Bhagyalakshmi Serial: ಸೊಸೆ ವಿಚಾರದಲ್ಲಿ ತನ್ನನ್ನು ಹೀಯಾಳಿಸಿದ ಕನ್ನಿಕಾಗೆ ಕಪಾಳ ಮೋಕ್ಷ ಮಾಡಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್ 9ರ ಸಂಚಿಕೆ ಹೀಗಿದೆ. ಮಹಿಳಾ ಸಾಧಕಿ ಪ್ರಶಸ್ತಿ ತನಗೆ ಬರಲಿಲ್ಲ ಎಂಬ ಕಾರಣಕ್ಕೆ ಕನ್ನಿಕಾ ಭಾಗ್ಯಾ-ಕುಸುಮಾ ಹೆಸರು ಹಾಳು ಮಾಡುವ ಪ್ರಯತ್ನದಲ್ಲಿದ್ಧಾಳೆ.

Bhagyalakshmi Kannada Serial: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾಗ್ಯಾ ಹಾಗೂ ಕುಸುಮಾ ಇಬ್ಬರನ್ನೂ ಸನ್ಮಾನ ಮಾಡಲು ಮಹಿಳಾ ಸಮಾಜದವರು ಆಹ್ವಾನಿಸಿದ್ದಾರೆ. ಈ ಬಾರಿಯ ಮಹಿಳಾ ಸಾಧಕಿ ಪ್ರಶಸ್ತಿ ನನಗೆ ಬರಬೇಕೆಂಬ ಕಾರಣಕ್ಕೆ ಕನ್ನಿಕಾ ಭಾಗ್ಯಾಳಂಥ ಮಹಿಳೆಗೆ ಪ್ರೋತ್ಸಾಹ ನೀಡಿ ತನ್ನ ಶಾಲೆಯಲ್ಲಿ ಓದಲು ಅವಕಾಶ ನೀಡಿರುವಂತೆ ನಾಟಕವಾಡುತ್ತಾಳೆ.
ಪ್ರಶಸ್ತಿ ಈ ಬಾರಿ ನನಗೆ ಬರುತ್ತಿಲ್ಲ, ಭಾಗ್ಯಾ ಹಾಗೂ ಅವಳ ಅತ್ತೆಗೆ ಬರುತ್ತಿದೆ ಎಂಬ ವಿಚಾರ ತಿಳಿದು ಕನ್ನಿಕಾ ಶಾಕ್ ಆಗುತ್ತಾಳೆ. ಭಾಗ್ಯಾ ಹಾಗೂ ಕುಸುಮಾ ಇಬ್ಬರನ್ನೂ ನೀವೇ ಪರಿಚಯ ಮಾಡಿಕೊಡಬೇಕು ಎಂದು ಕಾರ್ಯಕ್ರಮದ ಆಯೋಜಕಿ ಹೇಳಿದಾಗ ಕನ್ನಿಕಾ ಮತ್ತಷ್ಟು ಕೋಪಗೊಳ್ಳುತ್ತಾಳೆ. ಪ್ರಶಸ್ತಿ ನನಗೆ ಬರುತ್ತಿಲ್ಲ ಎಂಬ ಅಸಮಾಧಾನಕ್ಕೆ ಕುಸುಮಾ, ಭಾಗ್ಯಾ ಇಬ್ಬರ ಹೆಸರು ಹಾಳು ಮಾಡಲು ಕನ್ನಿಕಾ ಪ್ಲ್ಯಾನ್ ಮಾಡುತ್ತಾಳೆ. ತನ್ನ ಪಿಎಗೆ ಹೇಳಿ ಭಾಗ್ಯಾ ವೈಯಕ್ತಿಕ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾಳೆ.
ಭಾಗ್ಯಾ ವಿಚಾರದಲ್ಲಿ ಕನ್ನಿಕಾ ಕೊಂಕು
ಭರತನಾಟ್ಯಕ್ಕೆ ರೆಡಿ ಆಗುವಂತೆ ಹೇಳಿ ಭಾಗ್ಯಾಳನ್ನು ಹೊರಗೆ ಕಳಿಸುವ ಕನ್ನಿಕಾ, ಕುಸುಮಾಳನ್ನು ಎದುರಿಗೆ ಕೂರಿಸಿಕೊಂಡು ಕೊಂಕು ಮಾತನಾಡಲು ಶುರು ಮಾಡುತ್ತಾಳೆ. ಭಾಗ್ಯಾಳನ್ನು ಈ ವಯಸ್ಸಿನಲ್ಲಿ ನೀವು ಏಕೆ ಓದಿಸಿದ್ದು? 10ನೇ ತರಗತಿ ಪಾಸ್ ಆದ ನಂತರ ಮುಂದೇನು? ಡಿಗ್ರಿ ಓದಿಸಿ ನಿಮ್ಮ ಸೊಸೆಯನ್ನು ಆಫೀಸರ್ ಮಾಡುವ ಪ್ರಯತ್ನದಲ್ಲಿದ್ದೀರ? ನಿಮ್ಮ ಮಗ ನಿಮ್ಮ ಹಿಡಿತಕ್ಕೆ ಸಿಗುತ್ತಿಲ್ಲ ಆ ಕಾರಣಕ್ಕೆ ಸೊಸೆಯನ್ನು ಓದಿಸಿ ಅವಳಿಗೆ ಸಿಗುವ ಕೆಲಸ ಸಂಬಳದಿಂದ ನೀವು ಎಂಜಾಯ್ ಮಾಡಲು ನೋಡುತ್ತಿದ್ದೀರ, ಅಥವಾ ಸೊಸೆಗೆ ದೊರೆಯುತ್ತಿರುವ ಬಿಟ್ಟಿ ಪ್ರಚಾರವನ್ನು ನೀವು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎನ್ನುತ್ತಾಳೆ.
