ಕೆಲಸಕ್ಕಾಗಿ ಅಲೆಯುತ್ತಿರುವ ಭಾಗ್ಯಾ, ಕುಸುಮಾ; ಇತ್ತ ತಾಂಡವ್ ಜೊತೆ ಡೇಟಿಂಗ್ ಹೊರಟ ಶ್ರೇಷ್ಠಾ; ಭಾಗ್ಯಲಕ್ಷ್ಮಿ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 7ರ ಎಪಿಸೋಡ್; ಭಾಗ್ಯಾ, ಕುಸುಮಾ ಕೆಲಸಕ್ಕಾಗಿ ಅಲೆದಾಡುತ್ತಿದ್ದರೆ ಮತ್ತೊಂದೆಡೆ ಶ್ರೇಷ್ಠಾ, ತಾಂಡವ್ ಜೊತೆ ಡೇಟಿಂಗ್ ಹೊರಟಿದ್ಧಾಳೆ.
Bhagyalakshmi Serial: ಭಾಗ್ಯಾ ಹಾಗೂ ಕುಸುಮಾ ಕೆಲಸ ಹುಡುಕಾಟದಲ್ಲಿದ್ಧಾರೆ. ಸೊಸೆಯನ್ನು ಮನೆಯಲ್ಲಿ ಬಿಟ್ಟು ತಾನು ಕೆಲಸಕ್ಕೆ ಹೋಗಬೇಕೆಂದು ಕುಸುಮಾ ನಿರ್ಧರಿಸಿದರೆ, ಭಾಗ್ಯಾ ಅತ್ತೆಗೆ ತಿಳಿಯದಂತೆ ಆಗಲೇ ಇಂಟರ್‌ವ್ಯೂಗೆ ಬಂದಿದ್ದಾಳೆ. ಭಾಗ್ಯಾ ನಿಜವಾಗಿಯೂ ದೇವಸ್ಥಾನಕ್ಕೆ ಹೋಗಿದ್ಧಾಳೆ ಎಂದು ತಿಳಿದ ಕುಸುಮಾ ಬ್ರೋಕರ್ ಹೇಳಿದ ಹೋಟೆಲ್ ಬಳಿ ಕೆಲಸಕ್ಕೆ ಬಂದಿದ್ದಾಳೆ.
ಮೊಮ್ಮಕ್ಕಳು ಓಡಾಡಿದ ಆಟೋದಲ್ಲೇ ಹೋಟೆಲ್ ಬಳಿ ಬರುವ ಕುಸುಮಾ ಆಟೋ ಚಾರ್ಜ್ ಕೇಳಿ ಗಾಬರಿ ಆಗುತ್ತಾಳೆ. ಇಷ್ಟು ದುಡ್ಡು ಏಕೆ ಕೊಡಬೇಕು ಎನ್ನುತ್ತಾಳೆ. ನಿಮ್ಮ ಮೊಮ್ಮಕ್ಕಳು ಇದೇ ಜಾಗಕ್ಕೆ ಬಂದಿದ್ದರು. ಅವರು ನಿಮ್ಮನ್ನು ಸೇರಿಸಿ 3 ಸುತ್ತು ಓಡಾಡಿಸಿದ್ದೇನೆ ಎಂದು ಆಟೋ ಚಾಲಕ ಹೇಳಿದಾಗ ಕುಸುಮಾ ಆತನ ಬಳಿ ವಾದ ಮಾಡುತ್ತಾಳೆ. ಸುಳ್ಳು ಹೇಳಬೇಡಿ, ನನ್ನ ಮೊಮ್ಮಕ್ಕಳು ಇಲ್ಲಿಗೆ ಏಕೆ ಬರುತ್ತಾರೆ ಎಂದು ಕೇಳುತ್ತಾಳೆ. ನಿಮ್ಮ ಬಳಿ ಸುಳ್ಳು ಹೇಳಿ ಹಣ ಪಡೆಯುವ ಉದ್ದೇಶ ನನಗೆ ಇಲ್ಲ, ದಯವಿಟ್ಟು ಹಣ ನೀಡಿ ಎಂದು ಆಟೋ ಚಾಲಕ ಮನವಿ ಮಾಡುತ್ತಾನೆ. ಕುಸುಮಾ ಆತನಿಗೆ ದುಡ್ಡು ಕೊಟ್ಟು ಗೋಪಾಲನ ಬಳಿ ಬರುತ್ತಾಳೆ.
