Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ-kannada television news hu anthiya uhuu anthiya is a new reality show on star suvarna starts from 19th may mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ ಶುರುವಾಗುತ್ತಿದೆ. Huu ಅಂತೀಯಾ...Uhuu ಅಂತೀಯಾ ಹೆಸರಿನ ಈ ಶೋವನ್ನು ರೂಪೇಶ್‌ ಶೆಟ್ಟಿ ಮತ್ತು ಅರುಣ್‌ ಹರಿಹರನ್‌ ನಡೆಸಿಕೊಡಲಿದ್ದಾರೆ.

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ
Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

Star Suvarna: ಕನ್ನಡ ಕಿರುತೆರೆಯಲ್ಲಿ ಬಗೆಬಗೆ ರಿಯಾಲಿಟಿ ಶೋಗಳನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ 'Huu ಅಂತೀಯಾ...Uhuu ಅಂತೀಯಾ' ಎಂಬ ಹೊಸ ಬಗೆಯ ವಿನೂತನ ಗೇಮ್ ಶೋ ಅನ್ನು ಪ್ರಸಾರ ಮಾಡಲಿದೆ. ಇಬ್ಬರು ಜನಪ್ರಿಯ ಆ್ಯಂಕರ್‌ಗಳನ್ನು ಹೊಂದಿರುವ ಈ ಶೋ ಒಟ್ಟು ಮೂರು ಸುತ್ತುಗಳನ್ನು ಹೊಂದಿರುತ್ತದೆ. ಸೆಲೆಬ್ರಿಟಿ ಸ್ಪರ್ಧಿಗಳಿಗೆ 6 ಲಕ್ಷ ರೂಪಾಯಿಗಳನ್ನು ಗೆಲ್ಲುವ ಅವಕಾಶವಿರುತ್ತದೆ.

ಮೊದಲ ಸುತ್ತಿನಲ್ಲಿ ಸ್ಪರ್ಧಿಗಳು ಒಬ್ಬರ ನಂತರ ಒಬ್ಬರು ಆಡುತ್ತಾರೆ. ನಿರೂಪಕರು ನೀಡಿದ ಸತ್ಯ ಮತ್ತು ಸುಳ್ಳು ಸಂಗತಿಗಳನ್ನು ಸ್ಪರ್ಧಿಗಳು ಸರಿಯಾಗಿ ಆರಿಸಿದರೆ 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶವಿದೆ. ಇನ್ನು ಎರಡನೇ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಆಹಾರವನ್ನು ಸೇವಿಸುವ ಸವಾಲಿರುತ್ತದೆ. ಮಜಾ ತುಂಬಿರುವ ಟ್ವಿಸ್ಟ್ ಗಳೊಂದಿಗೆ ಒಟ್ಟು 60 ಸೆಕೆಂಡ್‌ಗಳ ಸಮಯವನ್ನು ನೀಡಲಾಗುತ್ತದೆ. ಇದರಲ್ಲಿ ಗೆದ್ದ ವಿಜೇತರು 2 ಲಕ್ಷ ರೂಪಾಯಿಗಳನ್ನು ಗೆಲ್ಲಬಹುದು.

ಮೂರನೇ ಹಾಗು ಕೊನೆಯ ಸುತ್ತಿನಲ್ಲಿ ಕೇವಲ ಇಬ್ಬರು ಸ್ಪರ್ಧಿಗಳು ತಮ್ಮ ಅದೃಷ್ಟದ ಆಧಾರದ ಮೇಲೆ ಆಡುತ್ತಾರೆ. ಗೆದ್ದ ಸ್ಪರ್ಧಿಗೆ 3 ಲಕ್ಷಗಳನ್ನು ಗೆಲ್ಲುವ ಅವಕಾಶವಿದೆ. ಇದು ಈ ಗೇಮ್ ಶೋ ನ ನಿಯಮಾವಳಿಗಳು. ಇನ್ನು 'Huu ಅಂತೀಯಾ...Uhuu ಅಂತೀಯಾ' ಶೋ ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿರೋದು ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಮತ್ತು ನಟನೆ ಹಾಗೂ ತನ್ನ ಹಾಸ್ಯಗಾರಿಕೆಯ ಮೂಲಕ ನೋಡುಗರ ಮನಗೆದ್ದಿರುವ ಅರುಣ್ ಹರಿಹರನ್ ಈ ಶೋನ ರೂವಾರಿಗಳಾಗಿದ್ದಾರೆ.

