ಶ್ರೇಷ್ಠಾ ತಂದೆಗೆ ಕರೆ ಮಾಡಿ ಮಗಳ ಬಗ್ಗೆ ಕಂಪ್ಲೇಂಟ್ ಹೇಳಿದ ಕುಸುಮಾ, ಇಲ್ಲದ್ದೆಲ್ಲಾ ಮಾತನಾಡಬೇಡಿ ಎಂದ ಶ್ರೀವರ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 8ರ ಎಪಿಸೋಡ್. ಕುಸುಮಾ, ಧರ್ಮರಾಜ್ ತಲೆಯಲ್ಲಿ ಮಗನ ಬಗ್ಗೆ ಸಣ್ಣ ಅನುಮಾನ ಮೂಡಿದೆ. ಅದನ್ನು ಕಂಡುಹಿಡಿಯಲು ಇಬ್ಬರೂ ಹರ ಸಾಹಸ ಮಾಡುತ್ತಿದ್ದಾರೆ. ಈ ನಡುವೆ ಕುಸುಮಾ, ಶ್ರೇಷ್ಠಾ ತಂದೆಗೆ ಕರೆ ಮಾಡಿ ಆಕೆ ಬಗ್ಗೆ ಬೇಸರ ಹೊರ ಹಾಕುತ್ತಾಳೆ.
Bhagyalakshmi Serial: ಸ್ನೇಹಿತರು ಮಗನ ಬಗ್ಗೆ ಮಾತನಾಡಿದಾಗಿನಿಂದ ಧರ್ಮರಾಜ್‌ಗೆ ಅದೇ ಚಿಂತೆ ಕಾಡುತ್ತಿದೆ. ಅವರು ಅನುಮಾನ ಪಡುತ್ತಿರುವಂತೆ ಮಗನಿಗೆ ಯಾವುದಾದರೂ ಹುಡುಗಿ ಜೊತೆ ಅಫೇರ್ ಇರಬಹುದಾ? ಎಂದು ಧರ್ಮರಾಜ್ ಯೋಚನೆ ಮಾಡುತ್ತಿದ್ದಾರೆ. ಇದೇ ವಿಚಾರವನ್ನು ಕುಸುಮಾ ಬಳಿ ಕೂಡಾ ಹೇಳಿಕೊಂಡಿದ್ದಾರೆ. ಆದರೆ ಕುಸುಮಾಗೆ ಮಗನ ಮೇಲೆ ಬಹಳ ನಂಬಿಕೆ. ನನ್ನ ಮಗ ಎಂದಿಗೂ ದಾರಿ ತಪ್ಪುವವನಲ್ಲ ಎಂದು ಕುಸುಮಾ ತಾಂಡವ್ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದಾಳೆ.
ಮಗನ ಬಗ್ಗೆ ಕುಸುಮಾ ತಲೆಯಲ್ಲಿ ಶುರುವಾಯ್ತು ಸಣ್ಣ ಅನುಮಾನ
ಧರ್ಮರಾಜ್ ಹೀಗೆ ಚಿಂತೆಯಲ್ಲಿ ಮುಳುಗಿದ್ದನ್ನು ನೋಡುವ ಕುಸುಮಾ ಏಕೆ ಈ ರೀತಿ ಇದ್ದೀರಿ ಎಂದು ಕೇಳುತ್ತಾಳೆ. ಗಂಡನ ಯೋಚನೆ ತಿಳಿದ ಕುಸುಮಾ, ನಾನು ತಾಂಡವ್ ಬಳಿ ಎಲ್ಲವನ್ನೂ ವಿಚಾರಿಸಿದೆ, ಅವನ ಮನಸ್ಸಿನಲ್ಲಿ ಯಾವ ಹುಡುಗಿಯೂ ಇಲ್ಲ, ನೀವು ಯೋಚನೆ ಮಾಡಬೇಡಿ ಎನ್ನುತ್ತಾಳೆ. ತಾಂಡವ್ ಡಿವೋರ್ಸ್ ಬೇಕು ಎನ್ನುತ್ತಿದ್ದಾನೆ. ಶ್ರೇಷ್ಠಾ ಮದುವೆ ಆಗುತ್ತಿರುವ ಹುಡುಗ ಎರಡನೇ ವರ. ಇದನ್ನೆಲ್ಲಾ ನೋಡುತ್ತಿದ್ದರೆ ನನಗೆ ಏಕೋ ಭಯವಾಗುತ್ತಿದ್ದೆ, ಅಫೇರ್‌ನಂಥ ವಿಚಾರವನ್ನು ಯಾರೂ ಬಹಿರಂಗವಾಗಿ ಮಾಡುವುದಿಲ್ಲ. ಯಾರಿಗೂ ಗೊತ್ತಾಗದಂತೆ ಮುಚ್ಚಿಡುತ್ತಾರೆ ಎಂದು ಧರ್ಮರಾಜ್ ಹೇಳಿದಾಗ ಕುಸುಮಾ ತಲೆಯಲ್ಲಿ ಕೂಡಾ ಸಣ್ಣ ಅನುಮಾನ ಉಂಟಾಗುತ್ತದೆ.
