ಭಾಗ್ಯಾ-ನನ್ನ ಜೀವನ ಒಂದೇ ರೀತಿ, ಹಳೆಯ ದಿನಗಳಿಗೆ ಜಾರಿ ಕಣ್ಣೀರಿಟ್ಟ ಸುಂದ್ರಿ, ತಬ್ಬಿ ಸಂತೈಸಿದ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾ-ನನ್ನ ಜೀವನ ಒಂದೇ ರೀತಿ, ಹಳೆಯ ದಿನಗಳಿಗೆ ಜಾರಿ ಕಣ್ಣೀರಿಟ್ಟ ಸುಂದ್ರಿ, ತಬ್ಬಿ ಸಂತೈಸಿದ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾ-ನನ್ನ ಜೀವನ ಒಂದೇ ರೀತಿ, ಹಳೆಯ ದಿನಗಳಿಗೆ ಜಾರಿ ಕಣ್ಣೀರಿಟ್ಟ ಸುಂದ್ರಿ, ತಬ್ಬಿ ಸಂತೈಸಿದ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 10ರ ಎಪಿಸೋಡ್‌. ಶ್ರೇಷ್ಠಾಗೆ ಎಚ್ಚರಿಕೆ ಕೊಡುವ ಹಿತಾಳನ್ನು ಪೂಜಾ ಪರಿಚಯ ಮಾಡಿಕೊಳ್ಳುತ್ತಾಳೆ. ನಾನು ಭಾಗ್ಯಾ ರೀತಿ ಹಿಂದೆ ಬಹಳ ಅನುಭವಿಸಿದ್ದೆ ಎಂದು ಹೇಳಿಕೊಂಡು ಸುಂದ್ರಿ ಕಣ್ಣೀರಿಡುತ್ತಾಳೆ. ಪೂಜಾ, ಸುಂದ್ರಿಯನ್ನು ತಬ್ಬಿ ಸಂತೈಸುತ್ತಾಳೆ.

ಭಾಗ್ಯಾ-ನನ್ನ ಜೀವನ ಒಂದೇ ರೀತಿ, ಹಳೆಯ ದಿನಗಳಿಗೆ ಜಾರಿ ಕಣ್ಣೀರಿಟ್ಟ ಸುಂದ್ರಿ, ತಬ್ಬಿ ಸಂತೈಸಿದ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಾ-ನನ್ನ ಜೀವನ ಒಂದೇ ರೀತಿ, ಹಳೆಯ ದಿನಗಳಿಗೆ ಜಾರಿ ಕಣ್ಣೀರಿಟ್ಟ ಸುಂದ್ರಿ, ತಬ್ಬಿ ಸಂತೈಸಿದ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ತಾಂಡವ್‌ ಬಗ್ಗೆ ಭಾಗ್ಯಾಗೆ ಎಲ್ಲವನ್ನೂ ಹೇಳಲು ಹೋದ ಹಿತಾ, ಅಲ್ಲಿ ಮಕ್ಕಳ ಮುಖ ನೋಡಿ ಸುಮ್ಮನಾಗುತ್ತಾಳೆ. ಮುಗ್ಧ ಮಕ್ಕಳು ದೇವರ ಬಳಿ ಅಪ್ಪ ಅಮ್ಮನನ್ನು ಒಂದು ಮಾಡು ಎಂದು ಕೇಳಿಕೊಳ್ಳುತ್ತಿದ್ದಾರೆ ಅಂತದರಲ್ಲಿ ನಿಜ ಹೇಳಿ ಅವರ ಮನಸ್ಸಿಗೆ ಬೇಸರ ಮಾಡುವುದು ಬೇಡ ಎಂದು ಸುಮ್ಮನಾಗುತ್ತಾಳೆ. ಆದಷ್ಟು ಬೇಗ ಶ್ರೇಷ್ಠಾಳನ್ನು ಬಿಟ್ಟು ಭಾಗ್ಯಾ ಜೊತೆ ಜೀವನ ಮಾಡುವಂತೆ ತಾಂಡವ್‌ಗೆ ಬುದ್ಧಿ ಹೇಳುತ್ತಾಳೆ.

