ಕನ್ನಡ ಸುದ್ದಿ  /  Entertainment  /  Kannada Television News Colors Kannada Bigg Boss Kannada Season 10 Clash Between Contestants For Nomination Rsm

Bigg Boss Kannada 10: ನಾಮಿನೇಶನ್‌ ವಿಚಾರವಾಗಿ ದೊಡ್ಮನೆಯಲ್ಲಿ ಶುರುವಾಯ್ತು ಜಗಳ; ಸತಿ ಮಹಾದೇವನ ನಡುವೆ ಮಾತಿನ ಚಕಮಕಿ

Bigg Boss Kannada 10: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಿ 2 ದಿನಗಳ ಕಳೆದಿವೆ. ದೊಡ್ಮನೆಯೊಳಗೆ ಹೋಗಿ 2 ದಿನಗಳ ನಂತರ ಸ್ಪರ್ಧಿಗಳ ನಡುವೆ ಜಗಳ ಶುರುವಾಗಿದೆ. ನಾಮಿನೇಶನ್‌ ವಿಚಾರವಾಗಿ ಸಂಗೀತಾ ಶೃಂಗೇರಿ ಹಾಗೂ ನಟ ವಿನಯ್‌ ನಡುವೆ ಮಾತಿನ ಚಕಮಕಿ ನಡೆದಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 10
ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (PC: Colors Kannada)

Bigg Boss Kannada 10: :ಕಿರುತೆರೆ ವೀಕ್ಷಕರು ಕಾಯುತ್ತಿದ್ದ ಬಿಗ್‌ ಬಾಸ್‌ ಸೀಸನ್‌ 10 ಶುರುವಾಗಿದೆ. ಭಾನುವಾರ 17 ಸ್ಪರ್ಧಿಗಳು ದೊಡ್ಮನೆಯೊಳಗೆ ಹೋಗಿದ್ದಾರೆ. ಅದರಲ್ಲಿ ವರ್ತೂರು ಸಂತೋಷ್‌, ಸಂಗೀತಾ ಶೃಂಗೇರಿ, ರಕ್ಷಕ್‌, ಡ್ರೋಣ್‌ ಪ್ರತಾಪ್‌, ತನಿಷಾ ಹಾಗೂ ಕಾರ್ತಿಕ್‌ ವೇಟಿಂಗ್‌ ಲಿಸ್ಟ್‌ನಲ್ಲಿದ್ದ ಸ್ಪರ್ಧಿಗಳು. ವೀಕ್ಷಕರ ಆಯ್ಕೆ ಮೇರೆಗೆ 11 ಸ್ಪರ್ಧಿಗಳನ್ನು ದೊಡ್ಮನೆಯೊಳಗೆ ಕಳಿಸಿದ ನಂತರ ವೇಟಿಂಗ್‌ ಲಿಸ್ಟ್‌ನಲ್ಲಿ ಉಳಿದಿದ್ದ 6 ಮಂದಿಯನ್ನೂ ಸ್ಪರ್ಧಿಗಳನ್ನಾಗಿ ಕಳಿಸಲಾಗಿದೆ.

ನಾಮಿಶೇಶನ್‌ ಪ್ರಕ್ರಿಯೆ ಆರಂಭ

ಮೊದಲ ದಿನ ಎಲ್ಲಾ ಸ್ಪರ್ಧಿಗಳು ಹುರುಪಿನಿಂದ ಇದ್ದರು. ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುತ್ತಾ ಹರಟುತ್ತಾ, ನಗುತ್ತಾ ಖುಷಿಯಿಂದ ಇದ್ದರು. ಆದರೆ ಮಂಗಳವಾರದ ಎಪಿಸೋಡ್‌ನಲ್ಲಿ ಸ್ಪರ್ಧಿಗಳು , ವೇಟಿಂಗ್‌ ಲಿಸ್ಟ್‌ನಲ್ಲಿದ್ದವರನ್ನು ನಾಮಿನೇಷನ್‌ ಮಾಡಿದ್ದಾರೆ. ಈ ಮೂಲಕ ಎರಡನೇ ದಿನದಿಂದ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ ಆರಂಭವಾಗಿದೆ. ಇದುವರೆಗೂ ನಡೆದಿರುವ 9 ಬಿಗ್‌ ಬಾಸ್‌ ಸೀಸನ್‌ಗಳಲ್ಲಿ ಕೂಡಾ ಇದೇ ಪರಿಸ್ಥಿತಿ ಇತ್ತು. ಆರಂಭದಲ್ಲಿ ನಗು ನಗುತ್ತಾ ಸ್ನೇಹದಿಂದ ಸ್ಪರ್ಧಿಗಳು ನಂತರ ಟಾಸ್ಕ್‌ ವಿಚಾರವಾಗಿ ಜಗಳ ಮಾಡಲು ಆರಂಭಿಸಿದ್ದಾರೆ.

