ಶ್ರೇಷ್ಠಾ ಮದುವೆಗೆ ನೀನೂ ಹೋಗುವಂತಿಲ್ಲ, ಆ ದಿನ ನನ್ನ ಕಣ್ಮುಂದೆ ಇರಬೇಕು, ಮಗನಿಗೆ ಕುಸುಮಾ ಎಚ್ಚರಿಕೆ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರು ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 9ರ ಎಪಿಸೋಡ್. ನನ್ನ ತಂದೆಗೆ ಕುಸುಮಾ ಕರೆ ಮಾಡಿ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಕ್ಕೆ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ಇತ್ತ, ಮಗನಿಗೆ ನೀನು ಶ್ರೇಷ್ಠಾ ಮದುವೆಗೆ ಹೋಗಬಾರದು ಎಂದು ಕುಸುಮಾ ಕಂಡಿಷನ್ ಮಾಡುತ್ತಾಳೆ.
Bhagyalakshmi Serial: ಭಾಗ್ಯಾಳಿಂದ ದೂರ ಉಳಿಯಲು ತಾಂಡವ್, ಶ್ರೇಷ್ಠಾ ಜೊತೆ ಮದುವೆಗೆ ಒಪ್ಪಿದ್ದಾನೆ. ಸಿಂಪಲ್ ಆಗಿ ಊರಿನಲ್ಲಿ ಮದುವೆ ಆಗೋಣ ಎಂದರೆ ಅದಕ್ಕೆ ಶ್ರೇಷ್ಠಾ ಒಪ್ಪುತ್ತಿಲ್ಲ. ಇದು ನನಗೆ ಮೊದಲ ಮದುವೆ, ಆದ್ದರಿಂದ ನನಗೆ ಇಷ್ಟ ಬಂದಂತೆ ಈ ಮದುವೆ ನಡೆಯಬೇಕು ಎಂದುಕೊಂಡು ಅದ್ದೂರಿ ಮದುವೆಗೆ ಪ್ಲಾನ್ ಮಾಡುತ್ತಿದ್ದಾಳೆ.
ಮಗಳಿಗೆ ಕರೆ ಮಾಡಿ ಮನೆಗೆ ಬರಲು ಹೇಳಿದ ಶ್ರೀವರ
ಶ್ರೇಷ್ಠಾ ತಂದೆ ಶ್ರೀವರನಿಗೆ ಕರೆ ಮಾಡುವ ಕುಸುಮಾ, ಮಗಳು ಎರಡನೇ ಸಂಬಂಧ ಮದುವೆ ಆಗುವುದು ನಿಮಗೆ ಗೊತ್ತಿದ್ದೂ ಏಕೆ ಸುಮ್ಮನಿದ್ದೀರಿ ಎಂದು ಕೇಳುತ್ತಾಳೆ. ತಾಂಡವ್ ಮದುವೆ ಆಗಿ 2 ತಿಂಗಳಲ್ಲೇ ಆ ಹುಡುಗಿ ಸಾವನ್ನಪ್ಪಿದ್ದಾಳೆ ಎಂದು ಶ್ರೀವರ ಹೇಳಿದರೂ ಕುಸುಮಾ , ಆತನ ಮಾತು ಕೇಳಲು ತಯಾರಿಲ್ಲ. ನಾವೆಲ್ಲಾ ನಿಮ್ಮ ಮಗಳ ಮದುವೆಗೆ ಬರುವುದಿಲ್ಲ ಎನ್ನುತ್ತಾಳೆ. ಅದೇ ವೇಳೆಗೆ ತಾಂಡವ್, ಯಾರ ಜೊತೆ ಮಾತನಾಡುತ್ತಿದ್ದೀರಿ ಎಂದು ಕೇಳುತ್ತಾನೆ. ಶ್ರೇಷ್ಠಾ ತಂದೆ ಜೊತೆ ಮಾತನಾಡುತ್ತಿದ್ದೆ, ನಿಮ್ಮ ಮಗಳು ಈಗಾಗಲೇ ಮದುವೆ ಆಗಿರುವ ಹುಡುಗನನ್ನು ಮದುವೆ ಆಗುತ್ತಿದ್ದಾಳೆ, ನಾನು ಈ ಮದುವೆಗೆ ಬರುವುದಿಲ್ಲ ಎಂದು ಹೇಳಿದ್ದೇನೆ ಎನ್ನುತ್ತಾಳೆ. ಇದನ್ನು ಕೇಳಿ ತಾಂಡವ್‌ಗೆ ಖುಷಿಯಾಗುತ್ತದೆ.
