ಕನ್ನಡ ಸುದ್ದಿ  /  ಮನರಂಜನೆ  /  ತಾಂಡವ್‌, ಶ್ರೇಷ್ಠಾ ಮದುವೆ ಆಹ್ವಾನ ಪತ್ರಿಕೆ ರೆಡಿ, ದೇವಸ್ಥಾನಕ್ಕೆ ಪೂಜೆ ಮಾಡಿಸಲು ಬಂದ ಕಳ್ಳ ಜೋಡಿ; ಭಾಗ್ಯಲಕ್ಷ್ಮೀ ಧಾರಾವಾಹಿ

ತಾಂಡವ್‌, ಶ್ರೇಷ್ಠಾ ಮದುವೆ ಆಹ್ವಾನ ಪತ್ರಿಕೆ ರೆಡಿ, ದೇವಸ್ಥಾನಕ್ಕೆ ಪೂಜೆ ಮಾಡಿಸಲು ಬಂದ ಕಳ್ಳ ಜೋಡಿ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 9ರ ಸಂಚಿಕೆ; ತಾಂಡವ್‌, ಶ್ರೇಷ್ಠಾ ಮದುವೆ ಆಹ್ವಾನ ಪತ್ರಿಕೆ ರೆಡಿ ಆಗಿದ್ದು ಪೂಜೆ ಮಾಡಿಸಲು ದೇವಸ್ಥಾನಕ್ಕೆ ಹೋಗುತ್ತಾರೆ. ಕೆಲಸ ಸಿಕ್ಕಿತೆಂಬ ಖುಷಿಗೆ ದೇವರ ದರ್ಶನ ಮಾಡಲು ಭಾಗ್ಯಾ ಕೂಡಾ ಅದೇ ದೇವಸ್ಥಾನಕ್ಕೆ ಹೋಗುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ಅಡ್ರೆಸ್‌ ತಪ್ಪಿ ಸ್ಟಾರ್‌ ಹೋಟೆಲ್‌ಗೆ ಇಂಟರ್‌ವ್ಯೂಗೆ ಹೋಗುವ ಭಾಗ್ಯಾ ಅಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ತಲೆ ಆಡಿಸುತ್ತಾಳೆ. ಭಾಗ್ಯಾ ಮಾತುಗಳನ್ನು ಕೇಳಿದ ಹೋಟೆಲ್‌ ಮ್ಯಾನೇಜ್‌ಮೆಂಟ್‌, ನಿಮಗೆ ಕೆಲಸ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಅದು ಭಾಗ್ಯಾಗೆ ಬಹಳ ದು:ಖವಾಗುತ್ತದೆ. ಆದರೆ ನಂತರ ನಾವು ಪ್ರಾಂಕ್‌ ಮಾಡಿದ್ದು, ನಿಮಗೆ ಕೆಲಸ ಸಿಕ್ಕಿದೆ, ನಾಳೆಯಿಂದಲೇ ಕೆಲಸಕ್ಕೆ ಬನ್ನಿ ಎಂದು ಆಫರ್‌ ಲೆಟರ್‌ ಕೊಡುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಇಷ್ಟು ದೊಡ್ಡ ಹೋಟೆಲ್‌ನಲ್ಲಿ ತನಗೆ ಕೆಲಸ ದೊರೆತಿದ್ದಕ್ಕೆ ಭಾಗ್ಯಾ ಸಂತೋಷ ವ್ಯಕ್ತಪಡಿಸುತ್ತಾಳೆ. ನಾನು ಕನಸಿನಲ್ಲಿ ಕೂಡಾ ಊಹೆ ಮಾಡಿರಲಿಲ್ಲ. ಈ ಕೆಲಸದಿಂದ ನಾನು ಮನೆ ನಡೆಸಬಹುದು, ಶ್ರೇಷ್ಠಾ ಸಾಲ ತೀರಿಸಬಹುದು ಎಂದು ಸಮಾಧಾನಗೊಳ್ಳುತ್ತಾಳೆ. ಈ ವಿಚಾರವನ್ನು ಗೋಪಾಲಣ್ಣನಿಗೆ ಹೇಳಬೇಕೆಂದು ಆತನಿಗೆ ಕರೆ ಮಾಡುತ್ತಾಳೆ.

