ಕನ್ನಡ ಸುದ್ದಿ  /  ಮನರಂಜನೆ  /  ಅತ್ತೆ ರೂಪದಲ್ಲಿರುವ ಈ ಅಮ್ಮನೇ ನನ್ನ ಯಶಸ್ಸಿಗೆ ಕಾರಣ, ವೇದಿಕೆ ಮೇಲೆ ಕುಸುಮಾ ಹೊಗಳಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಅತ್ತೆ ರೂಪದಲ್ಲಿರುವ ಈ ಅಮ್ಮನೇ ನನ್ನ ಯಶಸ್ಸಿಗೆ ಕಾರಣ, ವೇದಿಕೆ ಮೇಲೆ ಕುಸುಮಾ ಹೊಗಳಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 3ರ ಎಪಿಸೋಡ್‌; ಅವಮಾನವಾಗುತ್ತಿದ್ದ ಅತ್ತೆ ಕುಸುಮಾಳನ್ನು ಹೋಟೆಲ್‌ ಸಿಬ್ಬಂದಿಯಿಂದ ಬಿಡಿಸುವ ಭಾಗ್ಯಾ ಅವಳನ್ನು ವೇದಿಕೆ ಮೇಲೆ ಕರೆ ತರುತ್ತಾಳೆ. ತನ್ನ ಬದಲಿಗೆ ತನ್ನ ಅತ್ತೆಗೆ ಸನ್ಮಾನ ಮಾಡುವಂತೆ ನಟ ಶ್ರೀನಾಥ್‌ಗೆ ಮನವಿ ಮಾಡುತ್ತಾಳೆ.

ಅತ್ತೆ ರೂಪದಲ್ಲಿರುವ ಈ ಅಮ್ಮನೇ ನನ್ನ ಯಶಸ್ಸಿಗೆ ಕಾರಣ, ವೇದಿಕೆ ಮೇಲೆ ಕುಸುಮಾ ಹೊಗಳಿಗೆ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಅತ್ತೆ ರೂಪದಲ್ಲಿರುವ ಈ ಅಮ್ಮನೇ ನನ್ನ ಯಶಸ್ಸಿಗೆ ಕಾರಣ, ವೇದಿಕೆ ಮೇಲೆ ಕುಸುಮಾ ಹೊಗಳಿಗೆ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ದರ್ಶಿನಿ ಹೋಟೆಲ್‌ನಲ್ಲಿ ಕೆಲಸ ಕಳೆದುಕೊಂಡ ಕುಸುಮಾ ಫೈವ್‌ ಸ್ಟಾರ್‌ ಹೋಟೆಲ್‌ಗೆ ಬಂದು ಅಲ್ಲಿ ಒತ್ತು ಶ್ಯಾವಿಗೆ, ಮಾವಿನ ರಸಾಯನ ಮಾಡುತ್ತಿದ್ದು ನಾನೇ ಎಂದು ಹೇಳಿಕೊಳ್ಳುತ್ತಾಳೆ. ಆದರೆ ಆಕೆಯಿಂದ ಹೋಟೆಲ್‌ ಬ್ಯುಸ್ನೆಸ್‌ಗೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಆಕೆಯನ್ನು ಅಲ್ಲಿಂದ ಹೇಗೋ ವಾಪಸ್‌ ಕಳಿಸಲಾಗುತ್ತದೆ.

ಅತ್ತೆಯನ್ನು ವೇದಿಕೆ ಮೇಲೆ ಕರೆ ತರುವ ಭಾಗ್ಯಾ

ಭಾಗ್ಯಾಗೆ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಕೆಲಸ ಸಿಕ್ಕಿದೆ. ಅವಳಿಗೆ ಸನ್ಮಾನ ಮಾಡಲಾಗುತ್ತಿದೆ ಎಂದು ತಿಳಿದ ಕುಸುಮಾ ಅಲ್ಲಿಗೆ ಬರುತ್ತಾಳೆ. ಕುಸುಮಾ ಮತ್ತೆ ಬಂದಿದ್ದನ್ನು ನೋಡಿ ಸೂಪರ್‌ವೈಸರ್‌ ಗಾಬರಿ ಆಗುತ್ತಾನೆ. ನಾನು ಭಾಗ್ಯಾ ಅತ್ತೆ ಎಂದು ಎಷ್ಟು ಹೇಳಿದರೂ ಅದನ್ನು ಕೇಳದೆ ಆಕೆಯನ್ನು ಹೊರಗೆ ಹಾಕುವಂತೆ ಇಬ್ಬರು ಮಹಿಳಾ ಸಿಬ್ಬಂದಿಗೆ ಹೇಳುತ್ತಾರೆ. ಅತ್ತೆಗೆ ಆಗುತ್ತಿರುವ ಅವಮಾನ ನೋಡಿ ಭಾಗ್ಯಾ ವೇದಿಕೆ ಮೇಲಿಂದ ಇಳಿದು ಓಡೋಡಿ ಬರುತ್ತಾಳೆ. ಅತ್ತೆ ಕೆಳಗೆ ಬೀಳುವುದನ್ನು ತಡೆಯುತ್ತಾಳೆ. ಯಾರು ಇವರನ್ನು ಹೀಗೆ ತಳ್ಳಲು ಹೇಳಿದ್ದು ಎಂದು ಕೋಪದಿಂದ ಆ ಯುವತಿಯರನ್ನು ಪ್ರಶ್ನಿಸುತ್ತಾಳೆ. ಸೂಪರ್‌ವೈಸರ್‌ ಹೇಳಿದ್ದು ಭಾಗ್ಯಾಗೆ ತಿಳಿಯುತ್ತದೆ. ಹಿರಿಯರು ಎಂದು ನೋಡದೆ ಈ ರೀತಿ ತಳ್ಳುತ್ತಿದ್ದೀರ. ಇವತ್ತು ನೀವು ನನಗೆ ಸನ್ಮಾನ ಮಾಡುತ್ತಿದ್ದೀರ ಎಂದರೆ ಇವರೇ ಕಾರಣ, ಇವರು ನಮ್ಮ ಅತ್ತೆ ಎನ್ನುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಸೂಪರ್‌ವೈಸರ್‌ ಹಾಗೂ ಸಿಬ್ಬಂದಿ ಕುಸುಮಾಗೆ ಕ್ಷಮೆ ಕೇಳುತ್ತಾರೆ. ಭಾಗ್ಯಾ, ಕುಸುಮಾಳನ್ನು ವೇದಿಕೆಯತ್ತ ಕರೆ ತರುತ್ತಾಳೆ. ನಟ ಶ್ರಿನಾಥ್‌ ಪಕ್ಕದಲ್ಲೇ ಕುಸುಮಾಳನ್ನು ಕೂರಿಸಿ, ಅವಳ ಬಗ್ಗೆ ಎಲ್ಲರಿಗೂ ಪರಿಚಯ ಮಾಡಿಸುತ್ತಾಳೆ. ನನಗೆ ಜೀವನದುದದ್ದಕ್ಕೂ ಇಬ್ಬರು ಅಮ್ಮಂದಿರು ಸಿಕ್ಕಿದ್ದಾರೆ. ಒಂದು ಜನ್ಮ ನೀಡಿದ ಅಮ್ಮ, ಮತ್ತೊಂದು ಜೀವನ ತೋರಿಸಿದ ಅಮ್ಮ. ಅಡುಗೆ ಮಾಡಲು ಬಾರದ ನನಗೆ ಇಷ್ಟು ಚೆನ್ನಾಗಿ ಅಡುಗೆ ಮಾಡಲು ಹೇಳಿಕೊಟ್ಟಿದ್ದು ಇದೇ ಅತ್ತೆ. ಇವತ್ತು ನಾನು ಮಾಡಿದ ಒತ್ತು ಶ್ಯಾವಿಗೆ ಹಾಗೂ ರಸಾಯನವನ್ನು ನೀವೆಲ್ಲಾ ಹೊಗಳುತ್ತಿದ್ದೀರ. ಆದರೆ ನಿಜವಾಗಲೂ ಅದನ್ನು ನನಗೆ ಹೇಳಿಕೊಟ್ಟದ್ದು ನನ್ನ ಅತ್ತೆ. ಹೆಣ್ಣು ಮಕ್ಕಳೆಂದರೆ ಅಡುಗೆ ಮನೆಗೆ ಮೀಸಲು ಎಂಬ ಈ ಕಾಲದಲ್ಲಿ ನನ್ನನ್ನು ಅಡುಗೆ ಮನೆಯಿಂದ ಶಾಲೆವರೆಗೂ ಕರೆ ತಂದಿದ್ದು ಇದೇ ಅತ್ತೆ ಎಂದು ಭಾಗ್ಯಾ, ತನ್ನ ಅತ್ತೆಗೆ ಕಾಂಪ್ಲಿಮೆಂಟ್ಸ್‌ ನೀಡುತ್ತಾಳೆ.

ಅತ್ತೆಯನ್ನು ಸನ್ಮಾನಿಸಲು ಮನವಿ ಮಾಡಿದ ಭಾಗ್ಯಾ

ನನ್ನ ಅತ್ತೆ ನನಗೆ ಜೀವನ ಹೇಳಿಕೊಟ್ಟಿದ್ಧಾರೆ. ಇಂದು ನಾನು ಏನೇ ಸಾಧನೆ ಮಾಡಿದ್ದೇನೆ ಎಂದರೂ ಅದಕ್ಕೆ ಅತ್ತೆಯೇ ಕಾರಣ. ಆದ್ದರಿಂದ ಇಂದು ನನಗೆ ಮಾಡುವ ಸನ್ಮಾನವನ್ನು ಆಕೆಗೆ ಮಾಡಿದರೆ ನನಗೆ ಖುಷಿಯಾಗುತ್ತದೆ. ಈ ಸನ್ಮಾನ ಅವರಿಗೆ ಸಲ್ಲಬೇಕು ಎಂದು ಭಾಗ್ಯಾ ನಟ ಶ್ರೀನಾಥ್‌ಗೆ ಮನವಿ ಮಾಡುತ್ತಾಳೆ. ಕುಸುಮಾ, ಭಾಗ್ಯಾಗೆ ಅವಮಾನ ಮಾಡುವುದನ್ನು ನೋಡಲು ಬಂದ ತಾಂಡವ್‌, ಅಲ್ಲಿ ನಡೆಯುವುದನ್ನು ಗಮನಿಸುತ್ತಾನೆ. ಎಲ್ಲರೂ ಚಪ್ಪಾಳೆ ತಟ್ಟುವುದನ್ನು ಕಂಡು ತಾನೂ ಚಪ್ಪಾಳೆ ತಟ್ಟುತ್ತಾನೆ. ಧರ್ಮರಾಜ್‌, ಗುಂಡಣ್ಣ, ತನ್ವಿ, ಪೂಜಾ, ಸುನಂದಾ ಎಲ್ಲರೂ ಬಹಳ ಖುಷಿಯಾಗುತ್ತಾರೆ.

ಕುಸುಮಾ, ಸೊಸೆ ಕೆಲಸಕ್ಕೆ ಹೋಗುವ ವಿಚಾರವನ್ನು ಮರೆತು ಸನ್ಮಾನ ಸ್ವೀಕರಿಸುತ್ತಾಳಾ? ಸೊಸೆ ಕೆಲಸಕ್ಕೆ ಹೋಗುವುದನ್ನು ಒಪ್ಪುತ್ತಾಳಾ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