ಕನ್ನಡ ಸುದ್ದಿ  /  ಮನರಂಜನೆ  /  ಸೊಸೆಯನ್ನು ನೋಡಲು ಬಂದ ಕುಸುಮಾಳನ್ನು ಹೋಟೆಲ್‌ ಸಿಬ್ಬಂದಿಗೆ ಹೇಳಿ ಹೊರ ತಳ್ಳಿಸಿದ ಸೂಪರ್‌ವೈಸರ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಸೊಸೆಯನ್ನು ನೋಡಲು ಬಂದ ಕುಸುಮಾಳನ್ನು ಹೋಟೆಲ್‌ ಸಿಬ್ಬಂದಿಗೆ ಹೇಳಿ ಹೊರ ತಳ್ಳಿಸಿದ ಸೂಪರ್‌ವೈಸರ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 2ರ ಎಪಿಸೋಡ್‌. ಸೊಸೆಯನ್ನು ಭೇಟಿ ಆಗಲು ಕುಸುಮಾ ಸನ್ಮಾನ ನಡೆಯುತ್ತಿರುವ ಸ್ಥಳಕ್ಕೆ ಬರುತ್ತಾಳೆ. ಆದರೆ ಹೋಟೆಲ್‌ ಸೂಪರ್‌ವೈಸರ್‌ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಸಿಬ್ಬಂದಿಗೆ ಹೇಳಿ ಆಕೆಯನ್ನು ಹೊರ ತಳ್ಳಿಸುತ್ತಾನೆ.

ಸೊಸೆಯನ್ನು ನೋಡಲು ಬಂದ ಕುಸುಮಾಳನ್ನು ಹೋಟೆಲ್‌ ಸಿಬ್ಬಂದಿಗೆ ಹೇಳಿ ಹೊರ ತಳ್ಳಿಸಿದ ಸೂಪರ್‌ವೈಸರ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಸೊಸೆಯನ್ನು ನೋಡಲು ಬಂದ ಕುಸುಮಾಳನ್ನು ಹೋಟೆಲ್‌ ಸಿಬ್ಬಂದಿಗೆ ಹೇಳಿ ಹೊರ ತಳ್ಳಿಸಿದ ಸೂಪರ್‌ವೈಸರ್‌; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ದೇವಸ್ಥಾನಕ್ಕೆ ಭಜನೆಗೆ ಹೋಗುತ್ತೇನೆಂದು ಹೇಳಿ ಭಾಗ್ಯಾ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಪತ್ರಕರ್ತ, ಭಾಗ್ಯಾ ತಯಾರಿಸಿದ ಒತ್ತು ಶ್ಯಾವಿಗೆ, ಮಾವಿನ ರಸಾಯನ ತಿಂದ ನಂತರವಂತೂ ಭಾಗ್ಯಾ ಲಕ್‌ ಬದಲಾಗಿದೆ. ಭಾಗ್ಯಾ ಅಷ್ಟು ದೊಡ್ಡ ಹೋಟೆಲ್‌ನಲ್ಲಿ ಹೆಡ್‌ ಕುಕ್‌ ಆಗಿ ಕೆಲಸ ಪಡೆದಿದ್ದಾಳೆ. ತಾನು ಕೆಲಸ ಮಾಡುತ್ತಿರುವುದು ಮನೆಯವರಿಗೆ ಗೊತ್ತಾಗಬಾರದು ಎಂದು ಎಷ್ಟೇ ಪ್ರಯತ್ನಿಸಿದರೂ ಮಾಧ್ಯಮಗಳ ಮೂಲಕ ಎಲ್ಲವೂ ಗೊತ್ತಾಗಿದೆ.

