ನಾನೂ ಫೈವ್‌ಸ್ಟಾರ್‌ ಹೋಟೆಲ್‌ ಶುರು ಮಾಡಿ ಕುಸುಮಾ ಪ್ಯಾಲೇಸ್‌ ಅಂತ ಹೆಸರಿಡ್ತೀನಿ, ತಾಂಡವ್‌ಗೆ ಭಾಗ್ಯಾ ಸವಾಲು; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ನಾನೂ ಫೈವ್‌ಸ್ಟಾರ್‌ ಹೋಟೆಲ್‌ ಶುರು ಮಾಡಿ ಕುಸುಮಾ ಪ್ಯಾಲೇಸ್‌ ಅಂತ ಹೆಸರಿಡ್ತೀನಿ, ತಾಂಡವ್‌ಗೆ ಭಾಗ್ಯಾ ಸವಾಲು; ಭಾಗ್ಯಲಕ್ಷ್ಮೀ ಧಾರಾವಾಹಿ

ನಾನೂ ಫೈವ್‌ಸ್ಟಾರ್‌ ಹೋಟೆಲ್‌ ಶುರು ಮಾಡಿ ಕುಸುಮಾ ಪ್ಯಾಲೇಸ್‌ ಅಂತ ಹೆಸರಿಡ್ತೀನಿ, ತಾಂಡವ್‌ಗೆ ಭಾಗ್ಯಾ ಸವಾಲು; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 12ರ ಎಪಿಸೋಡ್‌. ಚುಚ್ಚು ಮಾತುಳಿಂದಲೇ ಅತ್ತೆಗೆ ನೋವು ಕೊಡುವ ತಾಂಡವ್‌ ಕೊನೆಗೂ ಸುನಂದಾ ಮನೆ ಬಿಟ್ಟು ಹೋಗುವಂತೆ ಮಾಡುತ್ತಾನೆ. ಭಾಗ್ಯಾ ಕರೆದೊಯ್ಯಲು ಕಾರು ಬಂದಾಗ ತಾಂಡವ್‌ಗೆ ಸಹಿಸಿಕೊಳ್ಳಲಾಗದೆ ಅದಕ್ಕೂ ಹೀಯಾಳಿಸುತ್ತಾನೆ.

ನಾನೂ ಫೈವ್‌ಸ್ಟಾರ್‌ ಹೋಟೆಲ್‌ ಶುರು ಮಾಡಿ ಕುಸುಮಾ ಪ್ಯಾಲೇಸ್‌ ಅಂತ ಹೆಸರಿಡ್ತೀನಿ, ತಾಂಡವ್‌ಗೆ ಭಾಗ್ಯಾ ಸವಾಲು; ಭಾಗ್ಯಲಕ್ಷ್ಮೀ ಧಾರಾವಾಹಿ
ನಾನೂ ಫೈವ್‌ಸ್ಟಾರ್‌ ಹೋಟೆಲ್‌ ಶುರು ಮಾಡಿ ಕುಸುಮಾ ಪ್ಯಾಲೇಸ್‌ ಅಂತ ಹೆಸರಿಡ್ತೀನಿ, ತಾಂಡವ್‌ಗೆ ಭಾಗ್ಯಾ ಸವಾಲು; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಮಗಳ ಜೀವನ ಹೀಗಾಯ್ತಲ್ಲಾ ಎಂದು ನೊಂದುಕೊಂಡು ಇಷ್ಟು ದಿನಗಳ ಕಾಲ ಮಗಳ ಜೊತೆಯಲ್ಲೇ ಉಳಿದಿದ್ದ ಸುನಂದಾ, ಈಗ ಲಗ್ಗೇಜ್‌ ತೆಗೆದುಕೊಂಡು ಮನೆಗೆ ವಾಪಸ್‌ ಹೋಗಲು ಮುಂದಾಗಿದ್ದಾಳೆ. ಬಿಟ್ಟಿ ಊಟ ತಿಂದು ನನ್ನ , ತಂದೆ ತಾಯಿ ಮಧ್ಯೆ ಜಗಳ ತರುತ್ತೀರ ಎಂದು ತಾಂಡವ್‌ ಆಡಿದ ಮಾತುಗಳಿಂದ ಸುನಂದಾ ಬೇಸರಗೊಳ್ಳುತ್ತಾಳೆ.