ಭಾಗ್ಯಾ ಬಳಿ 20 ಸಾವಿರ ಫೀಸ್‌ಗೆ ಬ್ರೋಕರ್‌ ಡಿಮ್ಯಾಂಡ್‌

ನಾನು ಹೇಳಿದ್ದು ಬೇರೆ ಹೋಟೆಲ್‌ ಆದರೆ ಭಾಗ್ಯಾ ಹೋಗಿದ್ದೇ ಬೇರೆ ಹೋಟೆಲ್‌ ಎಂದು ತಿಳಿದ ಬ್ರೋಕರ್‌, ಆಕೆಗೆ ಅಷ್ಟು ದೊಡ್ಡ ಹೋಟೆಲ್‌ನಲ್ಲಿ ಕೆಲಸ ದೊರೆತಿದ್ದು ಕೇಳಿ ಆಶ್ಚರ್ಯವಾಗುತ್ತದೆ. ಹೇಗಾದರೂ ಮಾಡಿ ಇವಳ ಬಳಿ ಹಣ ಕೀಳಬೇಕೆಂದು ನಿರ್ಧರಿಸುವ ಆತ ನನಗೆ 20 ಸಾವಿರ ಫೀಸ್‌ ಕೊಡಬೇಕೆಂದು ಡಿಮ್ಯಾಂಡ್‌ ಮಾಡುತ್ತಾನೆ. ಅಷ್ಟು ಫೀಸ್‌ ಕೊಡಬೇಕಾ ಎಂದು ಭಾಗ್ಯಾ ಗಾಬರಿ ಆಗುತ್ತಾಳೆ.

ನಿನಗೆ ಅಷ್ಟು ಹಣ ಕೊಡಲು ಆಗದಿದ್ದರೆ ಈಗಲೇ ಹೇಳು, ಹೋಟೆಲ್‌ ಮ್ಯಾನೇಜರ್‌ಗೆ ಕರೆ ಮಾಡಿ ಈ ಕೆಲಸವನ್ನು ಬೇರೆಯವರಿಗೆ ಕೊಡಿಸುತ್ತೇನೆ ಎಂದು ಸುಳ್ಳು ಹೇಳುತ್ತಾನೆ. ಆದರೆ ಭಾಗ್ಯಾ ಗಾಬರಿಯಾಗುತ್ತಾಳೆ. ದಯವಿಟ್ಟು ಆ ಕೆಲಸ ಮಾಡಬೇಡಿ, ನಾನು ಖಂಡಿತ ನಿಮ್ಮ ಹಣ ಕೊಡುತ್ತೇನೆ, ಆದರೆ ನನಗೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಮನವಿ ಮಾಡುತ್ತಾಳೆ. ಗೋಪಾಲಣ್ಣ ಸಂತೋಷದಿಂದ ಸರಿ ಎಂದು ಒಪ್ಪಿಕೊಳ್ಳುತ್ತಾನೆ. ನಂತರ ಕುಸುಮಾ ಬಳಿ ಬಂದು ಫೀಸ್‌ ಕೇಳುತ್ತಾನೆ. ಆದರೆ ಕುಸುಮಾ ಅದಕ್ಕೆಲ್ಲಾ ಸೊಪ್ಪು ಹಾಕುವವಳಲ್ಲ ಎಂದು ಆತನಿಗೆ ನಂತರ ಅರ್ಥವಾಗುತ್ತದೆ. ಕೆಲಸ ಪಡೆಯಲು ಕಷ್ಟಪಟ್ಟಿದ್ದು ನಾನು. ಒತ್ತು ಶ್ಯಾವಿಗೆ ರುಚಿ ಮಾಡಿದ್ದು ಆ ಹೋಟೆಲ್‌ ಮ್ಯಾನೇಜರ್‌, ಮಧ್ಯದಲ್ಲಿ ನೀನು ಏನು ಕಷ್ಟಪಟ್ಟಿದ್ದೀಯ ಎಂದು ಪ್ರಶ್ನಿಸುತ್ತಾಳೆ. ಕುಸುಮಾಳ ಮಾತು ಕೇಳುವ ಗೋಪಾಲಣ್ಣ ಗಪ್‌ ಚುಪ್‌ ಎಂಬಂತೆ ಸುಮ್ಮನಾಗುತ್ತಾನೆ. 1000 ಕೊಡಲು ಆಗದಿದ್ದರೆ ಎಷ್ಟು ಸಾಧ್ಯವೋ ಅಷ್ಟು ಕೊಡಿ ಎನ್ನುತ್ತಾನೆ. ಬ್ಯಾಗಿನಿಂದ ಹಣ ತೆಗೆಯುವ ಕುಸುಮಾ ಆತನ ಕೈಗೆ 50 ರೂ. ನೋಟು ಇಟ್ಟು ಅಲ್ಲಿಂದ ಹೊರಡುತ್ತಾಳೆ.