ಭಾಗ್ಯಾಳನ್ನು ಟಿವಿಯಲ್ಲಿ ನೋಡಿ ಮನೆ ಮಂದಿಗೆ ಖುಷಿ

ಟಿವಿಯಲ್ಲಿ ಭಾಗ್ಯಾ ಬಗ್ಗೆ ಸುದ್ದಿ ಬರುವುದನ್ನು ನೋಡಿ ಮನೆ ಮಂದಿಯೆಲ್ಲಾ ಸಂತೋಷ ವ್ಯಕ್ತಪಡಿಸಿದರೆ, ಕುಸುಮಾ ಮಾತ್ರ ಬೇಸರಗೊಳ್ಳುತ್ತಾಳೆ. ಮುಖ ಗಂಟಿಕ್ಕಿಕೊಂಡು ಸೊಸೆಯನ್ನು ನೋಡಲು ಹೋಟೆಲ್‌ಗೆ ಹೋಗುತ್ತಾಳೆ. ಅಮ್ಮನನ್ನು ಕಂಡು ತಾಂಡವ್‌ ಅಂತೂ ಖುಷಿಯಾಗಿದ್ದಾನೆ. ಅಮ್ಮನಿಗೆ ಭಾಗ್ಯಾ ಕೆಲಸಕ್ಕೆ ಹೋಗುವುದು ಇಷ್ಟವಿಲ್ಲ, ಈಗ ಅವಳು ಕುಕ್‌ ಕೆಲಸಕ್ಕೆ ಹೋಗುತ್ತಿರುವುದು ಅಮ್ಮನಿಗೆ ಗೊತ್ತಾಗಿದೆ. ಖಂಡಿತ ಸೊಸೆ ಜುಟ್ಟು ಎಳೆದು ತಂದು ಮನೆಯಲ್ಲಿ ಕೂರಿಸುತ್ತಾಳೆ. ಅದನ್ನು ನಾನು ನೋಡಬೇಕೆಂದು ತಾಂಡವ್‌ ಖುಷಿಯಾಗುತ್ತಾನೆ. ಕಾರು ಹತ್ತಿ ಹೊರಟ ತಾಂಡವ್‌ಗೆ ಸುನಂದಾ ಅಡ್ಡಿಯಾಗುತ್ತಾಳೆ. ನನಗೆ ಗೊತ್ತು ನೀವು ನನ್ನ ಮಗಳನ್ನು ನೋಡಲು ಹೋಟೆಲ್‌ಗೆ ಹೋಗುತ್ತಿರುವುದು ಎಂದು ಕಾರ್‌ ಹತ್ತುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಸುನಂದಾ ಹಿಂದೆಯೇ ಮಕ್ಕಳು ಕೂಡಾ ಓಡಿ ಬಂದು ಕಾರ್‌ ಹತ್ತುತ್ತಾರೆ. ನಾನು ಹೋಗುತ್ತಿರುವುದು ಆಫೀಸಿಗೆ, ಭಾಗ್ಯಾಳನ್ನು ನೋಡಲು ಅಂತ ಯಾರು ಹೇಳಿದ್ದು ಎಂದು ಪ್ರಶ್ನಿಸುತ್ತಾನೆ. ಅಷ್ಟರಲ್ಲಿ ಕಾರು ಹತ್ತಿ ಕೂರುವ ಧರ್ಮರಾಜ್‌, ನಾನೇ ಹೇಳಿದ್ದು ಎನ್ನುತ್ತಾನೆ. ವಿಧಿ ಇಲ್ಲದೆ ತಾಂಡವ್‌ ಹೋಟೆಲ್‌ನತ್ತ ಹೋಗುತ್ತಾನೆ. ಅಲ್ಲಿ ಪೂಜಾ ಕೂಡಾ ಬಂದಿರುವುದನ್ನು ನೋಡಿ ಇವಳು ಏಕೆ ಇಲ್ಲಿ ಬಂದಿದ್ದಾಳೆ ಎಂದುಕೊಳ್ಳುತ್ತಾನೆ. ಅಕ್ಕನನ್ನು ನೋಡಲು ಬಂದಿದ್ಧಾ ಭಾವ ಎಂದು ಪೂಜಾ, ತಾಂಡವ್‌ ಕಾಲೆಳೆಯುತ್ತಾಳೆ. ನಮ್ಮೆಲ್ಲರಿಗಿಂತ ಮುಂಚೆ ಅಲ್ಲಿ ಕುಸುಮಾಂಬೆ ಹೋಗಿದ್ದಾಳೆ. ನಿಮ್ಮ ಅಕ್ಕನಿಗೆ ಇವತ್ತು ಸರಿಯಾಗಿ ಪಾಠ ಕಲಿಸುತ್ತಾರೆ. ಅದನ್ನು ನೋಡಲು ಬಂದಿದ್ದೇನೆ ಎಂದು ತಾಂಡವ್‌ ಹೇಳುತ್ತಾನೆ. ಅಕ್ಕ ಮನೆ ಮರ್ಯಾದೆ ಉಳಿಸಿದ್ದಾಳೆ. ಅವಳಿಗೆ ಸನ್ಮಾನವಾಗುವುದೋ, ಅವಮಾನವಾಗುವುದೋ ನೋಡೋಣ ಬನ್ನಿ ಎಂದು ಒಳಗೆ ಹೋಗುತ್ತಾಳೆ.

ಹೋಟೆಲ್‌ಗೆ ಬರುವ ಅತ್ತೆಯನ್ನು ನೋಡುವ ಭಾಗ್ಯಾ

ಇತ್ತ ಸನ್ಮಾನ ನಡೆಯುವ ಜಾಗಕ್ಕೆ ಬರುವ ಕುಸುಮಾ, ಭಾಗ್ಯಾಳನ್ನು ಭೇಟಿ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಹೋಟೆಲ್‌ ಸೂಪರ್‌ವೈಸರ್‌, ಈ ಹೆಂಗಸು ಇನ್ನು ಇಲ್ಲೇ ಇದ್ದಾರೆ ಎಂದು ಗಾಬರಿ ಆಗುತ್ತಾನೆ. ನಾನು ಭಾಗ್ಯಾ ಅತ್ತೆ ಎಂದರೂ ಆತ ನಂಬುವುದಿಲ್ಲ. ಹೋಟೆಲ್‌ ಸಿಬ್ಬಂದಿಗೆ ಹೇಳಿ ಕುಸುಮಾಳನ್ನು ಹೊರ ತಳ್ಳಲು ಪ್ರಯತ್ನಿಸುತ್ತಾನೆ. ವೇದಿಕೆ ಮೇಲೆ ಬಹುಮಾನ ಪಡೆಯುವ ಭಾಗ್ಯಾ ಒಂದು ಕ್ಷಣ ಇದನ್ನು ನೋಡುತ್ತಾಳೆ. ಬಹುಮಾನ ಪಡೆಯುವುದನ್ನೂ ಬಿಟ್ಟು ತನ್ನ ಅತ್ತೆಯನ್ನು ಕಾಪಾಡಲು ಓಡಿ ಬರುತ್ತಾಳೆ.

ಹೋಟೆಲ್‌ ಸಿಬ್ಬಂದಿಯಿಂದ ಭಾಗ್ಯಾ, ಕುಸುಮಾಳನ್ನು ಬಿಡಿಸುತ್ತಾಳಾ? ಸೊಸೆ ಮಾಡುತ್ತಿರುವ ಕೆಲಸವನ್ನು ಅತ್ತೆ ಒಪ್ಪಿಕೊಳ್ಳುತ್ತಾಳಾ? ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