ಭಾಗ್ಯಾಗಾಗಿ ಕಾದು ನಿಂತ ಗೋಪಾಲಣ್ಣ
ಮತ್ತೊಬ್ಬರು ಕೆಲಸ ಕೇಳಿಕೊಂಡು ಕರೆ ಮಾಡಿದ್ದರು, ಅವರೂ ಬರಲಿ ಒಳಗೆ ಹೋಗೋಣ ಎಂದು ಕೆಲಸದ ಬ್ರೋಕರ್ ಹೇಳಿದಾಗ ಕುಸುಮಾಗೆ ಅನುಮಾನ ಉಂಟಾಗುತ್ತದೆ. ಆದರೂ, ಬೇರೆ ಯಾರಾದರೂ ಬಂದರೆ ನನಗೆ ಕೆಲಸ ದೊರೆಯುವುದಿಲ್ಲ ಎಂಬ ಕಾರಣಕ್ಕೆ ಅವರು ಬರುವುದಾದರೆ ಈಗಲೇ ಬರಬೇಕಿತ್ತು, ಇಂಟರ್‌ವ್ಯೂಗೆ ಸಮಯಕ್ಕೆ ಸರಿಯಾಗಿ ಬರದವರು ಕೆಲಸಕ್ಕೆ ಹೇಗೆ ಬರುತ್ತಾರೆ ಎನ್ನುತ್ತಾಳೆ. ಇರಿ, ನನಗೆ ಬರುವ ಕಮಿಷನ್‌ಗೆ ಕಲ್ಲು ಹಾಕಬೇಡಿ ಎಂದು ಬ್ರೋಕರ್, ಭಾಗ್ಯಾಗೆ ಕರೆ ಮಾಡುತ್ತಾನೆ. ಆದರೆ ಜೋರಾಗಿ ಮಾತನಾಡಬಾರದು ಎಂದು ಹೋಟೆಲ್ ರಿಸೆಪ್ಷನಿಸ್ಟ್ ಹೇಳಿದ ಮಾತುಗಳನ್ನು ನೆನಪಿಸಿಕೊಂಡು ಭಾಗ್ಯಾ ಕಾಲ್ ರಿಸೀವ್ ಮಾಡುವುದಿಲ್ಲ.
ಇತ್ತ ಭಾಗ್ಯಾಗೆ ಹೋಟೆಲ್‌ನಲ್ಲಿ ಪರಿಚಯವಾಗುವ ಹಿತ, ನೀವು ಯಾವ ಹೋಟೆಲ್‌ನಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದ್ದು ಎಂದು ಕೇಳುತ್ತಾಳೆ. ಆದರೆ ಭಾಗ್ಯಾಗೆ ಆಕೆ ಏನು ಕೇಳುತ್ತಿದ್ದಾಳೆ ಎಂದು ಅರ್ಥವಾಗುವುದಿಲ್ಲ. ನನಗೆ ಈ ಕೆಲಸ ಬಹಳ ಮುಖ್ಯ, ಅಪ್ಪನ ಹಣದಲ್ಲಿ ಬದುಕುತ್ತಿದ್ದಾಳೆ ಎಂಬ ಮಾತು ಕೇಳಲು ನನಗೆ ಇಷ್ಟವಿಲ್ಲ ಎಂದು ಹಿತ ಹೇಳಿದಾಗ ಭಾಗ್ಯಾ, ಆಕೆಗೆ ಧೈರ್ಯ ಹೇಳಿ ಕಳಿಸುತ್ತಾಳೆ. ಅಲ್ಲಿಂದ ವಾಪಸ್ ಬಂದ ನಂತರ ಹಿತ, ನನಗೆ ಕೆಲಸ ಸಿಕ್ಕಿದ್ದಾಗಿ ಸಂತೋಷ ವ್ಯಕ್ತಪಡಿಸುತ್ತಾಳೆ. ನಂತರ ಭಾಗ್ಯಾಳನ್ನು ಕರೆಯಲಾಗುತ್ತದೆ. ಆದರೆ ಭಾಗ್ಯಾ ಎಂದು ಕರೆಯುವ ಬದಲಿಗೆ ಭಗಾಯಾ ಎಂದು ಕರೆಯಲಾಗುತ್ತದೆ. ನನ್ನ ಹೆಸರನ್ನು ಹೀಗೇಕೆ ಕರೆಯುತ್ತಿದ್ದಾರೆ ಎಂಬ ಅನುಮಾನದಿಂದಲೇ ಭಾಗ್ಯಾ ಒಳಗೆ ಹೋಗುತ್ತಾಳೆ.
