ಕನ್ನಡ ಸುದ್ದಿ  /  ಮನರಂಜನೆ  /  ಪತಿ ಜತೆಗಿನ ಎಲ್ಲ ಫೋಟೋಗಳು ಡಿಲಿಟ್‌! ಅಶ್ವಿನಿ ನಕ್ಷತ್ರ ಸೀರಿಯಲ್‌ ಖ್ಯಾತಿಯ ಮಯೂರಿ ಬಾಳಲ್ಲೂ ಡಿವೋರ್ಸ್‌ ಬಿರುಗಾಳಿ, ಹೀಗಿದೆ ನಟಿಯ ಸ್ಪಷ್ಟನೆ

ಪತಿ ಜತೆಗಿನ ಎಲ್ಲ ಫೋಟೋಗಳು ಡಿಲಿಟ್‌! ಅಶ್ವಿನಿ ನಕ್ಷತ್ರ ಸೀರಿಯಲ್‌ ಖ್ಯಾತಿಯ ಮಯೂರಿ ಬಾಳಲ್ಲೂ ಡಿವೋರ್ಸ್‌ ಬಿರುಗಾಳಿ, ಹೀಗಿದೆ ನಟಿಯ ಸ್ಪಷ್ಟನೆ

ಅಶ್ವಿನಿ ನಕ್ಷತ್ರ ಸೀರಿಯಲ್‌ ಮೂಲಕ ನಾಡಿನ ಮನೆ ಮಂದಿಗೆ ಆಪ್ತರಾಗಿದ್ದ ಹುಬ್ಬಳ್ಳಿ ಮೂಲದ ಮಯೂರಿ ಕ್ಯಾತರಿ, ಇದೀಗ ನನ್ನ ದೇವ್ರು ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ನಡುವೆ ಇದೇ ನಟಿಯ ದಾಂಪತ್ಯ ಬದುಕಲ್ಲಿಯೂ ಬಿರುಗಾಳಿ ಬೀಸಿದೆ ಎಂಬ ವದಂತಿ ಹರಿದಾಡುತ್ತಿದೆ. ಅದಕ್ಕೆ ನಟಿಯ ಪ್ರತಿಕ್ರಿಯೆ ಹೀಗಿದೆ.

ಪತಿ ಜತೆಗಿನ ಫೋಟೋಗಳು ಡಿಲಿಟ್‌! ಅಶ್ವಿನಿ ನಕ್ಷತ್ರ ಸೀರಿಯಲ್‌ ಖ್ಯಾತಿಯ ಮಯೂರಿ ಬಾಳಲ್ಲೂ ಡಿವೋರ್ಸ್‌ ಬಿರುಗಾಳಿ, ಹೀಗಿದೆ ನಟಿಯ ಸ್ಪಷ್ಟನೆ
ಪತಿ ಜತೆಗಿನ ಫೋಟೋಗಳು ಡಿಲಿಟ್‌! ಅಶ್ವಿನಿ ನಕ್ಷತ್ರ ಸೀರಿಯಲ್‌ ಖ್ಯಾತಿಯ ಮಯೂರಿ ಬಾಳಲ್ಲೂ ಡಿವೋರ್ಸ್‌ ಬಿರುಗಾಳಿ, ಹೀಗಿದೆ ನಟಿಯ ಸ್ಪಷ್ಟನೆ

Mayuri Kyatari: ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ಎರಡು ತಿಂಗಳಿಂದ ಡಿವೋರ್ಸ್‌ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿವೆ. ಒಂದಾದ ಮೇಲೊಂದು ಜೋಡಿ ವಿಚ್ಛೇದನದ ವಿಚಾರವಾಗಿ ಕೋರ್ಟ್‌ ಮೆಟ್ಟಿಲೇರುತ್ತಿದ್ದಾರೆ. ಆ ಪೈಕಿ ಬಿಗ್‌ಬಾಸ್‌ನಲ್ಲಿ ಪರಿಚಯವಾಗಿ, ಪ್ರೀತಿಸಿ ಬಾಳ ಬಂಧನಕ್ಕೂ ಬಲಗಾಲಿಟ್ಟಿದ್ದ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಕಳೆದ ತಿಂಗಳು ವಿಚ್ಛೇದನ ಪಡೆದು ದೂರವಾಗಿದ್ದರು. ಅದು ಮುಗಿಯುತ್ತಿದ್ದಂತೆ, ದೊಡ್ಮನೆ ಕುಡಿ ಯುವ ರಾಜ್‌ಕುಮಾರ್‌- ಶ್ರೀದೇವಿ ಭೈರಪ್ಪ ಸಹ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ನಟಿ ಮಯೂರಿ ಕ್ಯಾತರಿ ದಾಂಪತ್ಯದಲ್ಲಿ ಏರುಪೇರಾಗಿದೆ ಎಂಬ ಮಾತು ಇದೀಗ ಬಣ್ಣದ ಲೋಕದಲ್ಲಿ ಗುಲ್ಲೆಬ್ಬಿಸಿದೆ!

