ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 8th March 2024 Episode Kannika Angry On Bhagya Rsm

ಭಾಗ್ಯಾ, ಕುಸುಮಾಗೆ ಒಲಿದ ಮಹಿಳಾ ಸಾಧಕಿ ಪ್ರಶಸ್ತಿ; ಅತ್ತೆ ಸೊಸೆ ಹೆಸರು ಹಾಳು ಮಾಡಲು ಕನ್ನಿಕಾ ಮಾಸ್ಟರ್‌ ಪ್ಲ್ಯಾನ್‌;ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 8ರ ಸಂಚಿಕೆ ಹೀಗಿದೆ. ಭಾಗ್ಯಾ, ಕುಸುಮಾಗೆ ಅಂತಾರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ ದೊರೆಯತ್ತಿರುವ ವಿಚಾರ ತಿಳಿದ ಕನ್ನಿಕಾ ಅತ್ತೆ ಸೊಸೆ ಹೆಸರನ್ನು ಹಾಳು ಮಾಡುವ ಪ್ಲ್ಯಾನ್‌ ಮಾಡುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Kannada Serial: ತಾಂಡವ್‌, ತಾನು ಹಾಕಿದ ಚಾಲೆಂಜ್‌ನಲ್ಲಿ ಸೋತಿದ್ದರಿಂದ ಭಾಗ್ಯಾ ಮತ್ತೆ ಗಂಡನ ಮನೆಗೆ ಬಂದಿದ್ದಾಳೆ. ರೆಸಾರ್ಟ್‌ ಪಾರ್ಟಿಯಲ್ಲಿ ಭಾಗ್ಯಾ ಡ್ಯಾನ್ಸ್‌ ಮಾಡಿದ್ದನ್ನು ನೋಡಿ ತಾಂಡವ ಆಶ್ಚರ್ಯ ವ್ಯಕ್ತಪಡಿಸಿ ಆಕೆಗೆ ಕಾಂಪ್ಲಿಮೆಂಟ್ಸ್‌ ಕೊಡುತ್ತಾನೆ. ಮಕ್ಕಳಿಗಾಗಿ ಇದೆಲ್ಲಾ ಮಾಡುತ್ತಿರುವುದಾಗಿ ಭಾಗ್ಯಾ ಹೇಳುತ್ತಾಳೆ. ತಾಂಡವ್‌ ಕೂಡಾ ಮಕ್ಕಳಿಗಾಗಿ ನಾನೂ ನಿನ್ನ ಮತ್ತೆ ಮನೆಗೆ ಕರೆದಿದ್ದು ಎನ್ನುತ್ತಾನೆ.

ತಾಂಡವ್‌ನಿಂದ ಗರ್ಭಿಣಿ ಆದ್ಲಾ ಶ್ರೇಷ್ಠಾ?

ತಾಂಡವ್‌ ಕೈ ತಪ್ಪಿ ಹೋಗುತ್ತಿದ್ದಾನೆ ಅಂತ ಶ್ರೇಷ್ಠಾಗೆ ಭಯ ಕಾಡುತ್ತದೆ. ರೆಸಾರ್ಟ್‌ನಲ್ಲಿ ನಡೆದಿದ್ದನ್ನೆಲ್ಲಾ ನೋಡಿ ಮತ್ತೆ ತಾಂಡವ್‌ನನ್ನು ತನ್ನತ್ತ ಸೆಳೆಯಲು ಏನೆಲ್ಲಾ ಮಾಡಲು ಸಾಧ್ಯವೋ ಎಲ್ಲವನ್ನೂ ಮಾಡುತ್ತಿದ್ದಾಳೆ. ತಾಂಡವ್‌ ಮನೆಯಿಂದ ತನ್ನ‌ ಮನೆಗೆ ವಾಪಸ್‌ ಬರುವ ಶ್ರೇಷ್ಠಾ ಸುಂದರಿ ಮೇಲೆ ಅರಚಾಡುತ್ತಾಳೆ. ವಾಂತಿ ಮಾಡುವಂತಾಗುತ್ತಿದೆ ಎನ್ನುತ್ತಾಳೆ. ನನಗೆ ಹೊಟ್ಟೆ ತೊಳೆಸುತ್ತಿದೆ, ಸುಸ್ತಾಗುತ್ತಿದೆ ಒಂದು ಲೋಟ ನಿಂಬೆ ಹಣ್ಣಿನ ಜ್ಯೂಸ್‌ ತೆಗೆದುಕೊಂಡು ಬಾ ಎಂದು ಸುಂದರಿಗೆ ಹೇಳುತ್ತಾಳೆ. ನಾನೇಕ ತರಲಿ ನೀನೇ ಹೋಗಿ ಮಾಡಿಕೊಂಡು ಕುಡಿ ಎಂದು ಸುಂದರಿ ಹೇಳುತ್ತಾಳೆ. ಆದರೆ ಶ್ರೇಷ್ಠಾ ಸುಂದರಿಗೆ ಪ್ಲೀಸ್‌ ಎಂದು ಮನವಿ ಮಾಡುತ್ತಾಳೆ. ವಾಂತಿ ಆಯ್ತು ಎಂದು ಶ್ರೇಷ್ಠಾ ಹೇಳುತ್ತಿದ್ದಂತೆ ಸುಂದರಿ ಬೇರೆಯದ್ದೇ ಯೋಚನೆ ಮಾಡುತ್ತಾಳೆ. ನಿನಗೆ ಈ ಪರಿಸ್ಥಿತಿ ಬರಬಾರದಿತ್ತು. ನೀನು ಗರ್ಭಿಣಿ, ಆದ್ದರಿಂದ ನಿನಗೆ ವಾಂತಿ ಆಯ್ತು ಎಂದು ಸುಂದರಿ ಹೇಳಿದಾಗ ಶ್ರೇಷ್ಠಾ ಶಾಕ್‌ ಆಗುತ್ತಾಳೆ.

