ಕನ್ನಡ ಸುದ್ದಿ  /  ಮನರಂಜನೆ  /  2ನೇ ಮದುವೆ ಸತ್ಯ ಹೇಳಲು ಸಾಕ್ಷಿ ಸಹಿತ ಭಾಗ್ಯಾ ಭೇಟಿ ಆಗಲು ಬಂದ ಹಿತಾ, ಭಯದಿಂದ ನಡುಗಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

2ನೇ ಮದುವೆ ಸತ್ಯ ಹೇಳಲು ಸಾಕ್ಷಿ ಸಹಿತ ಭಾಗ್ಯಾ ಭೇಟಿ ಆಗಲು ಬಂದ ಹಿತಾ, ಭಯದಿಂದ ನಡುಗಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 8ರ ಎಪಿಸೋಡ್‌. ತಾಂಡವ್‌ ಬಗ್ಗೆ ತಿಳಿದುಕೊಳ್ಳುವ ಹಿತಾ, ಭಾಗ್ಯಾಗೆ ನಿಜ ಹೇಳಲು ಆಕೆಯನ್ನು ಭೇಟಿ ಮಾಡಲು ಮನೆಗೆ ಬರುತ್ತಾಳೆ. ಆದರೆ ಮನೆಯಲ್ಲಿ ಆಕೆ ಇಲ್ಲದ್ದನ್ನು ಕಂಡು ದೇವಸ್ಥಾನಕ್ಕೆ ಹೋಗುತ್ತಾಳೆ. ಭಯದಿಂದ ತಾಂಡವ್‌ ಆಕೆಯನ್ನು ಫಾಲೋ ಮಾಡುತ್ತಾನೆ.

2ನೇ ಮದುವೆ ಸತ್ಯ ಹೇಳಲು ಸಾಕ್ಷಿ ಸಹಿತ ಭಾಗ್ಯಾ ಭೇಟಿ ಆಗಲು ಬಂದ ಹಿತಾ, ಭಯದಿಂದ ನಡುಗಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
2ನೇ ಮದುವೆ ಸತ್ಯ ಹೇಳಲು ಸಾಕ್ಷಿ ಸಹಿತ ಭಾಗ್ಯಾ ಭೇಟಿ ಆಗಲು ಬಂದ ಹಿತಾ, ಭಯದಿಂದ ನಡುಗಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಭಾಗ್ಯಾಗೆ ದೊಡ್ಡ ಹೋಟೆಲ್‌ನಲ್ಲಿ ಕೆಲಸ ಸಿಕ್ಕಿರುವುದು, ಆಕೆಯನ್ನು ಪತ್ರಕರ್ತ ಗೌರೀಶ್‌ ಅಕ್ಕಿ ಹೊಗಳಿದ್ದು ಎಲ್ಲವೂ ಮನೆಯವರಿಗೆ ಖುಷಿ ನೀಡಿದೆ. ಅಂತೂ ಸೊಸೆ ಸಾಧನೆಗೆ ಕುಸುಮಾ ಕೂಡಾ ಸಂತೋಷ ವ್ಯಕ್ತಪಡಿಸಿದ್ದಾಳೆ. ಸೊಸೆಯ ಸಾಧನೆಯನ್ನು ಕುಸುಮಾ ತನ್ನ ಸ್ನೇಹಿತೆಯರ ಮುಂದೆ ಹೊಗಳಿ ಹೆಮ್ಮೆ ಪಡುತ್ತಾಳೆ.

