ಧರ್ಮರಾಜ್‌ಗೆ ಪೆನ್ಶನ್ ಹಣ ಸಿಗ್ತಿಲ್ಲ, ಇತ್ತ ಭಾಗ್ಯಾಗೆ ಹೋಟೆಲ್‌ನಲ್ಲಿ ಸಿಕ್ಕ ಕೆಲಸವೂ ಗ್ಯಾರಂಟಿ ಇಲ್ಲ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಕಲರ್ಸ್ ಕನ್ನಡ ಭಾಗ್ಯಲಕ್ಷ್ಮಿ ಧಾರಾವಾಹಿ ಏಪ್ರಿಲ್ 27ರ ಎಪಿಸೋಡ್. ಮನೆ ನಿಭಾಯಿಸಲು, ಶ್ರೇಷ್ಠಾ ಸಾಲ ತೀರಿಸಲು ಕುಸುಮಾ, ಧರ್ಮರಾಜ್, ಭಾಗ್ಯಾ ಪಣ ತೊಟ್ಟಿದ್ಧಾರೆ. ಆದರೆ ಧರ್ಮರಾಜ್‌ಗೆ ಪೆನ್ಶನ್ ಹಣ ಸಿಗ್ತಿಲ್ಲ, ಇತ್ತ ಭಾಗ್ಯಾಗೆ ಹೋಟೆಲ್‌ನಲ್ಲಿ ಸಿಕ್ಕ ಕೆಲಸವೂ ಗ್ಯಾರಂಟಿ ಇಲ್ಲ ಎನ್ನುವಂಥ ಪರಿಸ್ಥಿತಿ ಉಂಟಾಗಿದೆ.

Bhagyalakshmi Serial: ಶ್ರೇಷ್ಠಾ ಬಂದು ಸಾಲದ ಹಣ ಕೇಳಿ ಹೋದಾಗಿನಿಂದ ಭಾಗ್ಯಾಗೆ ನಿದ್ರೆ ಇಲ್ಲದಂತಾಗಿದೆ. ಕುಸುಮಾ ಕೂಡಾ ಭಾಗ್ಯಾ ಮೇಲೆ ಬೇಸರ ವ್ಯಕ್ತಪಡಿಸುತ್ತಾಳೆ. ಆ ದಿನ ನೀನು ನಮ್ಮನ್ನು ಕೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ರೇಗುತ್ತಾಳೆ. ಇದೇ ಸಮಯಕ್ಕೆ ತಾಂಡವ್ ಕೂಡಾ ಭಾಗ್ಯಾ ಕಾಲೆಳೆಯಲು ಶುರು ಮಾಡುತ್ತಾನೆ.
ನೀನು ಜೀವನಪೂರ್ತಿ ದುಡಿದರೂ 2 ಲಕ್ಷ ರೂ. ಸಾಲ ತೀರಿಸಲು ಸಾಧ್ಯವೇ ಇಲ್ಲ. ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿಬಿಡು, ನಿನಗೆ 20 ಲಕ್ಷ ಕೊಟ್ಟುಬಿಡುತ್ತೇನೆ ಎನ್ನುತ್ತಾನೆ. ನಿಮ್ಮ ಬಳಿ ದುಡ್ಡು ಕೇಳುವಂತಿದ್ದರೆ ಯಾವಾಗಲೋ ಕೇಳುತ್ತಿದ್ದೆ, ಆದರೆ ನನಗೆ ಆ ಉದ್ದೇಶ ಇಲ್ಲ, ಕಷ್ಟವೋ ಸುಖವೋ ನಾನು ಸಾಲ ತೀರಿಸುತ್ತೇನೆ ಎಂದು ಭಾಗ್ಯಾ ಉತ್ತರಿಸುತ್ತಾಳೆ. ಹೇಗೆ ತೀರಿಸುತ್ತೀಯ ಎಂದು ತಾಂಡವ್ ಪ್ರಶ್ನಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಕುಸುಮಾ, ಪಕ್ಕದ ಮನೆಯವರಿಗೆ ನಮ್ಮ ಚಿಂತೆ ಏಕೆ? ನಮ್ಮ ಕಷ್ಟ ನಮಗೆ, ನಾವು ಹೇಗಾದರೂ ಸಾಲ ತೀರಿಸುತ್ತೇವೆ. ಎಷ್ಟು ಬೇಕಾದರೂ ಕಷ್ಟ ಪಡುತ್ತೇವೆ. ಆದರೆ ಎಷ್ಟೇ ಕಷ್ಟವಾದರೂ ನಿನ್ನ ಮುಂದೆ ಮಾತ್ರ ಕೈ ಚಾಚುವುದಿಲ್ಲ.
ಇನ್ನು ಅತ್ತೆ ಸೊಸೆ ವಿಚಾರ ಕೂಡಾ ನಿನಗೆ ಬೇಡ. ನಾವು ಮುಖ ತಿರುಗಿಸಿಕೊಂಡಾದರೂ ಹೋಗುತ್ತೇವೆ. ಜಡೆ ಹಿಡಿದು ಜಗಳ ಆದ್ರೂ ಆಡುತ್ತೇವೆ. ಅದು ನಮಗೆ ಬಿಟ್ಟಿದ್ದು, ಪಕ್ಕದ ಮನೆಯವರಿಗೆ ಮತ್ತೊಬ್ಬರ ವಿಚಾರಕ್ಕೆ ತಲೆ ಹಾಕುವ ಅಧಿಕಾರ ಇಲ್ಲ ಎಂದು ತಾಂಡವ್‌ಗೆ ಮುಟ್ಟಿ ನೋಡುವಂತೆ ಉತ್ತರ ಕೊಡುವ ಕುಸುಮಾ, ಭಾಗ್ಯಾ ಕೈ ಹಿಡಿದು ಒಳಗೆ ಕರೆದೊಯ್ಯುತ್ತಾಳೆ.
