ಕನ್ನಡ ಸುದ್ದಿ  /  ಮನರಂಜನೆ  /  ಸಾಧನೆ ಮಾಡಿದ ಜಾಣೆ ಭಾಗ್ಯಾಳನ್ನು ಸನ್ಮಾನಿಸಲು ಹೋಟೆಲ್‌ಗೆ ಬಂದ ಪ್ರಣಯ ರಾಜ ಶ್ರೀನಾಥ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಸಾಧನೆ ಮಾಡಿದ ಜಾಣೆ ಭಾಗ್ಯಾಳನ್ನು ಸನ್ಮಾನಿಸಲು ಹೋಟೆಲ್‌ಗೆ ಬಂದ ಪ್ರಣಯ ರಾಜ ಶ್ರೀನಾಥ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಭಾಗ್ಯಾಳಿಂದ ಹೋಟೆಲ್‌ ಗೌರವ ಹೆಚ್ಚಾಗುತ್ತಿರುವುದಕ್ಕೆ ಪ್ರತಿಯಾಗಿ ಭಾಗ್ಯಾಗಾಗಿ ಹೋಟೆಲ್‌ನವರು ಕಾರ್ಯಕ್ರಮ ಏರ್ಪಡಿಸುತ್ತಾರೆ. ಹಿರಿಯ ನಟ ಶ್ರೀನಾಥ್‌ ಭಾಗ್ಯಾಳನ್ನು ಸನ್ಮಾನ ಮಾಡಲು ಆಗಮಿಸುತ್ತಾರೆ. ಈ ನಡುವೆ ಪತ್ರಕರ್ತ ಗೌರೀಶ್‌ ಅಕ್ಕಿ, ಭಾಗ್ಯಾ ಫೋಟೋದೊಂದಿಗೆ ಆಕೆಯ ಬಗ್ಗೆ ಟಿವಿಯಲ್ಲಿ ಸುದ್ದಿ ಪ್ರಸಾರ ಮಾಡುತ್ತಾರೆ.

ಸಾಧನೆ ಮಾಡಿದ ಜಾಣೆ ಭಾಗ್ಯಾಳನ್ನು ಸನ್ಮಾನಿಸಲು ಹೋಟೆಲ್‌ಗೆ ಬಂದ ಪ್ರಣಯ ರಾಜ ಶ್ರೀನಾಥ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಸಾಧನೆ ಮಾಡಿದ ಜಾಣೆ ಭಾಗ್ಯಾಳನ್ನು ಸನ್ಮಾನಿಸಲು ಹೋಟೆಲ್‌ಗೆ ಬಂದ ಪ್ರಣಯ ರಾಜ ಶ್ರೀನಾಥ್‌; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: 2 ಮಕ್ಕಳ ತಾಯಿ ಆದರೂ ಭಾಗ್ಯಾಗೆ ಹೊಸತನ್ನು ಕಲಿಯಬೇಕೆಂಬ ಉತ್ಸಾಹ. 35ನೇ ವಯಸ್ಸಿನಲ್ಲೂ ಎಸ್‌ಎಸ್‌ಎಲ್‌ಸಿ ಓದಿ ಮಗಳೊಂದಿಗೆ ಕುಳಿತು ಪರೀಕ್ಷೆ ಬರೆದು ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್‌ ಆದ ಭಾಗ್ಯಾ ಅಡುಗೆಯಲ್ಲೂ ಎತ್ತಿದ ಕೈ. ಅದೇ ಕಾರಣಕ್ಕೆ 5 ಸ್ಟಾರ್‌ ಹೋಟೆಲ್‌ನಲ್ಲಿ ಆಕೆಗೆ ಮಾಸ್ಟರ್‌ ಚೆಫ್‌ ಕೆಲಸ ಸಿಕ್ಕಿದೆ.

