುದಾ ಕಾದು ನೋಡಬೇಕು.

IPL_Entry_Point