ಪೂಜಾಳನ್ನು ಹುಡುಕಲು ಹಿತಾ ಸಹಾಯ ಕೇಳಿದ ಸುಂದ್ರಿ, ತಾಂಡವ್‌ ತಪ್ಪಿಸಿಕೊಂಡ ವಿಚಾರ ತಿಳಿದು ಸಿಟ್ಟಾದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 7th september episode kusuma angry on tandav rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಪೂಜಾಳನ್ನು ಹುಡುಕಲು ಹಿತಾ ಸಹಾಯ ಕೇಳಿದ ಸುಂದ್ರಿ, ತಾಂಡವ್‌ ತಪ್ಪಿಸಿಕೊಂಡ ವಿಚಾರ ತಿಳಿದು ಸಿಟ್ಟಾದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಪೂಜಾಳನ್ನು ಹುಡುಕಲು ಹಿತಾ ಸಹಾಯ ಕೇಳಿದ ಸುಂದ್ರಿ, ತಾಂಡವ್‌ ತಪ್ಪಿಸಿಕೊಂಡ ವಿಚಾರ ತಿಳಿದು ಸಿಟ್ಟಾದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಸೆಪ್ಟೆಂಬರ್‌ 6ರ ಎಪಿಸೋಡ್‌ನಲ್ಲಿ ತಾಂಡವ್‌ ಕಿಟಕಿ ಸರಳುಗಳನ್ನು ತೆಗೆದು ತಪ್ಪಿಸಿಕೊಂಡ ವಿಚಾರ ತಿಳಿದು ಕುಸುಮಾ ಶಾಕ್‌ ಆಗುತ್ತಾಳೆ. ಇತ್ತ ಸುಂದ್ರಿ ಹಾಗೂ ಹಿತಾ, ಪೂಜಾಳನ್ನು ಹುಡುಕಲು ಆರಂಭಿಸುತ್ತಾರೆ.

ಪೂಜಾಳನ್ನು ಹುಡುಕಲು ಹಿತಾ ಸಹಾಯ ಕೇಳಿದ ಸುಂದ್ರಿ, ತಾಂಡವ್‌ ತಪ್ಪಿಸಿಕೊಂಡ ವಿಚಾರ ತಿಳಿದು ಸಿಟ್ಟಾದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಪೂಜಾಳನ್ನು ಹುಡುಕಲು ಹಿತಾ ಸಹಾಯ ಕೇಳಿದ ಸುಂದ್ರಿ, ತಾಂಡವ್‌ ತಪ್ಪಿಸಿಕೊಂಡ ವಿಚಾರ ತಿಳಿದು ಸಿಟ್ಟಾದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada Facebook)

Bhagyalakshmi Serial: ಮದುವೆಗೆ ಅಡ್ಡಿಯಾಗಿದ್ದ ಭಾಗ್ಯಾ ಹಾಗೂ ಕುಸುಮಾ ಅಲ್ಲಿಂದ ಹೋಗಿದ್ದಕ್ಕೆ ತಾಂಡವ್‌ ಹಾಗೂ ಶ್ರೇಷ್ಠಾ ನಿರಾಳವಾಗಿದ್ದಾರೆ. ಇನ್ನು ನಮ್ಮ ಮದುವೆಗೆ ಯಾರೂ ತೊಂದರೆ ಮಾಡುವುದಿಲ್ಲ, ಇನ್ನು ನಮ್ಮಿಬ್ಬರ ಮದುವೆ ಆಗೇ ತೀರುತ್ತದೆ ಎಂದು ಇಬ್ಬರೂ ಖುಷಿಯಾಗುತ್ತಾರೆ. ತಾಂಡವ್‌, ಮದು ಮಗನಂತೆ ತಯಾರಾಗಿ ಖುಷಿಯಿಂದ ಶಾಸ್ತ್ರಕ್ಕೆ ಕೂರುತ್ತಾನೆ.

ಪೂಜಾ ಇಲ್ಲದೆ ಕಂಗಾಲಾದ ಸುಂದ್ರಿ

ಶ್ರೇಷ್ಠಾ ಹಾಗೂ ತಾಂಡವ್‌ ಸಂಭ್ರಮ ನೋಡಿ ಸುಂದ್ರಿ ಬೇಸರಗೊಳ್ಳುತ್ತಾಳೆ. ಈ ಮದುವೆ ಹೇಗೆ ನಿಲ್ಲಿಸುವುದು? ಈ ಸಮಯದಲ್ಲಿ ಪೂಜಾ ಮಿಸ್‌ ಆಗಿದ್ದಾಳೆ. ಏನು ಮಾಡುವುದು ಎಂದು ಯೋಚಿಸುತ್ತಾಳೆ. ಅವಳಿಗೆ ಹಿತಾ ನೆನಪಾಗುತ್ತಾಳೆ. ಕೂಡಲೇ ಹಿತಾಗೆ ಕರೆ ಮಾಡಿ ಪೂಜಾ ಕಾಣೆ ಆಗಿರುವ ವಿಚಾರ ತಿಳಿಸುತ್ತಾಳೆ. ನಾನು ಈಗಲೇ ಅಲ್ಲಿಗೆ ಬರುತ್ತೇನೆ ಎಂದು ಹಿತಾ, ಸುಂದ್ರಿಗೆ ತಿಳಿಸುತ್ತಾಳೆ. ಎಲ್ಲಾ ಸರಿ ಇದ್ದಿದ್ದರೆ ಪೂಜಾ ಇಷ್ಟೊತ್ತಿಗೆ ಇಲ್ಲಿ ಇರಬೇಕಿತ್ತು. ಆದರೆ ಏನೋ ಸಮಸ್ಯೆ ಆಗಿದೆ ಎಂದು ಮತ್ತೆ ಮತ್ತೆ ಪೂಜಾ ಮೊಬೈಲ್‌ಗೆ ಸುಂದ್ರಿ ಕರೆ ಮಾಡುತ್ತಲೇ ಇರುತ್ತಾಳೆ. ಬಹುಶಃ ಈ ಶ್ರೇಷ್ಠಾಳೇ ಪೂಜಾಗೆ ಏನೂ ಮಾಡಿದ್ದಾಳೆ ಎಂದು ಅವಳ ಬಳಿ ಹೋಗಿ ಪೂಜಾ ಬಳಿ ವಿಚಾರಿಸುತ್ತಾಳೆ.