ಇನ್ನು ನನ್ನ ಕಷ್ಟವೆಲ್ಲಾ ತೀರಿತು. ಆರ್ಥಿಕ ಸಮಸ್ಯೆಗಳೆಲ್ಲಾ ದೂರಾಗಲಿದೆ. ಮಕ್ಕಳು, ಅತ್ತೆ, ಮಾವನನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಭಾಗ್ಯಾ ಕನಸು ಕಾಣುತ್ತಾಳೆ. ಅದರೆ ತಾನು ಕೆಲಸಕ್ಕೆ ಬರುತ್ತಿರುವುದು ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಎಲ್ಲಾ ರಹಸ್ಯವಾಗಿಡಬೇಕು ಎಂದುಕೊಳ್ಳುವಷ್ಟರಲ್ಲಿ ಪತ್ರಕರ್ತ ಗೌರೀಶ್‌ ಅಕ್ಕಿ, ಭಾಗ್ಯಾ ಬಗ್ಗೆ ಟಿವಿಯಲ್ಲಿ ಪ್ರಸಾರ ಮಾಡುತ್ತಾರೆ. ಭಾಗ್ಯಾ ಫೋಟೋ ಟಿವಿಯಲ್ಲಿ ಬರುವುದನ್ನು ಎಲ್ಲರೂ ನೋಡುತ್ತಾರೆ. 10ನೇ ತರಗತಿ ಪಾಸ್‌ ಆಗಿರುವ ಭಾಗ್ಯಾ ಮತ್ತೊಂದು ಸಾಧನೆ ಮಾಡಿದ್ದಾರೆ. ನಗರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಭಾಗ್ಯಾಗೆ ಶೆಫ್‌ ಕೆಲಸ ಪಡೆದುಕೊಂಡಿದ್ದಾರೆ. ವಯಸ್ಸನ್ನೂ ಲೆಕ್ಕಿಸದೆ ಇಷ್ಟೆಲ್ಲಾ ಸಾಧನೆ ಮಾಡಿರುವ ಭಾಗ್ಯಾ ಎಲ್ಲಾ ಯುವ ಜನತೆಗೂ ಮಾದರಿ ಎಂದು ಭಾಗ್ಯಾಳನ್ನು ಮಾಧ್ಯಮದಲ್ಲಿ ಹೊಗಳಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಭಾಗ್ಯಾ ಬಗ್ಗೆ ಟಿವಿಯಲ್ಲಿ ಸುದ್ದಿ ಪ್ರಸಾರ

ಭಾಗ್ಯಾ ಸುದ್ದಿಯನ್ನು ಮನೆಯಲ್ಲಿ ಎಲ್ಲರೂ ನೋಡುತ್ತಾರೆ. ಸೊಸೆಯ ಸಾಧನೆಗಂತೂ ಧರ್ಮರಾಜ್‌ ಬಹಳ ಖುಷಿ ಪಡುತ್ತಾರೆ. ಮಕ್ಕಳಂತೂ ಟಿವಿಯಲ್ಲಿ ಅಮ್ಮನ ಫೋಟೋ ಬರುವುದನ್ನು ನೋಡಿ ಚಪ್ಪಾಳೆ ತಟ್ಟಿ ಕುಣಿದಾಡುತ್ತಾರೆ. ಸುನಂದಾ ಕೂಡಾ ಮಗಳನ್ನು ನೋಡಿ ಖುಷಿಯಾಗುತ್ತಾಳೆ. ಅಷ್ಟರಲ್ಲಿ ಕುಸುಮಾ ಅಲ್ಲಿಗೆ ಬರುತ್ತಾಳೆ. ಭಾಗ್ಯಾ ಫೋಟೋ ಟಿವಿಯಲ್ಲಿ ಬರುವುದನ್ನು ನೋಡಿ ಶಾಕ್‌ ಆಗುತ್ತಾಳೆ. ಅದೇ ಸಮಯಕ್ಕೆ ತಾಂಡವ್‌ ಕೂಡಾ ಬರುತ್ತಾನೆ. ಭಾಗ್ಯಾಗೆ ಕೆಲಸ ಸಿಕ್ಕಿರುವುದು, ಆಕೆ ಮಾಡಿದ ಸಾಧನೆಗೆ ಎಲ್ಲರೂ ಖುಷಿ ಆದರೆ ತಾಂಡವ್‌ಗೆ ಮಾತ್ರ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಆಗುತ್ತದೆ. ಅಮ್ಮನಿಗೆ ಕಿವಿ ಚುಚ್ಚುವ ತಾಂಡವ್‌, ಭಾಗ್ಯಾ ಯಾವಾಗಲೂ ಮನೆಗೆ ಅವಮಾನವಾಗುವ ಕೆಲಸವೇ ಮಾಡುತ್ತಾಳೆ. ತಾನು ಕೆಲಸಕ್ಕೆ ಹೋಗುವುದು ಅಮ್ಮನಿಗೆ ಇಷ್ಟವಿಲ್ಲವೆಂದರೂ ಯಾವುದೋ ಹೋಟೆಲ್‌ಗೆ ಹೋಗಿ ಕೆಲಸಕ್ಕೆ ಸೇರಿದ್ದಾಳೆ ಎನ್ನುತ್ತಾನೆ.