ಭಾಗ್ಯಾ ಮನೆಯಿಂದ ತನ್ನ ಮನೆಗೆ ಹೊರಟ ಸುನಂದಾ

ತಾಂಡವ್‌ ಮಾತಿನ ಕಡೆ ಗಮನ ಕೊಡಬೇಡಿ, ಬೆಳಗ್ಗಿನಿಂದ ಎಷ್ಟೋ ಖುಷಿಪಡುವ ವಿಚಾರಗಳು ನಡೆದಿದೆ. ನಿಮ್ಮ ಮಗಳು ಸಾಧನೆ ಮಾಡಿದ್ದಾಳೆ. ಅವಳ ಬಗ್ಗೆ ಖುಷಿ ಪಡಿ ಎಂದು ಕುಸುಮಾ, ಸುನಂದಾಳನ್ನು ಸಮಾಧಾನ ಮಾಡುತ್ತಾಳೆ. ಆದರೆ ಸುನಂದಾಗೆ ತಾಂಡವ್‌ ಮಾತು ಬಹಳ ನೋವು ಕೊಟ್ಟಿದೆ. ಮನೆಗೆ ವಾಪಸ್‌ ಹೋಗಲು ನಿರ್ಧರಿಸಿದ್ದಾಳೆ. ಅಳಿಯಂದಿರು ತಿಳಿದು ಈ ಮಾತು ಹೇಳಿದರೋ, ತಿಳಿಯದೆ ಹೇಳಿದರೋ ಒಟ್ಟಿನಲ್ಲಿ ಅವರ ಮಾತಿನಲ್ಲಿ ನಿಜವಿದೆ. ಹೆತ್ತವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟ ನಂತರ ಬೀಗರ ಮನೆಗೆ ಈ ರೀತಿ ಬಂದು ಇರಬಾರದು. ಭಾಗ್ಯಾ ನಿನಗೆ ದೇವರಂಥ ಅತ್ತೆ ಮಾವ ಸಿಕ್ಕಿದ್ದಾರೆ. ಮುದ್ದಾದ ಮಕ್ಕಳಿದ್ದಾರೆ. ನಿನ್ನ ಸಂಸಾರವನ್ನು ನೀನೇ ಉಳಿಸಿಕೋ ಎಂದು ಅಳುತ್ತಲೇ ಅಲ್ಲಿಂದ ಹೊರಡುತ್ತಾಳೆ.

ತನ್ನ ತಾಯಿಗೆ ಈ ರೀತಿ ಅವಮಾನ ಮಾಡಿದ್ದಕ್ಕೆ ಭಾಗ್ಯಾ ಬೇಸರ ವ್ಯಕ್ತಪಡಿಸುತ್ತಾಳೆ. ನಿನಗೆ ನಿನ್ನ ಅಪ್ಪ ಅಮ್ಮನ ಬಗ್ಗೆ ಅಷ್ಟು ಪ್ರೀತಿ ಇದ್ದರೆ ನನಗೆ ಡಿವೋರ್ಸ್‌ ಕೊಟ್ಟು ನಿನ್ನ ಮನೆಗೆ ವಾಪಸ್‌ ಹೋಗಿ ನಿನ್ನ ಅಪ್ಪ ಅಮ್ಮನನ್ನು ನೋಡಿಕೋ ಎಂದು ತಾಂಡವ್‌ ಭಾಗ್ಯಾಳನ್ನು ಹೀಯಾಳಿಸುತ್ತಾನೆ. ಯಾವುದೇ ಕಾರಣಕ್ಕೂ ನಿಮಗೆ ಡಿವೋರ್ಸ್‌ ನೀಡುವುದಿಲ್ಲ. ಅಪ್ಪ ಅಮ್ಮ ಜೊತೆಯಾಗಿರಬೇಕು ಎಂದು ನನ್ನ ಮಕ್ಕಳು ಆಸೆ ಪಡುತ್ತಿದ್ದಾರೆ. ಪ್ರತಿ ಬಾರಿ ನಿಮ್ಮ ಮಾತೇ ನಡೆಯಬೇಕೆಂಬ ಕಾನೂನಿಲ್ಲ ನಾನಂತೂ ಖಂಡಿತ ಡಿವೋರ್ಸ್‌ ಕೊಡುವುದಿಲ್ಲ ಎಂದು ಖಡಕ್‌ ಆಗಿ ಹೇಳುತ್ತಾಳೆ. ಕುಸುಮಾ ಕೂಡಾ ತಾಂಡವ್‌ ವರ್ತನೆಗೆ ಬೇಸರ ವ್ಯಕ್ತಪಡಿಸುತ್ತಾಳೆ.

