Bhagyalakshmi Serial:ರುಚಿಯಾದ ಒತ್ತು ಶ್ಯಾವಿಗೆ,ಮಾವಿನ ಸೀಕರಣೆ ಮಾಡಿಕೊಟ್ಟು ಹೋಟೆಲ್‌ನಲ್ಲಿ ಕೆಲಸ ಪಡೆದ ಕುಸುಮಾ; ಭಾಗ್ಯಲಕ್ಷ್ಮಿ ಧಾರಾವಾಹಿ
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 8 ರ ಎಪಿಸೋಡ್‌ನಲ್ಲಿ ರುಚಿಯಾದ ಒತ್ತು ಶ್ಯಾವಿಗೆ,ಮಾವಿನ ಸೀಕರಣೆ ಮಾಡಿಕೊಟ್ಟು ಹೋಟೆಲ್‌ನಲ್ಲಿ ಕುಸುಮಾ ಕೆಲಸ ಪಡೆಯುತ್ತಾಳೆ. ಇತ್ತ ಭಾಗ್ಯಾ ಇಂಟರ್‌ವ್ಯೂ ಗೊಂದಲವಾಗಿದೆ. ಬುಧವಾರದ ಸಂಚಿಕೆಯಲ್ಲಿ ಏನು ಕಥೆ ನಡೆಯಿತು ನೋಡಿ.
Bhagyalakshmi Serial: ಕುಸುಮಾ ಹಾಗೂ ಭಾಗ್ಯಾ ಕೆಲಸದ ಭೇಟೆಯಲ್ಲಿದ್ದಾರೆ. ಒಬ್ಬರಿಗೊಬ್ಬರು ತಿಳಿಸದೆ ಏನೋ ಕಾರಣ ಹೇಳಿ ಬ್ರೋಕರ್ ಗೋಪಾಲಣ್ಣ ಹೇಳಿದ ಹೋಟೆಲ್‌ಗೆ ಹೋಗಿದ್ದಾರೆ. ಆದರೆ ಭಾಗ್ಯಾ ಮಾತ್ರ ಅಡ್ರೆಸ್ ತಪ್ಪಿ ಸ್ಟಾರ್ ಹೋಟೆಲ್‌ಗೆ ಇಂಟರ್‌ವ್ಯೂಗೆ ಹೋಗಿದ್ಧಾಳೆ. ಕೆಲಸ ದೊರೆತರೆ ಸಾಕು ಎಂದು ಇಬ್ಬರೂ ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸುತ್ತಿದ್ದಾರೆ.
ಹೋಟೆಲ್ ಬಳಿ ಬರುವ ಕುಸುಮಾಳನ್ನು ಕೆಲಸದ ಬ್ರೋಕರ್ ಗೋಪಾಲಣ್ಣ ಹೋಟೆಲ್ ಮ್ಯಾನೇಜರ್‌ಗೆ ಪರಿಚಯಿಸುತ್ತಾರೆ. ಎಲ್ಲರೂ ಕೆಲಸ ಕೇಳಿಕೊಂಡು ಬರುತ್ತಾರೆ. ನಾನೂ ಕೆಲಸ ಕೊಡುತ್ತೇನೆ. ಆದರೆ ಅವರೆಲ್ಲಾ ಸ್ವಲ್ಪ ದಿನ ಕಳೆಯುವಷ್ಟರಲ್ಲಿ ಹೇಳದೆ ಕೇಳದೆ ಹೋಗುತ್ತಾರೆ ಏನು ಮಾಡುವುದು ಎಂದು ಮ್ಯಾನೇಜರ್ ಹೇಳುತ್ತಾರೆ. ಕುಸುಮಾ ಎಂದಿನಂತೆ ಹೋಟೆಲ್ ಮ್ಯಾನೇಜರ್ ಬಳಿ ಕೂಡಾ ಚಟ ಪಟ ಮಾತನಾಡುತ್ತಾಳೆ. ಯಾರೋ ಕೆಲಸ ಬಿಟ್ಟು ಹೋದರೆ ನಾವೂ ಹಾಗೇ ಮಾಡುತ್ತೇವೆ ಎಂದು ಹೇಗೆ ಅಂದುಕೊಳ್ಳುತ್ತೀರಿ ಎಂದು ಪ್ರಶ್ನಿಸುತ್ತಾಳೆ. ಕಳೆದ ಬಾರಿ ಬಿಟ್ಟು ಹೋದ ಕೆಲಸದವ ಬಹಳ ಚೆನ್ನಾಗಿ ಅಡುಗೆ ಮಾಡುತಿದ್ದ, ಅವನು ಮಾಡುವ ಅಡುಗೆ ರುಚಿ ನೋಡಿ ನಮ್ಮ ಹೋಟೆಲ್‌ಗೆ ಬಹಳ ಜನರು ಬರುತ್ತಿದ್ದರು. ಆದರೆ ಈಗ ಕಡಿಮೆ ಆಗಿದ್ದಾರೆ, ವ್ಯಾಪಾರ ಕುಸಿಯುತ್ತಿದೆ ಎನ್ನುತ್ತಾನೆ.