ತಾಂಡವ್‌, ಶ್ರೇಷ್ಠಾ ಮದುವೆ ಆಹ್ವಾನ ಪತ್ರಿಕೆ ರೆಡಿ

ಇತ್ತ ಶ್ರೇಷ್ಠಾ, ಸೀರೆ ಉಟ್ಟು ಹೊರಗೆ ಬರುತ್ತಿದ್ದಂತೆ ಸುಂದರಿ ಹಾಗೂ ಪೂಜಾ ಇಬ್ಬರೂ ಆಕೆಯನ್ನು ಫಾಲೋ ಮಾಡಿಕೊಂಡು ಬರುತ್ತಾರೆ. ಆದರೆ ಅವರಿಬ್ಬರನ್ನೂ ನೋಡಿದ ಶ್ರೇಷ್ಠಾ ಅವರ ದಾರಿ ತಪ್ಪಿಸಿ ಒಂದೆಡೆ ಕಾರು ಪಾರ್ಕ್‌ ಮಾಡಿ ಆಟೋ ಹತ್ತಿ ದೇವಸ್ಥಾನಕ್ಕೆ ಬರುತ್ತಾಳೆ. ಅವಳು ಎಲ್ಲಿ ಹೋಗುತ್ತಿದ್ದಾಳೆ ಎಂದು ತಿಳಿಯದ ಪೂಜಾ ಹಾಗೂ ಸುಂದರಿ ಆಕೆಯ ಕಾರಿನ ಟೈರ್‌ ಪಂಚರ್‌ ತೆಗೆದು, ಗ್ಲಾಸ್‌ ಒಡೆದು ಪುಡಿ ಪುಡಿ ಮಾಡುತ್ತಾರೆ. ಶ್ರೇಷ್ಠಾ ನನ್ನನ್ನು ದೇವಸ್ಥಾನಕ್ಕೆ ಏಕೆ ಬರಲು ಹೇಳಿದ್ದಾಳೆ ಎಂದು ತಿಳಿಯದ ತಾಂಡವ್‌ ನಂತರ ಕಾರಣ ತಿಳಿದು ಗಾಬರಿ ಆಗುತ್ತಾನೆ.

ಶ್ರೇಷ್ಠಾ, ಮದುವೆ ಆಹ್ವಾನ ಪತ್ರಿಕೆ ರೆಡಿ ಮಾಡಿಸಿಕೊಂಡು ತಂದಿರುತ್ತಾಳೆ. ಅದಕ್ಕೆ ತನ್ನ ಹಾಗೂ ತಾಂಡವ್‌ ಫೋಟೋವನ್ನು ಕೂಡಾ ಹಾಕಿಸಿರುತ್ತಾಳೆ. ಅದನ್ನು ನೋಡುವ ತಾಂಡವ್‌ ಗಾಬರಿ ಆಗುತ್ತಾನೆ. ಮದುವೆಗೆ ಬರುವ 10 ಜನರಿಗೆ ಕೊಡಲು ಈ ರೀತಿ ಆಹ್ವಾನ ಪತ್ರಿಕೆ ಬೇಕಾಗಿತ್ತಾ ಎನ್ನುತ್ತಾನೆ. ಆದರೆ ಶ್ರೇಷ್ಠಾ ಮಾತ್ರ, ಅದ್ಧೂರಿಯಾಗೇ ಮದುವೆ ಆಗಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದ್ದಾಳೆ. ಹೇಗೋ ಸಮಾಧಾನ ಮಾಡಿ ತಾಂಡವ್‌ನನ್ನು ಕರೆದುಕೊಂಡು ಒಳಗೆ ಹೋಗುತ್ತಾಳೆ. ಕೆಲಸ ದೊರೆತ ಖುಷಿಗೆ ಭಾಗ್ಯಾ ಕೂಡಾ ಅದೇ ದೇವಸ್ಥಾನಕ್ಕೆ ಬರುತ್ತಾಳೆ.

ಶ್ರೇಷ್ಠಾ ಹಾಗೂ ತಾಂಡವ್‌ ಇಬ್ಬರನ್ನೂ ಭಾಗ್ಯಾ ನೋಡುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

IPL_Entry_Point