ಮಂಗಳವಾರದ ಕಾರ್ಯಕ್ರಮದ ಪ್ರೋಮೋವನ್ನು ಕಲರ್ಸ್‌ ಕನ್ನಡ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದೆ. ವೇಟಿಂಗ್‌ ಲಿಸ್ಟ್‌ನಲ್ಲಿರುವ ಸ್ಪರ್ಧಿಗಳಲ್ಲಿ ಯಾರು ಮೊದಲ ವಾರ ಮನೆಯಿಂದ ಹೋರ ಹೋಗಬೇಕು ಎನ್ನುವುದರ ಬಗ್ಗೆ ನಾಮಿನೇಟ್‌ ಮಾಡುವಂತೆ ಉಳಿದ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಸೂಚಿಸುತ್ತಾರೆ. ನಮ್ರತಾ, ತನಿಷಾ ಹೆಸರು ಹೇಳಿದರೆ ನೀತು ಪ್ರತಾಪ್‌ ಹೆಸರು ಹೇಳುತ್ತಾರೆ, ತುಕಾಲಿ ಸಂತೋಷ್‌ ಕಾರ್ತಿಕ್‌ ಹೆಸರು, ವಿನಯ್‌ ಸಂಗೀತಾ ಹೆಸರು ಹೇಳುತ್ತಾರೆ. ನಾಮಿನೇಟ್‌ ಆದವರಿಗೆ ಪಂಪ್‌ನಿಂದ ಬಣ್ಣ ಎರಚಲಾಗುತ್ತದೆ. ಸ್ಪರ್ಧಿಗಳು ತಾವು ನಾಮಿನೇಟ್‌ ಮಾಡುವುದರ ಜೊತೆಗೆ ಸೂಕ್ತ ಕಾರಣವನ್ನೂ ನೀಡಬೇಕಿರುತ್ತದೆ.

ಸಂಗೀತಾ ವಿನಯ್‌ ನಡುವೆ ಮಾತಿನ ಚಕಮಕಿ

ಮನೆಯಲ್ಲಿ ಸೋಫಾ ಮೇಲೆ ಕೂರಬಾರದು ಎಂದ ರೂಲ್ಸ್‌ ಇದ್ದರೂ ಸಂಗೀತಾ ಸೋಫಾ ಮೇಲೆ ಕುಳಿತಿದ್ದರು, ಆದ್ದರಿಂದ ನಾನು ಅವರನ್ನು ನಾಮಿನೇಟ್‌ ಮಾಡುತ್ತಿದ್ದೇನೆ ಎಂದು ವಿನಯ್‌, ತಮ್ಮ ಸಹನಟಿ ಸಂಗೀತಾ ಬಗ್ಗೆ ದೂರು ಹೇಳುತ್ತಾರೆ. ಇದರಿಂದ ಸಂಗೀತಾ ಸಿಟ್ಟಾಗುತ್ತಾರೆ. ನಾನು ಸೋಫಾ ಮೇಲೆ ಕುಳಿತರೆ ಬಿಗ್‌ ಬಾಸ್‌ ಶಿಕ್ಷೆ ಕೊಡುತ್ತಾರೆ, ನೀವೇ ಬಿಗ್‌ ಬಾಸ್‌ ಆಗಬಾರದಿತ್ತು ಎಂದು ಸಂಗೀತಾ ಕೋಪದಿಂದ ಕೇಳುತ್ತಾರೆ. ಇದೇ ವಿಚಾರಕ್ಕೆ ಸಂಗೀತಾ ಹಾಗೂ ವಿನಯ್‌ ನಡುವೆ ಮಾತಿನ ಚಕಮಕಿ ನಡೆಯುತ್ತದೆ.

ವಿನಯ್‌ ಹಾಗೂ ಸಂಗೀತಾ ಹರ ಹರ ಮಹದೇವ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದಾರೆ. 2016ರಲ್ಲಿ ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ವಿನಯ್‌ ಮಹಾದೇವನಾಗಿ, ಸಂಗೀತಾ, ಸತಿ ಪಾತ್ರದಲ್ಲಿ ನಟಿಸಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