ಹಿತಾಳಿಗೆ ತನ್ನ ಪರಿಚಯ ಮಾಡಿಕೊಂಡ ಪೂಜಾ

ಭಾಗ್ಯಾಳನ್ನು ಭೇಟಿ ಮಾಡಿ ಶ್ರೇಷ್ಠಾ ಮನೆಗೆ ಬರುವ ಹಿತಾ, ಅಲ್ಲಿ ಆಕೆಗೂ ಎಚ್ಚರಿಕೆ ಕೊಡುತ್ತಾಳೆ. ಯಾವುದೇ ಕಾರಣಕ್ಕೂ ನೀವಿಬ್ಬರೂ ಮದುವೆ ಆಗಲು ನಾನು ಬಿಡುವುದಿಲ್ಲ ಎಂದು ಅಲ್ಲಿಂದ ಹೊರಡುತ್ತಾಳೆ. ಯಾರೋ ಹೊಸಬರು ಬಂದು ಶ್ರೇಷ್ಠಾಗೆ ಎಚ್ಚರಿಕೆ ನೀಡುತ್ತಿರುವುದಕ್ಕೆ ಪೂಜಾ ಹಾಗೂ ಸುಂದರಿ ಇಬ್ಬರೂ ಖುಷಿ ಆಗುತ್ತಾರೆ. ಹಿತಾ ಹಿಂದೆ ಬರುವ ಪೂಜಾ, ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ. ಶ್ರೇಷ್ಠಾ ಕೊಬ್ಬು ಇಳಿಸೋಕೆ ನಾನು ಇಲ್ಲಿ ಬಂದು ಸೇರಿಕೊಂಡಿದ್ದೇನೆ. ನಿಮ್ಮಂಥ ಒಳ್ಳೆ ಜನರನ್ನು ಅಕ್ಕ ಸಂಪಾದನೆ ಮಾಡಿರುವುದು ನನಗೆ ಬಹಳ ಖುಷಿಯಾಗುತ್ತಿದೆ ಎನ್ನುತ್ತಾಳೆ. ಭಾಗ್ಯಾ, ನಿಮಗೆ ಮಾತ್ರವಲ್ಲ, ನನಗೂ ಅಕ್ಕ ಇದ್ದಂತೆ, ಆದ್ದರಿಂದಲೇ ಅವರ ಜೀವನ ಸರಿ ಮಾಡಲು ಇಷ್ಟು ಕಷ್ಟಪಡುತ್ತಿದ್ದೇನೆ ಎಂದು ಹಿತಾ, ಪೂಜಾಗೆ ಹೇಳುತ್ತಾಳೆ.

ಅಷ್ಟರಲ್ಲಿ ಅಲ್ಲಿಗೆ ಸುಂದರಿ ಬರುತ್ತಾಳೆ. ಆಕೆಯನ್ನು ನೋಡಿ ಇವರು ಯಾರು ಎಂದು ಹಿತಾ ಕೇಳುತ್ತಾಳೆ. ನಾನು ಶ್ರೇಷ್ಠಾ ಅತ್ತೆ, ತಾಂಡವ್‌ ಅಮ್ಮನಾಗಿ ಆಕ್ಟ್‌ ಮಾಡಲು ಬಂದಿದ್ದೇನೆ ಎಂದು ಸುಂದರಿ ಹೇಳುತ್ತಾಳೆ. ನಾನು ಬಹಳ ದಿನಗಳಿಂದ ನಿನ್ನ ಬಳಿ ಕೇಳೋಣ ಎಂದುಕೊಂಡೆ. ಶ್ರೇಷ್ಠಾ ನಿನಗೆ ದುಡ್ಡು ಕೊಟ್ಟು ಆಕ್ಟ್‌ ಮಾಡಲು ಕರೆದುಕೊಂಡುಬಂದದ್ದು ಆದರೆ, ನೀನು ಭಾಗ್ಯಾ ಕಡೆ ಏಕೆ ಸಪೋರ್ಟ್‌ ಮಾಡುತ್ತಿದ್ದೀಯ ಎಂದು ಪೂಜಾ, ಸುಂದರಿಯನ್ನು ಕೇಳುತ್ತಾಳೆ. ಆಗ ಸುಂದ್ರಿ ಹಳೆಯ ದಿನಗಳಿಗೆ ಜಾರುತ್ತಾಳೆ.