ನನಗೆ ಏನೂ ಗೊತ್ತಿಲ್ಲ ಎಂದು ಶ್ರೇಷ್ಠಾ ನಾಟಕ ಮಾಡಿದರೂ, ಹೌದು ನಾನು ಪೂಜಾ ಇಲ್ಲಿಗೆ ಬರದಂತೆ ತಡೆದಿದ್ದೇನೆ ಎಂದು ನಾನು ಏನೂ ತಪ್ಪು ಮಾಡಿಲ್ಲ ಎನ್ನುವಂತೆ ಮೆರೆಯುತ್ತಾಳೆ. ಹೇಗಾದರೂ ಮಾಡಿ ಪೂಜಾ ಸಿಕ್ಕರೆ ಸಾಕು, ಈ ಮದುವೆ ನಿಲ್ಲಿಸಬಹುದು ಎಂದು ಸುಂದ್ರಿ ಯೋಚಿಸುತ್ತಾಳೆ. ಇವೆಂಟ್‌ ಮ್ಯಾನೇಜರ್‌ ಬಳಿ ಬರುವ ಶ್ರೇಷ್ಠಾ, ಡೆಕೊರೇಷನ್‌ ಬದಲಿಸುವಂತೆ ಗಲಾಟೆ ಮಾಡುತ್ತಾಳೆ. ಶ್ರೇಷ್ಠಾ ವರ್ತನೆಯಿಂದ ಆತನಿಗೆ ಕಿರಿಕಿರಿಯಾದರೂ ತನಗೆ ಬರಬೇಕಾದ ದುಡ್ಡಿಗಾಗಿ ನಗುತ್ತಲೇ ಸರಿ ಮೇಡಂ ನಮ್ಮ ಕೆಲಸ ಅದೇ ತಾನೇ, ಈಗಲೇ ಬದಲಿಸುತ್ತೇವೆ ಎನ್ನುತ್ತಾನೆ.

ಮಗ ತಪ್ಪಿಸಿಕೊಂಡ ವಿಚಾರ ತಿಳಿದು ಬೇಸರಗೊಂಡ ಕುಸುಮಾ

ಇತ್ತ ಭಾಗ್ಯಾ ಹಾಗೂ ಕುಸುಮಾ ಶ್ರೇಷ್ಠಾ ಮದುವೆ ವಿಚಾರವನ್ನೇ ಚಿಂತಿಸುತ್ತಾ ಮನೆಗೆ ಬರುತ್ತಾರೆ. ಹಾಲ್‌ನಲ್ಲಿ ಮಕ್ಕಳು ಕುಳಿತಿರುವುದನ್ನು ನೋಡುವ ಕುಸುಮಾ ನೀವು ನಿಮ್ಮ ಅಪ್ಪನನ್ನು ಕಾಯುವುದು ಬಿಟ್ಟು ಇಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳುತ್ತಾಳೆ. ಆಗ ಮಕ್ಕಳು ತಾಂಡವ್‌ ತಪ್ಪಿಸಿಕೊಂಡು ಹೋದ ವಿಚಾರ ತಿಳಿಸುತ್ತಾರೆ. ಮಕ್ಕಳಿಗೆ ಬೈದರೆ ಏನು ಪ್ರಯೋಜನ? ಅವನು ಕಿಟಕಿ ಸರಳುಗಳನ್ನೇ ಮುರಿದು ಇಲ್ಲಿಂದ ಹೋಗಿದ್ದಾನೆ ಎಂದು ಧರ್ಮರಾಜ್‌ ಹೇಳುತ್ತಾರೆ. ತಪ್ಪಿಸಿಕೊಂಡು ಹೋಗುವಷ್ಟು ಶ್ರೇಷ್ಠಾ ಮುಖ್ಯಾನಾ ಎಂದು ಕುಸುಮಾ ಯೋಚಿಸುತ್ತಾಳೆ. ಮಗನ ವರ್ತನೆಯನ್ನು ನೆನೆದು ಸಿಟ್ಟಾಗುತ್ತಾಳೆ.

ಕಪಾಟಿನಲ್ಲಿರುವ ತಾಂಡವ್‌-ಶ್ರೇಷ್ಠಾ ಆಹ್ವಾನ ಪತ್ರಿಕೆಯನ್ನು ಕುಸುಮಾ ನೋಡುತ್ತಾಳಾ? ಪೂಜಾ ವಾಪಸ್‌ ಬಂದು ಮದುವೆ ನಿಲ್ಲಿಸುತ್ತಾಳಾ ಕಾದು ನೋಡಬೇಕು.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

mysore-dasara_Entry_Point