ಇದೆಲ್ಲವನ್ನೂ ನೋಡಿ ಕುಸುಮಾ, ಕೋಪದಿಂದ ಹೋಟೆಲ್‌ ಕಡೆ ಹೆಜ್ಜೆ ಹಾಕುತ್ತಾಳೆ. ಇನ್ನು ಎಲ್ಲಾ ಮುಗಿಯಿತು, ಅಮ್ಮ ಭಾಗ್ಯಾಗೆ ಕ್ಲಾಸ್‌ ತೆಗೆದುಕೊಳ್ಳುತ್ತಾಳೆ ಎಂದು ತಾಂಡವ್‌ ಖುಷಿಯಾಗುತ್ತಾನೆ. ಅದೇ ಹೋಟೆಲ್‌ನಲ್ಲಿ ತಿಂಡಿ ತಿನ್ನಲು ಹೋದ ಶ್ರೇಷ್ಠಾ, ಸುಂದರಿ, ಪೂಜಾ ಕೂಡಾ ಈ ಸುದ್ದಿ ನೋಡುತ್ತಾರೆ. ಅಕ್ಕನನ್ನು ನೋಡಿ ಪೂಜಾಗೆ ಖುಷಿಯೋ ಖುಷಿ. ಅಲ್ಲಿ ಎಲ್ಲರೂ ಭಾಗ್ಯಾ ಬಗ್ಗೆ ಮಾತನಾಡುವುದನ್ನು ನೋಡಿ ಪೂಜಾ ಸಂಭ್ರಮ ದುಪಟ್ಟಾಗುತ್ತದೆ. ಆದರೆ ಶ್ರೇಷ್ಠಾಗೆ ಮಾತ್ರ ಇದು ನುಂಗಲಾರದ ತುತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸ್‌ ಆದಾಗ ಇವಳನ್ನು ಹಿಡಿದು ನಿಲ್ಲಿಸಲು ಆಗಲಿಲ್ಲ. ಇನ್ನು ಈಗ ಕೆಲಸ ಬೇರೆ ಸಿಕ್ಕಿದೆ ಎಂದುಕೊಳ್ಳುತ್ತಾಳೆ.

ಭಾಗ್ಯಾಳನ್ನು ಸನ್ಮಾನಿಸಲು ಹಿರಿಯ ನಟ ಶ್ರೀನಾಥ್‌ ಆಗಮನ

ಭಾಗ್ಯಾ ಬಗ್ಗೆ ಪತ್ರಕರ್ತ ಬರೆದ ಸುದ್ದಿಯಿಂದ ಆ ಹೋಟೆಲ್‌ ಗೌರವ ಹೆಚ್ಚಾಗುತ್ತದೆ. ಕಸ್ಟಮರ್‌ಗಳು ಹೆಚ್ಚಾಗಿ ಬರುತ್ತಾರೆ. ಇದೇ ಕಾರಣಕ್ಕೆ ಹೋಟೆಲ್‌ನವರು ಭಾಗ್ಯಾಗೆ ಸನ್ಮಾನ ಏರ್ಪಡಿಸುತ್ತಾರೆ. ಭಾಗ್ಯಾಗೆ ಡ್ರೆಸ್‌ ಮಾಡಿ ಕರೆತರುವಂತೆ ಹೋಟೆಲ್‌ ಮ್ಯಾನೇಜರ್‌ ಹಿತಾಗೆ ಸೂಚಿಸುತ್ತಾರೆ. ಆಶ್ಚರ್ಯ ಎಂದರೆ ಆ ದಿನ ಭಾಗ್ಯಾಳನ್ನು ಸನ್ಮಾನಿಸಲು ಖ್ಯಾತ ಸಿನಿಮಾ ಹಿರಿಯ ನಟ ಪ್ರಣಯ ರಾಜ ಶ್ರೀನಾಥ್‌ ಆಗಮಿಸುತ್ತಾರೆ. ಅವರನ್ನು ನೋಡಿ ಭಾಗ್ಯಾ ಕೈ ಮುಗಿಯುತ್ತಾಳೆ. ವೇದಿಕೆ ಮೇಲೆ ಹೋಗುವ ಶ್ರೀನಾಥ್‌, ಭಾಗ್ಯಾಳನ್ನು ಕೂಡಾ ವೇದಿಕೆ ಮೇಲೆ ಬರುವಂತೆ ಆಹ್ವಾನಿಸುತ್ತಾರೆ. ಭಾಗ್ಯಾ ಮುಜುಗರ ಪಡುತ್ತಲೇ ವೇದಿಕೆ ಮೇಲೆ ಹೋಗಿ ಶ್ರೀನಾಥ್‌ ಪಕ್ಕ ಕೂರುತ್ತಾಳೆ.

ಸನ್ಮಾನ ನಡೆಯುವ ಜಾಗಕ್ಕೆ ಕುಸುಮಾ ಬಂದು ಸೊಸೆಗೆ ಕ್ಲಾಸ್‌ ತೆಗೆದುಕೊಳ್ಳುತ್ತಾಳಾ ಅಥವಾ ಸೊಸೆ ಸಾಧನೆಗೆ ಖುಷಿಯಾಗುತ್ತಾಳಾ ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರಗಳ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