ಮುದ್ದು ಮಕ್ಕಳನ್ನು ನೋಡಿ ಸತ್ಯ ಹೇಳಲು ಹಿಂಜರಿದ ಹಿತಾ, ಏನು ಮಾಡ್ತೀಯ ಮಾಡ್ಕೊ ಅಂತ ಸವಾಲ್‌ ಹಾಕಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಮಕ್ಕಳನ್ನು ನೋಡಿ ಸತ್ಯ ಹೇಳಲು ಹಿಂಜರಿದ ಹಿತಾ, ಏನು ಮಾಡ್ತೀಯ ಮಾಡ್ಕೊ ಅಂತ ಸವಾಲ್‌ ಹಾಕಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಮುದ್ದು ಮಕ್ಕಳನ್ನು ನೋಡಿ ಸತ್ಯ ಹೇಳಲು ಹಿಂಜರಿದ ಹಿತಾ, ಏನು ಮಾಡ್ತೀಯ ಮಾಡ್ಕೊ ಅಂತ ಸವಾಲ್‌ ಹಾಕಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 9ರ ಎಪಿಸೋಡ್‌. ಭಾಗ್ಯಾಗೆ ನಿಜ ಹೇಳಲು ಬರುವ ಹಿತಾ ನಿರ್ಧಾರ ಬದಲಿಸಿಕೊಳ್ಳುತ್ತಾಳೆ. ತಾಂಡವ್‌, ಶ್ರೇಷ್ಠಾ ಇಬ್ಬರಿಗೂ ಎಚ್ಚರಿಕೆ ನೀಡುತ್ತಾಳೆ. ಇಷ್ಟಾದರೂ ಅಹಂಕಾರ ಇಳಿಸಿಕೊಳ್ಳದ ತಾಂಡವ್‌, ಏನು ಬೇಕಾದರೂ ಮಾಡಿಕೋ ಎಂದು ಚಾಲೆಂಜ್‌ ಮಾಡುತ್ತಾನೆ.

ಮುದ್ದು ಮಕ್ಕಳನ್ನು ನೋಡಿ ಸತ್ಯ ಹೇಳಲು ಹಿಂಜರಿದ ಹಿತಾ, ಏನು ಮಾಡ್ತೀಯ ಮಾಡ್ಕೊ ಅಂತ ಸವಾಲ್‌ ಹಾಕಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಮುದ್ದು ಮಕ್ಕಳನ್ನು ನೋಡಿ ಸತ್ಯ ಹೇಳಲು ಹಿಂಜರಿದ ಹಿತಾ, ಏನು ಮಾಡ್ತೀಯ ಮಾಡ್ಕೊ ಅಂತ ಸವಾಲ್‌ ಹಾಕಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಭಾಗ್ಯಾಗೆ ಕೆಲಸ ದೊರೆತ ಖುಷಿಯಲ್ಲಿ ಎಲ್ಲರೂ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿ, ನಮ್ಮ ಕುಟುಂಬ ಮೊದಲಿನಂತೆ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಭಾಗ್ಯಾ ಸಹೋದ್ಯೋಗಿ ಹಿತಾ, ಎಲ್ಲಾ ನಿಜವನ್ನೂ ಆಕೆಗೆ ಹೇಳುವುದಾಗಿ ದೇವಸ್ಥಾನಕ್ಕೆ ಬಂದಿದ್ದಾಳೆ. ಆಕೆ ಎಲ್ಲಿ ಭಾಗ್ಯಾಗೆ ನಿಜ ಹೇಳಿ ಮನೆಯಲಿ ರಂಪ ಆಗುವುದೋ ಎಂದು ಹೆದರಿ , ತಾಂಡವ್‌ ಹಿತಾಳನ್ನು ಫಾಲೋ ಮಾಡುತ್ತಾ ದೇವಸ್ಥಾನಕ್ಕೆ ಬಂದಿದ್ದಾನೆ.

ನಿರ್ಧಾರ ಬದಲಿಸಿದ ಹಿತಾ

ಭಾಗ್ಯಾ ಬಳಿ ಹೋಗುವ ಹಿತಾ, ನಿಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ನಾನು ಒಂದು ವಿಚಾರ ಹೇಳಲು ಬಂದೆ ಎನ್ನುತ್ತಾಳೆ. ಭಾಗ್ಯಾಗೆ ಹಿತಾ ಮಾತು ಗೊಂದಲ ಎನಿಸುತ್ತದೆ. ಯಾರ ಬಗ್ಗೆ ಏನು ಹೇಳಬೇಕು ಎಂದುಕೊಂಡಿದ್ದೀರಿ ಎಂದು ಕೇಳುತ್ತಾಳೆ. ಹಿತಾ, ಎಲ್ಲವನ್ನೂ ಹೇಳಬೇಕು ಎನ್ನುವಷ್ಟರಲ್ಲಿ ಗುಂಡಣ್ಣ ಓಡಿ ಬಂದು ಅಮ್ಮನನ್ನು ಅಪ್ಪಿಕೊಳ್ಳುತ್ತಾನೆ. ಅಮ್ಮ ಮಕ್ಕಳು ಏನು ಬೇಡಿಕೊಂಡರೂ ದೇವರು ಕೊಡುತ್ತಾನೆ ತಾನೇ, ಅಪ್ಪ ಮೊದಲಿನಂತೆ ನಮ್ಮ ಜೊತೆ ಬಂದು ಖುಷಿಯಾಗಿರಲಿ ಎಂದು ಬೇಡಿಕೊಂಡೆ ಎನ್ನುತ್ತಾನೆ. ಮಗುವಿನ ಮುಗ್ಧತೆ ಜೋಡಿ ಭಾಗ್ಯಾ ಭಾವುಕಳಾಗುತ್ತಾಳೆ. ಅಷ್ಟರಲ್ಲಿ ತನ್ವಿ ಕೂಡಾ ಅಲ್ಲಿಗೆ ಬರುತ್ತಾಳೆ. ನಾನು ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ಅವರು ಮೊದಲಿನಂತೆ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲವೂ ಸರಿ ಆಗುತ್ತದೆ ಎಂಬ ನಂಬಿಕೆ ನನಗೆ ಇದೆ ಎಂದು ಭಾಗ್ಯಾ ಹೇಳುತ್ತಾಳೆ.

ಭಾಗ್ಯಾ ಒಳ್ಳೆಯತನ, ಮಕ್ಕಳ ಮುಗ್ಧತೆ ನೋಡಿ ಹಿತಾ ತನ್ನ ನಿರ್ಧಾರ ಬದಲಿಸಿಕೊಳ್ಳುತ್ತಾಳೆ. ನಾನು ಎಲ್ಲವನ್ನೂ ಹೇಳಿ ಇವರಿಗೆ ನೋವು ಮಾಡುವುದು ಬೇಡ, ಸ್ವಲ್ಪ ದಿನ ಕಾದು ನೋಡೋಣ ಎಂದು ಹಿತಾ ಭಾಗ್ಯಾಗೆ ಸತ್ಯ ಹೇಳದೆ ಸುಮ್ಮನಾಗುತ್ತಾಳೆ. ಇತ್ತ ಭಯದಿಂದ ಭಾಗ್ಯಾ, ಹಿತಾಳನ್ನೇ ಗಮನಿಸುವ ತಾಂಡವ್‌ನನ್ನು ಕುಸುಮಾ ನೋಡುತ್ತಾಳೆ. ನೀನು ಇಲ್ಲಿಗೆ ಏಕೆ ಬಂದೆ ಎಂದು ಕೇಳುತ್ತಾಳೆ. ತಾಂಡವ್‌ ಅಮ್ಮನನ್ನು ನೋಡಿ ಗಾಬರಿ ಆಗುತ್ತಾನೆ. ಹಿತಾಳನ್ನು ಅಮ್ಮ ನೋಡಿದರೆ ಕಷ್ಟ ಎಂದು ಅವಳನ್ನು ತಡೆಯಲು ನೋಡುತ್ತಾನೆ. ಅದರೆ ಕುಸುಮಾ ಹಿತಾಳನ್ನು ನೋಡುತ್ತಾಳೆ. ಅವತ್ತು ಹೋಟೆಲ್‌ನಲ್ಲಿ ನನಗೆ ಒತ್ತು ಶ್ಯಾವಿಗೆ ತಂದುಕೊಟ್ಟ ಹುಡುಗಿ ಇವಳೇ ತಾನೇ, ಇವಳು ಇಲ್ಲಿಗೆ ಏಕೆ ಬಂದಳು ಎಂದು ಹಿತಾ ಬಳಿ ಹೋಗುತ್ತಾಳೆ. ಮನೆಗೆ ಹೋಗುತ್ತಿದ್ದೆ, ಭಾಗ್ಯಾ ಇಲ್ಲಿದ್ದಾಳೆ ಎಂದು ತಿಳಿದು ಅವರನ್ನು ಮಾತನಾಡಿಸಲು ಬಂದೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.

ತಾಂಡವ್‌, ಶ್ರೇಷ್ಠಾಗೆ ಎಚ್ಚರಿಕೆ

ಮತ್ತೆ ತಾಂಡವ್‌ ಬಳಿ ಬರುವ ಹಿತಾ, ನಾನು ಇಂದು ಏನೂ ಹೇಳಲಿಲ್ಲ ಎಂದು ಖುಷಿ ಆಗಬೇಡಿ, ಆದಷ್ಟು ಬೇಗ ನೀವು ತಪ್ಪು ಸರಿ ಮಾಡಿಕೊಳ್ಳದಿದ್ದರೆ ನಾನು ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸುತ್ತಾಳೆ. ಹಿತಾಳಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದುಕೊಳ್ಳುವ ತಾಂಡವ್‌, ಏನು ಮಾಡ್ತಿಯೋ ಮಾಡಿಕೋ ಎಂದು ಹಿತಾಗೆ ಚಾಲೆಂಜ್‌ ಮಾಡುತ್ತಾನೆ. ಹಿತಾ ಅಲ್ಲಿಂದ ಶ್ರೇಷ್ಠಾ ಮನೆಗೆ ಬರುತ್ತಾಳೆ. ಭಾಗ್ಯಾ ಸಂಸಾರ ಹಾಳು ಮಾಡದಂತೆ ಶ್ರೇಷ್ಠಾಗೆ ಕೂಡಾ ಹಿತಾ ಎಚ್ಚರಿಕೆ ಕೊಡುತ್ತಾಳೆ.

ಭಾಗ್ಯಾ ಸಂಸಾರ ಸರಿ ಮಾಡಲು ಹಿತಾ ಏನು ಪ್ಲಾನ್‌ ಮಾಡುತ್ತಾಳೆ? ತಾಂಡವ್‌ ಶ್ರೇಷ್ಠಾ ಮದುವೆ ವಿಚಾರ ಭಾಗ್ಯಾಗೆ ಕೊನೆವರೆಗೂ ತಿಳಿಯುದಿಲ್ಲವಾ? ಕಾದು ನೋಡಬೇಕು.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