ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ಸಲ ನಾನೇ ಮಗು ತೆಗೆಸಿದೆ, ಎರಡನೇ ಬಾರಿ ನನಗರಿವಿಲ್ಲದೆ ಮಗು ಮುದ್ದೆ ಥರ ಹೊರ ಬಂದ್ಬಿಡ್ತು; ಅಬಾರ್ಷನ್‌ ಬಗ್ಗೆ ನಯನಾ ಮಾತು

ಮೊದಲ ಸಲ ನಾನೇ ಮಗು ತೆಗೆಸಿದೆ, ಎರಡನೇ ಬಾರಿ ನನಗರಿವಿಲ್ಲದೆ ಮಗು ಮುದ್ದೆ ಥರ ಹೊರ ಬಂದ್ಬಿಡ್ತು; ಅಬಾರ್ಷನ್‌ ಬಗ್ಗೆ ನಯನಾ ಮಾತು

ಹಾಸ್ಯನಟಿ ನಯನಾ ಶರತ್‌, ತಮ್ಮ ಬದುಕಿನಲ್ಲಿ ಘಟಿಸಿದ ಘಟನೆಗಳನ್ನು ಮತ್ತೆ ನೆನಪಿಸಿಕೊಂಡು ಕಣ್ಣೀರಾಗಿದ್ದಾರೆ. ಅಬಾರ್ಷನ್‌ ಮತ್ತು ಆತ್ಮಹತ್ಯೆಯ ಬಗ್ಗೆಯೂ ನೆನಪು ಮಾಡಿಕೊಂಡಿದ್ದಾರೆ.

ಮೊದಲ ಸಲ ನಾನೇ ಮಗು ತೆಗೆಸಿದೆ, ಎರಡನೇ ಸಲ ನನಗರಿವಿಲ್ಲದೆ ಮಗು ಮುದ್ದೆ ಥರ ಹೊರ ಬಂದ್ಬಿಡ್ತು; ಅಬಾರ್ಷನ್‌ ಬಗ್ಗೆ ನಯನಾ ಮಾತು
ಮೊದಲ ಸಲ ನಾನೇ ಮಗು ತೆಗೆಸಿದೆ, ಎರಡನೇ ಸಲ ನನಗರಿವಿಲ್ಲದೆ ಮಗು ಮುದ್ದೆ ಥರ ಹೊರ ಬಂದ್ಬಿಡ್ತು; ಅಬಾರ್ಷನ್‌ ಬಗ್ಗೆ ನಯನಾ ಮಾತು

Comedy Khiladigalu Premier League Nayana Sharath: ಕಾಮಿಡಿ ಕಿಲಾಡಿಗಳು ಶೋ ಮೂಲಕ ಕರುನಾಡಿಗೆ ನಗು ಉಣಿಸುವ ಕೆಲಸ ಮಾಡುತ್ತ ಬಂದವರು ನಟಿ ನಯನಾ ಶರತ್.‌ ಕಾಮಿಡಿ ಕಿಲಾಡಿಗಳು ನಯನಾ ಎಂದೇ ಫೇಮಸ್‌ ಈ ನಟಿ. ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡು, ಸಿನಿಮಾ, ಸೀರಿಯಲ್‌ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ನಟಿ. ಸದ್ಯ ಮತ್ತೊಮ್ಮೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.‌ ನಗು ಉಕ್ಕಿಸುವ ಹಳೇ ಕೆಲಸವನ್ನು ಮತ್ತೆ ಶುರುವಿಟ್ಟುಕೊಂಡಿದ್ದಾರೆ. ಈ ನಡುವೆ ಸಂದರ್ಶನದಲ್ಲಿ ತಮ್ಮ ಬದುಕಿನಲ್ಲಿ ಘಟಿಸಿದ ನೋವಿನ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಮ್ಮ ಕಾಮಿಡಿ ಪಂಚ್‌ನಿಂದಲೇ ಎಲ್ಲರ ಮೊಗದಲ್ಲೂ ನಗು ಉಕ್ಕಿಸುತ್ತಿದ್ದ ಈ ನಟಿಯ ಬಾಳಲ್ಲೂ ನುಂಗಲಾರದಷ್ಟು ಘಟನೆಗಳು ನಡೆದಿವೆ. ಎಲ್ಲವೂ ಚೆನ್ನಾಗಿಯೇ ಹೋಗುತ್ತಿದ್ದ ಸಂದರ್ಭದಲ್ಲಿ ನಯನಾ ಪಟ್ಟ ಪಾಡು ಅಷ್ಟಿಷ್ಟಲ್ಲ. ಆ ನೋವಿನಿಂದ ಹೊರಬರಲಾರದೆ, ಸಾಯುವ ನಿರ್ಧಾರಕ್ಕೂ ಬಂದಿದ್ದರು ನಯನಾ. ತಮ್ಮ ಹೆಣವೂ ಸಿಗಬಾರ್ದು ಅಂತ ನಿರ್ಧರಿಸಿ, ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು. ಕೊನೆಗೆ ಕರುಳ ಕುಡಿಯಿಂದಲೇ ಅವರ ಬದುಕು ಬದಲಾಯ್ತು. ಹೀಗೆ ಒಂದಷ್ಟು ವಿಚಾರಗಳನ್ನು ಆರ್‌ಜೆ ರಾಜೇಶ್‌ ಅವರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಯನಾ ಹೇಳಿಕೊಂಡು ಕಣ್ಣೀರಾಗಿದ್ದಾರೆ.