ತನ್ನ ಹಳೆಯ ಜೀವನ ನೆನಪಿಸಿಕೊಂಡ ಸುಂದ್ರಿ

ಭಾಗ್ಯಾ, ನನ್ನ ಜೀವನ ಒಂದೇ. ನಾನೂ ಭಾಗ್ಯಾ ರೀತಿ ನೋವು ಅನುಭವಿಸಿದ್ದೇನೆ. ನನ್ನ ಗಂಡ ಬೇರೆ ಹೆಣ್ಣಿನ ಸೆರಗು ಹಿಡಿದುಕೊಂಡು ನನ್ನನ್ನು ಬಿಟ್ಟ, ನನಗೆ ಈಗಲೂ ಅದರ ಬಗ್ಗೆ ನೋವಿದೆ. ಈಗ ಭಾಗ್ಯಾ ಅದೇ ಸ್ಥಿತಿಯಲ್ಲಿದ್ದಾಳೆ. ಆದ್ದರಿಂದ ಯಾರೇ ಹೆಣ್ಣು ಮಕ್ಕಳು ನೋವಿನಲ್ಲಿದ್ದರೂ ನಾನು ಅವರ ಪರ ನಿಲ್ಲುತ್ತೇನೆ ಎನ್ನುತ್ತಾಳೆ. ಸುಂದ್ರಿ, ಇಲ್ಲಿಗೆ ಬರುವ ಮುನ್ನ ಇಷ್ಟೆಲ್ಲಾ ನೋವು ಅನುಭವಿಸಿದ್ಧಾಳೆ ಎಂದು ತಿಳಿದು ಪೂಜಾಗೆ ಆಶ್ಚರ್ಯವಾಗುತ್ತದೆ. ಅಳುತ್ತಿರುವ ಸುಂದ್ರಿಯನ್ನು ಪೂಜಾ ತಬ್ಬಿ ಸಂತೈಸುತ್ತಾಳೆ. ಪೂಜಾ, ಹಿತಾ, ಸುಂದ್ರಿ ಮೂವರೂ ಸೇರಿ ಭಾಗ್ಯಾ ಜೀವನ ಸರಿ ಮಾಡಲು ಒಂದು ಪ್ಲ್ಯಾನ್‌ ರೂಪಿಸುತ್ತಾರೆ.

ಮತ್ತೊಂದೆಡೆ ಭಾಗ್ಯಾ, ಕುಸುಮಾ ಎಲ್ಲರೂ ದೇವಸ್ಥಾನದಿಂದ ಮನೆಗೆ ಬರುತ್ತಾರೆ. ನಿನ್ನನ್ನು ಹುಡುಕಿಕೊಂಡು ಒಂದು ಹುಡುಗಿ ಬಂದಿದ್ದಳು. ನಿನ್ನ ಗಂಡನ ಬಗ್ಗೆ ಅವಳಿಗೆ ಬಹಳ ಕೋಪ ಇತ್ತು, ಏನಾಯ್ತು, ನಿನ್ನ ಬಳಿ ಏನು ಹೇಳಿದಳು ಎಂದು ಕೇಳುತ್ತಾಳೆ. ಅದನ್ನು ಕೇಳುತ್ತಿದ್ದಂತೆ ತಾಂಡವ್‌ಗೆ ಭಯ, ಕೋಪ ಶುರುವಾಗುತ್ತದೆ. ನೀವು ಈ ಮನೆಗೆ ಗತಿ ಇಲ್ಲದೆ ಬಂದಿದ್ದೀರಿ, ಸುಮ್ಮನೆ ತಂದುಹಾಕಿದ್ದನ್ನು ತಿಂದು ಕೂರಬೇಕು. ಅದರ ಬದಲಿಗೆ ಇಲ್ಲಸಲ್ಲದ್ದನ್ನು ಹೇಳಿ ನನ್ನ ತಂದೆ ತಾಯಿ ನನ್ನ ಮೇಲೆ ಅನುಮಾನ ಪಡುವಂತೆ ಮಾಡಬೇಡಿ ಎಂದು ಸುನಂದಾಗೆ ಅವಮಾನ ಮಾಡುತ್ತಾನೆ. ಅಳಿಯನ ಮಾತು ಕೇಳಿ ಸುನಂದಾ ಕಣ್ಣೀರಿಡುತ್ತಾಳೆ. ಭಾಗ್ಯಾ, ಧರ್ಮರಾಜ್‌, ಕುಸುಮಾ ತಾಂಡವ್‌ಗೆ ಬೈದು ಸುನಂದಾಳನ್ನು ಸಮಾಧಾನ ಮಾಡುತ್ತಾರೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