Bhagyalakshmi Serial: ಹಣ, ಮನೆ ಕೊಡ್ತೀನಿ ದೂರ ಹೋಗು, ಡಿವೋರ್ಸ್‌ಗಾಗಿ ಭಾಗ್ಯಾಗೆ ಮನವಿ ಮಾಡಿದ ತಾಂಡವ್;‌ ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಹಣ, ಮನೆ ಕೊಡ್ತೀನಿ ದೂರ ಹೋಗು, ಡಿವೋರ್ಸ್‌ಗಾಗಿ ಭಾಗ್ಯಾಗೆ ಮನವಿ ಮಾಡಿದ ತಾಂಡವ್;‌ ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಹಣ, ಮನೆ ಕೊಡ್ತೀನಿ ದೂರ ಹೋಗು, ಡಿವೋರ್ಸ್‌ಗಾಗಿ ಭಾಗ್ಯಾಗೆ ಮನವಿ ಮಾಡಿದ ತಾಂಡವ್;‌ ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 8ರ ಸಂಚಿಕೆ ಹೀಗಿದೆ. ನಿನಗೆ ಮನೆ ಬರೆದುಕೊಡುತ್ತೇನೆ, ಪ್ರತಿ ತಿಂಗಳು ನಿನಗೆ ದುಡ್ಡು ಕೊಡುತ್ತೇನೆ. ದಯವಿಟ್ಟು ನನಗೆ ಡಿವೋರ್ಸ್‌ ಕೊಟ್ಟು ದೂರ ಹೋಗು ಎಂದು ತಾಂಡವ್‌, ಭಾಗ್ಯಾ ಬಳಿ ಮನವಿ ಮಾಡುತ್ತಾನೆ.

ಡಿವೋರ್ಸ್‌ಗಾಗಿ ಭಾಗ್ಯಾಗೆ ಮನವಿ ಮಾಡಿದ ತಾಂಡವ್;‌ ಭಾಗ್ಯಲಕ್ಷ್ಮೀ ಧಾರಾವಾಹಿ
ಡಿವೋರ್ಸ್‌ಗಾಗಿ ಭಾಗ್ಯಾಗೆ ಮನವಿ ಮಾಡಿದ ತಾಂಡವ್;‌ ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Kannada Serial: ಮಗ ಸೊಸೆಯ ಜೀವನ ಸರಿ ಮಾಡಬೇಕು, ಮನೆ ಬಿಟ್ಟು ಹೋದ ಮಗನನ್ನು ವಾಪಸ್‌ ಕರೆ ತರಬೇಕು ಎಂಬ ಆಸೆಯಿಂದ ಧರ್ಮರಾಜ್‌, ಮಗನ ಬಳಿ ಹೋಗುತ್ತಾರೆ. ಆತನನ್ನು ಭೇಟಿ ಮಾಡಿ ಸೊಸೆಗೆ ಏಕೆ ಡಿವೋರ್ಸ್‌ ನೋಟಿಸ್‌ ಕಳಿಸಿದ್ದೀಯ ಎಂದು ಪ್ರಶ್ನಿಸುತ್ತಾರೆ.