ಕುಸುಮಾ ಮಾತುಗಳನ್ನು ಕೇಳಿ ತಾಂಡವ್ ಸಪ್ಪಗಾಗುತ್ತಾನೆ. ಅವನ್ನು ನೋಡಿ ಧರ್ಮರಾಜ್, ನಿಂಗಿದು ಬೇಕಿತ್ತಾ ಮಗನೇ, ವಾಪಸ್ ಹೊಂಟೋಗು ಶಿವನೇ ಎಂಬ ಸಿನಿಮಾ ಹಾಡು ಹೇಳುವ ಮೂಲಕ ಕಾಲೆಳೆಯುತ್ತಾರೆ. ಅತ್ತೆ ಬಳಿ ಏನೂ ಮುಚ್ಚಿಡಬಾರದು ಎಂಬ ಕಾರಣಕ್ಕೆ ಭಾಗ್ಯಾ ತನಗೆ ಕೆಲಸ ದೊರೆತ ವಿಚಾರವನ್ನು ಹೇಳುತ್ತಾಳೆ. ಆದರೆ ಕುಸುಮಾ ಬೇಸರಗೊಳ್ಳುತ್ತಾಳೆ. ಅತ್ತೆ, ಮಾವ ಎನಿಸಿಕೊಂಡವರು ನಾವು ಇನ್ನೂ ಇದ್ದೇವೆ, ನಾವು ಹಣಕ್ಕೆ ಏನಾದರೂ ಮಾಡುತ್ತೇವೆ, ನಿನಗೆ ಚಿಂತೆ ಬೇಡ ಎನ್ನುತ್ತಾಳೆ.
ಭಾಗ್ಯಾ ಪರೀಕ್ಷೆ ಮುಗಿಸಿಕೊಂಡು ತನ್ವಿಗೆ ಆಟೋ ಹತ್ತಿಸಿ ಮನೆಗೆ ಕಳಿಸುತ್ತಾಳೆ. ಅರ್ಧ ಮನಸ್ಸಿನಿಂದಲೇ ಹೋಟೆಲ್‌ಗೆ ಕೆಲಸಕ್ಕೆ ಬರುತ್ತಾಳೆ. ಆದರೆ ಹೋಟೆಲ್‌ನಲ್ಲಿ ಭಾಗ್ಯಾಗೆ ಕೆಲಸ ಕೊಟ್ಟ ಓನರ್ ಬದಲಿಗೆ ಬೇರೊಬ್ಬ ಮಹಿಳೆ ಇರುತ್ತಾರೆ. ಯಾರು ನೀನು? ಏಕಾಏಕಿ ಅಡುಗೆ ಮನೆಗೆ ಏಕೆ ನುಗ್ಗುತ್ತಿದ್ದೀಯ ಎಂದು ಕೇಳುತ್ತಾಳೆ. ನಾನು ಹೊಸದಾಗಿ ಕೆಲಸಕ್ಕೆ ಬಂದಿದ್ದೇನೆ ಎನ್ನುತ್ತಾಳೆ. ಇದು ಕೆಲಸಕ್ಕೆ ಬರುವ ಸಮಯಾನಾ? ಮಧ್ಯಾಹ್ನ ಯಾರಾದರೂ ಕಾಫಿ ಕುಡಿಯುತ್ತಾರಾ ಎಂದು ಕೇಳುತ್ತಾಳೆ. ನಾನು ಯಜಮಾನರ ಬಳಿ ಮಾತನಾಡಿದ್ದೇನೆ, ಪರೀಕ್ಷೆ ಮುಗಿದ ನಂತರ ಪೂರ್ತಿ ಕೆಲಸಕ್ಕೆ ಬರಲು ಹೇಳಿದ್ದಾರೆ ಎಂದು ಭಾಗ್ಯಾ ಹೇಳುತ್ತಾಳೆ. ಇಲ್ಲಿ ನಾನೇ ಓನರ್ ಬೇರೆ ಯಾರೂ ಇಲ್ಲ ಏಂದು ಆ ಮಹಿಳೆ ಗತ್ತಿನಲ್ಲಿ ಹೇಳುತ್ತಾಳೆ.
ಇತ್ತ ಪೆನ್ಶನ್ ಆಫೀಸಿಗೆ ಬರುವ ಧರ್ಮರಾಜ್ ಹಾಗೂ ಕುಸುಮಾಗೆ ಶಾಕ್ ಕಾದಿರುತ್ತದೆ. ಪ್ರತಿ ತಿಂಗಳು ಸಹಿ ಹಾಕದ ಕಾರಣ ಧರ್ಮರಾಜ್ ಪೆನ್ಶನ್ ಅಕೌಂಟ್ ಬ್ಲಾಕ್ ಆಗಿರುತ್ತದೆ. ಅದು ಸರಿ ಆಗಲು ಸಮಯ ಬೇಕು, ಈಗ ನೀವು ಹಣ ಪಡೆಯಲು ಆಗುವುದಿಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ.
ಧರ್ಮರಾಜ್‌ಗೆ ಪೆನ್ಶನ್ ಹಣ ಇಲ್ಲ, ಇತ್ತ ಭಾಗ್ಯಾಗೆ ದೊರೆತ ಕೆಲಸವೂ ಗ್ಯಾರಂಟಿ ಇಲ್ಲ. ಮನೆ ಇಎಂಐ ಕಟ್ಟಲು, ಶ್ರೇಷ್ಠಾ ಸಾಲ ತೀರಿಸಲು ಭಾಗ್ಯಾ ಏನು ಮಾಡುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ವಿಭಾಗ