ನಾವು ಮಾತ್ರವಲ್ಲ, ನೀನೂ ಕೂಡಾ ಶ್ರೇಷ್ಠಾ ಮದುವೆಗೆ ಹೋಗುವಂತಿಲ್ಲ ಎನ್ನುತ್ತಾಳೆ. ಆ ಮಾತು ಕೇಳಿ ತಾಂಡವ್ ಬೇಸರಗೊಳ್ಳುತ್ತಾನೆ. ಶ್ರೇಷ್ಠಾ ನನ್ನ ಕ್ಲೋಸ್ ಫ್ರೆಂಡ್, ನಾನು ಮದುವೆಗೆ ಹೋಗದಿದ್ದರೆ ಅವಳು ಬೇಸರ ಮಾಡಿಕೊಳ್ಳುತ್ತಾಳೆ ಎಂದು ತಾಂಡವ್ ಹೇಳುತ್ತಾನೆ. ಪರವಾಗಿಲ್ಲ, ನೀನು ಹೋಗದಿದ್ದರೂ ನಡೆಯುತ್ತೆ ಎನ್ನುತ್ತಾಳೆ. ಇಷ್ಟವಿಲ್ಲದಿದ್ದರೂ ತಾಂಡವ್ ಸರಿ ಎಂದು ತಲೆ ಆಡಿಸುತ್ತಾನೆ. ಸುಮ್ಮನೆ ಸರಿ ಎನ್ನುವುದಿಲ್ಲ, ಆ ದಿನ ಪೂರ್ತಿ ನೀನು ನನ್ನ ಕಣ್ಣಮುಂದೆ ಇರಬೇಕು. ಎಲ್ಲೂ ಹೋಗುವಂತಿಲ್ಲ ಎಂದು ಕುಸುಮಾ ಕಂಡಿಷನ್ ಮಾಡುತ್ತಾಳೆ.
ಪೂಜಾ, ಸುಂದ್ರಿ ಮಾಡಿದ್ದ ಗುರುಗಳ ನಾಟಕ ಶ್ರೇಷ್ಠಾ ಮುಂದೆ ಬಯಲು
ಕುಸುಮಾ ಜೊತೆ ಮಾತನಾಡಿದ ನಂತರ ಶ್ರೀವರ, ಮಗಳಿಗೆ ಕರೆ ಮಾಡಿ ಊರಿಗೆ ಬರಲು ಹೇಳುತ್ತಾರೆ. ಜಾತಕದಲ್ಲಿ ದೋಷ ಇದೆ ಅದು ಪರಿಹಾರವಾಗಬೇಕು. ಕುಸುಮಾ ಕರೆ ಮಾಡಿದ್ದರು, ಊರಿನವರೆಲ್ಲಾ ನಿನ್ನ ಬಗ್ಗೆ ಇನ್ನೂ ಇಲ್ಲಸಲ್ಲದ ಮಾತು ಆಡುವ ಮುನ್ನ ಮನೆಗೆ ಬಾ ಎನ್ನುತ್ತಾನೆ. ಅದರೆ ಶ್ರೇಷ್ಠಾ ಯಾರ ಮಾತನ್ನು ಕೇಳಲು ತಯಾರಿಲ್ಲ. ಕುಸುಮಾ, ಪೂಜಾ ಎಲ್ಲರೂ ನನ್ನ ಜೀವನಕ್ಕೆ ಬಂದು ಬಹಳ ತೊಂದರೆ ಕೊಡುತ್ತಿದ್ದಾರೆ ಇವರಿಗೆ ಬುದ್ಧಿ ಕಲಿಸಬೇಕು. ಪೂಜಾಳನ್ನು ಮನೆಯಿಂದ ಹೊರ ಹಾಕಬೇಕು ಎಂದು ಆಕೆಯ ಬಟ್ಟೆಗಳನ್ನು ತಂದು ಹೊರಗೆ ಎಸೆಯುತ್ತಾಳೆ. ಅಷ್ಟರಲ್ಲಿ ಪೂಜಾ ಅಲ್ಲಿಗೆ ಬರುತ್ತಾಳೆ. ಆ ದಿನ ಚೀನೀ ಗುರುಗಳ ಬಳಿ ಹೋದಾಗ ಶಿಷ್ಯೆ ಹಾಕಿಕೊಂಡಿದ್ದ ಬಟ್ಟೆಯನ್ನು ಶ್ರೇಷ್ಠಾ, ಪೂಜಾ ಬ್ಯಾಗ್‌ನಲ್ಲಿ ನೋಡುತ್ತಾಳೆ.
ಪೂಜಾ, ಸುಂದ್ರಿ ಸೇರಿ ಮಾಡಿದ ನಾಟಕ ಶ್ರೇಷ್ಠಾಗೆ ಗೊತ್ತಾಗುತ್ತದೆ. ಇವರಿಗೆಲ್ಲಾ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸುವ ಶ್ರೇಷ್ಠಾ, ಯಾರಿಗೋ ಕರೆ ಮಾಡಿ, ನಾನು ಹೇಳಿದ ಕೆಲಸ ಮಾಡಿ, ದುಡ್ಡು ಎಷ್ಟು ಖರ್ಚಾದರೂ ಪರವಾಗಿಲ್ಲ ನಾನು ಕೊಡುತ್ತೇನೆ ಎನ್ನುತ್ತಾಳೆ. ನಂತರ ಪೂಜಾ ಬಳಿ ಬರುವ ಶ್ರೇಷ್ಠಾ, ನೀನು ನನ್ನ ತಂಗಿ ಇದ್ದಂತೆ, ಈ ಮನೆಯಲ್ಲಿ ನೀನು ಎಷ್ಟು ದಿನ ಬೇಕಾದರೂ ಇರು ಎನ್ನುತ್ತಾಳೆ. ಇದ್ದಕ್ಕಿದ್ದಂತೆ ಶ್ರೇಷ್ಠಾ ವರ್ತನೆ ನೋಡಿ ಪೂಜಾ ಗಾಬರಿ ಆಗುತ್ತಾಳೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