Bigg Boss Kannada Season 11ರ ಸ್ಪರ್ಧಿಗಳ ಹೊಸ ಲಿಸ್ಟ್‌ ರಿವೀಲ್; ಸ್ವರ್ಗದ ಬಾಗಿಲು ತಟ್ಟೋರ್ಯಾರು, ನರಕಕ್ಕೆ ಹೋಗೋರ್ಯಾರು?-kannada television news haripriya kiran raj to bhavana menon bigg boss kannada season 11 contestants list out mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada Season 11ರ ಸ್ಪರ್ಧಿಗಳ ಹೊಸ ಲಿಸ್ಟ್‌ ರಿವೀಲ್; ಸ್ವರ್ಗದ ಬಾಗಿಲು ತಟ್ಟೋರ್ಯಾರು, ನರಕಕ್ಕೆ ಹೋಗೋರ್ಯಾರು?

Bigg Boss Kannada Season 11ರ ಸ್ಪರ್ಧಿಗಳ ಹೊಸ ಲಿಸ್ಟ್‌ ರಿವೀಲ್; ಸ್ವರ್ಗದ ಬಾಗಿಲು ತಟ್ಟೋರ್ಯಾರು, ನರಕಕ್ಕೆ ಹೋಗೋರ್ಯಾರು?

Bigg Boss Kannada Season 11 contestants list: ಬಹುಕುತೂಹಲ ಮೂಡಿಸಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಹೊಸ ಪಟ್ಟಿ ರಿವೀಲ್‌ ಆಗಿದೆ. ಹೊಸ ಪ್ರೋಮೋದಲ್ಲಿ ಇವರೇ ಅವರು ಎಂಬ ಸಣ್ಣ ಝಲಕ್‌ ಹೊರಬಿದ್ದಿದೆ. ಇವರ ಜತೆಗೆ ಇನ್ನೂ ಏಳೆಂಟು ಹೆಸರುಗಳಿವೆ. ಇಲ್ಲಿದೆ ನೋಡಿ ಪಟ್ಟಿ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಹೊಸ ಪಟ್ಟಿ ರಿವೀಲ್‌ ಆಗಿದೆ. ಹೊಸ ಪ್ರೋಮೋದಲ್ಲಿ ಇವರೇ ಅವರು ಎಂಬ ಸಣ್ಣ ಝಲಕ್‌ ಹೊರಬಿದ್ದಿದೆ.
ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಹೊಸ ಪಟ್ಟಿ ರಿವೀಲ್‌ ಆಗಿದೆ. ಹೊಸ ಪ್ರೋಮೋದಲ್ಲಿ ಇವರೇ ಅವರು ಎಂಬ ಸಣ್ಣ ಝಲಕ್‌ ಹೊರಬಿದ್ದಿದೆ.

Bigg Boss Kannada Season 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಆರಂಭಕ್ಕೆ ಹೆಚ್ಚು ದಿನ ಉಳಿದಿಲ್ಲ. ಇನ್ನೇನು ಸೆಪ್ಟೆಂಬರ್‌ 29ರ ಭಾನುವಾರ ಸಂಜೆ 6 ಗಂಟೆಗೆ ಗ್ರ್ಯಾಂಡ್‌ ಓಪನಿಂಗ್‌ ಆಗಲಿದೆ. ಈ ನಡುವೆ ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋಗಳೂ ನೋಡುಗರನ್ನು ಸೆಳೆದಿವೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಈ ಸಲದ ಶೋನಲ್ಲಿ ಹೊಸ ಬಗೆಯ ಕಾನ್ಸೆಪ್ಟ್‌ ಪರಿಚಯಿಸುತ್ತಿದೆ ಬಿಗ್‌ ಬಾಸ್‌. ಸ್ಪರ್ಧಿಗಳಿಗೆ ಸ್ವರ್ಗ ಮತ್ತು ನರಕದ ದರ್ಶನ ಮಾಡಿಸಲಿದೆ. ಈ ಕಾರಣಕ್ಕೂ ಸೀಸನ್‌ 11ರ ಮೇಲೆ ವೀಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಸೋಷಿಯಲ್‌ ಮೀಡಿಯಾದಲ್ಲಿ ಒಂದಷ್ಟು ಸ್ಪರ್ಧಿಗಳ ಹೆಸರುಗಳೂ ಓಡಾಡುತ್ತಿವೆ.