ಮೊದಲ ಗ್ರ್ಯಾಂಡ್ ಓಪನಿಂಗ್ ಸಂಚಿಕೆಯಲ್ಲಿ ಸೆಲೆಬ್ರಿಟಿ ಸ್ಫರ್ಧಿಗಳಾಗಿ ನಟ ಡಾರ್ಲಿಂಗ್ ಕೃಷ್ಣ, ನಟಿಯರಾದ ಮಿಲನ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಭಾಗವಹಿಸಲಿದ್ದಾರೆ. ಈ ರಿಯಾಲಿಟಿ ಶೋನ ಟೈಟಲ್ ಟ್ರ್ಯಾಕ್ ಗೆ ನೋಡುಗರು ಫಿದಾ ಆಗಿದ್ದು, ಮಸ್ತ್ ಮನರಂಜನೆಗೆ ಕಾತುರತೆಯಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ಮನೆಯಲ್ಲಿ ಕುಳಿತು ವೀಕ್ಷಿಸುವ ವೀಕ್ಷಕರಿಗೂ ಐ ಫೋನ್ ಗೆಲ್ಲುವ ಅವಕಾಶವನ್ನು ಸ್ಟಾರ್ ಸುವರ್ಣ ವಾಹಿನಿಯು ನೀಡುತ್ತಿದೆ. ಮೊದಲ ಹಾಗೂ ಎರಡನೇ ಸಂಚಿಕೆಯ ಕೊನೆಯಲ್ಲಿ ಕೇಳುವ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಿದರೆ 'I Phone' ಗೆಲ್ಲುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಬಹುದು.

ನಿಮ್ಮನ್ನ ಮನರಂಜಿಸಲು ಬರ್ತಿದೆ ಹೊಚ್ಚ ಹೊಸ ಯೂನಿಕ್ ಸೆಲೆಬ್ರಿಟಿ ಗೇಮ್ ಶೋ 'Huu ಅಂತೀಯಾ...Uhuu ಅಂತೀಯಾ' ಇದೇ ಮೇ 19 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ಈ ಮಜಭರಿತ ಸಂಚಿಕೆಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಗೃಹಮಂತ್ರಿ ಶೋ 

ಇತ್ತೀಚೆಗಷ್ಟೇ ಇದೇ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಗೃಹಮಂತ್ರಿ ಶೋ ಸಹ ಶುರುವಾಗಿದೆ. ಇದು ವಿಭಿನ್ನ ರೀತಿಯ ರಿಯಾಲಿಟಿ ಶೋ. ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು, ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ. ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು 'ಥ್ಯಾಂಕ್ ಯು' ಅಂತನೂ ಯಾರೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ- ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಸೀರೆ, ಚಿನ್ನ, ಬೆಳ್ಳಿ ಹಾಗೂ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ ಸುವರ್ಣ ಗೃಹಮಂತ್ರಿ ಕಾರ್ಯಕ್ರಮದ ಶೈಲಿಯಾಗಿದೆ.

ಇನ್ನು ಇದೇ ಮೊದಲ ಬಾರಿಗೆ ಜನಪ್ರಿಯ ನಿರೂಪಕ ಮುರಳಿ ಸ್ಟಾರ್ ಸುವರ್ಣ ವಾಹಿನಿಗೆ ಲಗ್ಗೆಯಿಟ್ಟಿದ್ದು, ಸುವರ್ಣ ಗೃಹಮಂತ್ರಿ ಕಾರ್ಯಕ್ರಮದ ಸಾರಥಿಯಾಗಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಮುರಳಿಯವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆ, ಬೆಳ್ಳಿ-ಬಂಗಾರ ಕೊಟ್ಟು ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ.

mysore-dasara_Entry_Point