ಅಶ್ವಿನಿ ನಕ್ಷತ್ರ ಸೀರಿಯಲ್‌ ಮೂಲಕ ನಾಡಿನ ಮನೆ ಮಂದಿಗೆ ಆಪ್ತರಾಗಿದ್ದ ಹುಬ್ಬಳ್ಳಿ ಮೂಲದ ಮಯೂರಿ ಕ್ಯಾತರಿ, ಅದಾದ ಬಳಿಕ ಚಂದನವನದಲ್ಲಿಯೂ ನಟಿಯಾಗಿ ಪರಿಚಿತರಾದರು. ಚೊಚ್ಚಲ ಕೃಷ್ಣ ಲೀಲಾ ಚಿತ್ರದ ಮೂಲಕ ದೊಡ್ಡ ಯಶಸ್ಸನ್ನು ಪಡೆದುಕೊಂಡರು. ಅದಾದ ಮೇಲೆ ಇಷ್ಟಕಾಮ್ಯ, ನಟರಾಜ ಸರ್ವಿಸ್‌, ಕರಿಯ 2, 8ಎಂಎಂ ಬುಲೆಟ್‌, ರುಸ್ತುಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೌನಂ, ಪೊಗರು, ವೀಲ್‌ಚೇರ್‌ ರೋಮಿಯೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾಗಳನ್ನು ಬದಿಗಿಟ್ಟು ನನ್ನ ದೇವ್ರು ಸೀರಿಯಲ್‌ ಮೂಲಕ ಕಿರುತೆರೆಗೆ ಆಗಮಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇನ್‌ಸ್ಟಾಗ್ರಾಂನಲ್ಲಿ ಪತಿಯ ಫೋಟೋಗಳು ಡಿಲಿಟ್‌ …

ಸಿನಿಮಾ ಸೆಲೆಬ್ರಿಟಿಗಳು ಎಂದರೆ ಅಲ್ಲಿ ಲಕ್ಷಾಂತರ ಫಾಲೋವರ್ಸ್‌ ಅವರ ಮೇಲೆ ಕಣ್ಣಿಟ್ಟಿರುತ್ತಾರೆ. ಸೆಲೆಬ್ರಿಟಿಗಳ ಸಣ್ಣ ಸಣ್ಣ ಬದಲಾವಣೆಗಳೂ ಸಾರ್ವಜನಿಕವಾಗಿ ಜಗಜ್ಜಾಹೀರಾಗುತ್ತವೆ. ಅದೇ ರೀತಿ ನಟಿ ಮಯೂರಿ ಅವರ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಪತಿ ಅರುಣ್‌ ಕುಮಾರ್‌ ಅವರ ಜತೆಗಿನ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಬಂದಿದ್ದರು. ಆದರೆ, ಇದೀಗ ಹುಡುಕಿದರೂ ಪತಿ ಅರುಣ್‌ ಕುಮಾರ್‌ ಅವರ ಒಂದೇ ಒಂದು ಫೋಟೋ ಸಹ ಇದೀಗ ಕಾಣಿಸುವುದಿಲ್ಲ. ಇದೇ ವಿಚಾರವಾಗಿ ಈ ಜೋಡಿಯ ನಡುವೆ ಮುನಿಸು ಮನೆಮಾಡಿದ್ಯಾ ಎನ್ನಲಾಗುತ್ತಿದೆ!