ಇತ್ತ ಭಾಗ್ಯಾ ಹಾಗೂ ಕುಸುಮಾ ಇಬ್ಬರನ್ನೂ ಮಹಿಳಾ ಸಮಾಜದವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಬರಲು ಆಹ್ವಾನಿಸುತ್ತಾರೆ. ಭಾಗ್ಯಾ, ವೇದಿಕೆ ಮೇಲೆ ಡ್ಯಾನ್ಸ್‌ ಮಾಡಲು ಭರತನಾಟ್ಯ ವಸ್ತ್ರಗಳನ್ನು ತರುತ್ತಾಳೆ. ಆದರೆ ಈ ಬಾರಿ ಮಹಿಳಾ ಸಾಧಕಿ ಪ್ರಶಸ್ತಿ ನನಗೆ ಬರುತ್ತದೆ ಎಂದು ಕನಸು ಕಾಣುತ್ತಿರುವ ಕನ್ನಿಕಾಗೆ ಆಘಾತವಾಗುತ್ತದೆ. ಏಕೆಂದರೆ ಈ ಬಾರಿ ಆ ಪ್ರಶಸ್ತಿ ಭಾಗ್ಯಾ ಹಾಗೂ ಆಕೆಗೆ ಬೆಂಬಲ ನೀಡುತ್ತಿರುವ ಕುಸುಮಾಗೆ ಹೋಗುತ್ತಿದೆ ಎಂದು ತಿಳಿದಾಗ ಕನ್ನಿಕಾಗೆ ಕೋಪ ತಡೆಯಲು ಆಗುವುದಿಲ್ಲ. ಏನಾದರೂ ಮಾಡಿ ಇಬ್ಬರ ಹೆಸರನ್ನು ಹಾಳು ಮಾಡಬೇಕೆಂದು ಪ್ಲ್ಯಾನ್‌ ಮಾಡುತ್ತಾಳೆ.

ಕುಸುಮಾ, ಭಾಗ್ಯಾ ಹೆಸರು ಹಾಳು ಮಾಡಲು ಕನ್ನಿಕಾ ಪ್ಲ್ಯಾನ್‌

ಮಹಿಳಾ ಸಮಾಜದ ಮುಖ್ಯಸ್ಥರನ್ನು ಭೇಟಿ ಮಾಡುವ ಕನ್ನಿಕಾ ಈ ಬಾರಿಯ ಪ್ರಶಸ್ತಿ ಭಾಗ್ಯಾ, ಕುಸುಮಾಗೆ ಕೊಡುತ್ತಿದ್ದೀರಾ? ಯಾವ ಆಧಾರದ ಮೇಲೆ ಕೊಡುತ್ತಿದ್ದೀರ ಎಂದು ಪ್ರಶ್ನಿಸುತ್ತಾಳೆ. ಇಬ್ಬರು ಮಕ್ಕಳಾದ ನಂತರವೂ ಭಾಗ್ಯಾ ಓದಲು ಉತ್ಸಾಹ ತೋರಿಸುತ್ತಿದ್ದಾರೆ, ಹಾಗೇ ಆಕೆಗೆ ಅವರ ಅತ್ತೆ ಪ್ರೋತ್ಸಾಹ ನೀಡುತ್ತಿರುವ ಕಾರಣ ಇಬ್ಬರಿಗೂ ಈ ಬಾರಿ ಪ್ರಶಸ್ತಿ ನೀಡುತ್ತಿದ್ದೇವೆ. ಭಾಗ್ಯಾ ನಿಮ್ಮ ಶಾಲೆಯಲ್ಲೇ ಓದುತ್ತಿರುವುದರಿಂದ ಅವರಿಬ್ಬರನ್ನೂ ನೀವೇ ಪರಿಚಯ ಮಾಡಿಕೊಡಬೇಕು ಎಂದು ಹೇಳುತ್ತಾರೆ. ತನ್ನ ಬದಲು ಪ್ರಶಸ್ತಿ ಭಾಗ್ಯಾ ಪಾಲಾಗುತ್ತಿರುವುದು ಕನ್ನಿಕಾಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಕುಸುಮಾ, ಭಾಗ್ಯಾ ಹೆಸರನ್ನು ಕೆಡಿಸಬೇಕು ಎಂದು ಕನ್ನಿಕಾ ಪ್ಲ್ಯಾನ್‌ ಮಾಡುತ್ತಾಳೆ.