ಕರೊನಾ ಸಲುವಾಗಿ ಹೊಟ್ಟೆಯಲ್ಲಿನ ಮಗು ತೆಗೆಸಿದೆ..

"ನನ್ನ ಮದುವೆ ಆದಾಗ ನನಗಾಗ ಬರೀ 22 ವರ್ಷ ವಯಸ್ಸು. ಅದಾಗಲೇ ರಿಯಾಲಿಟಿ ಶೋಗಳಿಂದ ನೇಮು ಫೇಮು ಸಿಕ್ಕಿತ್ತು. ಸಿನಿಮಾ, ಸೀರಿಯಲ್‌ ಅವಕಾಶಗಳೂ ಬರುತ್ತಿದ್ದವು. ಪತಿ ಶರತ್‌ ಸದಾ ನನ್ನ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಮಗು ಮಾಡಿಕೊಳ್ಳುವ ನಿರ್ಧಾರ ಮಾಡಿದಾಗ, ಆ ಸಮಯದಲ್ಲಿ ಕರೊನಾ ಆರ್ಭಟ ಶುರುವಾಯ್ತು. ಕೂಡಿಟ್ಟಿದ್ದ ಹಣ ಖರ್ಚಾಯ್ತು. ನನಗೂ ಕರೊನಾ ಬಂತು. ಅದೇ ಸಮಯದಲ್ಲೇ ಗರ್ಭಿಣಿಯಾದೆ. ಆರೋಗ್ಯದಲ್ಲೂ ಸಾಕಷ್ಟು ಏರಿಳಿತಗಳು ಕಂಡು ಬಂದವು. ನನಗೆ ಬಂದ ಕರೊನಾ ಮಗುವಿನ ಮೇಲೆ ಪರಿಣಾಮ ಬೀರಬಹುದೆಂದು, ಎರಡು ತಿಂಗಳ ಮಗುವನ್ನು ತೆಗೆಸಬೇಕಾಯ್ತು" ಎಂದಿದ್ದಾರೆ.

ಆರೋಗ್ಯ ಸಮಸ್ಯೆ ಹೆಚ್ಚಾಗಿತ್ತು..

"ಕರೊನಾ ಹಾವಳಿ ತಣ್ಣಗಾಯ್ತು. ಮತ್ತೆ ಮಗು ಮಾಡಿಕೊಳ್ಳುವ ನಿರ್ಧಾರ ಮಾಡಿ, ನಮ್ಮ ಜೀವನವನ್ನು ಜೀರೋದಿಂದ ಶುರುಮಾಡಿದೆವು. ಮೊದಲ ಮಗುವನ್ನು ಕಳೆದುಕೊಂಡು ನೋವು ಅನುಭವಿಸಿದ್ದ ನಮಗೆ ಇನ್ನೊಂದು ಮಗು ಮಾಡಿಕೊಳ್ಳುವ ಬಯಕೆಯೂ ಹೆಚ್ಚಾಯ್ತು. ಗರ್ಭಿಣಿ ಬಯಕೆಯನ್ನೂ ನಾನು ಪುಸ್ತಕದಲ್ಲಿ ಪಟ್ಟಿ ಮಾಡುತ್ತ ಹೋದೆ. ಜತೆಗೆ ನನಗೊಂದಿಷ್ಟು ಆರೋಗ್ಯ ಸಮಸ್ಯೆಗಳೂ ಕಾಡ ತೊಡಗಿದವು. ಅದರ ನಡುವೆಯೇ ಮತ್ತೆ ಪ್ರಗ್ನೆಂಟ್‌ ಆದೆ. ಜೋರಾಗಿ ಮಾತನಾಡಬಾರದು ಎಂದೂ ವೈದ್ಯರು ಸಲಹೆ ನೀಡಿದ್ದರು. ಹಾಗೇ ಮಾತನಾಡಿದ್ರೆ, ಅದು ಮಗುವಿಗೂ ಸಮಸ್ಯೆ ಆಗುತ್ತದೆ ಎಂದಿದ್ದರು"

ಮಗು ಮುದ್ದೆ ರೀತಿ ಹೊರಬಂತು..

"ಹೀಗಿರುವಾಗಲೇ ನನಗೆ ಗೊತ್ತಿಲ್ಲದೆ, ನನಗೆ ಅರಿವಿಲ್ಲದೆ ಗರ್ಭಪಾತವಾಯ್ತು! ಮುದ್ದೆ ರೀತಿಯಲ್ಲಿ ಮಗು ಹೊರಬಂದುಬಿಡ್ತು. ನಾನು ಜೋರಾಗಿ ಕಿರುಚಿಕೊಂಡೆ. ಆಗ ಅಲ್ಲೇ ಇದ್ದ ನಮ್ಮ ಅಜ್ಜಿ ಬಂದು ನೀರು, ಹಾಕಿ ಏನೂ ಆಗಲ್ಲ ಎಂದು ಸಮಾಧಾನಪಡಿಸಿದರು. ಹೀಗಿರುವಾಗಲೇ ನನ್ನ ಮನಸ್ಸಿಗೆ ಘಾಸಿ ಮಾಡಿದ ಒಂದಷ್ಟು ಘಟನೆಗಳು ನಡೆದವು. ಯಾರು ಹೇಗೆ ಎಂಬುದನ್ನು ತಿಳಿದುಕೊಂಡೆ. ನಿಜವಾದ ಜೀವನದ ಅರಿವಾಯ್ತು. ಅದ್ಯಾವ ಮಟ್ಟಿಗೆ ಎಂದರೆ, ಒಂದಷ್ಟು ದಿನಗಳ ಬಳಿಕ ಆತ್ಮಹತ್ಯೆ ನಿರ್ಧಾರ ಮಾಡಿದ್ದೆ. ಅದಕ್ಕೆಂದೇ ಒಂದಷ್ಟು ಮಾತ್ರೆಗಳನ್ನೂ ನುಂಗಿದ್ದೆ. ಯುಗಾದಿ ಹಿಂದಿನ ದಿನ ಸುಸ್ತಾಯ್ತು. ಕಿಟ್‌ ಪಡೆದು ಪರೀಕ್ಷೆ ಮಾಡಿದಾಗ ಗರ್ಭಿಣಿ ಎಂಬುದು ಗೊತ್ತಾಯ್ತು. ಹೊಟ್ಟೆಯಲ್ಲಿರುವ ಮಗುವಿನ ಸಲುವಾಗಿಯಾದರೂ ಬದುಕಬೇಕು ಎಂದು ನಿರ್ಧರಿಸಿದೆ. ನನ್ನ ಸಾವನ್ನು ಮಗಳು ತಡೆದಳು. ಭಗವಂತನ ರೂಪದಲ್ಲಿ ಮಗಳು ಬಂದಳು" ಎಂದಿದ್ದಾರೆ ನಯನಾ.

ಟಿ20 ವರ್ಲ್ಡ್‌ಕಪ್ 2024