ತಾಂಡವ್ ಜೊತೆ ಶ್ರೇಷ್ಠಾ ಡೇಟಿಂಗ್
ಮತ್ತೊಂದೆಡೆ ಶ್ರೇಷ್ಠಾ, ತಾಂಡವ್‌ಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಾಳೆ. ಆದರೆ ಮನೆಯಲ್ಲಿ ಪೂಜಾ ಹಾಗೂ ಸುಂದರಿ ಇರುವ ಕಾರಣ ತಾಂಡವ್ ಅಲ್ಲಿಗೆ ಬರಲು ಒಪ್ಪುವುದಿಲ್ಲ. ಬೇಕಾದರೆ ಹೊರಗೆ ಮೀಟ್ ಮಾಡುತ್ತೇನೆ ಎನ್ನುತ್ತಾಳೆ. ತಾಂಡವ್‌ನನ್ನು ಭೇಟಿ ಮಾಡಲು ಶ್ರೇಷ್ಠಾ, ಸೀರೆ ಉಟ್ಟು ಹೋಗುತ್ತಾಳೆ. ಆಕೆ ಹೋಗುವಾಗ ಪೂಜಾ, ಎಲ್ಲಿಗೆ ಹೋಗುತ್ತಿದ್ದೀಯ ಎಂದು ಕೇಳುತ್ತಾಳೆ. ನಾನು ಎಲ್ಲಿಗಾದರೂ ಹೋಗುತ್ತೇನೆ, ಅದನ್ನು ಕೇಳಲು ನೀನು ಯಾರು ಎಂದು ಶ್ರೇಷ್ಠಾ ಉತ್ತರಿಸುತ್ತಾಳೆ. ಪೂಜಾ ಬಳಿ ಬರುವ ಸುಂದರಿ ಅವಳು ಹೇಳಿ ಹೋಗುವುದಿಲ್ಲ, ಆದರೆ ಎಲ್ಲಿ ಹೋಗುತ್ತಿದ್ದಾಳೆ ಅಂತ ತಿಳಿಯಲು ಫಾಲೋ ಮಾಡೋಣ ಎನ್ನುತ್ತಾಳೆ. ಇಬ್ಬರೂ ಆಟೋ ಹತ್ತಿ ಶ್ರೇಷ್ಠಾ ಕಾರನ್ನು ಹಿಂಬಾಲಿಸುತ್ತಾರೆ.
ಕುಸುಮಾ, ಭಾಗ್ಯಾಗೆ ಕೆಲಸ ದೊರೆಯುವುದಾ? ಶ್ರೇಷ್ಠಾ ತಾಂಡವ್ ಜೊತೆ ಡೇಟಿಂಗ್ ಹೋಗುವುದು ಪೂಜಾಗೆ ತಿಳಿಯುವುದಾ? ಮುಂದಿನ ಎಪಿಸೋಡ್‌ನಲ್ಲಿ ನೋಡಬೇಕು.
ವಿಭಾಗ