ಎಲ್ಲರೂ ಭಾಗ್ಯಾಳನ್ನು ಹೊಗಳುವುದು ತಾಂಡವ್‌ಗೆ ಕಿರಿಕಿರಿಯಾಗುತ್ತದೆ. ಆದರೆ ಅದನ್ನು ಹೊರಗಿನವರ ಮುಂದೆ ತೋರಿಸಲಾಗದೆ ಸುಮ್ಮನಾಗುತ್ತಾನೆ. ಮನೆಗೆ ಒಳ್ಳೆಯದಾಗಲಿ ಎಂದು ಎಲ್ಲರೂ ದೇವಸ್ಥಾನಕ್ಕೆ ಹೋಗಲು ತಯಾರಾಗುತ್ತಾರೆ. ಮನೆಯವರ ಸಂಭ್ರಮ ನೋಡಲಾಗದೆ ತಾಂಡವ್‌ ಕೋಪಗೊಳ್ಳುತ್ತಾನೆ. ನಾವು ಎಲ್ಲಿ ಹೋಗುತ್ತಿದ್ದೇವೆ ಎಂದು ಗುಂಡಣ್ಣ ಅಜ್ಜಿಗೆ ಕೇಳುತ್ತಾನೆ. ಮನೆಯವರೆಲ್ಲಾ ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೋಗುತ್ತಿದ್ದೇವೆ ಎಂದು ತಿಳಿದ ಗುಂಡಣ್ಣ ಹಾಗಾದರೆ ಅಪ್ಪನೂ ನಮ್ಮ ಜೊತೆ ಬರುತ್ತಾರಾ ಎಂದು ಕೇಳುತ್ತಾನೆ. ಆ ಅದೃಷ್ಟ ನಿನ್ನ ಅಪ್ಪನಿಗೆ ಇಲ್ಲ, ನಡಿ ನಾವೇ ಹೋಗೋಣ ಎಂದು ಎಲ್ಲರೂ ದೇವಸ್ಥಾನಕ್ಕೆ ಹೊರಡುತ್ತಾರೆ. ಭಾಗ್ಯಾ ಸಂಭ್ರಮ ಕಂಡು ತಾಂಡವ್‌ ಕೋಪ ವ್ಯಕ್ತಪಡಿಸುತ್ತಾನೆ. ಕೈಯಲ್ಲಿ ಕಾಸು ಕಾಣುತ್ತಿದೆ ಅಂತ ದುರಹಂಕಾರಿ ಆಗಿ ಮೆರೆಯುತ್ತಿದ್ದೀಯ, ಇದೆಲ್ಲಾ ಎಷ್ಟು ದಿನ ನಾನು ನೋಡುತ್ತೇನೆ ಎನ್ನುತ್ತೇನೆ.

ಟ್ರೆಂಡಿಂಗ್​ ಸುದ್ದಿ

ಅಪ್ಪ-ಅಮ್ಮ ಒಂದಾಗಲಿ ಎಂದು ಬೇಡುವ ಮಕ್ಕಳು

ತಾಂಡವ್‌ಗೆ ಉತ್ತರಿಸುವ ಭಾಗ್ಯಾ, ನೀವು ಅಂದುಕೊಂಡಂತೆ ನನಗೆ ಅಹಂಕಾರ ಇಲ್ಲ, ನಿನ್ನ ಕೈಲಿ ಒಂದು ಪೈಸೆಯೂ ದುಡಿಯಲು ಆಗುವುದಿಲ್ಲ ಎಂದು ನೀವು ಹೀಯಾಳಿಸುತ್ತಿದ್ದಿರಿ, ಆದರೆ ಈಗ ನಾನೂ ನಿಮ್ಮಷ್ಟೇ ದುಡಿಯುತ್ತಿದ್ದೇನೆ, ಅದಕ್ಕೆ ಖುಷಿ ಇದೆ ಎನ್ನುತ್ತಾಳೆ. ದೇವಸ್ಥಾನದಲ್ಲಿ ಭಾಗ್ಯಾ ಮನೆಯವರ ಹೆಸರು ಹೇಳಿ ಗಂಡನ ಹೆಸರನ್ನೂ ಹೇಳುತ್ತಾಳೆ. ಇದನ್ನು ನೋಡಿ ಕುಸುಮಾ ಖುಷಿಯಾಗುತ್ತಾಳೆ. ಆದಷ್ಟು ಬೇಗ ನನ್ನ ಮಗ, ಈ ಬಂಗಾರದಂಥ ಸೊಸೆಯನ್ನು ಅರ್ಥ ಮಾಡಿಕೊಂಡು ಅವಳೊಂದಿಗೆ ಜೀವನ ನಡೆಸಲಿ ಎಂದು ಧರ್ಮರಾಜ್‌, ಕುಸುಮಾ ಇಬ್ಬರೂ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಮಕ್ಕಳು ಕೂಡಾ ಅಪ್ಪ, ಅಮ್ಮ ಆದಷ್ಟು ಬೇಗ ಒಂದಾಗಲಿ ನಾವೆಲ್ಲಾ ಮೊದಲಿನಂತೆ ಸಂತೋಷವಾಗಿ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥಿಸುತ್ತಾರೆ.

ಹೋಟೆಲ್‌ನಲ್ಲಿ ತಾಂಡವ್‌ನನ್ನು ನೋಡುವ ಹಿತಾಗೆ ಆತನ ಮೇಲೆ ಅನುಮಾನ ಬಂದು ಮದುವೆ ವಿವರ ನೋಡುತ್ತಾಳೆ. ಆತ ಭಾಗ್ಯಾ ಗಂಡ, ಡಿವೋರ್ಸ್‌ ಆಗದೆ ಎರಡನೇ ಮದುವೆ ಆಗುತ್ತಿದ್ದಾನೆ ಎಂದು ತಿಳಿದ ಹಿತಾ, ಭಾಗ್ಯಾಗೆ ನಿಜ ಹೇಳಲು ನಿರ್ಧರಿಸುತ್ತಾಳೆ. ಸಾಕ್ಷಿ ಸಹಿತ ಭಾಗ್ಯಾಳನ್ನು ಭೇಟಿ ಮಾಡಲು ಮನೆಗೆ ಬರುತ್ತಾಳೆ. ಮನೆ ಬಾಗಿಲಲ್ಲಿ ಹಿತಾ ನಿಂತಿರುವುದನ್ನು ನೋಡಿ ತಾಂಡವ್‌ ಗಾಬರಿ ಆಗುತ್ತಾನೆ. ಭಾಗ್ಯಾ ನಿಮ್ಮೆಲ್ಲರ ಬಗ್ಗೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾಳೆ. ಆದರೆ ನೀವು ಅವರಿಗೆ ಮೋಸ ಮಾಡುತ್ತಿದ್ದೀರ. ಅದಕ್ಕೆ ನಾನು ಅವಕಾಶ ಮಾಡಿಕೊಡುವುದಿಲ್ಲ ಎನ್ನುತ್ತಾಳೆ. ಅಷ್ಟರಲ್ಲಿ ಸುನಂದಾ ಅಲ್ಲಿಗೆ ಬರುತ್ತಾಳೆ. ಹಿತಾಳ ಬಗ್ಗೆ ವಿಚಾರಿಸಿದಾಗ ತಾನು ಭಾಗ್ಯಾ ಸ್ನೇಹಿತೆ ಎಂದು ಹೇಳಿಕೊಳ್ಳುತ್ತಾಳೆ. ಭಾಗ್ಯಾ ಇಲ್ಲೇ ದೇವಸ್ಥಾನಕ್ಕೆ ಹೋಗಿದ್ದಾಳೆ ಎಂದು ಸುನಂದಾ ಹೇಳಿದಾಗ ಹಿತಾ, ದೇವಸ್ಥಾನಕ್ಕೆ ಹೋಗುತ್ತಾಳೆ.

ಭಾಗ್ಯಾಳನ್ನು ಭೇಟಿ ಆಗಲು ದೇವಸ್ಥಾನಕ್ಕೆ ಬಂದ ಹಿತಾ

ದೇವಸ್ಥಾನದಲ್ಲಿ ಭಾಗ್ಯಾಳನ್ನು ಭೇಟಿ ಆಗುವ ಹಿತಾ, ನಿಮಗೊಂದು ನಿಜ ಹೇಳಬೇಕು. ಇಷ್ಟು ದಿನಗಳ ಕಾಲ ನಿಮಗೆ ಗೊತ್ತಿಲ್ಲದೆ ನಿಮ್ಮ ಬೆನ್ನ ಹಿಂದೆ ಮೋಸ ನಡೆಯುತ್ತಿದೆ ಎಂದು ಹಿತಾ ಹೇಳುತ್ತಾಳೆ. ಆಕೆಯ ಮಾತು ಭಾಗ್ಯಾಗೆ ಗೊಂದಲ ಎನಿಸುತ್ತದೆ. ಹಿತಾಳನ್ನು ಹಿಂಬಾಲಿಸಿ ಬರುವ ತಾಂಡವ್‌, ಎಲ್ಲಿ ಅವಳು ನಿಜ ಹೇಳುತ್ತಾಳೋ ಎಂದು ಭಯಪಡುತ್ತಾನೆ.

ಹಿತಾ ಎಲ್ಲಾ ಸತ್ಯವನ್ನು ಭಾಗ್ಯಾಗೆ ಹೇಳುತ್ತಾಳಾ? ಭಾಗ್ಯಾ ಅದನ್ನು ಒಪ್ಪುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