ತಾಂಡವ್‌ಗೆ ಭಾಗ್ಯಾ ಸವಾಲು

ಮರುದಿನ ಭಾಗ್ಯಾ, ಕೆಲಸಕ್ಕೆ ಹೋಗಲು ರೆಡಿ ಆಗುತ್ತಾಳೆ. ಅವಳನ್ನು ಕರೆದೊಯ್ಯಲು ಹೋಟೆಲ್‌ನಿಂದ ಕಾರು ಬರುತ್ತದೆ. ತನ್ನನ್ನು ಕರೆಯಲು ಬಂದ ಡ್ರೈವರ್‌ಗೆ ಭಾಗ್ಯಾ ಗುಡ್‌ ಮಾರ್ನಿಂಗ್‌ ಹೇಳುತ್ತಾಳೆ. ಅಮ್ಮನ ಇಂಗ್ಲೀಷ್‌ ನೋಡಿ ತನ್ವಿ ಖುಷಿಯಾಗುತ್ತಾಳೆ. ಭಾಗ್ಯಾ ಹಿಡಿದುಕೊಂಡಿದ್ದ ಬ್ಯಾಗನ್ನು ಪಡೆಯುವ ಡ್ರೈವರ್‌, ಕೊಡಿ ಇದನ್ನು ಕಾರಿನಲ್ಲಿ ಇಡುತ್ತೇನೆ ಎಂದು ತೆಗೆದುಕೊಂಡು ಹೋಗುತ್ತಾನೆ. ಅದನ್ನು ನೋಡಿ ಕುಸುಮಾ, ಧರ್ಮರಾಜ್‌ ಖುಷಿಯಾಗುತ್ತಾರೆ. ನನ್ನ ಸೊಸೆಗೆ ಇಷ್ಟೆಲ್ಲಾ ಮರ್ಯಾದೆ ಸಿಗುತ್ತಿದೆ ನೋಡಿ ಎಂದು ಕುಸುಮಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಅದಕ್ಕೆ ಪ್ರತಿಕ್ರಿಯಿಸುವ ಧರ್ಮರಾಜ್‌, ಫೈವ್‌ ಸ್ಟಾರ್‌ ಹೋಟೆಲ್‌ ಅಂದ್ರೆ ಸುಮ್ಮನೆ ಅಲ್ಲ, ಯಾರಿಗೆ ಗೊತ್ತು ಮುಂದೆ ಸ್ವತಃ ಭಾಗ್ಯಾ, ಫೈವ್‌ ಸ್ಟಾರ್‌ ಹೋಟೆಲ್‌ ಶುರು ಮಾಡಬಹುದು ಎನ್ನುತ್ತಾನೆ.

ಕುಸುಮಾ, ಧರ್ಮರಾಜ್‌ ಮಾತಿಗೆ ಪ್ರತಿಕ್ರಿಯಿಸುವ ತಾಂಡವ್‌, ಹೋ ಫೈವ್‌ ಸ್ಟಾರ್‌ ಹೋಟೆಲ್‌ಗೆ ನಿಮ್ಮ ಸೊಸೆ ನಿಮ್ಮ ಹೆಸರೇ ಇಡಬಹುದೇನೋ ಎಂದು ಕೊಂಕು ಮಾತನಾಡುತ್ತಾನೆ. ಅದಕ್ಕೆ ಉತ್ತರಿಸುವ ಭಾಗ್ಯಾ ಹೌದು ಏಕೆ ಆಗಬಾರದು? ನಾನೂ ಮುಂದೆ ಫೈವ್‌ ಸ್ಟಾರ್‌ ಹೋಟೆಲ್‌ ಶುರು ಮಾಡಿ ಅದಕ್ಕೆ ಹೋಟೆಲ್‌ ಕುಸುಮಾ ಪ್ಯಾಲೇಸ್‌ ಅಂತಾನೆ ಹೆಸರು ಇಡ್ತೀನಿ ಎಂದು ಸವಾಲ್‌ ಹಾಕುತ್ತಾಳೆ. ಭಾಗ್ಯಾ ಆತ್ಮವಿಶ್ವಾಸ ಕಂಡು ತಾಂಡವ್‌ ಮರು ಮಾತನಾಡದೆ ಸುಮ್ಮನಾಗುತ್ತಾನೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

 

Whats_app_banner