ಸ್ವರ್ಗ ನರಕದ ಹೊಸ ಪ್ರೋಮೋ

ಬಿಗ್‌ಬಾಸ್‌ ಪ್ರಸಾರಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ಕಲರ್ಸ್‌ ಕನ್ನಡ ವಾಹಿನಿ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಕೌಂಟ್‌ಡೌನ್‌ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿದೆ. ಇದೀಗ ಗ್ಯಾಪ್‌ನಲ್ಲಿಯೇ ಹೊಸ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ. ಈಗಾಗಲೇ ಸ್ವರ್ಗ ನರಕದ ಬಗ್ಗೆ ಮಾಹಿತಿ ನೀಡಿದ್ದ ಪ್ರೋಮೋ, ಈಗ ಅದರ ಮುಂದುವರಿದ ಭಾಗದ ಬಗ್ಗೆ ಅಪ್‌ಡೇಟ್‌ ನೀಡಿದೆ. ಇಲ್ಲಿಯವರೆಗೂ ಒಂದೇ ಮನೆ ಎರಡು ಬಣಗಳು ಎಂದು ಎಲ್ಲರೂ ತಿಳಿದಿದ್ದರು. ಈಗ ಸ್ವರ್ಗವೇ ಬೇರೆ, ನರಕವೇ ಬೇರೆ ಎಂದು ಕಿಚ್ಚ ಸುದೀಪ್‌ ಪ್ರೋಮೋದಲ್ಲಿ ಹೇಳಿದ್ದಾರೆ.

ಪ್ರೋಮೋದಲ್ಲಿ ಏನಿದೆ?

11ರ ಬಿಗ್‌ಬಾಸ್‌ನಲ್ಲಿ ಒಂದಲ್ಲ ಎರಡು ಮನೆ. ಸ್ವರ್ಗ, ನರಕ. ಬಿಗ್‌ಬಾಸ್‌ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಅಸಲಿ ಆಟ ನಿಮ್ಮಿಂದ ಶುರುವಾಗುತ್ತದೆ. ಮನೆ ಒಳಗಡೆ ಹೋಗುವ ಸ್ಪರ್ಧಿಗಳ ಹೆಸರನ್ನ ನಾವ್‌ ಹೇಳ್ತಿವಿ, ಅವರು ಸ್ವರ್ಗಕ್ಕೆ ಹೋಗಬೇಕಾ? ನರಕಕ್ಕೆ ಹೋಗಬೇಕಾ ಎಂಬ ನಿರ್ಧಾರ ನಿಮ್ಮ ಕೈಯಲ್ಲಿ. ಇನ್ನೂ ಡಿಟೇಲ್ಸ್‌ ಬೇಕು ಅಂದ್ರೆ ರಾಜಾ ರಾಣಿ ಫೈನಲ್‌ ಏಪಿಸೋಡ್‌ ನೋಡಿ" ಎಂದು ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಹೇಳಿದ್ದಾರೆ. ಯಾರಿಗೆ ಸ್ವರ್ಗ? ಯಾರಿಗೆ ನರಕ? ಅಸಲಿ ಆಟದ ಆಟಗಾರರ ಆಯ್ಕೆ ನಿಮ್ಮ ಕೈಯಲ್ಲಿ! ಇದೇ ಶನಿವಾರ 'ರಾಜಾ-ರಾಣಿ' ಗ್ರಾಂಡ್ ಫಿನಾಲೆ ನೋಡಿ, ಬಿಗ್ ಬಾಸ್ ಕನ್ನಡ ಸೀಸನ್ 11ರ ಕಂಟೆಸ್ಟೆಂಟ್ಸ್‌ಗೆ ವೋಟ್ ಮಾಡಿ ಎಂದು ಪೋಸ್ಟ್‌ ಹಂಚಿಕೊಂಡಿದೆ ಕಲರ್ಸ್‌ ಕನ್ನಡ.

ಪ್ರೋಮೋದಲ್ಲಿಯೇ ಇದೆ ಸ್ಪರ್ಧಿಗಳ ಸುಳಿವು

ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ನೀವು ಗಮನಿಸಿರುವಂತೆ ಸಣ್ಣ ಝಲಕ್‌ವೊಂದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಅಧ್ಯಾಯಕ್ಕೆ ತಕ್ಕಂತೆ ಅಚ್ಚರಿಯ ಹೆಸರುಗಳೇ ಈ ಶೋನಲ್ಲಿ ಇವೆ. ಪ್ರೋಮೋವನ್ನು ಕೊಂಚ ಸೂಕ್ಷ್ಮ ಕಣ್ಣಿನಿಂದ ನೋಡಿದಾಗ ಅಲ್ಲಿ ಕಂಡ ಮುಖಗಳು ಇಲ್ಲಿವೆ ನೋಡಿ.

- ಹರಿಪ್ರಿಯಾ

- ಕಿರಣ್‌ ರಾಜ್

- ಭಾವನಾ ಮೆನನ್‌

- ಗೌತಮಿ ಜಾದವ್‌

- ಪ್ರೇಮಾ

-‌ ಪಂಕಜ್

- ಭೂಮಿಕಾ ಬಸವರಾಜ್‌

- ಕಾಮನ್‌ ಮ್ಯಾನ್‌ ರೈತ

mysore-dasara_Entry_Point