ಬಟ್ಟೆ ಅಂಗಡಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪ್ರೇಮಿಗಳು, ಶ್ರೇಷ್ಠಾ-ತಾಂಡವ್‌ಗೆ ಮುಂದೈತೆ ಮಾರಿ ಹಬ್ಬ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 18ರ ಎಪಿಸೋಡ್. ಶ್ರೇಷ್ಠ ಸಹವಾಸ ಬೇಡ ಎಂದು ಹೇಳಿದ್ದರೂ ತಾಂಡವ್ ಮತ್ತೆ ಅವಳೊಂದಿಗೆ ಶಾಪಿಂಗ್ ಮಾಡಲು ಹೋಗುತ್ತಾನೆ. ಅದೇ ಬಟ್ಟೆ ಅಂಗಡಿಗೆ ಭಾಗ್ಯಾ, ಪೂಜಾ ಜೊತೆ ಹೋಗುತ್ತಾಳೆ. ಅವರನ್ನು ನೋಡಿ ತಾಂಡವ್, ಶ್ರೇಷ್ಠಾ ಅಡಗಿ ಕೂರುತ್ತಾರೆ.

Bhagyalakshmi Serial: ಶ್ರೇಷ್ಠಾ ಮದುವೆ ಹಾಲ್‌ಗೆ ಹಣ ಕಟ್ಟಿರುವ ವಿಚಾರ ತಿಳಿದ ಭಾಗ್ಯಾ, ಇನ್ಮುಂದೆ ಆಕೆಯಿಂದ ದೂರ ಇರುವಂತೆ ತಾಂಡವ್‌ಗೆ ಖಡಕ್ ವಾರ್ನಿಂಗ್ ಮಾಡುತ್ತಾಳೆ. ಭಾಗ್ಯಾಗೆ ತಾಂಡವ್ ಹೆದರಿದರೂ ಇವಳಿಗೆ ಇಷ್ಟು ಧೈರ್ಯ ಎಲ್ಲಿಂದ ಬಂತು. ಕೆಲಸಕ್ಕೆ ಹೋಗುತ್ತಿದ್ದಂತೆ ಇವಳಿಗೆ ಧೈರ್ಯ ಜಾಸ್ತಿ ಆಗಿದೆ. ಹೇಗಾದರೂ ಮಾಡಿ ಇವಳ ಹಾರಾಟ ಕಡಿಮೆ ಮಾಡಬೇಕು ಎಂದುಕೊಳ್ಳುತ್ತಾನೆ.
ಶ್ರೇಷ್ಠಾ ಜೊತೆ ಶಾಪಿಂಗ್ ಹೊರಟ ತಾಂಡವ್
ಭಾಗ್ಯಾ ಎಷ್ಟು ಹೇಳಿದರೂ ಮರುದಿನ ಶ್ರೇಷ್ಠಾ ಜೊತೆ ತಾಂಡವ್, ಮದುವೆ ಸೀರೆ ಖರೀದಿಸಲು ಹೋಗುತ್ತಾನೆ. ಶ್ರೇಷ್ಠಾ ಜೊತೆ ಫೋನಿನಲ್ಲಿ ಮಾತನಾಡುವಾಗ ಪೂಜಾ ನೋಡುತ್ತಾಳೆ. ಅವಳನ್ನು ನೋಡುತ್ತಿದ್ದಂತೆ ತಾಂಡವ್, ತಾನು ಶ್ರೇಷ್ಠಾ ಜೊತೆ ಮಾತನಾಡುತ್ತಿರುವುದು ಗೊತ್ತಾಗಬಾರದು ಎಂಬ ಕಾರಣಕ್ಕೆ ಆಫೀಸ್‌ನವರ ಜೊತೆ ಮಾತನಾಡುವಂತೆ ನಾಟಕ ಮಾಡುತ್ತಾನೆ, ಈಗಲೇ ಬರ್ತೀನಿ ಎಂದು ಹೊರಡುತ್ತಾನೆ. ಇಂದು ವೀಕೆಂಡ್, ಆಫೀಸ್ ಇರುವುದಿಲ್ಲ. ಆದರೂ ಈ ಭಾವ ಎಲ್ಲಿಗೆ ಹೋಗುತ್ತಿದ್ದಾರೆ, ಶ್ರೇಷ್ಠಾ ಜೊತೆ ಹೋಗುತ್ತಿರಬಹುದಾ ಎಂದು ಪೂಜಾ ಅನುಮಾನ ಪಡುತ್ತಾಳೆ. ಸುಂದರಿಗೆ ಕರೆ ಮಾಡಿ ವಿಚಾರಿಸಿದರೆ ಆಕೆಯಿಂದ ಸರಿಯಾದ ಮಾಹಿತಿ ಸಿಗುವುದಿಲ್ಲ.