ಡಿವೋರ್ಸ್‌ಗಾಗಿ ಭಾಗ್ಯಾಗೆ ಮನವಿ ಮಾಡುವ ತಾಂಡವ್

ಧರ್ಮರಾಜ್‌ ಅವರನ್ನು ಹುಡುಕಿ ಬರುವ ಭಾಗ್ಯಾ, ಕುಸುಮಾ ತಾಂಡವ್‌ ಮಾತುಗಳನ್ನು ಕೇಳಿ ಶಾಕ್‌ ಆಗುತ್ತಾರೆ. ಇಷ್ಟು ದಿನಗಳು ಸುಮ್ಮನಿದ್ದು ತಾಂಡವ್‌ ಈಗ ಎಲ್ಲರ ಮುಂದೆ ಭಾಗ್ಯಾ ನನಗೆ ಇಷ್ಟವಿಲ್ಲ ಎನ್ನುತ್ತಿದ್ದಾನೆ. ಇಷ್ಟು ದಿನಗಳ ಕಾಲ ತಂದೆ ತಾಯಿ ಮರ್ಯಾದೆ ಹೋಗುತ್ತದೆ ಎಂದು ನಾನು ಸುಮ್ಮನಿದ್ದೆ ಆದರೆ ಇನ್ಮುಂದೆ ಸುಮ್ಮನಿರಲು ಸಾಧ್ಯವಿಲ್ಲ. ನನಗೆ ಭಾಗ್ಯಾ ಎಂದರೆ ಸ್ವಲ್ಪವೂ ಇಷ್ಟವಿಲ್ಲ. ಅದಕ್ಕೆ ಈ ನಿರ್ಧಾರ ಎನ್ನುತ್ತಾನೆ. ಈ ಮಾತು ಕೇಳಿಸಿಕೊಂಡ ಕುಸುಮಾ, ಭಾಗ್ಯಾ ಬಳಿ ಹೋಗಿ ಕ್ಷಮೆ ಕೇಳುವಂತೆ ಮಗನಿಗೆ ಹೇಳುತ್ತಾಳೆ. ಭಾಗ್ಯಾ ಬಳಿ ಬರುವ ತಾಂಡವ್‌ ಭಾಗ್ಯಾ ಕೈ ಹಿಡಿದು ಕ್ಷಮೆ ಕೇಳುತ್ತಾನೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಭಾಗ್ಯಾಗೆ ಡಿವೋರ್ಸ್‌ ಕೊಡುವಂತೆ ಮನವಿ ಮಾಡುತ್ತಾನೆ.

ಭಾಗ್ಯಾ, ನನಗೆ ನೀನು ಇಷ್ಟವಿಲ್ಲ. ನಿನ್ನ ನೋಡಿದ ಕ್ಷಣದಿಂದ ಇಲ್ಲಿವರೆಗೂ ನಿನ್ನ ಮೇಲೆ ನನಗೆ ಪ್ರೀತಿ ಹುಟ್ಟಲಿಲ್ಲ. ನನ್ನ ಅಮ್ಮ ಹುಡುಕಿ ಆರಿಸಿದ ಹುಡುಗಿ ನೀನು ಆದರೆ ಒಂದು ದಿನವಾದರೂ ನೀನು ನನಗೆ ಇಷ್ಟಾನಾ ಎಂದು ಅವರು ನನ್ನ ಅಭಿಪ್ರಾಯ ಕೇಳಲಿಲ್ಲ. ಇಷ್ಟು ದಿನಗಳ ಕಾಲ ತಂದೆ ತಾಯಿ ಮರ್ಯಾದೆ ಬೀದಿಗೆ ಬರಬಾರದು ಎಂದು ಸುಮ್ಮನಿದ್ದೆ ಆದರೆ ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ನನಗೆ ನಿನ್ನೊಂದಿಗೆ ಬದುಕಲು ಬಹಳ ಕಷ್ಟವಾಗುತ್ತಿದೆ. 16 ವರ್ಷಗಳು ನಿನ್ನ ಮೇಲೆ ನನಗೆ ಒಂದು ದಿನವೂ ಪ್ರೀತಿ ಹುಟ್ಟಲಿಲ್ಲ. ನಿನ್ನ ಮೇಲೆ ಅಂದೂ ಪ್ರೀತಿ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಪ್ರೀತಿ ಹುಟ್ಟುವುದಿಲ್ಲ. ದಯವಿಟ್ಟು ಅರ್ಥ ಮಾಡಿಕೋ.‌