10 ವರ್ಷದ ಸ್ನೇಹಕ್ಕೆ 2020ರಲ್ಲಿ ಮದುವೆ ಮುದ್ರೆ

ಪತಿ ಜತೆಗಿನ ಫೋಟೋಗಳನ್ನು ಡಿಲಿಟ್ ಆದ ಬೆನ್ನಲ್ಲೇ ವಿಚ್ಛೇದನಕ್ಕೆ ಈ ಜೋಡಿಯೂ ಸಜ್ಜಾಗಿದೆ ಎಂದೇ ಗಾಸಿಪ್‌ ಸೃಷ್ಟಿಯಾಗಿತ್ತು. ಅರುಣ್‌ ಕುಮಾರ್‌ ಜತೆಗಿನ 10 ವರ್ಷಗಳ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಅದರಂತೆ 2020ರ ಜೂನ್‌ 12ರಂದು ಎರಡೂ ಕುಟುಂಬದ ಸಮ್ಮುಖದಲ್ಲಿ ಸರಳವಾಗಿ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಈ ಜೋಡಿಯ ಮದುವೆಯಾಗಿತ್ತು. ಈ ಜೋಡಿಗೆ ಓರ್ವ ಗಂಡು ಮಗುವೂ ಇದೆ. ಹೀಗಿರುವಾಗಲೇ ಪತಿ ಜತೆಗಿನ ಸೋಷಿಯಲ್‌ ಮೀಡಿಯಾದಲ್ಲಿನ ಫೋಟೋಗಳು ಕಣ್ಮರೆ ಆಗುತ್ತಿದ್ದಂತೆ, ಬಗೆಬಗೆ ಗಾಸಿಪ್‌ ಹರಿದಾಡುತ್ತಿವೆ. ಈ ಗಾಸಿಪ್‌ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ ಮಯೂರಿ.

ದಾಂಪತ್ಯದ ಬಗ್ಗೆ ನಟಿಯ ಸ್ಪಷ್ಟನೆ

ಅವರಿಗೆ ಏನು ಹೇಳೋಕಾಗುತ್ತೆ. ಹೇಳುವ ಅವಶ್ಯಕತೆಯೂ ಇಲ್ಲ. ನಾನು ತುಂಬ ಪಾಸಿಟಿವ್‌ ಪರ್ಸನ್.‌ ಕೇಳುವವರು ಕೆಟ್ಟವರಲ್ಲ. ಅವರು ಒಂದು ಆಲೋಚನೆಯಲ್ಲಿ ಕೇಳಿರಬಹುದು. ನಾನು ಆ ತರದವಳಲ್ಲ. ನಾನು ಯಾರ ವೈಯಕ್ತಿಕ ವಿಚಾರ ಕೇಳಲ್ಲ. ಪಬ್ಲಿಕ್‌ ಫಿಗರ್‌ ಅಂದಮೇಲೆ ಕುತೂಹಲ ಸಹಜ. ನಾನೇ ಆ ಸ್ಥಾನದಲ್ಲಿದ್ದರೆ ನನಗೂ ಆ ಥರ ಆಲೋಚನೆ ಬರಬಹುದೆನೋ. ಇವತ್ತು ಬರ್ತಾನೇ ಒಂದು ಅಪಘಾತ ನೋಡಿದೆ. ಒಂದೇ ಸೆಕೆಂಡ್‌ನಲ್ಲಿ ಟ್ಯಾಂಕರ್‌ ಬಂದು ಹೊಡೀತು, ಸ್ಥಳದಲ್ಲೇ ಒಬ್ಬ ಸತ್ತೋದ. ಮುಂದಿನ ಕ್ಷಣ ನಮ್ಮದು ಹೌದಲ್ವೋ ಗೊತ್ತಿಲ್ಲ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು, ಅವರ ಸಂಸಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಕೆ ಕೆಡಿಸಿಕೊಳ್ಳುವ ಬದಲು, ಅವರವರ ಜೀವನದ ಬಗ್ಗೆ ಕಾಳಜಿ ವಹಿಸಲಿ.

ಮೆದುಳು ಮನಸ್ಸು ದೇಹ ಎಲ್ಲವೂ ಚೆನ್ನಾಗಿದೆ. ದಾಂಪತ್ಯ ಜೀವನದಲ್ಲೂ ನಾನು ಖುಷಿಯಾಗಿದ್ದೇನೆ. ನನ್ನ ದಾಂಪತ್ಯದಲ್ಲಿಯೂ ಚೆನ್ನಾಗಿಯೇ ಇದೆ. ಅವರಿವರು ಏನೇನೋ ಮಾತನಾಡ್ತಾರೆ ಅಂತ ನಾವು ತಲೆಕೆಡಿಸಿಕೊಳ್ಳಲ್ಲ. ನನ್ನ ಲೈಫ್‌ ಚೆನ್ನಾಗಿಯೇ ಇದೆ. ಒಂದು ಕಾಲು ಮುಂದಿಟ್ಟರೂ ಒಂದು ಮಾತನಾಡ್ತಾರೆ, ಹಿಂದಿಟ್ಟರೂ ಟೀಕಿಸುತ್ತಾರೆ. ಆ ರೀತಿಯ ಮನಸ್ಥಿತಿಗಳಿಗೆ ಏನನ್ನೂ ಹೇಳಲಾಗುವುದಿಲ್ಲ" ಎಂದು ಆಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದಾರೆ.