ಕಲರ್ಸ್‌ ಕನ್ನಡ ರಾಜಾ ರಾಣಿ 3 ಗ್ಯ್ರಾಂಡ್‌ ಫಿನಾಲೆಗೆ ಕೌಂಟ್‌ಡೌನ್‌; ಯಾರಾಗ್ತಾರೆ ಈ ಬಾರಿಯ ಬೆಸ್ಟ್‌ ಜೋಡಿ?-kannada television news count down for colos kannada raja rani season 3 grand final small screen rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕಲರ್ಸ್‌ ಕನ್ನಡ ರಾಜಾ ರಾಣಿ 3 ಗ್ಯ್ರಾಂಡ್‌ ಫಿನಾಲೆಗೆ ಕೌಂಟ್‌ಡೌನ್‌; ಯಾರಾಗ್ತಾರೆ ಈ ಬಾರಿಯ ಬೆಸ್ಟ್‌ ಜೋಡಿ?

ಕಲರ್ಸ್‌ ಕನ್ನಡ ರಾಜಾ ರಾಣಿ 3 ಗ್ಯ್ರಾಂಡ್‌ ಫಿನಾಲೆಗೆ ಕೌಂಟ್‌ಡೌನ್‌; ಯಾರಾಗ್ತಾರೆ ಈ ಬಾರಿಯ ಬೆಸ್ಟ್‌ ಜೋಡಿ?

ಇಂದು ಸಂಜೆ 6 ಗಂಟೆಯಿಂದ ಕಲರ್ಸ್‌ ಕನ್ನಡದಲ್ಲಿ ರಾಜಾ ರಾಣಿ ಸೀಸನ್‌ 3ರ ಗ್ರ್ಯಾಂಡ್‌ ಫಿನಾಲೆ ಪ್ರಸಾರವಾಗಲಿದೆ. ಇದೇ ವೇದಿಕೆಯಲ್ಲಿ ಬಿಗ್‌ ಬಾಸ್‌ 11ರ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಲಾಗುವುದು ಎಂದು ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾಹಿತಿ ಹಂಚಿಕೊಂಡಿದ್ದಾರೆ.

ಕಲರ್ಸ್‌ ಕನ್ನಡ ರಾಜಾ ರಾಣಿ 3 ಗ್ಯ್ರಾಂಡ್‌ ಫಿನಾಲೆಗೆ ಕೌಂಟ್‌ಡೌನ್‌; ಯಾರಾಗ್ತಾರೆ ಈ ಬಾರಿಯ ಬೆಸ್ಟ್‌ ಜೋಡಿ?
ಕಲರ್ಸ್‌ ಕನ್ನಡ ರಾಜಾ ರಾಣಿ 3 ಗ್ಯ್ರಾಂಡ್‌ ಫಿನಾಲೆಗೆ ಕೌಂಟ್‌ಡೌನ್‌; ಯಾರಾಗ್ತಾರೆ ಈ ಬಾರಿಯ ಬೆಸ್ಟ್‌ ಜೋಡಿ? (PC: Colors Kannada)

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ಸೀಸನ್‌ 3 ಗ್ರಾಂಡ್‌ ಫಿನಾಲೆ ಇಂದು (ಶನಿವಾರ) ಪ್ರಸಾರವಾಗುತ್ತಿದೆ. ಈಗಾಗಲೇ ಕಾರ್ಯಕ್ರಮದ ಚಿತ್ರೀಕರಣ ನಡೆದಿದ್ದು ಇಂದು ಸಂಜೆಯಿಂದ ಕಾರ್ಯಕ್ರಮ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸೀಸನ್‌ನಲ್ಲಿ ಯಾವ ಜೋಡಿ ಗೆಲ್ಲಬಹುದೆಂದು ನೋಡಲು ಕಿರುತೆರೆ ಪ್ರಿಯರು ಕುತೂಹಲದಿಂದ ಕಾಯುತ್ತಿದೆ.

2021 ರಲ್ಲಿ ರಾಜಾ ರಾಣಿ ಮೊದಲ ಸೀಸನ್

2021 ರಲ್ಲಿ ಮೊದಲ ಸೀಸನ್‌ ಆರಂಭವಾಗಿತ್ತು. ಸೆಲಬ್ರಿಟಿ ಕಪಲ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅವರಿಗೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಮೊದಲ ಸೀಸನ್‌ನಲ್ಲಿ ನೇಹಾಗೌಡ ಹಾಗೂ ಚಂದನ್‌ ಸೂಪರ್‌ ಜೋಡಿಯಾಗಿ ವಿನ್ನರ್‌ ಆಗಿದ್ದರು. ಇಶಿತಾ ವರ್ಷಾ, ಮುರುಗಾನಂದ ಮೊದಲ ರನ್ನರ್‌ ಅಪ್‌ ಆಗಿದ್ದರು. ಎರಡನೇ ಸೀಸನ್‌ನಲ್ಲಿ ಕಾವ್ಯಾ ಮಹಾದೇವ್‌ ಹಾಗೂ ಕುಮಾರ್‌ ಗೆದ್ದಿದ್ದರು. ಸುಂದರ್‌ ರಾಜ್‌ ಮತ್ತು ವೀಣಾ ಸುಂದರ್ ಮೊದಲ ರನ್ನರ್‌ ಅಪ್‌ ಆಗಿದ್ದರು. ಈ ಬಾರಿ ಕೂಡಾ ಅನೇಕ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಫೈನಲ್‌ಗೆ ಹರ್ಷಿತಾ - ವಿನಯ್‌, ಮೇಘ -ಸಂಜಯ್, ಅರ್ಜುನ್ ಯೋಗಿ -ಸಾರಿಕಾ, ಲೋಕೇಶ್ ಬನಹಟ್ಟಿ-ರಚನಾ ದಶರಥ್‌, ಪ್ರಿಯಾಂಕಾ ಕಾಮತ್ - ಅಮಿತ್ ಜೋಡಿ ಫೈನಲ್‌ಗೆ ಆಯ್ಕೆ ಆಗಿದೆ. ಈ ಜೋಡಿಗಳಲ್ಲಿ ರಾಣಿ ರಾಣಿ 3ರ ಕಿರೀಟವನ್ನು ಯಾರು ಗೆಲ್ಲಲಿದ್ದಾರೆ ನೋಡಬೇಕು.‌‌

ಲೋಕೇಶ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿ ಪ್ರಸಾರವಾಗುತ್ತಿರುವ ಕಾರ್ಯಕ್ರಮ

ರಾಜಾ ರಾಣಿ ರಿಯಾಲಿಟಿ ಶೋ ಲೋಕೇಶ್‌ ಪ್ರೊಡಕ್ಷನ್‌ ಅಡಿಯಲ್ಲಿ ಪ್ರಸಾರವಾಗುತ್ತಿದೆ. ಸೃಜನ್‌ ಲೋಕೇಶ್‌ ಹಾಗೂ ತಾರಾ ಅನುರಾಧಾ ಜಡ್ಜ್‌ಗಳಾಗಿದ್ದಾರೆ. ಈ ಬಾರಿ ಅದಿತಿ ಪ್ರಭುದೇವ ಹೊಸ ಜಡ್ಜ್‌‌ ಆಗಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಅನುಪಮಾ ಗೌಡ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ವಾಹಿನಿಯು ಫೈನಲ್‌ ಪ್ರೋಮೋ ಹಂಚಿಕೊಂಡಿದೆ. ಎಲ್ಲಾ ಫೈನಲ್‌ ಕಂಟಸ್ಟಂಟ್‌ಗಳು ವೇದಿಕೆಯಲ್ಲಿ ಡ್ಯಾನ್ಸ್‌ ಮಾಡಲಾಗಿದ್ದಾರೆ. ಅದಿತಿ ಪ್ರಭುದೇವ ಅದ್ಭುತ ಡ್ಯಾನ್ಸ್‌ ಫರ್ಮಾನೆನ್ಸ್‌ ನೀಡಲಿದ್ದಾರೆ. ಒಟ್ಟಿನಲ್ಲಿ ಈ ಸೀಸನ್‌ನಲ್ಲಿ ಯಾರು ಗೆಲ್ಲಬಹುದು ಎಂದು ವೀಕ್ಷಕರು ಲೆಕ್ಕಾಚಾರ ಹಾಕ್ತಿರೋದು ನಿಜ.

ರಾಜಾ ರಾಣಿ ವೇದಿಕೆಯಲ್ಲಿ ಬಿಗ್‌ ಬಾಸ್‌ 11ರ ಸ್ಪರ್ಧಿಗಳ ಹೆಸರು ರಿವೀಲ್

ಈ ಬಾರಿ ಫೈನಲ್‌ನಲ್ಲಿ ಬಿಗ್‌ ಬಾಸ್‌ ಕಂಟೆಸ್ಟಂಟ್‌ಗಳನ್ನು ಅನೌನ್ಸ್‌ ಮಾಡ್ತಿರೋದು ಮತೊಂದು ವಿಶೇಷ. ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಲಾಗುವುದು ಎಂದು ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಬಿಗ್‌ ಬಾಸ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ರಾಜಾ ರಾಣಿ ಫೈನಲ್‌ ವಿನ್ನರ್‌ ಜೊತೆಗೆ ಬಿಗ್‌ ಬಾಸ್‌ ಕಾರ್ಯಕ್ರಮದ ಸ್ಪರ್ಧಿಗಳು ಯಾರು ಅಂತ ಇಂದು ಸಂಜೆ ತಿಳಿಯಲಿದೆ. ಇಂದು ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ರಾಜಾ ರಾಣಿ ಫೈನಲ್‌ ನಡೆಯಲಿದೆ. ನಾಳೆ ಸಂಜೆ 6 ಕ್ಕೆ ಬಿಗ್‌ ಬಾಸ್‌ ಕಾರ್ಯಕ್ರಮ ಶುರುವಾಗಲಿದೆ.

mysore-dasara_Entry_Point