ಫಟಾಫಟ್ ಅಡುಗೆ ಮಾಡಿದ ಕುಸುಮಾ
ಈ ಕುಸುಮಾ ಆ ರೀತಿ ಮಾಡುವುದಿಲ್ಲ. ಒಂದು ಸಲ ಒಪ್ಪಿಕೊಂಡರೆ ಮಾಡಿದ ಕೆಲಸವನ್ನು ಪೂರ್ತಿ ಮಾಡದೆ ಬಿಡುವಳಲ್ಲ, ಅದೇನು ಅಡುಗೆ ಮಾಡಬೇಕೋ ಹೇಳಿ, ಅದೆಲ್ಲಾ ನನಗೆ ಜುಜುಬಿ ಕೆಲಸ ಎನ್ನುತ್ತಾಳೆ. ಕುಸುಮಾ ಹೀಗೆ ಒಂದೇ ಸಮ ಮಾತನಾಡುವುದನ್ನು ನೋಡಿದ ಹೋಟೆಲ್ ಮ್ಯಾನೇಜರ್ ಹಾಗೂ ಗೋಪಾಲಣ್ಣ ಇಬ್ಬರೂ ಗಾಬರಿ ಆಗುತ್ತಾರೆ. ಅದೇನು ಮಾಡುತ್ತೀರೋ, ಅಡುಗೆ ಮನೆ ಅಲ್ಲೇ ಇದೆ ಹೋಗಿ ಮಾಡಿ ತೋರಿಸಿ ಎಂದು ಹೋಟೆಲ್ ಮ್ಯಾನೇಜರ್ ಹೇಳುತ್ತಾರೆ.
ಕುಸುಮಾ ಅಡುಗೆ ಮನೆಗೆ ಹೋದವಳೇ ಒತ್ತು ಶ್ಯಾವಿಗೆ ಹಾಗೂ ಮಾವಿನ ಸೀಕರಣೆ ಮಾಡಿ, ಹೋಟೆಲ್ ಮ್ಯಾನೇಜರ್‌ಗೆ ರುಚಿ ಮಾಡಲು ಕೊಡುತ್ತಾಳೆ. ಅದನ್ನು ತಿನ್ನುವ ಹೋಟೆಲ್ ಮ್ಯಾನೇಜರ್, ಬಹಳ ಚೆನ್ನಾಗಿದೆ ನಾಳೆಯಿಂದಲೇ ಕೆಲಸಕ್ಕೆ ಬನ್ನಿ ಎನ್ನುತ್ತಾನೆ. ಕೆಲಸ ದೊರೆತ ಖುಷಿಗೆ ಕುಸುಮಾ, ಇನ್ಮುಂದೆ ಈ ಹೋಟೆಲ್ ನಿಮ್ಮದಲ್ಲ, ನನ್ನದು ಎನ್ನುವಂತೆ ಕೆಲಸ ಮಾಡುತ್ತೇನೆ ಎನ್ನುತ್ತಾಳೆ.
ಭಾಗ್ಯಾ ಇಂಟರ್‌ವ್ಯೂ ಗೊಂದಲ
ಇತ್ತ ಭಗಾಯ ಎಂಬ ಯುವತಿಯ ಸಿವಿ ನೋಡಿದ ಹೋಟೆಲ್‌ನವರು ಅದು ಭಾಗ್ಯಾ ಎಂದು ತಪ್ಪು ತಿಳಿದು ಅವಳನ್ನು ಇಂಟರ್‌ವ್ಯೂ ಮಾಡಲು ಒಳಗೆ ಕರೆಯುತ್ತಾರೆ. ಅವರು ಇಂಗ್ಲೀಷ್‌ನಲ್ಲಿ ಕೇಳಿದ ಪ್ರಶ್ನೆಗೆ ಭಾಗ್ಯಾ ತಡಬಡಾಯಿಸುತ್ತಲೇ ಉತ್ತರಿಸುತ್ತಾಳೆ. ಎಲ್ಲದಕ್ಕೂ ಯೆಸ್ ಯೆಸ್, ನೋ ನೋ ಎನ್ನುವ ಭಾಗ್ಯಾಳನ್ನು ನೋಡಿ ಇಂಟರ್‌ವ್ಯೂ ಮಾಡುವವರಿಗೆ ಅನುಮಾನ ಕಾಡುತ್ತದೆ. ನಿಮ್ಮಲ್ಲಿ ಎಲ್ಲಾ ಗುಣಗಳಿವೆ , ಆದರೂ ಕೆಲವೊಂದು ವಿಚಾರದಲ್ಲಿ ನೀವು ಇನ್ನೂ ಇಂಪ್ರೂವ್ ಆಗಬೇಕು, ಸಾರಿ ನಿಮಗೆ ಕೆಲಸ ಕೊಡಲು ಆಗುವುದಿಲ್ಲ ಎನ್ನುತ್ತಾರೆ. ಇಂಗ್ಲೀಷ್ ಅರ್ಥವಾಗದಿದ್ದರೂ, ಅವರು ಸಾರಿ ಎಂದು ಬೇಸರದಿಂದ ಹೇಳಿದ್ದನ್ನು ಭಾಗ್ಯಾ ಅರ್ಥ ಮಾಡಿಕೊಳ್ಳುತ್ತಾಳೆ. ನನಗೆ ಇಲ್ಲಿ ಕೆಲಸ ಸಿಗುವುದಿಲ್ಲವೇನೋ ಎಂದು ಬೇಸರ ವ್ಯಕ್ತಪಡಿಸುತ್ತಾಳೆ.
ಭಾಗ್ಯಾಗೆ ಕೆಲಸ ದೊರೆಯುವುದಾ? ಕುಸುಮಾ, ತನಗೆ ಕೆಲಸ ದೊರೆತಿದ್ದನ್ನು ಮನೆಯವರಿಗೆ ಹೇಳುವಳಾ? ಇಬ್ಬರ ವಿಚಾರ ತಾಂಡವ್‌ಗೆ ತಿಳಿಯುವುದಾ ಕಾದು ನೋಡಬೇಕು.
ವಿಭಾಗ