ತಾಂಡವ್‌ ಮಾತಿನಿಂದ ಭಾಗ್ಯಾಗೆ ಆಘಾತ

ನನ್ನ ಮಕ್ಕಳು, ಅಪ್ಪ, ಅಮ್ಮನನ್ನು ಬಿಟ್ಟು ಎಲ್ಲಾದರೂ ಹೊರಟು ಹೋಗು. ಅಥವಾ ನಿನಗೆ ಪ್ರತಿ ತಿಂಗಳು ಇಂತಿಷ್ಟು ಹಣ ಕೊಡುತ್ತೇನೆ. ನನಗೆ ಮನೆಗೆ ಬರಲು ಇಷ್ಟ, ಆದರೆ ಅಲ್ಲಿ ಬಂದರೆ ನಿನ್ನ ಮುಖ ನೋಡಬೇಕು, ಒಂದೇ ಕೋಣೆಯಲ್ಲಿ ನಿನ್ನೊಂದಿಗೆ ಇರಬೇಕು, ಅದು ನನಗೆ ಸಾಧ್ಯವಾಗುತ್ತಿಲ್ಲ. ನನಗೆ ನೀನು ಇಷ್ಟವಿಲ್ಲ ಅಂತ ನಿನಗೂ ಗೊತ್ತು. ಎಷ್ಟು ದಿನಗಳು ಹೀಗೇ ನಾಟಕ ಮಾಡಿಕೊಂಡು ಬದುಕುವುದು. ಬೇಕಿದ್ದರೆ ಆ ಮನೆಯನ್ನು ನಿನ್ನ ಹೆಸರಿಗೆ ಬರೆದುಕೊಡುತ್ತೇನೆ. ಅದರಲ್ಲಿ ನೀನೇ ಇರು. ನೀನೊಬ್ಬಳು ನನ್ನನ್ನು ಬಿಟ್ಟು ಹೋದರೆ ಎಲ್ಲವೂ ಸರಿ ಹೋಗುತ್ತದೆ. ನಾನು ಸದಾ ನನ್ನ ಅಪ್ಪ ಅಮ್ಮನ ಬಳಿ ಇರುತ್ತೇನೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಅವರನ್ನು ಕಾರಿನಲ್ಲಿ ಸುತ್ತಿಸುತ್ತೇನೆ. ದಯವಿಟ್ಟು ನನ್ನ ಜೀವನದಿಂದ ಹೋಗು ಎಂದು ಕೈ ಮುಗಿದು ಮನವಿ ಮಾಡುತ್ತಾನೆ.

ತಾಂಡವ್‌ ಮಾತು ಕೇಳಿ ಧರ್ಮರಾಜ್‌, ಕುಸುಮಾ ದುಃಖ ಪಡುತ್ತಾರೆ. ದಯವಿಟ್ಟು ಹೀಗೆಲ್ಲಾ ಮಾತನಾಡಬೇಡ ಎಂದು ಮನವಿ ಮಾಡುತ್ತಾರೆ. ಆದರೆ ಕಲ್ಲು ಮನಸ್ಸಿನ ಸ್ವಾರ್ಥಿ ತಾಂಡವ್‌ಗೆ ಮಾತ್ರ ಯಾರ ಮನವಿಯೂ ಅರ್ಥ ಆಗುವುದಿಲ್ಲ. ತಾಂಡವ್‌ ಆಡುವ ಒಂದು ಮಾತಿಗೂ ಪ್ರತಿಕ್ರಿಯಿಸದ ಭಾಗ್ಯಾ ಆತನ ಮಾತಿನಿಂದ ಆಘಾತಕ್ಕೆ ಒಳಗಾಗಿ ಕುಸಿದು ಬೀಳುತ್ತಾಳೆ. ತಾಂಡವ್‌ ಬೇಡಿಕೆಯಂತೆ ಭಾಗ್ಯಾ ಅವನಿಗೆ ಡಿವೋರ್ಸ್‌ ಕೊಡಲು ಒಪ್ಪುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner