ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾ ತಯಾರಿಸಿದ ತಿಂಡಿ ಸವಿದ ಪತ್ರಕರ್ತ, ಒತ್ತು ಶ್ಯಾವಿಗೆ ಮಾವಿನ ರಸಾಯನಕ್ಕೆ ಎಷ್ಟು ಸ್ಟಾರ್‌ ಸಿಗಬಹುದು?; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾ ತಯಾರಿಸಿದ ತಿಂಡಿ ಸವಿದ ಪತ್ರಕರ್ತ, ಒತ್ತು ಶ್ಯಾವಿಗೆ ಮಾವಿನ ರಸಾಯನಕ್ಕೆ ಎಷ್ಟು ಸ್ಟಾರ್‌ ಸಿಗಬಹುದು?; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 8ರ ಎಪಿಸೋಡ್‌; ಹೋಟೆಲ್‌ಗೆ ಫುಡ್‌ ರಿವ್ಯೂ ಬರೆಯಲು ಬರುವ ಪತ್ರಕರ್ತ ಭಾಗ್ಯಾ ತಯಾರಿಸಿದ ಒತ್ತು ಶ್ಯಾವಿಗೆ, ಮಾವಿನ ರಸಾಯನ ಸವಿಯುತ್ತಾನೆ. ಆತ ಹೇಗೆ ಪ್ರತಿಕ್ರಿಯಿಸಬಹುದು ಎಂದು ಹೋಟೆಲ್ ಮ್ಯಾನೇಜರ್‌ ಸೂಪರ್‌ವೈಸರ್‌ ಇಬ್ಬರೂ ಆತಂಕಗೊಳ್ಳುತ್ತಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಭಾಗ್ಯಾ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಮಾಡಿಲ್ಲ ಆಕೆಗೆ ಸ್ಟಾರ್‌ ಹೋಟೆಲ್‌ನಲ್ಲಿ ಕೆಲಸ ಮಾಡುವ ಅರ್ಹತೆ ಇಲ್ಲ ಎಂದು ಹೀಯಾಳಿಸಿ ಹೋಟೆಲ್‌ ಮ್ಯಾನೇಜರ್‌ ಹಾಗೂ ಸೂಪರ್‌ವೈಸರ್‌ ಆಕೆಯನ್ನು ಕೆಲಸ ಬಿಟ್ಟು ಹೋಗುವಂತೆ ಸೂಚಿಸುತ್ತಾರೆ. ಹೋಟೆಲ್‌ಗೆ ಫುಡ್‌ ರಿವ್ಯೂ ಬರೆಯಲು ಬಂದ ಪತ್ರಕರ್ತ, ಅಲ್ಲಿ ದೊರೆಯುವ ಸ್ಪೆಷಲ್‌ ಫುಡ್‌ ದೊರೆಯದೆ, ನೆಗೆಟಿವ್‌ ರಿವ್ಯೂ ಬರೆಯಲು ಮುಂದಾಗುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಭಾಗ್ಯಾ ಮಾತಿಗೆ ಕಿರುನಗೆ ಸೂಸಿದ ಪತ್ರಕರ್ತ

ಪಕ್ಕದ ಹೋಟೆಲ್‌ನಲ್ಲಿ ಒತ್ತು ಶ್ಯಾವಿಗೆ ಮಾವಿನ ರಸಾಯನ ದೊರೆಯದ ಕಾರಣ ಇನ್ನು ಈ ಜರ್ನಲಿಸ್ಟ್‌ ನಮ್ಮ ಹೋಟೆಲ್‌ ಬಗ್ಗೆ ನೆಗೆಟಿವ್‌ ರಿವ್ಯೂ ಬರೆಯುತ್ತಾರೆ, ಹೋಟೆಲ್‌ ಮುಚ್ಚುವ ಪರಿಸ್ಥಿತಿ ಬರುತ್ತದೆ ಎಂದು ಸೂಪರ್‌ವೈಸರ್‌ ಹಾಗೂ ಮ್ಯಾನೇಜರ್‌, ಮಾಡಿಲ್ಲದ ತಪ್ಪಿಗೆ ಭಾಗ್ಯಾಳನ್ನು ದೂಷಿಸುತ್ತಾರೆ. ಆದರೆ ಭಾಗ್ಯಾ, ನಾನು ಅಡುಗೆ ಮಾಡಬಲ್ಲೆ ಎಂಬುದನ್ನು ಮಾತಿನಿಂದಲೇ ನಿರೂಪಿಸುತ್ತಾಳೆ. ಮನೆಯಲ್ಲಿ ಗಂಡ, ಮಕ್ಕಳು, ಅತ್ತೆ, ಮಾವನಿಗೆ ಅಡುಗೆ ಮಾಡಿಕೊಟ್ಟ ನಂತರ ಅವರು ಖುಷಿಯಿಂದ ಹೊಟ್ಟೆ ತುಂಬಿತು, ಅಡುಗೆ ಚೆನ್ನಾಗಿತ್ತು ಎಂದು ಹೇಳಿದರೆ ನಮಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಪ್ರತಿ ಗೃಹಿಣಿಯೂ ಅಡುಗೆ ಮನೆಯ ಬಗ್ಗೆಯೇ ಹೆಚ್ಚು ಯೋಚಿಸುತ್ತಾಳೆ. ನಾಳೆ ತಿಂಡಿಗೆ ಏನು ಮಾಡುವುದು? ರಾತ್ರಿ ಏನು ಸಾಂಬಾರ್‌ ಮಾಡುವುದು? ಮಕ್ಕಳ ಬಾಕ್ಸ್‌ಗೆ ಏನು ಕೊಡುವುದು ಎಂಬುದೇ ಅವಳ ಯೋಚನೆ ಆಗಿರುತ್ತದೆ.

ಅಡುಗೆ ಮಾಡಲು ದೊಡ್ಡ ಅಡುಗೆ ಮನೆಯೇ ಆಗಿರಬೇಕು ಎಂದೇನಿಲ್ಲ. ಅಡುಗೆಗೆ ರುಚಿ ಬರುವುದು ಅಡುಗೆ ಮನೆಯಿಂದ ಅಲ್ಲ, ಅಡುಗೆ ಮಾಡುವ ಕೈಗಳಿಂದ ಎಂದು ಭಾಗ್ಯಾ ಹೇಳುತ್ತಿದ್ದಂತೆ ಪತ್ರಕರ್ತನ ಮುಖದಲ್ಲಿ ಕಿರುನಗೆ ಮೂಡುತ್ತದೆ. ಯಾರು ಏನೇ ಮಾತನಾಡಿದರೂ ಸರಿಯಾಗಿ ಪ್ರತಿಕ್ರಿಯಿಸದ ಪತ್ರಕರ್ತ, ಭಾಗ್ಯಾ ಮಾತುಗಳನ್ನು ಮೆಚ್ಚುತ್ತಾನೆ. ಅದನ್ನು ನೋಡಿ ಹೋಟೆಲ್‌ ಮ್ಯಾನೇಜರ್‌ ಹಾಗೂ ಸೂಪರ್‌ವೈಸರ್‌ಗೆ ಆಶ್ಚರ್ಯವಾಗುತ್ತದೆ. ಆದರೂ ಭಾಗ್ಯಾ ಅಡುಗೆ ಮಾಡಿದರೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಇದೆಲ್ಲಾ ಹೇಳಿದಷ್ಟು ಸುಲಭ ಎಂದುಕೊಳ್ಳಬೇಡಿ, ನೀವು ಮನೆಗೆ ಹೊರಡಿ ಎಂದು ಸೂಪರ್‌ವೈಸರ್‌ ಹೇಳುತ್ತಾನೆ.

ಕೊನೆಗೂ ಒತ್ತು ಶ್ಯಾವಿಗೆ ತಯಾರಿಸಿದ ಭಾಗ್ಯಾ

ಆದರೆ ಭಾಗ್ಯಾಳನ್ನು ತಡೆಯುವ ಪತ್ರಕರ್ತ, ಅಡುಗೆ ರುಚಿ ಮಾಡಬೇಕಿರುವವನು ನಾನು, ಆದ್ದರಿಂದ ಅಡುಗೆ ಯಾರು ಮಾಡಬೇಕೆಂದು ನಾನು ನಿರ್ಧರಿಸುತ್ತೇನೆ. ಭಾಗ್ಯಾ ನಿಮಗೆ ಈ ತಿಂಡಿ ಮಾಡಲು ಬರುತ್ತದೆ ಎಂದರೆ ಈಗಲೇ ನನಗೆ ತಯಾರಿಸಿಕೊಡಿ ಎಂದು ಹೇಳುತ್ತಾನೆ. ಭಾಗ್ಯಾಗೆ ಖುಷಿಯಾಗಿ ಅಡುಗೆ ಮನೆಗೆ ಹೋಗುತ್ತಾಳೆ. ಅಲ್ಲಿ ಸಹೋದ್ಯೋಗಿಗಳು ಮೊದಲು ಭಾಗ್ಯಾಳನ್ನು ಹೀಯಾಳಿಸಿದರೂ, ಆಕೆ ಎಲ್ಲರನ್ನೂ ಒಟ್ಟಾಗಿ ಅಡುಗೆ ಮಾಡುವಂತೆ ಮನವಿ ಮಾಡಿದಾಗ, ಆಕೆ ಒತ್ತು ಶ್ಯಾವಿಗೆ ರಸಾಯನ ಮಾಡಿದಾಗ ಆಶ್ಚರ್ಯಗೊಳ್ಳುತ್ತಾರೆ. ನೋಡಲು ದರ್ಶಿನಿ ಹೋಟೆಲ್‌ ಫುಡ್‌ನಂತೆಯೇ ಕಾಣುತ್ತಿದೆ. ಆದರೆ ರುಚಿ ಹೇಗಿರುತ್ತದೋ ಎನ್ನುತ್ತಾರೆ.

ಅಂತೂ ಭಾಗ್ಯಾ, ಒತ್ತು ಶ್ಯಾವಿಗೆ ರಸಾಯನ ತಯಾರಿಸಿ ಪತ್ರಕರ್ತ ಕುಳಿತ ಟೇಬಲ್‌ ಬಳಿ ತಂದು ಇಡುತ್ತಾಳೆ. ಆದರೆ ಅಲ್ಲಿ ಆತ ಇರುವುದಿಲ್ಲ. ಭಾಗ್ಯಾ ಮಾಡಿದ ಅಡುಗೆಯನ್ನು ಆತ ಯಾವುದೇ ಕಾರಣಕ್ಕೂ ತಿನ್ನಬಾರದು ಎಂಬ ಕಾರಣಕ್ಕೆ ಸೂಪರ್‌ವೈಸರ್‌ ಮತ್ತೆ ಭಾಗ್ಯಾಗೆ ಮನೆಗೆ ಹೋಗುವಂತೆ ಬೆದರಿಸುತ್ತಾನೆ. ಆಕೆ ಮಾಡಿದ ಅಡುಗೆಯನ್ನು ಡಸ್ಟ್‌ ಬಿನ್‌ಗೆ ಹಾಕಬೇಕು ಎನ್ನುವಷ್ಟರಲ್ಲಿ ಪತ್ರಕರ್ತ ಅಲ್ಲಿಗೆ ಬರುತ್ತಾನೆ. ಭಾಗ್ಯಾ ಮಾಡಿದ ಒತ್ತು ಶ್ಯಾವಿಗೆ ರಸಾಯನ ತಿನ್ನುವ ಆತ ಆ ಫುಡ್‌ಗೆ ಎಷ್ಟು ಅಂಕ ನೀಡುತ್ತಾನೆ? ಭಾಗ್ಯಾಳಿಗೆ ಹೊಗಳಿಕೆ ಸಿಗಲಿದ್ಯಾ? ಆ ಫುಡ್‌ ಬಗ್ಗೆ ಪತ್ರಕರ್ತ ಏನು ರಿವ್ಯೂ ಬರೆಯಲಿದ್ದಾನೆ ಅನ್ನೋದು ಸೋಮವಾರದ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರ ವರ್ಗ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ - ಸುಷ್ಮಿತಾ

ಟಿ20 ವರ್ಲ್ಡ್‌ಕಪ್ 2024