ಇತ್ತ ತನ್ನ ಸಹೋದ್ಯೋಗಿಗಳಿಗೆ ಊಟ ತೆಗೆದುಕೊಂಡು ಹೋಗುವ ಭಾಗ್ಯಾಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ತನ್ನ ಸಂಪಾದನೆಯಲ್ಲಿ ಅತ್ತೆ, ಮಾವ, ಮಕ್ಕಳಿಗೆ ಏನಾದರೂ ಕೊಡಿಸಬೇಕು ಎಂದುಕೊಳ್ಳುವ ಭಾಗ್ಯಾ, ತನ್ನ ಜೊತೆ ಶಾಪಿಂಗ್ ಬರುವಂತೆ ಹಿತಾಳನ್ನು ಕರೆಯುತ್ತಾಳೆ. ನಿಮ್ಮ ತಂಗಿ ಪೂಜಾ, ನನಗಿಂತ ಚೆನ್ನಾಗಿ ಬಟ್ಟೆ ಸೆಲೆಕ್ಟ್ ಮಾಡುತ್ತಾಳೆ, ಅವಳನ್ನೇ ಕರೆದುಕೊಂಡು ಹೋಗಿ ಎಂದು ಹಿತಾ ಹೇಳುತ್ತಾಳೆ. ನನ್ನ ತಂಗಿ ನಿಮಗೆ ಹೇಗೆ ಗೊತ್ತು ಎಂದು ಭಾಗ್ಯಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಗಾಬರಿ ಆಗುವ ಹಿತಾ, ನಿಮಗೆ ಸನ್ಮಾನ ಮಾಡಿದ ದಿನ ಪೂಜಾಳನ್ನು ಭೇಟಿ ಆಗಿದ್ದೆ ಎನ್ನುತ್ತಾಳೆ. ಹೌದು ಪೂಜಾಳನ್ನೇ ಕರೆದುಕೊಂಡು ಹೋಗುತ್ತೀನಿ ಎಂದು ತಂಗಿ ಜೊತೆ ಭಾಗ್ಯಾ ಬಟ್ಟೆ ಅಂಗಡಿಗೆ ಬರುತ್ತಾಳೆ.
ಬಟ್ಟೆ ಅಂಗಡಿಯವರ ಜೊತೆ ಶ್ರೇಷ್ಠಾ ಕಿರಿಕ್
ಶ್ರೇಷ್ಠಾ-ತಾಂಡವ್ ಇಬ್ಬರೂ ಅದೇ ಬಟ್ಟೆ ಅಂಗಡಿಗೆ ಬರುತ್ತಾರೆ. ಮದುವೆ ಸೀರೆ ಸೆಲೆಕ್ಟ್ ಮಾಡುವಾಗ ಶ್ರೇಷ್ಠಾ ಬಟ್ಟೆ ಅಂಗಡಿಯವರ ಮೇಲೆ ಕೋಪಗೊಳ್ಳುತ್ತಾಳೆ. ಶ್ರೇಷ್ಠಾ ವರ್ತನೆ ನೋಡಿ ತಾಂಡವ್‌ಗೆ ಕಿರಿಕಿರಿಯಾಗುತ್ತದೆ. ದಯವಿಟ್ಟು ಹೀಗೆ ಅರಚಾಡಬೇಡ. ಎಲ್ಲರೂ ನಮ್ಮನ್ನೇ ನೋಡುವಂತೆ ಮಾಡಬೇಡ ಎಂದು ಮನವಿ ಮಾಡುತ್ತಾನೆ. ಅಷ್ಟರಲ್ಲಿ ಭಾಗ್ಯಾ ಹಾಗೂ ಪೂಜಾ ಬರುವುದನ್ನು ನೋಡಿ ತಾಂಡವ್ ಹಾಗೂ ಶ್ರೇಷ್ಠಾ ಭಯದಿಂದ ಬಟ್ಟೆ ಅಂಗಡಿಯಲ್ಲಿ ಅವಿತು ಕುಳಿತುಕೊಳ್ಳುತ್ತಾರೆ.
ಇಬ್ಬರೂ ಭಾಗ್ಯಾಳಿಂದ ತಪ್ಪಿಸಿಕೊಳ್ಳುತ್ತಾರಾ? ಅಥವಾ ಭಾಗ್ಯಾ ಅವರಿಬ್ಬರನ್ನೂ ನೋಡುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