ಕನ್ನಿಕಾ ಮಾತಿನಿಂದ ಕೋಪಗೊಳ್ಳುವ ಕುಸುಮಾ, ಸೊಸೆ ಹೇಗಿದ್ದರೂ ಒಪ್ಪಿಕೊಳ್ಳುವ ಮನಸ್ಥಿತಿ ನನ್ನದು. ಆದರೆ ಈಗಿನ ಕಾಲದವರಿಗೆ ಹುಡುಗಿ ಹೆಚ್ಚು ಓದಿರಬೇಕು ಎಂಬ ಆಸೆ, ಅದೆಲ್ಲವನ್ನೂ ನನ್ನ ಮಗನಿಗೆ ಅರ್ಥ ಮಾಡಿಸಲು, ಅವಳನ್ನು ಓದಿಸುತ್ತಿದ್ದೇನೆ. ನನ್ನ ಸೊಸೆ ಓದಿದರೆ ಅವಳ ಸಂಸಾರ ಸರಿ ಆಗುತ್ತದೆ, ಆ ಕಾರಣಕ್ಕಾಗಿ ಓದಿಸುತ್ತಿದ್ದೇನೆ ಎನ್ನುತ್ತಾಳೆ. ಆ ಮಾತಿಗೂ ಕೊಂಕು ಆಡುವ ಕನ್ನಿಕಾಗೆ ಕುಸುಮಾ ಕಪಾಳ ಮೋಕ್ಷ ಮಾಡುತ್ತಾಳೆ. ಭಾಗ್ಯಾಗೆ ಕನ್ನಿಕಾ ನಾಟಕ ತಿಳಿದಿರುತ್ತದೆ. ಇವರ ಜೊತೆ ಮಾತನಾಡಬೇಡಿ ಅತ್ತೆ ಇವರು ಮಾಡುತ್ತಿರುವುದೆಲ್ಲಾ ನಾಟಕ ಎಂದು ಅತ್ತೆ ಬಳಿ ಓಡಿ ಬರುತ್ತಾಳೆ. ಅಷ್ಟರಲ್ಲಿ ಕಾರ್ಯಕ್ರಮ ಆರಂಭವಾಗುವುದದಿಂದ ಕುಸುಮಾ, ಭಾಗ್ಯಾ ಒಳಗೆ ಹೋಗುತ್ತಾರೆ.
ತಾನು ಗರ್ಭಿಣಿ ಎಂದು ಸುಳ್ಳು ಹೇಳುವ ಶ್ರೇಷ್ಠಾ
ಇತ್ತ ಶ್ರೇಷ್ಠಾ ತಾನು ಗರ್ಭಿಣಿ ಅಲ್ಲದಿದ್ದರೂ ತಾಂಡವ್‌ನನ್ನು ಮನೆಗೆ ಬರುವಂತೆ ಮಾಡಲು ಅವನಿಗೆ ತಾನು ಪ್ರೆಗ್ನೆಂಟ್ ಎಂದು ಸುಳ್ಳು ಹೇಳುತ್ತಾಳೆ. ವಿಚಾರ ತಿಳಿಯುತ್ತಿದ್ದಂತೆ ತಾಂಡವ್ ಗಾಬರಿ ಆಗುತ್ತಾನೆ. ಶ್ರೇಷ್ಠಾ ಮಾತನ್ನು ನಂಬಿ ತಾಂಡವ್ ಮತ್ತೆ ಅವಳೊಂದಿಗೆ ಸೆಟಲ್ ಆಗುತ್ತಾನಾ? ಕನ್ನಿಕಾ ತಾನು ಅಂದುಕೊಂಡಂತೆ ನಿಜವಾಗಲೂ ಭಾಗ್ಯಾ, ಕುಸುಮಾ ಹೆಸರು ಹಾಳು ಮಾಡುತ್ತಾಳಾ ಕಾದು ನೋಡಬೇಕು.
