ಬಯಸಿದ್ದು ಒಂದು, ಆಗಿದ್ದು ಮತ್ತೊಂದು, ಭಾಗ್ಯಾ ಯಶಸ್ಸು ನೋಡಲಾರದೆ ತಾಂಡವ್ ಒದ್ದಾಟ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಭಾಗ್ಯಾ ಕೆಲಸಕ್ಕೆ ಹೋಗುವುದು ಕೊನೆಗೂ ಕುಸುಮಾಗೆ ಗೊತ್ತಾಗಿದೆ. ಸೊಸೆಯ ಸಾಧನೆಗೆ ಕುಸುಮಾ ಸಂತೋಷ ವ್ಯಕ್ತಪಡಿಸುತ್ತಾಳೆ. ಆದರೆ ಪದೇ ಪದೆ ಭಾಗ್ಯಾ ಸಕ್ಸಸ್ ಆಗುವುದನ್ನು ಕಂಡು ತಾಂಡವ್‌ಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಆಗಿದೆ.
Bhagyalakshmi Serial: ತನ್ನನ್ನು ನೋಡಲು ಬರುವ ಅತ್ತೆಯನ್ನು ಹೋಟೆಲ್ ಸೂಪರ್‌ವೈಸರ್ ಹೊರಗೆ ತಳ್ಳುವುದನ್ನು ನೋಡಿದ ಭಾಗ್ಯಾ ,ಕುಸುಮಾಳನ್ನು ಅವರಿಂದ ಕಾಪಾಡಿ ವೇದಿಕೆ ಮೇಲೆ ಕರೆತರುತ್ತಾಳೆ. ನಾನು ಇಂದು ಏನೇ ಸಾಧನೆ ಮಾಡಿದರೂ ಅದಕ್ಕೆ ನನ್ನ ಅತ್ತೆಯೇ ಕಾರಣ ಎಂದು ಕುಸುಮಾ ತನಗಾಗಿ ಮಾಡಿದ ತ್ಯಾಗವನ್ನು ಭಾಗ್ಯಾ ಎಲ್ಲರಿಗೂ ಸಾರಿ ಹೇಳುತ್ತಾಳೆ.
ಸೊಸೆ ಭಾಗ್ಯಾ ಬಗ್ಗೆ ಕುಸುಮಾಗೆ ಹೆಮ್ಮೆ
ಸೊಸೆ ಹೀಗೆ ತನ್ನನ್ನು ಹೊಗಳುವುದಕ್ಕೆ ಕುಸುಮಾ ಸಂತೋಷ ವ್ಯಕ್ತಪಡಿಸುತ್ತಾಳೆ. ನಟ ಶ್ರೀನಾಥ್ ಕೂಡಾ ಅತ್ತೆ ಸೊಸೆಯ ಈ ಬಾಂಧವ್ಯ ನೋಡಿ ಸಂತೋಷ ವ್ಯಕ್ತಪಡಿಸುತ್ತಾರೆ. ನನ್ನ ಯಶಸ್ಸಿಗೆ ಅತ್ತೆಯೇ ಕಾರಣ. ಆದ್ದರಿಂದ ನನಗೆ ಮಾಡಬೇಕಾದ ಸನ್ಮಾನವನ್ನು ದಯವಿಟ್ಟು ನನ್ನ ಅತ್ತೆಗೆ ಮಾಡಿ ಎಂದು ಭಾಗ್ಯಾ ಮನವಿ ಮಾಡಿಕೊಳ್ಳುತ್ತಾಳೆ. ಭಾಗ್ಯಾ ಕೋರಿಕೆಯಂತೆ ಹಿರಿಯ ನಟ ಶ್ರೀನಾಥ್, ಕುಸುಮಾಗೆ ಶಾಲು ಹೊದಿಸಿ, ಪೇಟ ತೊಡಿಸಿ, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸುತ್ತಾರೆ. ಇದೆಲ್ಲವನ್ನೂ ದೂರದಿಂದ ನೋಡುವ ಧರ್ಮರಾಜ್, ಸುನಂದಾ ಹಾಗೂ ಮಕ್ಕಳು ಬಹಳ ಸಂತೋಷಪಡುತ್ತಾರೆ.
ಇದುವರೆಗೂ ಭಾಗ್ಯಾ ತನ್ನ ಅತ್ತೆಯ ಬಗ್ಗೆ ಮಾತನಾಡಿದಳು. ಈಗ ಅತ್ತೆ, ತಮ್ಮ ಸೊಸೆ ಬಗ್ಗೆ ಮಾತನಾಡಬೇಕೆಂದು ಎಲ್ಲರೂ ಒತ್ತಾಯ ಮಾಡುತ್ತಾರೆ. ಭಾಗ್ಯಾ ನನ್ನ ಸೊಸೆ ಅಲ್ಲ ಮಗಳು, ಅವಳು ಇಂದು ಮಾಡಿರುವ ಸಾಧನೆ ಕಂಡು ನನಗೆ ಬಹಳ ಸಂತೋಷವಾಗುತ್ತಿದೆ. ಅವಳು ನಾನು ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಈ ಎಲ್ಲಾ ಸಾಧನೆ, ಯಶಸ್ಸು ಅವಳಿಗೆ ಸಲ್ಲಬೇಕು ಎಂದು ಕುಸುಮಾ , ಸೊಸೆಯನ್ನು ಹೊಗಳುತ್ತಾಳೆ.
ಭಾಗ್ಯಾ ಕೆಲಸಕ್ಕೆ ಸೇರಿದ್ದು ಕುಸುಮಾಗೆ ಇಷ್ಟವಾಗುವುದಿಲ್ಲ. ಅವಳನ್ನು ಎಳೆ ತಂದು ಅಮ್ಮ ಮನೆಯಲ್ಲಿ ಕೂರಿಸುತ್ತಾಳೆ ಎಂದುಕೊಂಡಿದ್ದ ತಾಂಡವ್‌ಗೆ, ಅಲ್ಲಿ ನಡೆಯುತ್ತಿದ್ದನ್ನು ನೋಡಿ ಹಿಂಸೆ ಆಗುತ್ತದೆ. ತಾನು ಅಂದುಕೊಂಡದ್ದೇ ಒಂದು, ಆಗುತ್ತಿರುವುದೇ ಮತ್ತೊಂದು ಎಂದುಕೊಂಡು ತಾಂಡವ್ ಹೊಟ್ಟೆ ಉರಿದುಕೊಳ್ಳುತ್ತಾನೆ. ಭಾಗ್ಯಾ ಯಶಸ್ಸು ನೋಡಲಾಗದೆ ಒದ್ದಾಡುತ್ತಾನೆ.
ಭಾಗ್ಯಾ ಯಶಸ್ಸು ಸಹಿಸದ ತಾಂಡವ್
ನೋಡು, ಇಷ್ಟು ದಿನಗಳು ನೀನು ಭಾಗ್ಯಾಳನ್ನು ಹೀಯಾಳಿಸುತ್ತಿದ್ದೆ, ಈಗ ಅವಳು ನಿನ್ನ ಸರಿಸಮ ನಿಂತಿದ್ದಾಳೆ ಎಂದು ಧರ್ಮರಾಜ್ ಹೇಳುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಕುಸುಮಾ, ನೀನು ಈಗ ಡಿವೋರ್ಸ್ ವಿಚಾರವನ್ನು ಕೈ ಬಿಡಬೇಕು. ಭಾಗ್ಯಾ ಓದಿಲ್ಲ ಎಂದು ಹೇಳುತ್ತಿದ್ದೆ, ಈಗ ಅವಳು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದಾಳೆ. ದೊಡ್ಡ ಹೋಟೆಲ್‌ನಲ್ಲಿ ಕೆಲಸ ಪಡೆದಿದ್ದಾಳೆ. ನಿನ್ನ ಸರಿಸಮನಾಗಿ ನಿಂತಿದ್ದಾಳೆ ಎಂದು ಕುಸುಮಾ ಹೇಳುತ್ತಾಳೆ. ಭಾಗ್ಯಾ ಕೂಡಾ ಕೈ ಮುಗಿದು ದಯವಿಟ್ಟು ಮಕ್ಕಳಿಗಾದರೂ ಒಪ್ಪಿಕೊಳ್ಳಿ ಎನ್ನುತ್ತಾಳೆ. ಆದರೆ ತಾಂಡವ್ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಭಾಗ್ಯಾ ಇನ್ನೂ ದೊಡ್ಡ ಸಾಧನೆ ಮಾಡಿದರೂ ನನ್ನ ನಿರ್ಧಾರವನ್ನು ಬದಲಿಸುವುದಿಲ್ಲ ಎಂದು ಅಲ್ಲಿಂದ ಹೊರಡುತ್ತಾನೆ. ಅದೇ ಸಮಯದಕ್ಕೆ ಭಾಗ್ಯಾ ಸಹೋದ್ಯೋಗಿ ಹಿತಾ ತಾಂಡವ್‌ನನ್ನು ನೋಡುತ್ತಾಳೆ.
ತಾಂಡವ್ ಭಾಗ್ಯಾ ಗಂಡ, ಡಿವೋರ್ಸ್ ಆಗದೆ ಎರಡನೇ ಮದುವೆ ಆಗುತ್ತಿದ್ದಾನೆ ಎಂಬ ವಿಚಾರ ಹಿತಾಗೆ ಗೊತ್ತಾಗುವುದಾ? ಆ ಹೋಟೆಲ್ ಬಿಟ್ಟು ಬೇರೆ ಹೋಟೆಲ್‌ನಲ್ಲಿ ಶ್ರೇಷ್ಠಾ ಮದುವೆ ಅರೇಂಜ್ ಮಾಡುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