ಭಾಗ್ಯಾ ಬಟ್ಟೆ ಒಗೆಯುವಾಗ ಅವಳ ಬಳಿ ಬರುವ ಕುಸುಮಾ, ತಾಂಡವ್ ಬಟ್ಟೆಗಳನ್ನು ನಾನು ವಾಷಿಂಗ್ ಮೆಷೀನ್‌ಗೆ ಹಾಕುವೆ ನಿನಗೆ ಅಡುಗೆ ಮನೆಯಲ್ಲಿ ಕೆಲಸ ಇದೆ ಹೋಗು ಎನ್ನುತ್ತಾಳೆ. ತಾಂಡವ್ ಹುಡುಗಿ ಸಹವಾಸ ಮಾಡಿದ್ದಲ್ಲಿ ಅವನ ಬಟ್ಟೆ ಮೇಲೆ ಹುಡುಗಿಯ ಕೂದಲು ಸಿಗಬೇಕು ತಾನೇ ಎಂದುಕೊಂಡು ಕುಸುಮಾ, ತಾಂಡವ್ ಬಟ್ಟೆಯನ್ನು ಹುಡುಕಾಡುತ್ತಾಳೆ. ಆದರೆ ಅವಳಿಗೆ ಯಾವ ಸುಳಿವೂ ಸಿಗುವುದಿಲ್ಲ. ಆ ಬಟ್ಟೆಗಳನ್ನು ಮತ್ತೆ ಭಾಗ್ಯಾಗೆ ಕೊಟ್ಟು ಇದನ್ನು ಒಗೆಯಲು ಹಾಕು ಎನ್ನುತ್ತಾಳೆ. ಕುಸುಮಾ ವರ್ತನೆ ನೋಡಿ ಧರ್ಮರಾಜ್ ಅವಳ ಕಾಲೆಳೆಯುತ್ತಾನೆ.
ಶ್ರೀವರನಿಗೆ ಮಗಳ ಬಗ್ಗೆ ಕುಸುಮಾ ಕಂಪ್ಲೇಂಟ್
ಮಗನ ಯೋಚನೆಯಲ್ಲೇ ಮುಳುಗುವ ಕುಸುಮಾ, ಶ್ರೇಷ್ಠಾ ತಂದೆ ಶ್ರೀವರನಿಗೆ ಕರೆ ಮಾಡಿ ನಿಮ್ಮ ಮಗಳು ಮಾಡುತ್ತಿರುವ ಮನೆ ಹಾಳು ಕೆಲಸ ನಿಮಗೆ ಗೊತ್ತೋ, ಗೊತ್ತಿಲ್ಲವೋ ಎಂದು ಕೇಳುತ್ತಾಳೆ. ನಿಮ್ಮ ಮೇಲೆ ನನಗೆ ಗೌರವ ಇದೆ. ಆದರೆ ದಯವಿಟ್ಟು ಹಾಗಂತ ನನ್ನ ಮಗಳ ಬಗ್ಗೆ ಇಲ್ಲದ್ದನ್ನೆಲ್ಲಾ ಮಾತನಾಡಬೇಡಿ ಎಂದು ಶ್ರೀವರ ಕುಸುಮಾಗೆ ಹೇಳುತ್ತಾನೆ. ಈ ಮಾತು ಕುಸುಮಾಗೆ ಮುಜುಗರ ಉಂಟಾಗುತ್ತದೆ. ನಿಮ್ಮ ಮಗಳು ಈಗಾಗಲೇ ಮದುವೆ ಆಗಿರುವ ಹುಡುಗನನ್ನು ಮದುವೆ ಆಗುತ್ತಿದ್ದಾಳೆ. ಇದೆಲ್ಲಾ ಗೊತ್ತಿದ್ದರೂ ನೀವು ಸುಮ್ಮನಿದ್ದೀರಾ? ನೀವು ಎಂತಹ ತಂದೆ ತಾಯಿಗಳು?. ಮೊದಲು ಈ ಮದುವೆ ನಿಲ್ಲಿಸಿ, ಇಲ್ಲವಾದರೆ ನಾವು ಈ ಮದುವೆಗೆ ಬರುವುದಿಲ್ಲ ಎಂದು ಕುಸುಮಾ ಫೋನ್ ಡಿಸ್ಕನೆಕ್ಟ್ ಮಾಡುತ್ತಾಳೆ.
ಕುಸುಮಾ ಹೀಗೆ ಏರು ದನಿಯಲ್ಲಿ ಮಾತನಾಡುವುದನ್ನು ನೋಡಿದ ತಾಂಡವ್, ಯಾರೊಂದಿಗೆ ಮಾತನಾಡುತ್ತಿದ್ದೀರಿ ಎಂದು ಕೇಳುತ್ತಾನೆ. ಶ್ರೇಷ್ಠಾ ತಂದೆಗೆ ಕಾಲ್ ಮಾಡಿ ಮಗಳಿಗೆ ಬುದ್ಧಿ ಹೇಳುವಂತೆ ಹೇಳಿದ್ದೇನೆ, ಇಲ್ಲವಾದರೆ ನಾವು ಮದುವೆಗೆ ಬರುವುದಿಲ್ಲ ಎಂದೂ ಹೇಳಿದ್ದೇನೆ ಎಂದಾಗ ತಾಂಡವ್‌ಗೆ ಖುಷಿಯಾಗುತ್ತದೆ. ನಾವು ಮಾತ್ರವಲ್ಲ, ನೀನೂ ಅವಳ ಮದುವೆಗೆ ಹೋಗುವಂತಿಲ್ಲ ಎಂದು ಕುಸುಮಾ ಮಗನಿಗೆ ಕಂಡಿಷನ್ ಮಾಡುತ್ತಾಳೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